Friday, 10 July 2020

ಬಂದರ್ ಮೌಲಾ (ಖಸಿ)

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳ಬಂದರ್ ಮೌಲ(ಖಸಿ)🌳:::*
▪•••┈┈•✿❁✿•┈┈•••▪
                         
ಕಣ್ಣೂರೂ ಮಹಾ ನಗರದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸಯ್ಯಿದ್ ಮುಹಮ್ಮದ್ ಮೌಲಲ್ ಬುಖಾರಿ (ಖಸಿ) ರವರ ಕರಾಮತ್ತಿನ ಸಂತತಿಯಾದ ಸಲ್ಮಾ ಬೀವಿಯವರ ಐದನೇ ಪೀಳಿಗೆಯ ಮೊಮ್ಮಗಳು ಫಾತಿಮಾ ಬೀವಿ ಮತ್ತು ಅಹಮದ್ ಎಂಬ ಮಹಾನರಿಗೂ  ಜನಿಸಿದ ಪವಾಡ ಪುರುಷರಾಗಿದ್ದಾರೆ ಬಂದರ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ (ಖಸಿ) .

ಹಿಜ್ರ 1284 ರಜಬ್ 27 ಶುಕ್ರವಾರ ಲಕ್ಷದ್ವೀಪದ ರಾಜಧಾನಿ ಕವರತ್ತಿ ದ್ವೀಪದಲ್ಲಿ ಜನಿಸಿದರು.

ಸದಾ ಸಮಯವೂ ಆಧ್ಯಾತ್ಮಿಕ ಲೋಕದ ನಶೆಯಲ್ಲಿ ಮುಳುಗುತ್ತಿದ್ದ ಮೌಲಾ(ಖಸಿ) ರವರು ತಮ್ಮ ಊರಿನ ಸೂಫೀ ಶ್ರೇಷ್ಠರಾದ ಜೀಲಾನಿ ಖಬೀಲದ ಸುಪ್ರಸಿದ್ಧ ನೇತಾರರೂ ಆಗಿದ್ದ ಸಯ್ಯಿದ್ ಯೂಸುಫ್ ರಬ್ಬಾನಿ (ಖಸಿ) ಯವರ ಖಿದ್ಮತಿನಲ್ಲಿ ಕಳೆಯುತ್ತಿದ್ದರು . ಯೂಸುಫ್ ರಬ್ಬಾನಿ(ಖಸಿ) ಯವರಿಂದ
ಖಾದಿರಿಯ್ಯಾ ಮತ್ತು ರಿಫಾಯಿಯ್ಯಾ ತ್ವರೀಖತಿನ ಖಿಲಾಫತ್ ಪಡೆದರು .

ನಂತರ ಅಜ್ಮೀರ್ ಖಾಜಾ (ಖಸಿ) ಯವರ ನಿರ್ದೇಶನದಂತೆ ಬೈಂದೂರು ಹಝ್ರತ್ ಗುಲ್ಷಾಹ್ ವಲೀ(ಖಸಿ) ರವರ ಸನ್ನಿಧಿ ಸೇರಿದರು, ಅವರಿಂದ ಚಿಸ್ತೀ ತ್ವರೀಖತಿನ ಖಿಲಾಫತ್ ಲಭಿಸಿತು. ಜ್ಞಾನ ದಾಹದಿಂದ ನಂತರ ಜಲಾಲ್ ಮೌಲಾ (ಖಸಿ) ಸುಹ್ರವರ್ದಿಯ್ಯಾ ಸರಣಿಯನ್ನು ಅರಸುತ್ತಾ ನಡೆದರು . ಸುಹ್ರವರ್ದಿಯ್ಯಾ ತ್ವರೀಖತ್ ಪಡೆಯಲು ಯೋಗ್ಯರಾದ ಮಹಾನರುಗಳ ಹುಡುಕಾಟದಲ್ಲಿ ಅವರು ಚಾಲಿಯಂ ಶೈಖ್ ನೂರುದ್ದೀನ್ ಹಮದಾನಿ (ಖಸಿ) ತಂಙ್ಙಳರ ಸಂತಾನ ಪರಂಪರೆಯ ಪ್ರಮುಖರೂ ಕಲ್ಲಾಯಿ ಶೈಖ್ ಎಂದೇ ಖ್ಯಾತರಾದ ಶೈಖ್ ಮುಹಮ್ಮದ್ ಬಿನ್ ಕಮಾಲುದ್ದೀನ್ ಹಮದಾನಿ (ಖಸಿ) ರವರ ಸನ್ನಿಧಿ ಸೇರಿದರು. ಅಲ್ಲಿ ಮಹಾನುಭಾವರಿಂದ ಸುಹ್ರವರ್ದಿಯ್ಯಾ ಸರಣಿಯ ಖಿಲಾಫತ್ ಲಭಿಸಿತು. ಹೀಗೆ ಮೂರು ಮಶಾಇಖುಗಳಿಂದ ನಾಲ್ಕು ಸರಣಿಗಳ ಖಿಲಾಫತ್ ಪಡೆದ ಜಲಾಲ್ ಮೌಲಾ (ಖಸಿ) ಯವರು ಆತ್ಮೀಯ ಲೋಕದಲ್ಲಿ ತೇಲಿದರು.

