*══❁✿🕳.﷽ .🕳✿❁══*
السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
▪••┈┈•••💧•••┈┈••▪
*::::: 🌳🌱ಮೊಳಕೆ🌱🌳 :::::*
▪••┈┈•✿❁✿•┈┈••▪
*🍃ಹಿಳ್ರ್ ನಬಿ (ಅ.ಸ)🍃*
*ಜನನ*
ಹಿಲ್ರ್ ನೆಬಿಯವರ ಹೆಸರು ಕೇಳದವರು ವಿರಳ ಅನ್ನಬಹುದು . ಆದರೆ ಅವರ ಚರಿತ್ರೆ ಜನಸಾಮಾನ್ಯರಲ್ಲಿ ತಿಳಿಯದವರೇ ಹೆಚ್ಚು.
ಹಿಲ್ರ್ ನೆಬಿಯವರ ಕುರಿತು ಪವಿತ್ರ ಖುರ್-ಆನಿನ ಸೂರತ್ ಕಹ್ಫಿನಲ್ಲಿ ನಮಗೆ ಕಾಣಬಹುದಾಗಿದೆ .
ಒಮ್ಮೆ ಹಝ್ರತ್ ಮೂಸಾ(ಅಸ) ರಲ್ಲಿ ಹೆಚ್ಚು ತಿಳಿದವರು ಯಾರು ಎಂದು ಕೇಳಿದಾಗ ಅವರು ತಾನೇ ಎಂದು ಉತ್ತರಿಸಿದರು. ಅವರ ಆ ತಪ್ಪು ತಿಳುವಳಿಕೆಯನ್ನು ಸರಿಪಡಿಸುವ ಸಲುವಾಗಿ ಸೃಷ್ಟಿಕರ್ತನಾದ ಅಲ್ಲಾಹನು ಮೂಸಾ ನಬಿಯವರಲ್ಲಿ ಮಜ್ಮಉಲ್ ಬಹರೈನಿ (ಎರಡು ಸಮುದ್ರ ಸೇರುವ ಸ್ಥಳ) ಗೆ ಹೋಗಲು ಮತ್ತು ಅಲ್ಲಿ ಅಲ್ಲಾಹನ ದಿವ್ಯ ಪುರುಷರೊಬ್ಬರನ್ನು ಸಂದರ್ಶಿಸಲು ಹೇಳಿದನು. ಆ ಮಹಾನ್ ಹಝ್ರತ್ ಅಬುಲ್ ಅಬ್ಬಾಸ್ ಬಲ್ಯ ಇಬ್ನು ಮಲ್ಕಾನ್ ಹಳಿರ್ ನಬಿ (ಅಸ) ಆಗಿದ್ದರು . ಅವರು ಅಪಾರ ಅದೃಶ್ಯತೆ, ಮತ್ತು ಅಸಾಧಾರಣ ಜೀವನ ಇತಿಹಾಸ ಹೊಂದಿರುವ ಮಹಾನ್ ವ್ಯಕ್ತಿಯಾಗಿದ್ದರು .
🌺ಆ ಮಹಾನರ ಕುರಿತು ಒಂದಿಷ್ಟು🌺 👇
☘*ದುಲ್ ಖರ್ನೈನಿ ಮತ್ತು ಹಿಲ್ರ್ ನಬಿ*☘
ವಿಶ್ವವನ್ನಾಳಿದ ಮುಸ್ಲಿಂ ಆಡಳಿತಗಾರರಲ್ಲಿ ಒಬ್ಬರು . ಅವರ ತಂದೆ ಅಬ್ದುಲ್ಲಾ ಒಬ್ಬ ಮಹಾನ್ ಖಗೋಳಶಾಸ್ತ್ರಜ್ಞರಾಗಿದ್ದರು .
