Monday, 23 August 2021

ರಕ್ತದಾನ ಶಿಬಿರ ವಿವರ

*ಈವರೆಗೆ ಜಿಲ್ಲೆಯಲ್ಲಿ SKSSF ವಿಖಾಯ ರಕ್ತದಾನಿ ಬಳಗದ ಮೂಲಕ ನಡೆದ ರಕ್ತದಾನ ಶಿಭಿರಗಳು,*

 *ವಲಯವಾರು ನಡೆದ ಶಿಬಿರಗಳು ಮತ್ತು ಸಂಗ್ರಹವಾದ ರಕ್ತಗಳ ವಿವರ*

1) *ವಿಟ್ಲ 7*    *(486)*        
2) *ಬೆಲ್ತಂಗಡಿ 6* *(360)*
3) *ಮಂಗಳೂರು 5* *(352)*
4) *ಬಂಟ್ವಾಳ 4* *(244)*
5) *ಕೈಕಂಬ 3* *(279)*
6) *ಪುತ್ತೂರು 3* *(184)*
7) *ಸುಳ್ಯ 3* *(145)*
8) *ಉಪ್ಪಿನಂಗಡಿ 2* *(201)*
9)   *ಕಡಬ 2* *(193)*
10) *ಮೂಡಬಿದ್ರೆ 2* *(89)*
11) *ಸುರತ್ಕಲ್ 1* *(61)*
12) *ದೇರಳಕಟ್ಟೆ 1* *(30)*

*ಜಿಲ್ಲಾ ಸಮಾರಂಭದಲ್ಲಿ 1* *(98)*

*ಒಟ್ಟು 40* *(2722)*

*41ನೇ ಶಿಬಿರ  12/09/2021  ಮಿತ್ತಬೈಯಿಲ್ ಬಂಟ್ವಾಳ ವಲಯ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯಲಿದೆ*

*SKSSF ವಿಖಾಯ ದಕ್ಷಿಣ ಕನ್ನಡ ಜಿಲ್ಲೆ*

Sunday, 2 May 2021

ಪಾಣಕ್ಕಾಡ್ ಸಯ್ಯಿದರ ಉದಯ : ಭಾಗ- 05

   ಪಾಣಕ್ಕಾಡ್ ವಂಶದ ಬೇರುಗಳು ಸರಿಸುಮಾರು ಇನ್ನೂರು ವರುಷಗಳ ಹಿಂದೆ ಯಾಮನಿನ ಹಳರ್ಮೌತ್ನ ತರೀಂ ಎಂಬ ಪ್ರದೇಶದಿಂದ ಸಯ್ಯಿದ್ ಅಲೀ ಶಿಹಾಬುದ್ದೀನ್ ಎಂಬ ಮಹಾತ್ಮರು ಉತ್ತರ ಮಲೆಬಾರಿನ ವಳಪಟ್ಟಣಂ ಎಂಬ ಸ್ಥಳಕ್ಕೆ ಆಗಮಿಸಿ, ವಾಸಿಸಿದರು. ಇದರೊಂದಿಗೆ ಕೇರಳದಲ್ಲಿ ಶಿಹಾಬುದ್ದೀನ್ ಖಬೀಲ ಪ್ರಾರಂಭವಾಯಿತು. ಅವರು ಶಿಹಾಬ್ ತಂಙಳ್ರ ಆರನೇ ಮುತ್ತಾತರಾಗಿದ್ದಾರೆ. ಅವರ ಪುತ್ರರಾದ ಸಯ್ಯಿದ್ ಹುಸೈನ್ ಶಿಹಾಬುದ್ದೀನ್ ತಂಙಳ್ ಕಣ್ಣೂರಿನ ಪ್ರಸಿದ್ಧವಾದ ಅರಕ್ಕಲ್ ರಾಜವಂಶದಿಂದ ವಿವಾಹವಾಗುವುದರೊಂದಿಗೆ ಕೇರಳದೊಂದಿಗೆ ಅವರ ಬಂಧವು ಸುದೃಢವಾಯಿತು. ಈ ಕುಟುಂಬದಲ್ಲಿ ಆತ್ಮೀಯತೆ ಹಾಗೂ ರಾಜಕೀಯ ಪಾರಂಪರ್ಯವು ವಿಲೀನವಾಗಿ, ಕೇರಳ ಸಮೂಹದಲ್ಲಿ ಅತೀ ವಿಶಿಷ್ಟ ಶ್ರೇಣಿಯಲ್ಲಿ ಶಿಹಾಬ್ ಖಬೀಲ ಪ್ರಖ್ಯಾತಿಯಾಯಿತು. ಆದಂ ನೆಬಿ(ಅ)ರಿಂದ ಪವಿತ್ರವೂ, ಪರಿಪಾವನವೂ ಆ ಪರಂಪರೆಯಲ್ಲಿ ಅಂತ್ಯಪ್ರವಾದಿ ಮುಹಮ್ಮದ್(ಸ) ರವರ ಕುಟುಂಬವನ್ನು ಅಲ್ಲಾಹನು ಕಾಪಾಡಿದ್ದಾನೆ. ಮನುಷ್ಯವರ್ಗಕ್ಕಾಗಿ ಸೃಷ್ಟಿಸಿದ ಕುಟುಂಬ ವ್ಯವಸ್ಥೆಯಲ್ಲಿ ಅತೀ ಉನ್ನತ ಕುಟುಂಬದಲ್ಲಾದೆ ನೆಬಿ(ಸ)ರವರ ಜನನವಾಗಿದ್ದು. ಇದು ಸ್ವಹೀಹುಲ್ ಬುಖಾರಿ ಹಾಗೂ ಇತರ ಹದೀಸ್ ಗ್ರಂಥಗಳಲ್ಲಿ ಉದ್ಧರಿಸಲಾಗಿದೆ. ಆ ಪವಿತ್ರ ಕುಟುಂಬದ ಉನ್ನತ ಸ್ವಭಾವ ಗುಣಗಳು ಮೇಲೈಸಿದ್ದಾಗಿದೆ ಪೌತ್ರ ಪರಂಪರೆ. ನನ್ನ ಎರಡು ಪುತ್ರರು ಎಂದು ವಿಶೇಷತೆ ಪಡೆದ ಹಸನ್(ರ) ಹುಸೈನ್(ರ)ರಿಂದ ಜೀನ್ ಗುಣಗಳ ಆತ್ಮೀಯ ರಹಸ್ಯಗಳನ್ನು ವಾರೀಸು ಪಡೆದ ಸಂತಾನ ಪರಂಪರೆ ಇಂದೂ ಕೂಡಾ ನೆಲೆನಿಂತಿದೆ. ನೆಬಿ(ಸ)ರವರು ಪ್ರಭೋಧನೆ ನಡೆಸಿದ ಕಿತಾಬ್-ಸುನ್ನತ್ಗಳ ವಾರಿಸುದಾರರಾಗಿ, ವಿದ್ವಾಂಸರು ಅಂತ್ಯದಿನತನಕ ನೆಲೆನಿಲ್ಲುವಂತೆ, ನೆಬಿಕುಟುಂಬವೂ ಅಂತ್ಯದಿನತನಕ ಸಮೂಹಕ್ಕೆ ದಾರಿದೀಪಗಳಾಗಿ ನೆಲೆನಿಲ್ಲುತ್ತವೆ. 
ಸಮೂಹದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಯ್ಯಿದರೂ, ಆಶಯಪರವಾಗಿ ದಾರಿತೋರಲು ವಿದ್ವಾಂಸರೂ, ಇರುತ್ತಾರೆ. ಇದರ ಬಗ್ಗೆ ನೆಬಿ(ಸ) ಒಂದು ಪ್ರಭಾಷಣದಲ್ಲಿ ಹೀಗೆ ಹೇಳಿದ್ದಾರೆ. ನಾನು ಓರ್ವ ಮನುಷ್ಯನಾಗಿದ್ದೇನೆ. ನನಗೆ ನನ್ನ ರಬ್ಬ್ನ ದೂತರು (ಮಲಕುಲ್ ಮೌತ್) ಬರುತ್ತಾರೆ. ನಿಮಗೆ ನಾನು ಅಮೂಲ್ಯವಾದ ಎರಡು ನಿಧಿಗಳನ್ನು ಇಡುತ್ತೇನೆ. ಒಂದು, ಅಲ್ಲಾಹನ ಕಿತಾಬ್, ನಿಮಗೆ ದಾರಿ ತೋರಲು ಅದರಲ್ಲಿ ಪ್ರಕಾಶವಿದೆ. ಆದ ಕಾರಣ ಅಲ್ಲಾಹನ ಕಿತಾಬನ್ನು ನೀವು ಬಿಗಿಯಾಗಿ ಹಿಡಿಯಿರಿ. ಮತ್ತೊಂದು, ಅಹ್ಲ್ಬೈತ್, ನನ್ನ ಕುಟುಂಬ, ಅವರ ವಿಷಯದಲ್ಲಿ ನಾನು ನಿಮಗೆ ಅಲ್ಲಾಹನನ್ನು ನೆನಪಿಸುತ್ತೇನೆ. (ಸ್ವಹೀಹ್ ಮುಸ್ಲಿಂ)
ಇದು ಎರಡೂ ಅಲ್ಲಾಹನ ಕಿತಾಬ್ ಮತ್ತು ಅಹ್ಲ್ಬೈತ್ ಪರಸ್ಪರ ಬೇರ್ಪಡದೆ ನೆಲೆನಿಂತು, ಪರಲೋಕದಲ್ಲಿ ಹೌಳ್ ಹತ್ತಿರ ನನ್ನ ಬಳಿ ಬರುವುದು. (ಅಹ್ಮದ್, ತುರ್ಮುದೀ)
ಹಾಗಾಗಿ ಖುರ್ಆನಿನ ಪ್ರಕಾಶದಂತೆ ನೆಬಿಕುಟುಂಬವೂ ಸಮೂಹಕ್ಕೆ ಅಲ್ಲಾಹನು ಅರ್ಪಿಸಿದ ಒಂದು ಸಂವಿಧಾನವಾಗಿದೆ. ಇದಾಗಿದೆ, ಪಾಣಕ್ಕಾಡ್ ತಂಙಳ್ ಮೊದಲಾದ ಆತ್ಮೀಯ ನೇತಾರರಿಂದ ಸಮೂಹವು ಅನುಭವಿಸುವುದು, ಇದು ಮುಂದೆಯೂ ಇರುವುದು(ಇ:ಅ)

