*🌾ಮೊಳಕೆ🌾*
💐💐💐💐
*ಮನ್ಸೂರ್ ಅಲ್ ಹಲ್ಲಾಜ್ (ರ.ಅ)*
🍀🍀🍀🍀🍀🍀🍀🍀🍀🍀
ಸೂಫಿಗಳಲ್ಲಿ ಪ್ರಸಿಧ್ಧರೂ ತ್ಯಾಗಿಯೂ ಆಗಿದ್ದ ಮಹಾನರಾಗಿದ್ದರು *ಮನ್ಸೂರ್ ಅಲ್ ಹಲ್ಲಾಜ್* (ರಅ). ಪೂರ್ಣ ಹೆಸರು ಅಬುಲ್ ಮುಗೀಸ್ ಅಲ್ ಹುಸೈನ್ ಬಿನ್ ಮನ್ಸೂರ್ ಅಲ್ ಹಲ್ಲಾಜ್ (ರಅ). ಪೇರ್ಶ್ಯನ್ ಸೂಫೀ ಆಧ್ಯಾತ್ಮಿಕ ಲೋಕದ ಚಕ್ರವರ್ತಿಗಳಲ್ಲಿ ಅಗ್ರಗಣ್ಯರಾಗಿದ್ದರು . “ಅನಲ್ ಹಖ್” ಎಂಬ ಒಂದು ಪ್ರಖ್ಯಾಪನೆಯಿಂದ ಎಂದೆಂದೂ ಸ್ಮರಿಸಲ್ಪಡುವ ಒಬ್ಬರು ವಿವಾದ ಪುರುಷರಾಗಿ ಮಾರ್ಪಟ್ಟರು . ಪರಮ ಸತ್ಯ ನಾನಾಗಿರುವೆನು ಎಂಬ ಅರ್ಥ ಬರುವ ಪದ ಬಳಕೆಯನ್ನು ದೈವ ವಾದವಾಗಿ ಕಂಡವರು ಹಲ್ಲಾಜರನ್ನು ಬೇಟೆಯಾಡಲು ಶುರುಮಾಡಿದರು . ಅನುಚರರು ಆ ಮಾತನ್ನು ಅರ್ಥೈಸಿರುವುದು ಈ ರೀತಿಯಲ್ಲಾಗಿತ್ತು "ನಾನು ಪರಮ ಸತ್ಯದಲ್ಲಿ ಪೂರ್ಣಾವಾಗಿ ವಿಲೀನನಾಗಿರುವೆನು" . ಸೂಫೀ ಸಂತರುಗಳ ಅತ್ಯುನ್ನತಾವಸ್ಥೆಯಾದ *ಫನಾಉಲ್ ಫನಾ* ತಲುಪಿದ ಹಲ್ಲಾಜರ ಪರಾಮರ್ಶೆಗಳು ಕಾರಣವಾಗಿ ಅವರು ಕೊಲ್ಲಲ್ಪಟ್ಟರು.
*ಜೀವನ*
ಕ್ರಿ.ಶ 857 ರಲ್ಲಿ ಪೇರ್ಶ್ಯಾದ ಬೈಸ ಎಂಬಲ್ಲಿ ಜನಿಸಿದರು . ತಂದೆ ತಾಯಿ ಪಾರ್ಸಿ ಧರ್ಮದವರಾಗಿದ್ದರು , ತನ್ನ ಬಾಲ್ಯದಲ್ಲೇ ಮುಸ್ಲಿಮರ ಪವಿತ್ರ ಗ್ರಂಥವನ್ನು ಕಂಟಪಾಠ ಮಾಡಿದರು . ಇಸ್ಲಾಮಿಕ ಕರ್ಮ ಶಾಸ್ತ್ರ ಮತ್ತು ಹದೀಸ್ ಎಂಬ ಪ್ರವಾದಿ ಚರ್ಯೆಯನ್ನು ಸುಧೀರ್ಘ ಕಾಲ ಕಲಿತರು . ತಸ್ತರಿ, ಬಸ್ರ, ಖುರಾಸಾನ್, ತುರ್ಕಿಸ್ಥಾನ್, ಚೆಚನ್ಯ, ಮಕ್ಕಾ ದಲ್ಲೂ ವಿಧ್ಯೆಗಾಗಿ ಸಂಚರಿಸುತ್ತಾ ಸುಧೀರ್ಘ ವರ್ಷಗಳ ಕಾಲ ಕಲಿಕೆಯಲ್ಲೇ ಮುಂದುವರೆದು ತಮ್ಮ ಮಾತೃ ಭಾಷೆ ಪಾರಿಸಿಗಿಂತಲೂ ಅರಬಿ ಭಾಷೆಯಲ್ಲಿ ನಿಪುಣತೆ ಹೊಂದಿದ್ದರು . ಖುರ್-ಆನ್ ಕಂಟಪಾಠ ಮಾಡಿದ ಹಲ್ಲಾಜರಿಗೆ ಧ್ಯಾನ ಮಾರ್ಗ ತಿಳಿಯಲು ಅಧಿಕ ಸಮಯವೇನೂ ಬೇಕಾಗಿ ಬರಲಿಲ್ಲ.