ಒಂದು ದಿನ ರಾತ್ರಿ ಅಬ್ದುಲ್ಲಾ ರವರು ತನ್ನ ಮಡದಿಯಲ್ಲಿ ಆಕಾಶದಲ್ಲಿ ಒಂದು ಪ್ರತ್ಯೇಕ ಸ್ಥಳವನ್ನು ತೋರಿಸುತ್ತಾ ಹೇಳಿದರು : "ಆ ಸ್ಥಳದಲ್ಲಿ ಒಂದು ನಕ್ಷತ್ರದ ಉದಯವಾಗುತ್ತದೆ , ಆ ನಕ್ಷತ್ರ ಪ್ರತ್ಯಕ್ಷವಾದರೆ ನನಗೆ ತಿಳಿಸಬೇಕು . ಆ ಸಂದರ್ಭದಲ್ಲಿ ನಡೆಯುವ ಲೈಂಗಿಕ ಬಂಧದಲ್ಲಿ ಉಂಟಾಗುವ ಮಗುವಿಗೆ ಅಂತ್ಯ ದಿನದ ವರೆಗೂ ಆಯುಷ್ಯವಿರುತ್ತದೆ " ಎನ್ನುತ್ತಾ ಅವರು ಮಲಗಿದರು .
ಪಕ್ಕದ ಕೋಣೆಯಲ್ಲಿದ್ದ ಅವರ ಮಡದಿಯ ಸಹೋದರಿ ಇವರ ಮಾತುಕತೆಯನ್ನು ಕೇಳಿ ತಮಗೂ ಅಂತಹ ಮಗು ಲಭಿಸಬೇಕು ಎಂಬ ಆಗ್ರಹದಲ್ಲಿ ನಕ್ಷತ್ರ ಉದಯವನ್ನು ಕಾದು ಕುಳಿತರು .
ನಕ್ಷತ್ರ ಪ್ರತ್ರಕ್ಷವಾದ ಕೂಡಲೇ ಕಾದು ಕುಳಿದ ದಂಪತಿಗಳು ಶಾರೀರಿಕ ಬಂಧದಲ್ಲಿ ಏರ್ಪಟ್ಟರು . ಈ ಬಂಧದಲ್ಲಿ ಉಂಟಾದ ಮಗುವೇ ಹಿಳ್ರ್ ನಬಿ(ಅಸ) ಎಂಬ ಪವಾಡ ಪುರುಷ .
ಇದೊಂದೂ ತಿಳಿಯದೆ ಗಾಢ ನಿದ್ದೆಯಲ್ಲಿದ್ದ ಅಬ್ದುಲ್ಲ ರವರು ಏಳುವಾಗ ನಕ್ಷತ್ರ ಮರೆಯಾಗಿ ಹೋಗಿತ್ತು . ಅವರು ತನ್ನ ಮಡದಿಯಲ್ಲಿ "ನೀನೇಕೆ ನನ್ನನ್ನು ಎಬ್ಬಿಸಲಿಲ್ಲ" ಎಂದು ಕೇಳಿದಾಗ ಅವಳು "ನನಗೆ ನಾಚಿಕೆಯಾಯಿತು" ಎನ್ನುತ್ತಾ ತಲೆ ತಗ್ಗಿಸಿದಳು . ಆಗ ಅಬ್ದುಲ್ಲ "ಕಳೆದ ನಲವತ್ತು ವರ್ಷಗಳಿಂದ ನಾನು ಈ ಸಮಯಕ್ಕಾಗಿ ಕಾಯುತ್ತಿದ್ದೆ ನೀನು ನನ್ನ ಕಾಯುವಿಕೆಯನ್ನು ನಷ್ಟಪಡಿಸಿದೆ" ಎಂದಾಗ ಅವಳು ಮೌನಿಯಾದಳು .
ಏನೇ ಆಗಲಿ ನಷ್ಟವಾದದ್ದು ನಷ್ಟವಾಯಿತು , ಅದರಿಂದ ಬೇಸತ್ತು ಪ್ರಯೋಜನವಿಲ್ಲ. ಇನ್ನೊಂದು ನಕ್ಷತ್ರ ಪ್ರತ್ಯಕ್ಷವಾಗಲಿದೆ ಆಗ ಒಂದಾಗೋಣ , ಅದರಿಂದ ಉಂಟಾಗುವ ಮಗು ಲೋಕ ಪ್ರಶಸ್ತನಾಗುತ್ತಾನೆ .
ಹಾಗೆ ಅವರಿಬ್ಬರು ಆ ನಕ್ಷತ್ರದ ಉದಯವನ್ನು ಕಾದು ಕುಳಿತರು. ಅವರ ಕಾಯುವಿಕೆ ಹಸನಾಯಿತು . ಆ ನಕ್ಷತ್ರ ಪ್ರತ್ಯಕ್ಷವಾಯಿತು, ಅವರಿಬ್ಬರೂ ಶಾರೀರಿಕ ಬಂಧದಲ್ಲಿ ಏರ್ಪಟ್ಟರು . ಆ ಬಂಧದಲ್ಲಿ ಉಂಟಾದ ಮಗುವೇ ಪ್ರಪಂಚ ಆಳಿದ ದುಲ್ಖರ್ನೈನ್ ಚಕ್ರವರ್ತಿ.
ದುಲ್-ಖರ್ನೈನಿಯವರ ತಂದೆ ಅಬ್ದುಲ್ಲ ಹೇಳಿದಂತೆ ಖಿಳಿರ್ ನಬಿಯವರಿಗೆ ಅಲ್ಲಾಹನು ಅಂತ್ಯ ದಿನದ ವರೆಗೆ ಆಯುಷ್ಯವನ್ನು ನೀಡಿದನು .ದುಲ್-ಖರ್ನೈನಿ ಲೋಕ ಪ್ರಶಸ್ತ ವ್ಯಕ್ತಿಯೂ ಆದರು .
*ರೈತ ಮತ್ತು ಮೇಕೆ*
ಹಿಲ್ರ್ ನೆಬಿಯವರ ತಂದೆ ಮಲ್ಕಾನ್ ಪೇರ್ಶ್ಯದ ಒಂದು ಪ್ರಾಂತ್ಯದ ರಾಜನಾಗಿದ್ದನು . ತಾಯಿ ರೋಮಾ ರಾಜ್ಯದವರೂ ಆಗಿದ್ದರು. ಇದು ಪ್ರಮುಖ ತಾಬಿಈ ಶ್ರೇಷ್ಠರಾದ ಪಂಡಿತ ಸಈದ್ ಇಬ್ನು ಮುಸಯ್ಯಬ್ ರವರ ತೀರ್ಪು .
ಹಿಲ್ರ್ ನೆಬಿಯವರ ಜನನದ ನಂತರ ಶತ್ರುಗಳಿಂದ ಏನಾದರೂ ತೊಂದರೆ ಆಗಬಹುದೆಂದು ಭಾವಿಸಿದ ತಂದೆ ಮಲ್ಕಾನ್ ಮಗು ಮತ್ತು ತಾಯಿಯನ್ನು ನಿರ್ಜನ ಪ್ರದೇಶದ ಗುಹೆಯೊಂದರಲ್ಲಿ ವಾಸವಿಟ್ಟರು .
ಗುಹಾ ವಾಸದ ಮಧ್ಯೆ ತಾಯಿ ಮರಣ ಹೊಂದಿದರು , ಮುಂದಿನ ದಿನಗಳು ಆಶ್ಚರ್ಯಕರವಾದ ಘಟನೆಗಳಾಗಿತ್ತು .
ಬೆಟ್ಟದ ಕೆಳಗಡೆ ಒಬ್ಬ ರೈತ ತನ್ನ ಮೇಕೆಗಳನ್ನು ಮೇಯಿಸುತ್ತಿದ್ದನು . ಆತನ ಮೇಕೆಗಳು ಮೇಯುತ್ತಿದ್ದಂತೆ ಒಂದು ಮೇಕೆ ಮಾತ್ರ ಒಬ್ಬಂಟಿಯಾಗಿ ಮೇಯುತ್ತಾ ಸ್ವಲ್ಪ ಸಮಯಕ್ಕೆ ಮಾಯವಾಗಿ ಮತ್ತೆ ಮರಳಿ ಬರುತ್ತಿತ್ತು .
ದಿನಾಲು ಗುಂಪಿನಿಂದ ಬೇರ್ಪಟ್ಟು ಒಬ್ಬಂಟಿಯಾಗಿ ಮೇಯುತ್ತಾ ಸಾಗುತ್ತಿರುವ ಒಂದು ಮೇಕೆ ರೈತನ ಗಮನ ಸೆಳೆಯಿತು. ಒಂದು ದಿನ ರೈತ ಆ ಮೇಕೆಯನ್ನು ಹಿಂಬಾಲಿಸಿದನು. ಮೇಕೆ ಮುಂದೆ ಮುಂದೆ ನಡೆಯುತ್ತಾ ಬೆಟ್ಟದ ಕೆಳಗಿರುವ ಒಂದು ಗುಹೆಯೊಳಗೆ ಪ್ರವೇಶಿಸಿತು . ರೈತನಿಗೆ ಮತ್ತಷ್ಟು ಆಶ್ಚರ್ಯವಾಗಿ ಆತನೂ ಗುಹೆಯೊಳಗೆ ಪ್ರವೇಶಿಸಿದ . ಒಳಗೆ ನೋಡಿದಾಗ ರೈತ ಕುತೂಹಲದಿಂದ ಬೆರಗಾದನು . ತನ್ನ ಕಣ್ಣುಗಳಿಂದ ತನಗೇ ನಂಬಲಾಗದ ಆಶ್ಚರ್ಯ...!