Kalladka_Faizi

ಪಾಣಕ್ಕಾಡ್ ಸಯ್ಯಿದರ ಉದಯ : ಭಾಗ- 04

      ಸಯ್ಯಿದ್ ಅಲೀ ಪೂಕೋಯ ತಂಙಳ್ರ ವಫಾತ್ ನಂತರ ಕೆಲವು ಕಾಲದವರೆಗೆ ಪಾಣಕ್ಕಾಡ್ ಸಜೀವವಾಗಿರಲಿಲ್ಲ. ಅದರೆಡೆಯಲ್ಲಿ ಒಂದು ಘಟನೆ ನಡೆಯಿತು. ಓರ್ವ ವ್ಯಕ್ತಿಯು ಮತ್ತೊಬ್ಬರೊಂದಿಗೆ ನೂರು ರುಪಾಯಿ ಸಾಲ ಪಡೆದು ಒಂದು ಚಿನ್ನದ ಸರವನ್ನು ಅಡವಿಟ್ಟರು. ಹಣ ಪಾವತಿಸಿ ಸರವನ್ನು ಹಿಂದೆ ಪಡೆದಾಗ ಅದರಲ್ಲಿನ ಎರಡು ಚಿನ್ನದ ಎಸಲುಗಳು ನಾಪತ್ತೆಯಾಗಿದ್ದವು. ಪರಸ್ಪರ ತರ್ಕಗಳು ಉದ್ಬವಿಸಿ, ಸರದ ಒಡೆಯನು ಪಾಣಕ್ಕಾಡ್ನಲ್ಲಿ ಪೂಕೋಯ ತಂಙಳ್ ಬಳಿ ಸಮಸ್ಯೆಯ ಪರಿಹಾರಕ್ಕಾಗಿ ಸಮೀಪಿಸಿದರು. ತಂಙಳ್ರವರು ಸರವನ್ನು ಎರವಲು ಪಡೆದವನನ್ನು ಬರಲು ಹೇಳಿ, ಒಂದು ಪತ್ರವನ್ನು ನೀಡಿದರು. ಆದರೆ ಆ ಮನುಷ್ಯ ವರ್ತನೆಯು ದಿಕ್ಕಾರಪರವಾಗಿತ್ತು. ಅವನು ಹೇಳಿದನು. ಈ ಸಮಸ್ಯೆಗೆ ಪರಿಹಾರ ನೀಡಲು ಪೂಕೋಯ ಕುಟ್ಟಿಗೆ ಸಾಧ್ಯವಿಲ್ಲ. ಆದಕಾರಣ ನಾನಲ್ಲಿಗೆ ಬರುವುದಿಲ್ಲ ವಿವರ ತಿಳಿದ ಪಾಣಕ್ಕಾಡ್ ತಂಙಳ್ ಈ ರೀತಿ ಹೇಳಿದರು, ಅವರು ಬರುವುದಿಲ್ಲವೆಂದಾಗಿದೆ ಹೇಳಿದ್ದು, ಆದ್ದರಿಂದ ನೀವು ನ್ಯಾಯಾಲಯವನ್ನು ಸಮೀಪಿಸಿರಿ
ಪೆರಿಂದಲ್ಮಣ್ಣ ಮುನ್ಸಿಫ್ ಕೋರ್ಟ್ನಲ್ಲಿ ದಾವೆ ಹೂಡಲಾಯಿತು. ಎರಡೂ ವಿಭಾಗಗಳ ವಾದಗಳನ್ನು ಆಲಿಸಿದ ನ್ಯಾಯಾಲಯ ಕೊನೆಗೆ ಹೇಳಿತು. ಈ ಸಮಸ್ಯೆಯನ್ನು ಎರಡೂ ವಿಭಾಗದವರು ಗೌರವಿಸುವ ವ್ಯಕ್ತಿಯ ಮೂಲಕವಾಗಿ ಪರಿಹರಿಸಿಕೊಳ್ಳಬೇಕು, ಇಲ್ಲವಾದರೆ ಪ್ರತೀ ವಿಭಾಗವು ತಮಗೆ ಸ್ವೀಕಾರವಿರುವ ವ್ಯಕ್ತಿಯ ಹೆಸರನ್ನು ಸೂಚಿಸಬೇಕು ಆಗ ಸರ ಕೊಟ್ಟವರು ಪಾಣಕ್ಕಾಡ್ ಪಿ.ಯಂ.ಎಸ್.ಎ. ಪೂಕೋಯ ತಂಙಳ್ರ ಹೆಸರನ್ನೂ, ಎರವಲು ಪಡೆದವರು ಖಾನ್ಬಹದೂರ್ ಒ.ಪಿ.ಯಂ. ಮುತ್ತುಕೋಯ ತಂಙಳ್ರ ಹೆಸರನ್ನೂ ಸೂಚಿಸಿದರು. ನ್ಯಾಯಾಲಯವು ಇಬ್ಬರನ್ನೂ ಮದ್ಯಸ್ಥರನ್ನಾಗಿ ಮಾಡಿ ಕೇಸ್ಗೆ ಪರಿಹಾರ ಸೂಚಿಸಲು ನಿರ್ದೇಶಿಸಿತು. ಅದರ ಎಲ್ಲಾ ಫಯಲುಗಳನ್ನು ಪೂಕೋಯ ತಂಙಳ್ರಿಗೆ ಕಳುಹಿಸಿಕೊಡಲಾಯಿತು. ಇಬ್ಬರ ವಾದಗಳನ್ನೂ ಕೇಳಿದ ನಂತರ, ತೀರ್ಪ್ ನೀಡಲು ಮುತ್ತುಕೋಯ ತಂಙಳ್, ಪೂಕೋಯ ತಂಙಳ್ರೊಂದಿಗೆ ಕೇಳಿಕೊಂಡರು. ಕಳೆದು ಹೋದ ಚಿನ್ನದ ಸರದ ಎಸಲುಗಳ ಹಣವನ್ನು ಅದರ ಒಡೆಯರಿಗೆ ನೀಡಬೇಕೆಂದಾಗಿತ್ತು ತೀರ್ಪ್. ಇದರೊಂದಿಗೆ ಪಾಣಕ್ಕಾಡ್ ಮತ್ತೆ ಜನನಿಬಿಡವಾಯಿತು. ಸರ್ವ ಸಮಸ್ಯೆಗಳ ಪರಿಹಾರ ಕೇಂದ್ರವಾಗಿ ಪಾಣಕ್ಕಾಡ್ ಪರಿವರ್ತನೆಯಾಯಿತು. 1975-ರಲ್ಲಿ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯ ದಾರುಲ್ ಉಲೂಂ ಅರೆಬಿಕ್ ಕಾಲೇಜಿನ ಒಂದು ಸಭೆಯಲ್ಲಿ ಓರ್ವ ವ್ಯಕ್ತಿಯು ರಾಜಕೀಯ ಕಾರಣಗಳಿಂದ ಮಾನ್ಯ ತಂಙಳ್ರನ್ನು ಅಗೌರವಿಸುವ ರೀತಿಯಲ್ಲಿ ವರ್ತಿಸಿದರು. ಕೊನೆಗೆ ಆ ವ್ಯಕ್ತಿಯು ಮಾನಸಿಕ ಸ್ಥಿಮಿತ ಕಳೆದು ಯಾಚಕರಾಗಿ ಹೋದರು. ಇದು ಪೂಕೋಯ ತಂಙಳ್ರನ್ನು ಅಪಮಾನಿಸಿದ ಕಾರಣವಾಗಿರಬಹುದೆಂದು ಹೇಳಲಾಗಿದೆ. 
ಮಸೀದಿ, ಮದರಸಗಳಿಗೆ, ಶಿಲಾನ್ಯಾಸ ಮಾಡುವುದು, ಸಂಬಾವನೆ ಸ್ವೀಕರಿಸುವುದು, ಮನೆ ಹಾಗೂ ಸಂಸ್ಥೆಗಳ ಉದ್ಘಾಟನೆಗಳು, ರೋಗಿಗಳನ್ನು ಸಾಂತ್ವನಗೊಳಿಸುವುದು, ಎಲ್ಲಿಯೂ ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ನಿರ್ದೇಶಿಸುವುದು, ಎಲ್ಲಕ್ಕೂ ಜನರು ಪಾಣಕ್ಕಾಡ್ ತಂಙಳ್ರನ್ನು ಆಶ್ರಯಿಸುತ್ತಿದ್ದರು. ಅನೇಕಾನೇಕ ಅದ್ಬುತ ಘಟನೆಗಳು ತಂಙಳ್ರ ಬಗ್ಗೆ ಉದ್ದರಿಸಲಾಗಿದೆ. 
ಒಂದು ಸಲ ಓರ್ವ ಮಹಳೆಯ ಶರೀರದಲ್ಲಿ ಸರ್ಪವೊಂದು ಸುತ್ತಿಕೊಂಡ ಅವಸ್ಥೆಯಲ್ಲಿ ಸಂಬಂಧಿಕರು ಪಾಣಕ್ಕಾಡ್ಗೆ ಆಗಮಿಸಿದರು. ಸರ್ವರೂ ಪರಿಭ್ರಾಂತಿ ಹೊಂದಿದ ಕ್ಷಣಗಳು, ತಂಙಳ್ರವರು ತನ್ನ ಕೋಣೆಗೆ ತೆರಳಿ ಬಾಗಿಲು ಹಾಕಿ ಪ್ರಾರ್ಥಿಸಿದರು. ಕೆಲಹೊತ್ತು ಕಲೆದ ನಂತರ ಹೊರಗೆ ಬಂದರು. ಆಗ ಮುಂಗುಸಿಯೊಂದು ಎಲ್ಲಿಂದಲೋ ಬಂದು ಆ ಮಹಿಳೆಯ ಶರೀರದಲ್ಲಿದ್ದ ಘಟಸರ್ಪವನ್ನು ಕೊಂದು ಹಾಕಿ, ತುಂಡುಮಾಡಿ ಅಲ್ಲಿಂದ ಮೆರೆಯಾಯಿತು. ಬಂದವರೆಲ್ಲರೂ ನಿಟ್ಟುಸಿರು ಬಿಟ್ಟರು. ಸಂತೋಷದಿಂದ ಮನೆಗೆ ಹಿಂದಿರುಗಿದರು. ಸೌಮ್ಯಶಾಲಿಯಾಲಿಯಾದ ತಂಙಳ್, ಬಹಳ ಮೆತ್ತಗೆ ಸ್ವರದಲ್ಲಿ ಒಂದೆರಡು ಮಾತುಗಳನ್ನು ಮಾತ್ರ ಹೇಳುತ್ತಿದ್ದರು. ಯಾರಿಗೂ ಸಾಧ್ಯವಾಗದ ಕ್ಲಿಷ್ಟಕರ ಸಮಸ್ಯೆಗಳು ಆ ಎರಡು ಮಾತಿನಿಂದ ಪರಿಹಾರವಾಗುತ್ತಿದ್ದವು. ಯಾವ ಹಟಮಾರಿ ಸ್ವಭಾವದವರೂ, ತಂಙಳ್ರವರ ಮುಂದೆ ಬಂದು ನಿಂತರೆ, ನೀರಿಗೆ ಹಾಕಿದ ಉಪ್ಪಿನಂತೆ ಕರಗುತ್ತಿದ್ದರು. ಜಾತಿಮತ ಭೇದವಿಲ್ಲದೆ ತಂಙಳ್ ಸರ್ವಧರನೀಯರಾಗಿದ್ದರು. ಕೇರಳ ರಾಜ್ಯದ ಮುಸ್ಲಿಂ ಲೀಗ್ ಅಧ್ಯಕ್ಷರಾಗಿದ್ದ ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್ರ ವಫಾತ್ ನಂತರ ಸಯ್ಯಿದ್ ಪೂಕೋಯ ತಂಙಳ್ರನ್ನು ಸರ್ವಸಮ್ಮತದಿಂದ, ಆ ಸ್ಥಾನಕ್ಕೆ ಆಯ್ಕೆಗೊಳಿಸಲಾಯಿತು. ಆನಂತರ ಪಾಣಕ್ಕಾಡ್ನ ಕೊಡಪ್ಪನಕ್ಕಲ್ ತರವಾಡ್, ಆತ್ಮೀಯ ಕೇಂದ್ರದಂತೆ, ರಾಜಕೀಯ ಕೇಂದ್ರವಾಗಿಯೂ ಮಾರ್ಪಡುಗೊಂಡಿತು. ಪಾಣಕ್ಕಾಡ್ ತಂಙಳ್ ಸನ್ನಿಧಿಯಲ್ಲಿ ಯಾವುದೇ ವಿವೇಚನೆ ಇರಲಿಲ್ಲ. ಮುಸ್ಲಿಮುರು, ಮುಸ್ಲಿಮೇತರರು, ಸುನ್ನಿಗಳು, ಅಸುನ್ನಿಗಳು, ಎಲ್ಲಾ ಪಕ್ಷಗಳ ರಾಜಕೀಯ ಕಾರ್ಯಕರ್ತರು, ಅಲ್ಲಿನ ನಿತ್ಯ ಸಂದರ್ಶಕರಾಗಿದ್ದರು. ಕೇರಳ ಮುಸಲ್ಮಾನರ ಕಣ್ಣಿನ ಮುತ್ತು ಎಂಬ ಪ್ರಯೋಗವು ಪೂಕೋಯ ತಂಙಳ್ರಲ್ಲಿ ನಿಜವಾಗಿತ್ತು. ಅನೇಕ ಮೊಹಲ್ಲಾಗಳ ಖಾಝಿ, ಹಾಗೂ ಸಮಸ್ತದ ಮುಶಾವರ ಸದಸ್ಯರಾದ ತಂಙಳ್, ಸರ್ವಜನರೆಡೆಯಲ್ಲಿ ಅಂಗೀಕಾರ ಪಡೆದ ಮಹಾವ್ಯಕ್ತಿಯಾಗಿದ್ದರು. ಸರ್ವರಿಗೂ ಅಲ್ಲಿ ನ್ಯಾಯಯುತವಾದ ತೀರ್ಮಾನ ಸಿಗುತ್ತಿತ್ತು. ಸುನ್ನೀ ಯುವಜನ ಸಂಘದ ರಾಜ್ಯಾಧ್ಯಕ್ಷ, ಜಾಮಿಅ: ನೂರಿಯ್ಯಾ, ಅರೆಬಿಕ್ ಕಾಲೇಜು, ಫೈಝಾಬಾದ್, ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ತನ್ನ ಸಾಕುತಂದೆ ಹಾಗೂ ದೊಡ್ಡತಂದೆಯಾದ ಅಲೀ ಪೂಕೋಯ ತಂಙಳ್ರ ಸ್ಮರಣೆಗಾಗಿ ತನ್ನ ಎಲ್ಲಾ ಪುತ್ರರಿಗೆ ಅಲಿ ಸೇರಿಸಿ ನಾಮಕರಣ ಮಾಡಿದರು. 
1975-ಜುಲ್ಯಾ ಆರರಂದು ಪೂಕೋಯ ತಂಙಳ್ ವಫಾತ್ ಆದರು. ಆನಂತರ ಆ ಪದವಿಗೆ ಸಯ್ಯಿದ್ ಮುಹಮ್ಮದ್ ಅಲೀ ಶಿಹಾಬ್ ತಂಙಳ್ ಪಾದಾರ್ಪಣೆಯಾದರು. ತಂದೆ ಆತ್ಮೀಯ ಪದವಿಯೊಂದಿಗೆ ರಾಜಕೀಯ ವಾಗಿಯೂ, ಕೇರಳ ರಾಜ್ಯದ ಮುಸ್ಲಿಂ ಲೀಗ್ನ ಸಾರಥ್ಯ ವಹಿಸಲು ತಂಙಳ್ ನಿಭಂಧಿತರಾದರು. ಮೂರುವರೆ ದಶಕಗಳ ಕಾಲ ತಂಙಳ್ ಆ ಪದವಿಯಲ್ಲಿ ವಿರಾಜಿಸಿದರು. ಪೂಕೋಯ ತಂಙಳ್ರ ಹಳೆಯ ಕಾಲದ ಆಗುಹೋಗುಗಳಿಗೆ ವ್ಯತ್ಯಸ್ಥವಾಗಿ, ಗ್ಲೋಬಲ್ ವಿಲೇಜ್ ಆಗಿ ಜಗತ್ತು ಒಂದು ಚಿಕ್ಕ ಗ್ರಾಮದಂತಾಗಿ, ಬದಲಾದ ಕಾಲದಲ್ಲಿ, ಶಿಹಾಬ್ ತಂಙಳ್ ಎಲ್ಲವನ್ನೂ ಬಹಳ ಸೂಕ್ಷತೆಯಿಂದ, ನಯನಾಜೂಕಿನಿಂದ ಕಾರ್ಯಗಳ ಬಗ್ಗೆ ತಿಳಿದು, ಸಮಸ್ಯೆಗಳಿಗೆ ಪರಿಹಾರವನ್ನು ನಿರ್ದೇಶಿಸಿ, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. 
ಇದು ಪಾರಂಪರ್ಯವಾಗಿ ಬಂದಂತಹ ನೇತೃತ್ವ ಮಹಿಮೆಯೆಂದು ಹೇಳಬಹುದು. ಸಯ್ಯಿದ್ ಉಮರಲೀ ಶಿಹಾಬ್ ತಂಙಳ್, ಸಯ್ಯಿದ್ ಹೈದರಲೀ ಶಿಹಾಬ್ ತಂಙಳ್, ಸಯ್ಯಿದ್ ಸ್ವಾದಿಖಲೀ ಶಿಹಾಬ್ ತಂಙಳ್, ಸಯ್ಯಿದ್ ಅಬ್ಬಾಸ್ ಅಲೀ ಶಿಹಾಬ್ ತಂಙಳ್, ದೊಡ್ಡ ತಂಙಳ್ರ ಸಹಾಯಿಯಾಗಿ ನೆಲೆನಿಂತರು. ಮಂಗಳವಾರವನ್ನು ಜನರಿಗಾಗಿ ಮೀಸಲಿಟ್ಟರು. ಅನೇಕ ಮೊಹಲ್ಲಾಗಳ ಖಾಝಿ, ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪದೇಶಕರಾಗಿ ಪಾಣಕ್ಕಾಡ್ ಸಯ್ಯಿದರು ಆಯ್ಕೆಯಾದರು. ಎಲ್ಲಕ್ಕಿಂತಲೂ ಉನ್ನತ ಪದವಿ ಸಯ್ಯಿದ್ ವಂಶದ ಆತ್ಮೀಯತೆಯಾಗಿದೆ. ಸಯ್ಯಿದ್ ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್ರ ಐದನೇ ಹಿಂಗಾಮಿಯಾಗಿ ಮೂರುವರೆ ದಶಕಗಳ ಕಾಲ ವಿರಾಜಿಸಿದ ಶಿಹಾಬ್ ತಂಙಳ್, ಸಮೂಹಕ್ಕಾಗಿ ತನ್ನ ಜೀವನವನ್ನು ವ್ಯಯಿಸಿ, ತನ್ನದಾದ ಆತ್ಮೀಯ ಲೋಕಕ್ಕೆ ಯಾತ್ರೆ ಹೊರಟಾಗ ತನ್ನ ಪ್ರತಿನಿಧಿಯಾಗಿ ಸಯ್ಯಿದ್ ಹೈದರಲೀ ಶಿಹಾಬ್ ತಂಙಳ್ ಆ ಪದವಿಯಲ್ಲಿ ವಿರಾಜಮಾನರಾದರು.
#ಮುಂದುವರಿಯುವವುದು.......