*ಆಧ್ಯಾತ್ಮಿಕತೆಯತ್ತ ಪಯಣ*
ಪ್ರಸಿಧ್ದ ಸೂಫೀ ಸಂತರಾಗಿದ್ದ *ದುನ್ನೂರುಲ್ ಮಿಸ್ರಿ* ಯವರ ಶಿಷ್ಯ ಪ್ರಮುಖರಾದ ತುಸ್ತರಿ ಮತ್ತು ಜುನೈದುಲ್ ಬಗ್ದಾದಿಯವರ ಶಿಷ್ಯತ್ವ ಸ್ವೀಕರಿಸಿದರು . ಅನೇಕ ಪಂಡಿತರಿಂದಲೂ, ಸೂಫಿಗಳಿಂದಲೂ, ಮಕ್ಬರಗಳಿಂದಲೂ ಸಂಪನ್ನವಾಗಿತ್ತು ಅಂದಿನ ಬಗ್ದಾದ್ . ತನ್ನ ಹದಿನಾರನೇ ವಯಸ್ಸಿನಲ್ಲಿ ಬಗ್ದಾದಿಗೆ ತೆರಳುವ ತೀರ್ಮಾನ ತೆಗೆದುಕೊಳ್ಳಲು ಇದುವೇ ಕಾರಣವಾಗಿತ್ತು . ಬಗ್ದಾದ್ ತಲುಪಿದ ಮನ್ಸೂರ್ ಅಲ್ ಹಲ್ಲಾಜರು ಸಅದ್ ಬಿನ್ ತುಸ್ತರಿಯವರಿಂದ ತ್ವರೀಖತ್ ಸ್ವೀಕರಿಸಿ ಬೈಅತ್(ಅನುಸರಣಾ ಪ್ರತಿಜ್ಞೆ) ನಡೆಸಿ ಶಿಷ್ಯರಾದರು . ಅಲ್ಲಾಹನ ದಿಕ್ರ್ ಗಳಲ್ಲಿ ತಲ್ಲೀನರಾಗುವ ಸದಸ್ಸುಗಳಲ್ಲಿ ಹಲ್ಲಾಜರು ಫನಾದ ಅವಸ್ಥೆಗೆ ನೀಗುತ್ತಿರುವುದನ್ನು ಕಂಡ ತುಸ್ತರಿಯವರು ಶಿಷ್ಯನೊಡನೆ ಯಾತ್ರೆ ಹೊರಡಲು ಆಜ್ಞೆಯಿಟ್ಟರು .