ನೆಲದಲ್ಲಿ ಬಿರಿಸಿರುವ ಹಾಸಿಗೆಯಲ್ಲಿ ಸುಂದರವಾದ ಒಂದು ಮಗು ಮಲಗಿದೆ, ಮೇಕೆ ತನ್ನ ಕುಚವನ್ನು ಮಗುವಿನ ಬಾಯಿಗೆ ನೀಡಿದಾಗ ಮಗು ಅದರಿಂದ ಹಾಲು ಹೀರುತೊಡಗಿತು .
ನಂತರ ಒಂದೂ ತಿಳಿಯದಂತೆ ಮೇಕೆ ಮುಂದೆ ಸಾಗಿತು . ರೈತ ಗುಹೆಯ ಒಳಗಡೆ ಪ್ರವೇಶಿಸಿ ಮಗುವನ್ನು ಎತ್ತಿಕೊಂಡು ಮನೆಯ ಕಡೆ ದಾಪುಗಾಲಿತ್ತನು . ಇದೊಂದು ಅದ್ಭುತ ಮಗುವೆಂದು ರೈತನ ಅಂತರಂಗ ಮಂತ್ರಿಸುತ್ತಿತ್ತು .
ಮಗು ರೈತನ ಮನೆಯಲ್ಲಿ ಬೆಳೆಯತೊಡಗಿತು . ರೈತನ ಮಕ್ಕಳಿಂದ ಬರೆಯಲು ಓದಲು ಕಲಿಯಿತು. ಚಿಕ್ಕ ವಯಸ್ಸಿನಲ್ಲೇ ಮಾತಿನಲ್ಲೂ ಚಟುವಟಿಕೆಗಳಲ್ಲೂ ಸ್ವಭಾವದಲ್ಲೂ ಮಗುವಿನ ಸಾಮರ್ಥ್ಯ ರೈತನನ್ನು ಆಕರ್ಷಿಸಿತು . ಮಗುವಿನ ಸ್ಫುಟವಾದ ಬರವಣಿಗೆಯ ಅಕ್ಷರ ಶುದ್ಧಿ ಕಂಡು ರೈತ ಬೆರಗಾದನು ....
🍀ರಾಜನ ಘೋಷಣೆ🍀*
ರಾಜನು ದೇಶದ ಎಲ್ಲಾ ಅತ್ಯುತ್ತಮ ಕೈಬರಹದ ಬರಹಗಾರರನ್ನು ಅರಮನೆಗೆ ಆಹ್ವಾನಿಸುತ್ತಾನೆ. ಅತ್ಯುತ್ತಮ ಬರಹಗಾರನನ್ನು ಅರಮನೆಯ ಗುಮಾಸ್ತನಾಗಿ ನೇಮಿಸುವ ಸಲುವಾಗಿಯಾಗಿತ್ತು ಈ ಸ್ಪರ್ಧೆ .
ಇಬ್ರಾಹಿಮ್ ನೆಬಿ ಮತ್ತು ಶೀಸ್ ನೆಬಿ (ಅಸ)ರ
ಪ್ರಾಚೀನ ಏಡುಗಳಲ್ಲಿ ಉಲ್ಲೇಖಿಸಲ್ಪಟ್ಟ ವಿಧಿ ನಿಷೇಧಗಳು ಮತ್ತು ಐತಿಹಾಸಿಕ ಘಟನೆಗಳನ್ನು ನಕಲು ಮಾಡುವುದು ರಾಜಕೀಯ ನಿಯೋಜನೆಯಾಗಿತ್ತು .
