*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪
〰〰❁✿🌹🌹✿❁ 〰〰
*ಇರುವೆ*
〰〰❁✿🌹🌹✿❁ 〰〰
ಅತ್ಯಂತ ಚಿಕ್ಕ ಜೀವಿಯಾಗಿರುವ ಇರುವೆಯ ಕುರಿತು ನಿಮಗೆ ಗೊತ್ತೇ. . ! ?
ಪವಿತ್ರ ಖುರ್-ಆನಿನಲ್ಲಿ ಹೆಸರಿಸಲ್ಪಟ್ಟ ಜೀವಿಗಳಲ್ಲಿ ಇರುವೆಯೂ ಒಂದು . ಅಲ್ಲದೆ ಖುರ್-ಆನಿನಲ್ಲಿ ಒಂದು ಅಧ್ಯಾಯಕ್ಕೆ ಇರುವೆ (ಅನ್ನಮ್ಲ್) ಎಂಬ ನಾಮವೂ ಇದೆ . ಪವಿತ್ರ ಗ್ರಂಥದ ಹಲವು ಕಡೆಗಳಲ್ಲಿ ಇರುವೆಯ ಕುರಿತು ಚರ್ಚಿಸಲ್ಲಟ್ಟಿದೆ . ಮನುಷ್ಯರಂತೆ ಜೀವನ ನಡೆಸುವ ಜೀವಿಗಳಾಗಿವೆ ಇರುವೆಗಳು . ತನಗಿಂತಲೂ ದುಪ್ಪಟ್ಟು ಭಾರವನ್ನು ಹೊರುವ ಏಕೈಕ ಜೀವಿ ಕೂಡಾ ಹೌದು . ಆಹಾರ ಸಂಗ್ರಹಣೆಯಿಂದ ಹಿಡುದು ಶವ ಹೂಳುವುದರಲ್ಲೂ ಮನುಷ್ಯರು ಮಾಡುವಂತೆಯೇ ಕೆಲಸ ಕಾರ್ಯಗಳು ಮಾಡುವ ಶ್ರಮ ಜೀವಿಗಳಾಗಿವೆ . ಒಂದು ಇರುವೆ ಸತ್ತರೆ ಅದನ್ನು ಹೊತ್ತೊೖದು ಮನುಷ್ಯರು ಹೂಳುವಂತೆ ಹೂಳುತ್ತದೆ , ಆಹಾರ ಹುಡುಕಾಟ ಮತ್ತು ಶೇಖರಣೆ ಅವುಗಳ ದೈನಂದಿನ ಚಟುವಟಿಕೆಗಳಾಗಿವೆ . ಹೊತ್ತು ತಂದ ಕಾಳುಗಳನ್ನು ಅವು ಮೊಳಕೆಯೊಡೆಯದಿರಲು ಎರಡು ತುಂಡುಗಳನ್ನಾಗಿ ತುಂಡರಿಸಿ ಇಟ್ಟುಕೊಳ್ಳುತ್ತವೆ . ಕೊತ್ತಂಬರಿ ಬೀಜವನ್ನು ಮಾತ್ರ ನಾಲ್ಕು ತುಂಡುಗಳನ್ನಾಗಿ ಮಾಡುತ್ತದೆ ಕಾರಣ ಎರಡು ತುಂಡಾದರೂ ಕೊಂತ್ತಂಬರಿ ಬೀಜ ಮೊಳಕೆ ಒಡೆಯುತ್ತದೆ ಎಂದು ಬುದ್ಧಿವಂತ ಇರುವೆಗಳಿಗೆ ತಿಳಿದಿವೆ . ಇರುವೆಗಳ ಶಿಸ್ತನ್ನು ನೋಡಿ ಮನುಷ್ಯರು ಕೂಡಾ ತಲೆ ತಗ್ಗಿಸುವರು ಯಜಮಾನನನ್ನು ಚಾಚೂ ತಪ್ಪದೆ ಅನುಸರಿಸುತ್ತವೆ . ಚಿಕ್ಕ ಶರೀರವಾದರೂ ಕಿಲೋ ಮೀಟರ್ ದೂರದಲ್ಲಿರುವ ಆಹಾರದ ವಾಸನೆಯನ್ನು ಗ್ರಹಿಸುವ ಶಕ್ತಿ ಅವುಗಳಲ್ಲಿವೆ . ಮನುಷ್ಯರಂತೆ ಸುಮ್ಮನೆ ಕೂರುವುದಂತೂ ಕಾಣಲು ಸಾಧ್ಯವೇ ಇಲ್ಲ, ಯಾವಾಗಲೂ ಆಹಾರದ ಹುಡುಕಾಟದಲ್ಲಿ , ಅಥವಾ ಆಹಾರವನ್ನು ಕೊಂಡೊಯ್ಯುವ ಭರದಲ್ಲಿಯೇ ಇರುತ್ತವೆ . ಒಗ್ಗಟ್ಟಿನ ಭಲ ಕಾಣಬೇಕಾದರೆ ಇರುವೆಗಳನ್ನು ನೋಡಿದರೆ ಸಾಕಾಗಬಹುದು ಒಂದು ಇರುವೆಯಿಂದ ಕಾರ್ಯ ಸಾಧ್ಯವಾಗದಿದ್ದರೆ ತಟ್ಟನೆ ಉಳಿದವುಗಳು ಸಹಕಾರ ನೀಡುತ್ತವೆ .