ಶರೀಅತ್ (ನಿಯಮ), ತ್ವರೀಖತ್(ಮಾರ್ಗ), ಹಖೀಖತ್(ಪರಮ ಸತ್ಯ), ಮಅರಿಫತ್(ಬ್ರಹ್ಮ ಜ್ಞಾನ) ಈ ರೀತಿಯಾಗಿದೆ ಸೂಫಿಸಂನ ಮೆಟ್ಟಿಲುಗಳು . ಶರೀಅತ್ ಹಿಡಿದು ತ್ವರೀಖತ್ ಸ್ವೀಕರಿಸುವುದರೊಂದಿಗೆ ಸೂಫಿಸಂ ಪ್ರಾರಂಭವಾಗತ್ತದೆ. ಹಖೀಖತು ದಾಟಿ ಮಅರಿಫತ್ ತಲುಪುವ ಸೂಫಿಗಳು ಆತ್ಮೀಯ ಮಾರ್ಗದಲ್ಲಿ ಉನ್ನತಿಗೇರುವುದರೊಂದಿಗೆ ಕೆಲವರು ಉನ್ಮಾದ ಸ್ಥಿತಿ ತಲುಪುತ್ತಾರೆ . ಇದು ಒಂದು ರೀತಿಯ ಪರೀಕ್ಷಣಾ ಘಟ್ಟವಾಗಿದೆ , ಈ ಅವಸ್ಥೆಯಲ್ಲಿ ಸೂಫಿಗಳು ಇಸ್ಲಾಮಿನ ನಿಯಮ ಶಾಸ್ತ್ರವಾದ ಶರೀಅತ್ ಪೂರ್ಣವಾಗಿ ಅನುಸರಿಸಬೇಕೆಂದಿಲ್ಲ. ಉನ್ಮಾದ ಸ್ಥಿತಿಯಲ್ಲಿನ ನಡತೆಗಳು ಸಾಮಾನ್ಯ ಜನರಲ್ಲಿ ಗೊಂದಲವನ್ನು ಉಂಟುಮಾಡುತ್ತದೆ . ಈ ಕಾರಣದಿಂದ ಏಕಾಂತ ವಾಸ ಅಥವಾ ಸಂಚಾರಗಳು ನಡೆಸಬೇಕಾಗುತ್ತದೆ . ಈ ಕಾರಣದಿಂದಾಗಿದೆ ಹಲ್ಲಾಜರನ್ನು ಯಾತ್ರೆ ಹೋಗಲು ನಿರ್ಧೇಶಿಸಿರುವುದು . ಅಥವಾ ಆಧ್ಯಾತ್ಮಿಕತೆಯ ಉನ್ನತ ಶಿಖರಗಳನ್ನು ಶಿಷ್ಯನಾದ ಹಲ್ಲಾಜರು ತಲುಪಿರುವರು ಎಂದು ಮನಗಂಡ ಗುರು ಯಾತ್ರೆಗೆ ಆದೇಶವಿತ್ತರು ಎಂದು ವ್ಯತ್ಯಸ್ಥ ಅಭಿಪ್ರಾಯಗಳಿವೆ .
*ಮಕ್ಕಾದಲ್ಲಿ*
ಪವಿತ್ರ ಮಕ್ಕಾ ತಲುಪಿದ ಮನ್ಸೂರ್ ಅಲ್ ಹಲ್ಲಾಜ್ ಮಕ್ಕಾದ ಮಸೀದಿಯಲ್ಲಿ ತಡೆಯಲಾರದ ಸೆಕೆ ಮತ್ತು ಕಠಿಣವಾದ ಚಳಿಯನ್ನೂ ಲೆಕ್ಕಿಸದೆ ಸುಮಾರು ವರ್ಷಗಳು ಕಳೆದರು. ಕಷ್ಟಗಳನ್ನು ಸಹಿಸುತ್ತಾ ಶರೀರದ ಇಛ್ಛೆಗಳೊಂದಿಗೆ ಹೋರಾಡುತ್ತಿದ್ದರು. ಪವಿತ್ರ ಮಕ್ಕಾ ಮಸೀದಿಯಲ್ಲಿ ಯಾವುದೇ ಮೇಲ್ಚಾವಣಿಯ ಅಡಿಯಲ್ಲೂ ಕುಳಿತುಕೊಳ್ಳುತ್ತಿರಲಿಲ್ಲ. ಒಂದು ವರ್ಷ ಪೂರ್ತಿ ಉಪವಾಸವು ಸ್ವಲ್ಪ ನೀರು ಮತ್ತು ತುಂಡು ರೊಟ್ಟಿಯಿಂದ ಮಾತ್ರ ಉಪವಾಸ ತೆರೆಯುತ್ತಿದ್ದರು. ತಡೆಯಲಾರದ ಸೆಖೆಯಲ್ಲೂ ಜಬಲ್ ಅಬೀ ಖುಬೈಸ್ ಪರ್ವತದ ಮೇಲೆ ಅಲ್ಲಾಹನ ಧ್ಯಾನದಲ್ಲಿ ಕುಳಿತುಕೊಳ್ಳುತ್ತಿದ್ದರು . ಮಕ್ಕಾದ ಸೂಫೀ ಪ್ರಮುಖರಾಗಿದ್ದ ಶೈಖ್ ಅಬ್ದುಲ್ಲಾಹಿಲ್ ಮಗ್ರಿಬಿಯವರು ತಮ್ಮ ಶಿಷ್ಯರೊಂದಿಗೆ ಹಲ್ಲಾಜರನ್ನು ಸಂದರ್ಶಿಸಲು ಹೊರಟರು . ಯಾವತ್ತೂ ಕುಳಿತುಕೊಳ್ಳುತ್ತಿದ್ದ ಹಿಜ್ರ್ ಇಸ್ಮಾಈಲ್ ಪಕ್ಕದಲ್ಲಿ ಹಲ್ಲಾಜರನ್ನು ಕಾಣದೆ ಹುಡುಕುತ್ತಾ ಅಬೀ ಖುಬೈಸ್ ಪರ್ವತವೇರಿದರು . ಆವಾಗ ಪರ್ವತ ಶಿಖರದಲ್ಲಿರುವ ಬಂಡೆಯ ಮೇಲೆ ಶಿರೋ ವಸ್ತ್ರ ಧರಿಸದೆ ನಗ್ನ ಕಾಲುಗಳೊಂದಿಗೆ ಹಲ್ಲಾಜರು ಕುಳಿತಿರುವುದನ್ನು ಕಂಡರು. ಶರೀರ ಪೂರ್ತಿ ಬೆವರ ಹನಿಗಳು ಹೊರಟು ಧರೆಯನ್ನು ಚುಂಬಿಸುತ್ತಿರುವುದನ್ನು ಕಂಡ ಮಗ್ರಿಬಿಯವರು ತಮ್ಮ ಶಿಷ್ಯರೊಂದಿಗೆ ಹೀಗೆ ಹೇಳಿದರು"ಮನಸು ತುಂಬಾ ವಿಶ್ವಾಸ ತುಳುಕುತ್ತಿದೆ ,ಇವರು ಕ್ಷಮಿಸಲಾಗದ ಪರೀಕ್ಷಣೆಗೆ ಒಳಗಾಗಲಿರುವರು" .
*ಬಸರಾದಲ್ಲಿ*
ಬಸರಕ್ಕೆ ಯಾತ್ರೆ ಹೊರಟ ಹಲ್ಲಾಜರು ಮತ್ತೊಬ್ಬರು ಸೂಫಿ ವರ್ಯರಾದ ಅಂರ್ ಬಿನ್ ಉಸ್ಮಾನ್ ರವರ ಶಿಷ್ಯತ್ವ ಸ್ವೀಕರಿಸಿದರು. ಮುಂದುವರೆಯುತ್ತಾ ಬಸರದ ಅಬೂ ಯಅಖೂಬುಲ್ ಅಖ್ತಾಈಯವರ ಮಗಳನ್ನು ವಿವಾಹವಾದರು. ಉನ್ಮಾದ ಸ್ಥಿತಿ ಮರುಕಳಿಸಿದಾಗ, ಅವರ ಮಾತುಗಳನ್ನು ವಿಮರ್ಷಿಸುತ್ತಾ ಅಂರ್ ರವರು ಅವರನ್ನು ಹೊರಡುವಂತೆ ಕೇಳಿಕೊಂಡರು. ಅಲ್ಲಿಂದ ಬೀದಿಗಿಳಿದ ಹಲ್ಲಾಜರನ್ನು ಜನರು ಮಾನಸಿಕ ಅಸ್ವಸ್ಥರೆಂದು ಹೀಯಾಳಿಸಿದರು . ಅಲ್ಲಿಂದ ಹೊರಟ ಹಲ್ಲಾಜರು ಸೂಫೀ ಸಂತರಾದ ಜುನೈದುಲ್ ಬಗ್ದಾದಿಯ ಸನ್ನಿಧಿ ಸೇರಿದರು . ದಡ ಸೇರಲಿರುವ ಹಡಗಿನಂತೆ ಸದಾ ಸಮಯವೂ ಹಲ್ಲಾಜರು ಸೃಷ್ಟಿಕರ್ತನನ್ನು ಅರಸುತ್ತಾ ಅಲೆದಾಡಿದರು. ಅದರೊಂದಿಗೆ ಹಲ್ಲಾಜರು ಮಅರಿಫತ್ ಎಂಬ ಉನ್ನತ ಪದವಿಗೆ ತಲುಪಿದರು . ಆಧ್ಯಾತ್ಮಿಕತೆಯ ಮತ್ತಿನಲ್ಲಿ ಮುಳುಗಿದ ಹಲ್ಲಾಜರನ್ನು ಜುನೈದುಲ್ ಬಗ್ದಾದಿಯೂ ಹೊರಗಿಟ್ಟರು .