ರೈತ ಚಿಕ್ಕ ಮಗುವನ್ನು ಎತ್ತಿಕೊಂಡು ಅರಮನೆ ತಲುಪಿದನು . ಚಿಕ್ಕವನಾದ ಹಿಲ್ರ್ ಸಹ ಶ್ರೇಷ್ಠ ಬರಹಗಾರರ ನಡುವೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಹಿಲ್ರ್ ಚಿಕ್ಕವನಾಗಿದ್ದರೂ ಅವರು ಚೆನ್ನಾಗಿ ಬರೆದಿದ್ದಾರೆಂದು ರಾಜನಿಗೆ ಅರಿವಾಯಿತು .
ರಾಜನು ರೈತನೊಂದಿಗೆ ಕೇಳಿದ "ಈ ಮಗು ಯಾರು...? ರೈತ ತನ್ನ ಮಗನೆಂದು ಉತ್ತರಿಸಿದನು. ಆದರೆ ರಾಜನಿಗೆ ರೈತನ ಮುಖಭಾವ ಬದಾಲುಗುವುದನ್ನು ಕಂಡು ಒಮ್ಮೆ ಮಗುವಿನ ಮುಖಕ್ಕೂ ಮತ್ತೆ ರೈತನ ಮುಖಕ್ಕೂ ನೋಡತೊಡಗಿದರು . ಮುಖ ಮತ್ತು ದೈಹಿಕ ನೋಟಕ್ಕೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ಯಾವುದೇ ಹೋಲಿಕೆ ಇಲ್ಲದಿರುವುದನ್ನು ಕಂಡ ರಾಜನ ಮನಸ್ಸು ಖಂಡಿತವಾಗಿಯೂ ಈ ಮಗು ರೈತನದಾಗಿರಲು ಸಾಧ್ಯವೇ ಇಲ್ಲವೆಂದು ಮಂತ್ರಿಸುತ್ತಿತ್ತು .
ರಾಜನು ರೈತನನ್ನು ಪಕ್ಕಕ್ಕೆ ಕರೆದು ಸ್ವಲ್ಪ ಜೋರಾಗಿಯೇ ಕೇಳಿದರು "ನಿಜ ಹೇಳು .. ಈ ಮಗು ಯಾರದು..? ಸುಳ್ಳು ಹೇಳಿ ನಮ್ಮಿಂದ ಶಿಕ್ಷೆಗೆ ಗುರಿಯಾಗಬೇಡ..! ಶಿಕ್ಷೆ ಕಠಿಣವಾಗಿರುತ್ತದೆ ನೆನಪಿರಲಿ.. "
ರಾಜನ ಬೆದರಿಕೆಯ ಮಾತು ಫಲಿಸಿತು . ರೈತ ನಡೆದ ಘಟನೆಗಳನ್ನು ವಿವರಿಸಿದನು. ರೈತನ ವಿವರಣೆಗಳನ್ನು ಕೇಳಿ ರಾಜನ ಕಣ್ಣು ತುಂಬಿತು . ತನ್ನ ಪೀಠದಿಂದ ಇಳಿದು ಬಂದು ಮಗುವನ್ನು ಅಪ್ಪಿಕೊಂಡರು.
ರಾಜ ರಹಸ್ಯವಾಗಿ ಮಗು ಇರುವ ಗುಹೆ ಸಂಧರ್ಶಿಸುತ್ತಿದ್ದರು ,
ಒಮ್ಮೆ ಹೋದಾಗ ಮಗುವನ್ನು ಕಾಣದಿರುವಾಗ ಯಾವುದಾದರೂ ಕಾಡುಪ್ರಾಣಿಗಳು ಕೊಂದು ತಿಂದಿರಬೇಕೆಂದು ಭಾವಿಸಿದ್ದರು . ಆದರೆ ನಷ್ಟವಾಯಿತೆಂದು ಭಾವಿಸಿದ ಮಗುವನ್ನು ಅಲ್ಲಾಹನು ತನ್ನ ಮುಂದೆ ಜೀವಂತವಾಗಿ ಯಾವುದೇ ತೊಂದರೆಗೊಳಗಾಗದೇ ತಂದಿರುವುದು ಅದೂ ಕೂಡಾ ಹಲವು ವರ್ಷಗಳ ನಂತರ .... ಅಲ್ಹಂದುಲಿಲ್ಲಾಹ್...!
