Sunday, 28 August 2022

ಶೈಖುನಾ ಚೇಲಕ್ಕಾಡ್ ಉಸ್ತಾದ್

ಇನ್ನಾಲಿಲ್ಲಾಹಿ ವ ಇನ್ನಾ ಇಲೈಹೀ ರಾಜಿಹೂನ್.
ಶೈಖುನಾ ಚೇಲಕ್ಕಾಡ್ ಉಸ್ತಾದ್ ವಫಾತಾದರು.

ಮಹಾನರಾದ ಶೈಖುನಾ ಚೇಲಕ್ಕಾಡ್ ಉಸ್ತಾದ್ 2004ರಿಂದ ಬಹು! ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಮುಶಾವರ ಅಂಗವಾಗಿದ್ದರು,ವಯೋಸಹಜ ಅನಾರೋಗ್ಯ ಕಾರಣದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತಿದ್ದ ಶೈಖುನಾರು ತನ್ನ 91ನೇ ವಯಸ್ಸಿನಲ್ಲಿ ಇಂದು ಅಲ್ಲಾಹನೆಡೆಗೆ ಯಾತ್ರೆಗೈದರು.
ಸಂಜೆ ನಾಲ್ಕು ಘಂಟೆಗೆ ಚೇಲಕ್ಕಾಡ್ ಜಮಾತ್ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ.

 ಸಮಸ್ತ ಕೋಝಿಕ್ಕೋಡು ಜಿಲ್ಲಾ ಅಧ್ಯಕ್ಷರಾಗಿದ್ದ ಶೈಖುನ ಉಸ್ತಾದರು,ಚೇಲಕ್ಕಾಡ್ ಕುಳಮ್ಮುಳ್ಳದಲ್ಲಿ ಅಬ್ದುಲ್ಲಾ ಮುಸ್ಲಿಯಾರ್ ಮತ್ತು ಕುಂಞಾಮಿ ದಂಪತಿಗಳಿಗೆ ಜನಿಸಿದ ಶೈಖುನಾ ಚೇಲಕ್ಕಾಡ್ ಉಸ್ತಾದ್ ಸಾವಿರಾರು ಶಿಷ್ಯರ ಗುರುವಾಗಿದ್ದಾರೆ.
ವಯನಾಡಿನ ವಾಲಾಟ್ಟ್ ಮಸೀದಿಯಲ್ಲಿ 45ವರ್ಷ ಸೇವೆಸಲ್ಲಿಸಿದ್ದರು,ತಂದೆಯಾಗಿದ್ದಾರೆ ಶೈಖುನಾರ ಮೊದಲ ಗುರುವಾಗಿದ್ದರು.
ನಾದಾಪುರಂ,ಚೆಮ್ಮಂಕಡವ್,ಪೋಡಿಯಾಡ್,ಮೇಲ್ಮುರಿ,
ವಾಝಕ್ಕಾಡ್,ಪಾರಕ್ಕಡವ್,ನಲ್ಲಿ ಕಲಿತ ನಂತರ 1962ರಲ್ಲಿ ವೆಲ್ಲೂರಿನ ಭಾಖಿಯಾತ್ ನಲ್ಲಿ ಮೌಲವಿ ಫಾಳಿಲ್ ಭಾಖವಿ ಬಿರುದು ಪಡೆದರು.

ಶೈಖುನಾ ಶಂಸುಲ್ ಉಲಮಾ ನ.ಮ.,ಕಣ್ಣಿಯತ್ ಉಸ್ತಾದರು,ಕುಟ್ಟಿ ಮುಸ್ಲಿಯಾರ್ ಫಳ್ಪರಿ,ಕೀಝಾನ ಕುಂಞಿ ಅಬ್ದುಲ್ಲಾ ಮುಸ್ಲಿಯಾರ್,ಕಾನ್ನಾತ್ ಅಬ್ದುಲ್ಲಾ ಮುಸ್ಲಿಯಾರ್,ಶೈಖ್ ಹಸನ್ ಹಝರತ್,ಶೈಖ್ ಅಬೂಬಕ್ಕರ್ ಹಝರತ್,ಮುಹಮ್ಮದ್ ಶಿರಸಿ ,ಮುಂತಾದ ಮಹಾನರು ಶೈಖುನಾ ಪ್ರಧಾನ ಗುರುಗಳಾಗಿದ್ದರು.

ವೆಲ್ಲೂರು ಬಾಖಿಯಾತ್ ನಲ್ಲಿ ಪದವಿ ಪಡೆದ ನಂತರ ಇವರು ಆಂದೋನಾ,ಕೂವಲ್ಲೂರು,ಇರ್ಗೂರು,ಕಂಡಿಪರಂ,ಚೀಯೂರ್,ಚೇಲಕ್ಕಾಡ್ ಮುಂತಾದ ಕಡೆ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದರು.
ಪಟ್ಟಿಕ್ಕಾಡ್ ಜಾಮಿಃಯ ನೂರಿಯ್ಯ ದಲ್ಲಿ ಸುಮಾರು 11 ವರ್ಷ,ದಾರುಸ್ಸಲಾಂ ಅರಬಿಕ್ ಕಾಲೇಜಿನಲ್ಲಿ 7ವರ್ಷ,ಸಿ.ಎಮ್. ಮಕಾಮ್ ನಲ್ಲಿ ಆರು ವರ್ಷ,ಅಸ್ಹರಿ ಕಾಲೇಜ್ ಮಡವೂರ್ ನಲ್ಲಿ ತನ್ನ ಸೇವೆ ಸಲ್ಲಿಸಿದ್ದರು.
 
ತನ್ನ ಸುಧೀರ್ಘ ಸೇವೆಯ ಜೀವಿತಾವಧಿಯಲ್ಲಿ ಸಮುದಾಯಕ್ಕಾಗಿ,ಸಮಸ್ತಕ್ಕಾಗಿ ದುಡಿದ ಶೈಖುನಾರು ಇಂದು ಅಲ್ಲಾಹನ ಕರೆಗೆ ಓಗೊಟ್ಟಿದ್ದಾರೆ,ಅಲ್ಲಾಹನು ಅವರ ಪರಲೋಕ ಜೀವನ ವಿಶಾಲಗೊಳಿಸಲಿ,ಆಮೀನ್!
ನಾಳೆ ಶೈಖುನಾರೊಂದಿಗೆ ಸ್ವರ್ಗದಲ್ಲಿ ನಮ್ಮೆಲ್ಲರನ್ನು ಒಂದುಗೂಡಿಸಲಿ,ಆಮೀನ್.