*ಭುಗಿಲೆದ್ದ ವಿವಾದ*
ಬೀದಿಗಿಳಿದ ಹಲ್ಲಾಹರು ನಾನು ನಾನು ನೀನು ಎಂಬ ಸ್ನೇಹ ಮಾದುರ್ಯದಲ್ಲಿ ಮುಳುಗಿದರು. ಹಲವು ವೇಳೆಗಳು ಇದೇ ರೀತಿಗೆ ಮರುಕಳಿಸುತ್ತಿತ್ತು , ಆವಾಗ ತಾನು ದೇವ ಸನ್ನಿಧಿಯಲ್ಲಿ ಇರುತ್ತಿದ್ದೆನೆಂದು ಹಲ್ಲಾಜರು ಹೇಳುತ್ತಿದ್ದರು . ಈ ಉನ್ಮಾದ ಸ್ಥಿತಿಯಲ್ಲಿ ಹಲ್ಲಾಜರು "ಅನಲ್ ಹಖ್" ಎಂದು ಪಠಿಸುತ್ತಲೇ ಇದ್ದರು. ಸೃಷ್ಟಿಕರ್ತನ ಅನುಪಮ ಪ್ರೀತಿಯಿಂದ ಹಲ್ಲಾಜರು "ಪರಮ ಸತ್ಯ ನಾನೇ(ಅನಲ್ ಹಖ್)" ಎಂದೂ "ಸುಬ್ಹಾನೀ (ನಾನು ನನ್ನನ್ನು ಪರಿಶುದ್ಧಗೊಳಿಸುವೆನು)" , "ಮಾಫಿಲ್ ಜೈಬಿ ಇಲ್ಲಲ್ಲಾ(ಇಲಾಹನ ಹೊರತು ಬೇರೇನೂ ಜೇಬಲ್ಲಿಲ್ಲ)", "ನಾ ಪ್ರೀತಿಸುವ ನಾನು ಅವನೇ , ನಾ ಪ್ರೀತಿಸುವ ಅವನು ನಾನೇ" "ನನ್ನ ಶಿರೋ ವಸ್ತ್ರದೊಳಗೆ ಇಲಾಹನ್ನಲ್ಲದೆ ನಾನು ಅಡಗಿಸಿಲ್ಲ", "ಪ್ರೀತಿಸುವವನು ನಾನೇ. . . ಪ್ರೀತಿಸಲ್ಪಡುವವನೂ ನಾನೇ. . ." ಈ ರೀತಿಯ ಪದಗಳು , ಕವಿತೆಗಳು ಹಲ್ಲಾಜರ ಮತ್ತುಭರಿತ ಪದಪ್ರಯೋಗಗಳು ಜನರ ವಿಶ್ವಾಸವನ್ನು ನಾಶಗೊಳಿಸುವುದೇ. . ? ಎಂದು ಉಲಮಾಗಳು ಬಯಪಟ್ಟರು . ಅವರಲ್ಲಿ ಅಲಿಯ್ಯಿಬಿನು ಈಸಾ ಹಲ್ಲಾಜರೊಂದಿಗೆ ವಾದಕ್ಕಿಳಿದರು . ಪರಸ್ಪರ ಮಾತಿನೆಡೆಯಲ್ಲಿ ಹಲ್ಲಾಹರು ಈಸರವರೊಂದಿಗೆ "ನೀವು ನಿಂತಲ್ಲೇ ನಿಲ್ಲಿ ಅಧಿಕವೇನು ಮುಂದುವರೆಯಬೇಡ, ಹಾಗೇನಾದರೂ ಮಾಡಲು ಶ್ರಮಿಸಿದರೆ ತಮ್ಮನ್ನು ಭೂಮಿಯೊಂದಿಗೆ ಬುಡಮೇಲು ಮಾಡುವೆ" ಈ ಮಾತು ಕೇಳಿದಂತೆ ಈಸರವರು ಸಂವಾದವನ್ನು ನಿಲ್ಲಿಸಿದರು .
*ಆರೋಪಗಳ ಸುರಿಮಳೆ*
ಹಲ್ಲಾಜರ ಮಾತುಗಳು ಕವನಗಳು ಬಗ್ದಾದ್ ನಗರವನ್ನು ತಲ್ಲಣಗೊಳಿಸಿತು. ಹಲ್ಲಾಜರು ಪ್ರವಾದಿ ಎಂದೂ ದೇವನೆಂದೂ ವಾದಿಸಿರುವನೆಂದೂ ಜನ ಆರೋಪಿಸಿ ತಕ್ಕ ಶಿಕ್ಷೆ ನೀಡುವಂತೆ ಕೇಳತೊಡಗಿದರು . ಹದ್ದು ಮೀರಿದ ಹಲ್ಲಾಜರ ನಡತೆ ಜನರನ್ನು ರೊಚ್ಚಿಗೆಬ್ಬಿಸಿತು , ಕೊನೆಗೆ ಹಲ್ಲಾಜರ ಮೇಲೆ ವಿಧಿ ಬರೆಯಲ್ಪಟ್ಟಿತು. ಖಲೀಫ ಮುಖ್ತದಿರ್ ಬಿಲ್ಲಾಹಿಯ ಮಂತ್ರಿ ಹಾಮಿದರು ಹಲ್ಲಾಜರನ್ನು ಪ್ರಶ್ನಿಸಿದರು . ಹಲ್ಲಾಜರು ಎಲ್ಲವನ್ನೂ ನಿಶೇಧಿಸುತ್ತಾ ತನಗೆ ಪ್ರವಾದಿ ಎಂದೋ ದೇವನೆಂದೋ ಯಾವುದೇ ರೀತಿಯ ವಾದವಿಲ್ಲ, ಅಂತವುಗಳಿಂದ ನಾನು ಅಲ್ಲಾಹನಲ್ಲಿ ಬೇಡುವೆನು . ನಾನು ಅಲ್ಲಾಹನ ಒಬ್ಬ ದಾಸ ಮಾತ್ರವಾಗಿರುವೆನು, ಉಪವಾಸ ಮತ್ತು ನಮಾಝ್ ಸ್ವಲ್ಪ ಜಾಸ್ತಿ ಮಾಡುತ್ತಿರುವೆನೇ ಹೊರತು ಬೇರೇನೂ ನನ್ನಲ್ಲಿ ಇಲ್ಲ. ಆರೋಪಗಳು ಜಾಸ್ತಿಯಾಗ ತೊಡಗಿದಾಗ ಖಲೀಫರು ಉಲಮಾಗಳ ಮೊರೆ ಹೋದರು . ಉಲಮಾಗಳು ಮೂರು ವಿಭಾಗಗಳಾಗಿ ನಿಂತರು . ಪ್ರಮುಖ ವಿಭಾಗವು ಹಖೀಖತ್ ಮತ್ತು ಮಅರಿಫತ್ ಇವೆರಡೂ ಅಧೃಶ್ಯ ಕಾರ್ಯವಾಗಿರೋದರಿಂದ ಹಲ್ಲಾಜರು ಮಹಾ ಪಾಪ ಮಾಡಿದರೆಂದೂ , ಕ್ಷಮೆ ಕೇಳದ ಹೊರತು ವಧಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು . ಅವರು ನೀಡಿದ ಕಾರಣ ನಮಾಝ್ ನಿರ್ವಹಿಸದ ವಲಿಯ್ಯಿನ ಮುಂದೆ ಖಡ್ಗ ಬೀಸಿದ ಎರಡನೇ ಖಲೀಫ ಉಮರ್(ರಅ) ರವರ ನಡತೆಯಾಗಿತ್ತು . ಆದರೆ ಮತ್ತೊಂದು ವಿಭಾಗ ಮೌನವಹಿಸಿತು , ಮೂರನೇ ವಿಭಾಗದವರು ಹಲ್ಲಾಜರು ಉನ್ಮಾದ ಸ್ಥಿತಿಯಲ್ಲಿರುವುದರಿಂದ ಶರೀಅತಿನ ನಿಯಮಕ್ಕೆ ಒಳಗಾಗುವುದಿಲ್ಲ ಎಂಬ ವಾದವಾಗಿತ್ತು . ಉಲಮಾಗಳ ಅಭಿಪ್ರಾಯಗಳಿಂದ ತೃಪ್ತಿಯಾಗದೆ ಖಲೀಫರು ಸೂಫಿಗಳನ್ನು ಸಮೀಪಿಸಿದರು . ಆಂತರಿಕ ಅರ್ಥ ಬಲ್ಲವರು ಸೂಫಿಗಳು ಮಾತ್ರವಾಗಿದ್ದಾರೆಂದೂ , ಈ ರೀತಿಯ ಪದ ಬಳಕೆಯು ಸಾಮನ್ಯ ಜನರೆಡೆಯಲ್ಲಿ ಮುಜುಗರಕ್ಕೊಳಗಾಗುವ ನಡವಳಿಕೆ ಕಂಡುಬರುವುದೆಂದೂ , ಈ ರೀತಿಯ ಮಾತುಗಳನ್ನಾಡುವವರ ವಿರುದ್ದ ಶರೀಅತ್ ಕಾನೂನು ಕ್ರಮ ಕೈಗೊಳ್ಳಬಹುದೆಂದೂ , ಹಲ್ಲಾಜ್ ಮತ್ತು ಸೃಷ್ಟಿಕರ್ತನ ನಡುವಿನ ಬಂಧವನ್ನು ಅರಸುವ ಅವಶ್ಯಕತೆ ಖಲೀಫರಿಗೆ ಇಲ್ಲವೆಂದೂ, ಖಲೀಫ ತೀರ್ಪು ನೀಡಬೇಕಾದುದು ಶರೀಅತ್ ಕಾನೂನಿನ ಪ್ರಕಾರವೆಂದೂ ಅವರು ಅಭಿಪ್ರಾಯ ಪಟ್ಟರು.
ಸೂಫೀ ಭಾಷೆಯ ಆಂತರಿಕ ಅರ್ಥಗಳು ಸೂಫಿಗಳಿಗೆ ಮಾತ್ರ ಅರ್ಥವಾಗುವುದಾದರೂ ಮಜ್ತಬ ತಲುಪಿದ ಅವಸ್ಥೆಯಲ್ಲಿ ಹಲ್ಲಾಜರಿಂದ ಹೊರಡುತ್ತಿರುವ ಮಾತುಗಳು ಇಸ್ಲಾಮಿಕ ಶರೀಅತ್ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ ಎಂಬುವುದರಲ್ಲಿ ಯಾರಿಗೂ ವಿರೋಧವಿರಲಿಲ್ಲ.