*ಇರುವೆ ಕುರ್-ಆನಿನಲ್ಲಿ*
ಪ್ರವಾದಿ ಮೂಸಾ ನಬಿ (ಅಸ) ಒಮ್ಮೆ ಅಲ್ಲಾಹನಲ್ಲಿ ಒಂದು ಸಂಶಯವಿತ್ತರು "ಅಲ್ಲಾಹ್ , ಅಕ್ರಮಿಗಳನ್ನು ನೀನು ಶಿಕ್ಷಿಸುವಾಗ ಅದರಲ್ಲಿ ನಿರಪರಾದಿಗಳಾದ ಹಲವರು ಶಿಕ್ಷೆಗೆ ಗುರಿಯಾಗುತ್ತಾರೆ. . ! ಮಾಡದ ತಪ್ಪಿಗೆ ಅವರನ್ನು ಬಲಿಯಾಗಿಸುವುದು (ಶಿಕ್ಷಿಸುವುದು) ಸರಿಯೇ. . ?
ಸ್ವಲ್ಪ ಸಮಯದ ನಂತರ ಹಝ್ರತ್ ಮೂಸಾ ನಬಿ(ಅಸ) ರವರನ್ನು ಒಂದು ಇರುವೆ ಕಚ್ಚಿತು , ಕೋಪಗೊಂಡ ಪ್ರವಾದಿಯವರು ಇರುವೆಯ ಗೂಡನ್ನೇ ಕಾಲಿಂದ ತುಳಿದು ನಾಶಮಾಡಿದರು. ಆವಾಗ ಅಲ್ಲಾಹನು ಮೂಸಾ ನಬಿಯರಲ್ಲಿ ಕೇಳಿದನು "ಓ ಮೂಸಾ ಒಂದು ಇರುವೆ ಅಲ್ಲವೇ ನಿನ್ನನ್ನು ಕಚ್ಚಿರುವುದು , ಅದಕ್ಕಾಗಿ ಉಳಿದ ಇರುವೆಗಳನ್ನೇಕೆ ನಾಶಮಾಡಿದಿರಿ" . ಉತ್ತರವಿಲ್ಲದೆ ಮೂಸಾ ನಬಿ(ಅಸ) ರವರು ತಲೆತಗ್ಗಿಸಿದರು . ಪ್ರವಾದಿ ಮೂಸರ ಪ್ರಶ್ನೆಗೆ ಮಾತಿನಿಂದಲೇ ಉತ್ತರಿಸುವ ಬದಲು ಅಲ್ಲಾಹನು ಮೂಸಾ ನಬಿಯರಿಂದಲೇ ಮಾಡಿ ತೋರಿಸಿದನು .
*ಇರುವೆಗಳನ್ನು ಕೊಲ್ಲದಿರಿ*
ನಬಿ (ಸಅ) ರವರು ಹೇಳಿದರು "ನೀವು ವಿನಾ ಕಾರಣ ಇರುವೆಗಳನ್ನು ಕೊಲ್ಲದಿರಿ . ಕಾರಣ ಒಮ್ಮೆ ಸುಲೈಮಾನ್ ನಬಿಯವರು ತನ್ನ ಅನುಚರರೊಂದಿಗೆ ಮಳೆಗಾಗಿ ಪ್ರಾರ್ಥಿಸಲು ಹೊರಟರು . ದಾರಿ ಮಧ್ಯೆ ಒಂದು ಇರುವೆಯು ತನ್ನ ಎರಡು ಕೊಂಬುಗಳನ್ನು ಮತ್ತು ಮುಂದಿನ ಎರಡು ಕಾಲುಗಳನ್ನು ಎತ್ತಿ ಹಿಡಿದು ಪ್ರಾರ್ಥಿಸುತ್ತಿತ್ತು
"ಯಾ ಅಲ್ಲಾ. . ಸರ್ವ ಸೃಷ್ಟಿಗಳ ಪರಿಪಾಲಕನೇ. . . ನಿನ್ನ ಕಾರುಣ್ಯ ನಮಗೆ ತಡೆಯದಿರು. . . ನಮಗೆ ನಿನ್ನ ಅನುಗ್ರಹವಾದ ಮಳೆಯನ್ನು ಕರುಣಿಸು ಅಲ್ಲಾಹ್".
ಇದನ್ನು ಕೇಳಿದ ಸುಲೈಮಾನ್ (ಅಸ) ರವರು ತನ್ನ ಅನುಚರರೊಂದಿಗೆ ಹೇಳಿದರು :- "ನೀವು ಹಿಂತಿರುಗಿ , ಇನ್ನು ನೀವು ಪ್ರಾರ್ಥಿಸಬೇಕೆಂದಿಲ್ಲ. ನೀವಲ್ಲದ ಇತರ ಜೀವಿಗಳು ಕಾರಣ ನಿಮಗೆ ಮಳೆ ಲಭಿಸಿರುತ್ತದೆ" .
(ಹಾಕಿಂ).
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*

No comments:
Post a Comment