ಈ ಪುನರ್ಮಿಲನದ ರಹಸ್ಯವನ್ನು ರಾಜನೇ ಬಹಿರಂಗಪಡಿಸಿದ. ರಾಜ ಪ್ರೇಕ್ಷಕರು ಬೆರಗಾದರು. ಅರಮನೆಯ ನಿವಾಸಿಗಳು ರಾಜನ ಸಂತೋಷದಲ್ಲಿ ಪಾಲ್ಗೊಂಡರು .
ರಾಜಕುಮಾರನನ್ನು ದೀರ್ಘಕಾಲ ಪೋಷಿಸಿದ ರೈತನಿಗೆ ರಾಜನು ಉಡುಗೊರೆಗಳನ್ನು ಕೊಟ್ಟನು ಮತ್ತು ಸಂತೋಷದಿಂದ ಅವನನ್ನು ಹಿಂದಿರುಗಿಸಿದನು .
ಅದರೊಂದಿಗೆ ಬಾಲನಾಗಿದ್ದ ಹಿಲ್ರ್ (ಅಸ) ರ ವಾಸ ಅರಮನೆಯಲ್ಲಾಯಿತು .
ರಾಜಕುಮಾರನಾದ ಹಿಲ್ರ್ ನ ಜೀವನ ಬದಲಾಯಿತು. ಧರಿಸಲು ರಾಯಲ್ ಬಟ್ಟೆಗಳು, ತಿನ್ನಲು ರಾಯಲ್ ಆಹಾರ, ಮತ್ತು ಅವನಿಗೆ ಸೇವೆ ಮಾಡಲು ದಾಸಿಯರು .
ರಾಜಕೀಯ ಸುಖಗಳಲ್ಲಿ ಜೀವಿಸುವಾಗ ಹಿಲ್ರ್ ರಿಗೆ ಅದರಲ್ಲಿ ಯಾವುದೇ ಆಸಕ್ತಿ ಇರಲಿಲ್ಲ.
ಜಿಬ್ರೀಲ್ (ಅಸ) ಹೇಳಿದ ಕಥೆ .
ಮಿಅರಾಜಿನ ರಾತ್ರಿ, ಅಂದರೆ ನುಬುವ್ವತ್ತಿನ ಹತ್ತನೇ ವರ್ಷ ರಜಬ್ 27ನೇ ರಾತ್ರಿ.
ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾ ಹು ಅಲೈಹಿ ವಸಲ್ಲಂ ಬುರಾಖಿನಲ್ಲಿ ಜಿಬ್ರೀಲ್ (ಅಸ) ರೊಂದಿಗೆ ಮಸ್ಜಿದುಲ್ ಅಖ್ಸವನ್ನು ಲಕ್ಷ್ಯವಿಟ್ಟು ಹೊರಟಾಗ . ಪ್ರಯಾಣ ಮಧ್ಯೆ ಎಲ್ಲಿಂದಲೋ ಸುಗಂಧ ವಾಸನೆ ತೇಲಿ ಬರುತ್ತಿತ್ತು. ಪ್ರವಾದಿ ವರ್ಯರು ಜಿಬ್ರೀಲ್ (ಅಸ) ರಲ್ಲಿ ಕೇಳಿದರು "ಇಷ್ಟೊಂದು ಪರಿಮಳ ಎಲ್ಲಿಂದ ಬರುತ್ತಿದೆ ...?" .
ಜಿಬ್ರೀಲ್ (ಅಸ) ಹೇಳಿದರು: "ಓ ಪ್ರವಾದಿಯವರೇ.... ಈ ಪರಿಮಳದ ಹಿಂದೆ ಬಲು ದೊಡ್ಡ ಕಥೆಯೊಂದಿದೆ"
ಪುಣ್ಯ ನೆಬಿ(ಸಅ) : ಕಥೆಯೋ... ಅದೆಂಥಾ ಕಥೆ....!?
السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
▪••┈┈•••💧•••┈┈••▪
*::::: 🌳🌱ಮೊಳಕೆ🌱🌳 :::::*
▪••┈┈•✿❁✿•┈┈••▪
*🍃ಹಿಳ್ರ್ ನಬಿ (ಅ.ಸ)🍃*
*ಜನನ*
ಹಿಲ್ರ್ ನೆಬಿಯವರ ಹೆಸರು ಕೇಳದವರು ವಿರಳ ಅನ್ನಬಹುದು . ಆದರೆ ಅವರ ಚರಿತ್ರೆ ಜನಸಾಮಾನ್ಯರಲ್ಲಿ ತಿಳಿಯದವರೇ ಹೆಚ್ಚು.