*ಸೂಫೀ ಚಕ್ರರ್ತಿಯ ಮರಣ*
ನಿಯಮೋಪದೇಶ ಲಭ್ಯವಾದಂತೆ ಬಗ್ದಾದಿನ ಅಬ್ಬಾಸಿಯ ಖಲೀಫರಾದ *ಮುಖ್ತದಿರ್ ಬಿಲ್ಲಾಹಿ ಹಲ್ಲಾಜರೊಂದಿಗೆ ಪಶ್ಚಾತಾಪ ಪಡಲು ಕೇಳಿಕೊಂಡರು , ಆದರೆ ಹಲ್ಲಾಜರು ತಾನು ಪಶ್ಚಾತಾಪ ಪಡಲು ಯಾವ ತಪ್ಪನ್ನೂ ಮಾಡಿಲ್ಲವೆಂದು ಹೇಳುತ್ತಾ ಮುಗುಳ್ನಗೆಯೊಂದಿಗೆ ಕವನ ಆಲಾಪಿಸುತ್ತಾ ನಡೆದರು . ಇದರೊಂದಿಗೆ ಅನೇಕ ಸಮಯಗಳ ಕಾಲಾವಕಾಶಗಳು ನೀಡಿದ ಬಗ್ದಾದ್ ಸುಪ್ರೀಂ ಕೋರ್ಟ್ ವಧಶಿಕ್ಷೆ ಪ್ರಖ್ಯಾಪಿಸಿತು . ಖಾಝಿಯಾಗಿದ್ದ ಹಲ್ಲಾಜರ ಗುರು ಜುನೈದುಲ್ ಬಗ್ದಾದಿಯವರು ಸಹಿ ಹಾಕಲಾಗದೆ ಮೌನಿಯಾದರು . ಆಗ ಹಲ್ಲಾಜರು "ಗುರೋ. . ಸೂಫಿಸಂನ ಅಂಗಿಯನ್ನು ತೆಗೆದಿಟ್ಟಲ್ಲದೇ ನಿಮ್ಮಿಂದ ಸಹಿ ಹಾಕಲು ಸಾಧ್ಯವಿಲ್ಲ" ಎಂದು ಹೇಳಿದಾಗ ಜುನೈದುಲ್ ಬಗ್ದಾದಿಯವರು ನಿಯಮಜ್ಞರು ಧರಿಸುವ ಅಂಗಿಯುಟ್ಟು ಕೊಂಡು ಬಂದು ಸಹಿ ಹಾಕಿದರು . ನಂತರ ತನ್ನ ಕಣ್ಣು ತುಂಬಿಕೊಂಡು ಬಗ್ದಾದಿಯವರು ಹೀಗೆ ಹೇಳಿದರು *"ನಾನು ಮತ್ತು ಹಲ್ಲಾಜ್ ಒಂದೇ . . ಹುಚ್ಚು ನನ್ನನ್ನು ರಕ್ಷಿಸಿತು ಯುಕ್ತಿ ಹಲ್ಲಾಜರನ್ನು ಕೊನೆಗೊಳಿಸಿತು"* . ಕ್ರಿ. 922-ರಲ್ಲಿ ದುಲ್ಹಿಜ್ಜ 24 ರಂದು *ಹಲ್ಲಾಜ್ ಬಿನ್ ಮನ್ಸೂರ್* ಎಂಬ ಸೂಫೀ ಚಕ್ರವರ್ತಿಯ ವಧಶಿಕ್ಷೆಯು ಸಾರ್ವಜನಿಕವಾಗಿ ನಡೆಸಿದರು . ಕ್ರೂರವಾಗಿ ಹಲ್ಲೆಗೈದು ಕೈಕಾಲುಗಳನ್ನು ತಲೆಯನ್ನು ಕಡಿದು, ವಿವಿಧ ಅಂಗಾಂಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಬೆಂಕಿಯಿಟ್ಟು ಬಸ್ಮವನ್ನು ನದಿಗೆಸೆದು ಜನತೆಯು ಸಂಭ್ರಮಿಸಿದರು . ಮೂರನೇ ದಿನ ಯೂಪ್ರಟೀಸ್ ನದಿಯಲ್ಲಿ ಪ್ರವಾಹ ಉಂಟಾಯಿತು . ತನ್ನ ಮರಣ ಸಮೀಪಿಸಿದಾಗಲೂ ಕೊಲ್ಲಲು ಬಂದವರ ಮುಖವನ್ನು ನೋಡಿ ಈ ರೀತಿ ಪ್ರಾರ್ಥಿಸಿದರು *"ನೀವು ನನ್ನನ್ನು ಕೊಂದರೂ. . . ನಿಮಗೆ ಪ್ರತಿಫಲ ಲಭಿಸುವುದು , ನನಗೆ ಶಹೀದಿನ ಪದವಿಯೂ .. ಅಲ್ಲಾಹನೇ .. ನನಗೆ ನಿನ್ನಲ್ಲಿಗಿರುವ ದೂರವನ್ನು ಕಡಿಮೆ ಮಾಡುತ್ತಿದ್ದಾರೆ . ಇವರ ಸಂತೋಷ, ಆನಂದಗಳನ್ನು ಇವರಲ್ಲಿ ಸದಾ ಕರುಣಿಸು"* .

〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*
〰〰❁✿🌹•🌹✿❁〰〰
Type your valuable comments and share our blog to your friends
ReplyDelete