📝 Kalladka Faizi

ಪಾಣಕ್ಕಾಡ್ ಸಯ್ಯಿದರ ಉದಯ : ಭಾಗ- 03

ಪಾಣಕ್ಕಾಡ್ ಸಯ್ಯಿದ್ ಅಲೀ ಪೂಕೋಯ ತಂಙಳ್ ತಂಙಳ್ ಹಾಗೂ ಪಾಣಕ್ಕಾಡ್ನ ಮಹತ್ವ
ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್ರನ್ನು ಬ್ರಿಟಷರು ವೆಲ್ಲೂರಿಗೆ ಗಡೀಪಾರು ಮಾಡಿದ ನಂತರವೂ ಪಾಣಕ್ಕಾಡ್ ತಂಙಳ್ ಪದವಿ ಕೊನೆಗೊಳ್ಳಲಿಲ್ಲ. ಆ ಪದವಿಗೆ ಸಯ್ಯಿದ್ ಮುಹಮ್ಮದ್ ಕುಂಞಕ್ಕೋಯ ತಂಙಳ್ ಪಾದಾರ್ಪಣೆಯಾದರು. ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಂಙಳ್ ಕಪ್ಪಾಡ್ ವಯಲ್ ಎಂಬ ಸ್ಥಳದಿಂದ ವಿವಾಹವಾಗಿದ್ದರು, ಅದರಲ್ಲಿ ಜನಿಸಿದ ಪುತ್ರರಾಗಿದ್ದಾರೆ, ಸಯ್ಯಿದ್ ಕೋಯಕುಂಞಕೋಯ ತಂಙಳ್ ಹಾಗೂ ಸಯ್ಯಿದ್ ಹುಸೈನ್ ಶಿಹಾಬ್ ಆಟ್ಟಕೋಯ ತಂಙಳ್. ಕೋಯಕುಂಞಕೋಯ ತಂಙಳ್ ಪಾಣಕ್ಕಾಡ್ನಲ್ಲಿ ವಾಸವಾಗಿದ್ದಾಗ ಜನರ ಅಭಯ ಕೇಂದ್ರವಾಗಿದ್ದರು. ನ್ಯಾಯಯುತವಾದ ತೀರ್ಪ್ ಗಳಿಂದ ಜನರು ಸಂತೃಪ್ತರಾಗಿದ್ದರು. ದಾರಿದ್ರ್ಯತೆಯ ಕಾಲದಲ್ಲಿ ತಂಙಳ್ರ ಮನೆಯವರು ಊಟಕ್ಕೆ ಅಕ್ಕಿ ಇಲ್ಲವೆಂದು ತಂಙಳರನ್ನು ನೆನಪಿಸಿದಾಗ, ನೀರನ್ನು ಒಲೆ ಮೇಲಿಡಲು ತಂಙಳ್ ನಿರ್ದೇಶಿಸುತ್ತಿದ್ದರು. ನೀರು ಬಿಸಿಯಾಗುವ ಹೊತ್ತಲ್ಲಿ, ಯಾರಾದರೂ ಅಕ್ಕಿಯೊಂದಿಗೆ ಅಲ್ಲಿಗೆ ಆಗಮಿಸುತ್ತಿದ್ದರು. ಊಟ ತಯಾರಿಯಾದಾಗ ಅಲ್ಲಿದ್ದವರೆಲ್ಲನ್ನೂ ಸೇರಿಸಿ, ಆಹಾರ ಸೇವಿಸುವುದು ಅಲ್ಲಿನ ವಾಡಿಕೆಯಾಗಿತ್ತು. ಅನೇಕ ಅದ್ಬುತ ಕರಾಮತ್ಗಳು ತಂಙಳ್ರಿಂದ ಪ್ರಕಟವಾಗಿದ್ದನ್ನು ಉದ್ದರಿಸಲಾಗಿದೆ. 
ಒಂದು ಸಲ ಓರ್ವ ನಾಪತ್ತೆಯಾಗಿ, ಆರಕ್ಷಕರು ಎಲ್ಲಿ ಹುಡುಕಾಡಿದರೂ, ವಿವರ ಸಿಗದಿದ್ದಾಗ, ಅವರ ಕುಟುಂಬಿಕರು ಪಾಣಕ್ಕಾಡ್ಗೆ ಬಂದು ಅಹವಾಲು ಹೇಳಿದರು. ಬೇರೆ ಯಾವುದೋ ವಿಶೇಷ ವಿಷಯವನ್ನು ಚರ್ಚೆ ಮಾಡುವ ಹೊತ್ತಲ್ಲಾಗಿತ್ತು ಅವರು ಅಲ್ಲಿ ತಲುಪಿದ್ದು. ವಿಷಯ ತಿಳಿದ ತಂಙಳ್ ತಕ್ಷಣ ಹೇಳಿದರು. ಪನಂಬುಝ ಕಾಡಿನಲ್ಲಿ ಮೃತದೇಹವೊಂದು ನೇತಾಡುತ್ತಿದೆ ಜನರು ಹೋಗಿ ನೋಡಿದಾಗ ವಿವರ ಪತ್ತೆಯಾಯಿತು. ಪಾಣಕ್ಕಾಡ್ ಪುತ್ತನ್ಪುರ ಎಂಬ ಮನೆಯಲ್ಲಿ ತಂಙಳ್ ವಫಾತ್ ಆದರು. ಆ ಮನೆಯಲ್ಲಿ ಈಗ ಬಶೀರಲೀ ಶಿಹಾಬ್ ತಂಙಳ್ ವಾಸವಾಗಿದ್ದಾರೆ. ಮನೆಯ ಅಂಗಣದ ಬದಿಯಲ್ಲಿ ಮಹಾತ್ಮರ ಮಖ್ಬರ ಕಾಣಬಹುದು. 
ಸಯ್ಯಿದ್ ಕೋಯಕುಂಞಕೋಯ ತಂಙಳ್ರ ವಿಯೋಗ ನಂತರ ಅವರ ಸಹೋದರರಾದ ಸಯ್ಯಿದ್ ಅಲೀ ಪೂಕೋಯ ತಂಙಳ್ ಪಾಣಕ್ಕಾಡ್ ತಂಙಳ್ ಎಂದು ಪ್ರಸಿದ್ಧಿಯಾದರು. ಅವರು ವಾಸಿಸಿದ್ದು ಕೊಡಪ್ಪನಕ್ಕಲ್ ಮನೆಯಲ್ಲಾಗಿತ್ತು. ದೃಷ್ಟಿರಹಿತರಾಗಿದ್ದ ಮಹಾತ್ಮರಿಗೆ, ಸಂತಾನವಿರಲಿಲ್ಲ. ದೊಡ್ಡ ಸಹೋದರ ಕೋಯಕುಂಞಕೋಯ ತಂಙಳ್ರ ಅಪೇಕ್ಷೆಯಂತೆ, ಅವರ ಪುತ್ರರಾದ ಸಯ್ಯಿದ್ ಪೂಕೋಯ ತಂಙಳ್ರನ್ನು ದತ್ತುಪುತ್ರರಾಗಿ ಸ್ವೀಕರಿಸಿದ್ದರು. ಇವರಾಗಿದ್ದಾರೆ ಜಗತ್ಪ್ರಸಿದ್ಧರಾದ ಪಿ.ಯಂ.ಎಸ್.ಎ. ಪೂಕೋಯ ತಂಙಳ್. ಅಂದಿನಿಂದ ಕೊಡಪ್ಪನಕ್ಕಲ್ ಭವನವು ಖ್ಯಾತಿಯ ಉತ್ತುಂಗಕ್ಕೇರಿತು. ಸಹೋದರರಂತೆ ಅವರು ದರಿದ್ರರಾಗಿರಲಿಲ್ಲ. ದೊಡ್ಡ ಸಂಪತ್ತಿನ ಒಡೆಯರಾಗಿದ್ದರು. ಅವರು ತನ್ನ ಹಾಗೂ ಪತ್ನಿಯ ಎಲ್ಲಾ ಸಂಪತ್ತುಗಳನ್ನು ಸಾಕು ಪುತ್ರರಾದ ಪೂಕೋಯ ತಂಙಳ್ರ ಹೆಸರಲ್ಲಿ ಬರೆದುಕೊಟ್ಟರು. ಕಣ್ಣು ಕಾಣದಿದ್ದರೂ ಅಲೀ ಪೂಕೋಯ ತಂಙಳ್, ಕೊನೆತನಕ ಜನರಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟರು. ಕೊಡಪ್ಪನಕ್ಕಲ್ ಮನೆಯಲ್ಲಿ ಮಹಾತ್ಮರು ವಫಾತ್ ಆದರು. ಪಾಣಕ್ಕಾಡ್ ಜುಮಾಮಸೀದಿ ಸಮೀಪ ಅಂತ್ಯವಿಶ್ರಮಿಸುತ್ತಿದ್ದಾರೆ.