ಶೈಖ್ ಜಲಾಲ್ ಮೌಲಾ (ಖಸಿ) ಸುಮಾರು ಲಕ್ಷದಷ್ಟು ಮುರೀದರುಗಳನ್ನು ಹೊಂದಿದ್ದರು . ಅವರ ಸನ್ನಿಧಿಯಲ್ಲಿ ಖಲೀಫರಾಗಿದ್ದವರಲ್ಲಿ ಅಂಬಂಕುನ್ನು ಬೀರಾನ್ ಔಲಿಯಾ ಉಪ್ಪಾಪರ ಶೈಖರಾದ ಚೇಲೂರ್ ಸೂಫಿ ಹಾಜಿ , ಝೀನತ್ ಬಕ್ಷ್ ಮಸೀದಿ ಮುಂಬಾಗದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಯ್ಯಿದ್ ಮುಹಮ್ಮದ್ ಮೌಲ , ಸಯ್ಯಿದ್ ಮುಹಮ್ಮದ್ ಖಾಸಿಂ ಸಾನಿ ಕವರತ್ತಿ(ಖಸಿ) , ಪಾಡತ್ತಕ್ಕಾಯಿಲ್ ಅಶೈಖ್ ಮುಹಮ್ಮದ್ ಸ್ವಾಲಿಹ್ ಮೌಲ (ಖಸಿ) ಇವರುಗಳೆಲ್ಲಾ ಪ್ರಧಾನಿಗಳಾಗಿದ್ದರು .

ಆಧ್ಯಾತ್ಮಿಕತೆಯ ಮಧು ಹರಡುವ ಕಾವ್ಯ ಬರಹದಿಂದ ಸುಪ್ರಸಿದ್ಧರಾದ ಸೂಫೀ ಸಂತ ಪುಲವರ್ ಮೊಯ್ದೀನ್ ಕುಟ್ಟಿ ಹಾಜಿ (ಖಸಿ) ಬಗ್ದಾದಿನಲ್ಲಿ ಖುತುಬುಲ್ ಆಲಂ ಶೈಖ್ ಮುಹ್ಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖಸಿ) ರವರ ನಿರ್ಧೇಶನದಂತೆ ಮೌಲರ ಸನ್ನಿಧಿ ಸೇರಿದರು . ಮಿಫ್ತಾಹುಸ್ಸಲಾಮ ಎಂದೂ ನಿಯಾಝುಲ್ ಕಿರಾಂ ಎಂದೂ ಹೆಸರುವಾಸಿಯಾದ ಮೌಲರ ಕುರಿತು ಅರಬಿ ಮಲಯಾಳದಲ್ಲಿ ಒಂದು ಕವನ ರಚಿಸಿದ್ದಾರೆ .

ಅನೇಕ ಕಷ್ಫ್ ಕರಾಮತುಗಳಿಂದ ಜನ ಮನ ಹೃದಯಗಳಲ್ಲಿ ಸ್ಥಾನ ಪಡೆದ ಬಂದರ್ ಮೌಲಾ (ಖಸಿ) ರವರು ಈ ನಾಡಿನ ರಕ್ಷಾ ಕವಚವಾಗಿದ್ದರು .

ಹಿಜ್ರ 1347 ದುಲ್ ಖಅದ 23 ಶನಿವಾರ ಲುಹಾ ನಮಾಝಿನ ಸಮಯ ಮಂಗಳೂರು ಬಂದರಿನ ಸಮೀಪ ಆ ಯುಗ ಪುರುಷ ಇಹಲೋಕ ತ್ಯಜಿಸಿದರು . ಅಂದವರಿಗೆ 63 ವಯಸ್ಸು ಪ್ರಾಯವಾಗಿತ್ತು .

ಅಲ್ಲಾಹನು ಆ ಮಹಾನುಭಾವರೊಂದಿಗೆ ನಮ್ಮನ್ನು ಅವನ ಸ್ವರ್ಗೀಯ ಭವನದಲ್ಲಿ ಒಂದುಗೂಡಿಸಲಿ .....ಆಮೀನ್.

ಮೂಲ : ಮಲೆಯಾಳಂ .
ಕನ್ನಡಕ್ಕೆ: 👇

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰


No comments:

Post a Comment