📝 Kalladka_Faizi

Saturday, 17 April 2021

ಪಾಣಕ್ಕಾಡ್ ಸಯ್ಯಿದರ ಉದಯ: ಭಾಗ- 02

ಅಭಯಕೇಂದ್ರ ಪಣಕ್ಕಾಡ್ ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಂಙಳ್ ಪಾಣಕ್ಕಾಡ್ ಪ್ರದೇಶದಲ್ಲಿ ವಾಸ ಮಾಡಿದ ನಂತರ, ವಿವಿಧ ಪ್ರದೇಶಗಳ ಜನರು ಪಾಣಕ್ಕಾಡ್ಗೆ ಪ್ರವಹಿಸಿದರು. ದಿನನಿತ್ಯ ಅವರ ಖ್ಯಾತಿಯು ಹೆಚ್ಚುತ್ತಾ ಹೋಯಿತು. 
ಅವರ ತಂದೆಯವರಾದ #ಸಯ್ಯಿದ್_ಮುಹ್ಲಾರ್_ತಂಙಳ್ ಮಲೆಪ್ಪುರದಲ್ಲಿ ವಫಾತ್ ಆಗಿ ಅವರನ್ನು ವಲಿಯಪಳ್ಳಿ ಅಂಗಣದಲ್ಲಿ ದಫನ ಮಾಡಲಾಯಿತು. ಖುತುಬುಝ್ಝಮಾನ್ ಮಂಬುರಂ ತಂಙಳ್ರ ನಂತರ ಮಲೆಬಾರಿನ ಲಕ್ಷಾಂತರ ಜನರಿಗೆ ಪಾಣಕ್ಕಾಡ್ ತಂಙಳ್ ಎಂಬ ಅನುಗ್ರಹವನ್ನು ಅಲ್ಲಾಹನು ನೀಡಿದ್ದಾಗಿದೆ.
ಜನರ ಸಾಮಾನ್ಯ ಸಮಸ್ಯೆಯಿಂದ ಹಿಡಿದು, ಧಾರ್ಮಿಕ, ರಾಜಕೀಯ, ಸಾಮಾಜಿಕ, ವಲಯದಲ್ಲಿನ ಕೊನೆಯ ಮಾತು ಪಾಣಕ್ಕಾಡ್ ತಂಙಳ್ರದ್ದಾಗಿತ್ತು. ಹಾಗಾಗಿ ಅಂದಿನ #ಬ್ರಿಟಿಷ್ ನಾಯಕರು ಒಂದು ಘಟನೆಯಲ್ಲಿ, ತಂಙಳ್ರನ್ನು ಗಡೀಪಾರಿಗೆ ಆಜ್ಞೆ ನೀಡಿ, ವೆಲ್ಲೂರಿಗೆ ಕಳುಹಿಸಿದರು.  
1882 ತ್ರಿಕ್ಕಲ್ಲೂರ್ ಎಂಬಲ್ಲಿ ಬ್ರಿಟಿಷ್ ಸೇನೆ ಹಾಗೂ ಮುಸ್ಲಿಂ ಮಾಪಿಳ್ಳೆಗಳು ಪರಸ್ಪರ ಹೋರಾಡಿದರು. ಅಧಿಕ ಮುಸ್ಲಿಮರನ್ನೂ ಫರಂಗಿಗಳು ವಧಿಸಿದರು. ಆದರೆ ಓರ್ವರಿಗೆ, ಎಷ್ಟು ಗುಂಡೇಟು ನೀಡಿದರೂ ಅವರಿಗೆ ಅದು ತಾಗುವುದೇ ಇಲ್ಲ. ಇದರಲ್ಲಿ ಏನೋ ರಹಸ್ಯವಿದೆಯೆಂದು ಅರಿತ ಬ್ರಿಟಿಷ್ ಮೇಧಾವಿಗಳು, ಅವರನ್ನು ಬಂಧಿಸಿ, ವಿಚಾರಣೆಗೈದರು. ಕೊನೆಗೆ ಅವರು ಆ ರಹಸ್ಯವನ್ನು ಅವರಿಗೆ ತಿಳಿಸಿಕೊಟ್ಟರು. ತನ್ನ ಶರೀರದಲ್ಲಿ ಕಟ್ಟಿದ ಒಂದು ತಾಯಿತವಾಗಿದೆ ಗುಂಡೇಟು ತಾಗದಿರಲು ಕಾರಣವೆಂದು ಹೇಳಿದರು. ಇದು ಪಾಣಕ್ಕಾಡ್ ತಂಙಳ್ ನೀಡಿದ್ದಾಗಿದೆ ಎಂದು ತಿಳಿದ ಬ್ರಿಟಷ್ ಮೇಧಾವಿ ತಂಙಳ್ರನ್ನು ಬಂಧಿಸಲು ವಾರಂಟ್ ಹೊರಡಿಸಿದನು. ಆದರೆ ಯಾರು ಆ ಕಾರ್ಯಕ್ಕೆ ಮುಂದಾಗುವುದು! ತಂಙಳ್ ಬಗ್ಗೆ ತಿಳಿದಿರುವ ಕೆಲವು ಬ್ರಿಟಷರು ಹಿಂಜರಿದರು. ಕೆಲವು ಅಧಿಕಾರಿಗಳು ತಂಙಳ್ರ ಬಳಿ ಹೋಗಿ ಆ ತಾಯಿತವನ್ನು ನಾನು ನೀಡಲಿಲ್ಲ, ಎಂದು ಹೇಳಲು ನಿರ್ಭಂಧಿಸಿದರಂತೆ, ಆದರೆ ತಂಙಳ್ರ ಉತ್ತರ ಹೀಗಿತ್ತು. ಸುಳ್ಳು ಹೇಳುವುದು ನೀಚ ಕೃತ್ಯವಾಗಿದೆ, ಶಿಕ್ಷೆಗೆ ಹೆದರಿ ಸುಳ್ಳು ಹೇಳಲು ನಾನು ತಯಾರಿಲ್ಲ. ಬರುವುದು ಬರಲಿ, ಆ ತಾಯಿತವನ್ನು ನೀಡಿದ್ದು ನಾನಾಗಿದ್ದೇನೆ. ಇದರೊಂದಿಗೆ ತಂಙಳ್ರ ಬಂಧನ ನಿಶ್ಚಯವಾಯಿತು. ಇದನ್ನು ತಿಳಿದ ಹಲವು ಬ್ರಿಟಿಷ್ ಉದ್ಯೋಗಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಸಮಸ್ತ ಕೇರಳ ಜಂ:ಇಯ್ಯತುಲ್ ಉಲೆಮಾ ಅಧ್ಯಕ್ಷರು ಹಾಗೂ ಘನವಿದ್ವಾಂಸರಾಗಿದ್ದ, ಬಹುಮಾನ್ಯ ಕೆ.ಕೆ. ಸ್ವದಖತುಲ್ಲಾ ಮುಸ್ಲಿಯಾರವರ ಮಾವರಾಗಿದ್ದ ಕೋಡೂರು ಅಧಿಕಾರಿ ಮಂಗತ್ತೊಡಿ ಮಮ್ಮು ಅಧಿಕಾರಿ ರಾಜಿನಾಮೆ ನೀಡಿದವರಲ್ಲಿ ಒಳಗೊಂಡಿದ್ದರು. 
ಕೊನೆಗೆ ತಂಙಳ್ರ ಬಂಧನವಾಗಿ ವೆಲ್ಲೂರಿಗೆ ಕಳುಹಿಸಲಾಯಿತು. ಬಂಧನಕ್ಕೆ ನೇತೃತ್ವ ವಹಿಸಿದ, ಓರ್ವ ಮುಸ್ಲಿಂ ಅಧಿಕಾರಿಯ, ಶರೀರದಲ್ಲಿ ಕ್ಷುದ್ರಕೀಟದ ಹುಣ್ಣು ಪ್ರತ್ಯಕ್ಷಗೊಂಡು ಮರಣ ಹೊಂದಿದ್ದಾರೆಂದು ಹೇಳಲಾಗಿದೆ. ವೆಲ್ಲೂರಿಗೆ ರೈಲುಗಾಡಿಯಲ್ಲಿ ಹೊರಟ ತಂಙಳ್ ದಾರಿಮಧ್ಯೆ ನಮಾಜ್ಗೆ ಹೊತ್ತಾದಾಗ, ತಂಙಳ್ ಗಾಡಿಯೊಂದಿಗೆ ನಿಲ್ಲಲು ಆಜ್ಞೆ ನೀಡಿದಾಗ, ರೈಲು ತಕ್ಷಣ ನಿಂತು, ತಂಙಳ್ ಇಳಿದು, ಅಂಗಶುದ್ಧಿ ಮಾಡಿ ನಮಾಜ್ ನಿರ್ವಹಿಸಿದ ನಂತರ ರೈಲಿಗೆ ಹತ್ತಿದರು. ನಂತರವಾಗಿತ್ತು ರೈಲು ಚಲಿಸಿದ್ದು. ಇದು ಅದ್ಬುತ ಘಟನೆಯಾಗಿ ನೆಲೆನಿಂತಿದೆ. ಇಂದು ವಾಲಯಾರ್ ನಿಲ್ದಾನವಾಗಿ ಆ ಸ್ಥಳವು ಗುರುತಿಸುತ್ತದೆ. ವೆಲ್ಲೂರಿನಲ್ಲಿ ಮಹಾನರು ವಫಾತ್ ಆದರು. ಅಲ್ಲಿನ ಪೇಟೆಮಸೀದಿಯಲ್ಲಾಗಿದೆ ಮಖ್ಬರ. ಪಾಣಕ್ಕಾಡ್ ಪೂಕೋಯ ತಂಙಳ್ರ ಎಲ್ಲಾ ಪುತ್ರರೂ ಮನೆಯಲ್ಲಿ ಪ್ರೀತಿಯ ಹೆಸರಲ್ಲಿ ಗುರುತಿಸುತ್ತಾರೆ. 
ಶಿಹಾಬ್ ತಂಙಳ್ ಕೋಯಮೋನ್, ಉಮರ್ ಅಲೀ ಶಿಹಾಬ್ ತಂಙಳ್ ಮುತ್ತುಮೋನ್, ಸ್ವಾದಿಖ್ ಅಲೀ ಶಿಹಾಬ್ ತಂಙಳ್ ಸ್ವಾದಿಖ್ ಮೋನ್, ಅಬ್ಬಾಸ್ ಅಲೀ ಶಿಹಾಬ್ ತಂಙಳ್ ಅಬ್ಬಾಸ್ ಮೋನ್, ಆದರೆ ಹೈದರ್ ಅಲೀ ಶಿಹಾಬ್ ತಂಙಳ್ರನ್ನು ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್ರಿಗೆ ಸೇರಿಸಿ ಆಟ್ಟಪೂ.. ತಂಙಳ್ ಎಂದು ಕರೆಯಲಾಗುತ್ತದೆ.

🖋️ ಕಲ್ಲಡ್ಕ ಫೈಝಿ
Skssf_Shanthiangady_Unit 

Monday, 5 April 2021

ಪಾಣಕ್ಕಾಡ್ ಸಯ್ಯಿದರ ಉದಯ : ಭಾಗ- 01

     ಪಾಣಕ್ಕಾಡ್ ತಂಙಳ್ ಎಂಬ ಹೆಸರಲ್ಲಿ ಓರ್ವರು ಪಾಣಕ್ಕಾಡ್ ಸಯ್ಯಿದರಲ್ಲಿ ಗುರುತಿಸಲ್ಪಡುತ್ತಾರೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಸಯ್ಯಿದ್ ಮುಹಮ್ಮದ್ ಅಲೀ ಶಿಹಾಬ್ ತಂಙಳ್, ಅದಕ್ಕೆ ಮುಂಚೆ ಸಯ್ಯಿದ್ ಪೂಕೋಯ ತಂಙಳ್, ಅವರ ದೊಡ್ಡ ತಂದೆಯವರಾಗಿದ್ದ ಸಯ್ಯಿದ್ ಅಲೀ ಪೂಕೋಯ ತಂಙಳ್, ಸಯ್ಯಿದ್ ಕೋಯಕುಂಞಕೋಯ ತಂಙಳ್, ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್. 
ಪ್ರಥಮವಾಗಿ ಪಾಣಕ್ಕಾಡ್ ತಂಙಳ್ ಎಂದು ಪ್ರಖ್ಯಾತಿಯಾಗಿದ್ದು #ಸಯ್ಯಿದ್_ಹುಸೈನ್_ಶಿಹಾಬ್_ಆಟ್ಟಕ್ಕೋಯ_ತಂಙಳ್ ಆಗಿದ್ದಾರೆ. ಮಹಾತ್ಮರು ಸೂಕ್ಷಶಾಲಿಯಾದ ಘನವಿದ್ವಾಂಸರೂ, ಖ್ಯಾತ ಮುದರ್ರಿಸರೂ ಆಗಿದ್ದರು. ಆನಂತರ ಆ ಕುಟುಂಬದಿಂದ ಓರ್ವರು ಪಾಣಕ್ಕಾಡ್ ತಂಙಳ್ ಎಂದು ಹೆಸರುವಾಸಿಯಾದರು. ಆ ಪದವಿಯನ್ನು ಯಾವುದೇ ಸಮಿತಿಯು ಸಭೆ ಸೇರಿ ಆಯ್ಕೆಗೊಳಿಸಿರುವುದಲ್ಲ. ಅದು ಅಲ್ಲಾಹನು ಆಯ್ಕೆಗೊಳಿಸಿದ ಮಹತ್ತರವಾದ ಪದವಿಯಾಗಿದೆ. 
ಪಾಣಕ್ಕಾಡ್ ಸಯ್ಯಿದರು ಪ್ರಖ್ಯಾತಿಯಾಗಿರುವ ಹಿನ್ನೆಲೆಯನ್ನು ಅವಲೋಕಿಸಿದರೆ ಆಶ್ಚರ್ಯಕರವಾದ ಘಟನೆಯೊಂದು ನಡೆದಿರುವುದನ್ನು ಚರಿತ್ರೆಯಿಂದ ತಿಳಿಯಬಹುದು. ಅಲ್ಲಾಹನು ಅದಕ್ಕಾಗಿ ಒಂದು ಸಂದರ್ಭವನ್ನು ಉಂಟುಮಾಡಿದನು. ಪಾಣಕ್ಕಾಡ್ ಗ್ರಾಮದ ಪುರಾತನ ಕಾಲದಲ್ಲಿ ಓಲಕ್ಕರ ತರವಾಡ್ ಎಂಬ ಹೆಸರಲ್ಲಿ ಕುಟುಂಬವೊಂದು ವಾಸವಾಗಿತ್ತು. ಒಂದು ದಿನ ಬೆಳಗ್ಗಿನ ಜಾವ ಎಚ್ಚರಗೊಂಡಾಗ ಆ ಮನೆಯಲ್ಲೊಂದು ಭೀಕರ ದೃಶ್ಯ. ಮನೆಯಲ್ಲಿನ ಎಲ್ಲಾ ಸದಸ್ಯರೂ, ಮನೆಯ ವಿವಿಧ ಕಡೆಗಳಲ್ಲಿ, ಮೃತಶರೀರದಂತೆ ಬಿದ್ದುಕೊಂಡಿದ್ದಾರೆ. ಯಾರಿಗೂ ಎಚ್ಚರವಿಲ್ಲ. ಚಾವಡಿ, ಅಡುಗೆಕೋಣೆ, ಎಲ್ಲಿ ನೋಡಿದರೂ, ಮನುಷ್ಯರೆಲ್ಲರೂ ನೆಲಕ್ಕೊರಗಿದ್ದಾರೆ. ಕಾಲ್ಗಿಚ್ಚಿನಂತೆ ತಿಳಿದ ಈ ವಾರ್ತೆಯು, ಊರಿನ ಜನರೆಲ್ಲರನ್ನೂ ಅಲ್ಲಿ ಒಗ್ಗೂಡಿಸಿತು. ಯಾರಿಗೆ ಕೂಡಾ ಏನಾಯಿತೆಂದು ತಿಳಿಯುವುದಿಲ್ಲ. ಏನು ಮಾಡಬೇಕೆಂದು ತೋಚದ ಸಂದಿಗ್ದ ಘಟ್ಟ. 
ಅಂದು ಮಲೆಪ್ಪುರದಲ್ಲಿ ವಾಸವಾಗಿದ್ದ #ವಲಿಯ_ತಂಙಳ್ ಎಂದು ಕರೆಯುತ್ತಿದ್ದ, ಅದ್ಯಾತ್ಮಿಕತೆಯಲ್ಲಿ ಉನ್ನತ ಶ್ರೇಣೆಗೇರಿದ ಮಹಾತ್ಮರಾದ ಸಯ್ಯಿದ್ ಮುಹ್ಲಾರ್ ಶಿಹಾಬುದ್ದೀನ್ ತಂಙಳ್. ಮಲೆಪ್ಪುರದ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದ ಮಹಾತ್ಮರು ಅನೇಕ ಅದ್ಬುತ ಸಿದ್ಧಿಗಳ ಮೂಲಕ ಖ್ಯಾತರಾಗಿದ್ದರು. ನಾಡಿನ ನಾನಾ ಕಡೆಗಳಿಂದ ಜನರು ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಬಳಿ ಆಗಮಿಸುತ್ತಿದ್ದರು. ಪಾಣಕ್ಕಾಡ್ ಊರಿನ ನೇತಾರರು ಮಲೆಪ್ಪುರದಲ್ಲಿ ವಾಸವಿರುವ ತಂಙಳ್ರ ಬಳಿ ಧಾವಿಸಿ, ನಡೆದ ಘಟನೆಯನ್ನು ವಿವರಿಸಿದರು. 
ಕೂಡಲೇ ತಂಙಳ್ ತನ್ನ ಸಮೀಪದಲ್ಲಿದ್ದ ಪ್ರಿಯ ಪುತ್ರರಾದ ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಂಙಳ್ರನ್ನು ಪಾಣಕ್ಕಾಡ್ಗೆ ತೆರಳಲು ಹೇಳಿ, ಅವರ ಕೈಯ್ಯಲ್ಲಿ ಒಂದು ಬೆತ್ತವನ್ನು ನೀಡಿದರು. ಅಂದು ದರ್ಸ್ ವಿದ್ಯಾರ್ಥಿಯಾಗಿದ್ದರು ಆಟ್ಟಕ್ಕೋಯ ತಂಙಳ್. ಪಾಣಕ್ಕಾಡ್ಗೆ ತೆರಳಿದ ಅವರು ಆ ಮನೆಯ ವಿವಿಧ ಸ್ಥಳಗಳಲ್ಲಿ ಮೃತಶರೀರದಂತೆ ನೆಲಕ್ಕೊರಗಿದ, ಆ ಶರೀರಗಳ ಬಳಿ ತೆರಳಿ ಪ್ರಿಯ ಪಿತರು ನೀಡಿದ ಬೆತ್ತದ ಮೂಲಕ ಚಿಕ್ಕದಾದ ಒಂದು ಏಟನ್ನು ಕೊಟ್ಟರು. ಆಶ್ಚರ್ಯವೆಂಬಂತೆ ಅವರೆಲ್ಲರೂ ಎದ್ದು ನಿಂತರು. ಇದನ್ನು ಪ್ರತ್ಯಕ್ಷವಾಗಿ ಬೆರಗುಕಣ್ಣಿನಿಂದ ನೋಡಿದ ಊರಿನ ಜನರು ಸಂತೋಷಭರಿತರಾದರು. ಅದಕ್ಕೆ ಕೃತಜ್ಞತೆ ಎಂಬಂತೆ ಮನೆಯ ಯಜಮಾನರು ತನ್ನ ಮನೆಯನ್ನೇ ತಂಙಳ್ರಿಗೆ ಉಡುಗೊರೆಯಾಗಿ ನೀಡಿದರು. ಅವರು ಮತ್ತೊಂದು ಮನೆಯನ್ನು ಕಟ್ಟಿ ಸಮೀಪದಲ್ಲಿ ವಾಸಿಸಿದರು. ಈ ಮನೆಯಲ್ಲಿ ಹುಸೈನ್ ಆಟ್ಟಕ್ಕೋಯ ತಂಙಳ್ ವಾಸಮಾಡಿದರು. ಅಂದಿನಿಂದ ಪಾಣಕ್ಕಾಡ್ ತಂಙಳ್ ಎಂಬ ನಾಮವು ಉದಯವಾಯಿತು.

📝 ಕಲ್ಲಡ್ಕ ಫೈಝಿ

Skssf_Shanthiangady_Unit