ಹಿಲ್ರ್ ನೆಬಿಯವರ ಕುರಿತು ಪವಿತ್ರ ಖುರ್-ಆನಿನ ಸೂರತ್ ಕಹ್ಫಿನಲ್ಲಿ ನಮಗೆ ಕಾಣಬಹುದಾಗಿದೆ .
ಒಮ್ಮೆ ಹಝ್ರತ್ ಮೂಸಾ(ಅಸ) ರಲ್ಲಿ ಹೆಚ್ಚು ತಿಳಿದವರು ಯಾರು ಎಂದು ಕೇಳಿದಾಗ ಅವರು ತಾನೇ ಎಂದು ಉತ್ತರಿಸಿದರು. ಅವರ ಆ ತಪ್ಪು ತಿಳುವಳಿಕೆಯನ್ನು ಸರಿಪಡಿಸುವ ಸಲುವಾಗಿ ಸೃಷ್ಟಿಕರ್ತನಾದ ಅಲ್ಲಾಹನು ಮೂಸಾ ನಬಿಯವರಲ್ಲಿ ಮಜ್ಮಉಲ್ ಬಹರೈನಿ (ಎರಡು ಸಮುದ್ರ ಸೇರುವ ಸ್ಥಳ) ಗೆ ಹೋಗಲು ಮತ್ತು ಅಲ್ಲಿ ಅಲ್ಲಾಹನ ದಿವ್ಯ ಪುರುಷರೊಬ್ಬರನ್ನು ಸಂದರ್ಶಿಸಲು ಹೇಳಿದನು. ಆ ಮಹಾನ್ ಹಝ್ರತ್ ಅಬುಲ್ ಅಬ್ಬಾಸ್ ಬಲ್ಯ ಇಬ್ನು ಮಲ್ಕಾನ್ ಹಳಿರ್ ನಬಿ (ಅಸ) ಆಗಿದ್ದರು . ಅವರು ಅಪಾರ ಅದೃಶ್ಯತೆ, ಮತ್ತು ಅಸಾಧಾರಣ ಜೀವನ ಇತಿಹಾಸ ಹೊಂದಿರುವ ಮಹಾನ್ ವ್ಯಕ್ತಿಯಾಗಿದ್ದರು .
🌺ಆ ಮಹಾನರ ಕುರಿತು ಒಂದಿಷ್ಟು🌺 👇
☘*ದುಲ್ ಖರ್ನೈನಿ ಮತ್ತು ಹಿಲ್ರ್ ನಬಿ*☘
ವಿಶ್ವವನ್ನಾಳಿದ ಮುಸ್ಲಿಂ ಆಡಳಿತಗಾರರಲ್ಲಿ ಒಬ್ಬರು . ಅವರ ತಂದೆ ಅಬ್ದುಲ್ಲಾ ಒಬ್ಬ ಮಹಾನ್ ಖಗೋಳಶಾಸ್ತ್ರಜ್ಞರಾಗಿದ್ದರು .
ಒಂದು ದಿನ ರಾತ್ರಿ ಅಬ್ದುಲ್ಲಾ ರವರು ತನ್ನ ಮಡದಿಯಲ್ಲಿ ಆಕಾಶದಲ್ಲಿ ಒಂದು ಪ್ರತ್ಯೇಕ ಸ್ಥಳವನ್ನು ತೋರಿಸುತ್ತಾ ಹೇಳಿದರು : "ಆ ಸ್ಥಳದಲ್ಲಿ ಒಂದು ನಕ್ಷತ್ರದ ಉದಯವಾಗುತ್ತದೆ , ಆ ನಕ್ಷತ್ರ ಪ್ರತ್ಯಕ್ಷವಾದರೆ ನನಗೆ ತಿಳಿಸಬೇಕು . ಆ ಸಂದರ್ಭದಲ್ಲಿ ನಡೆಯುವ ಲೈಂಗಿಕ ಬಂಧದಲ್ಲಿ ಉಂಟಾಗುವ ಮಗುವಿಗೆ ಅಂತ್ಯ ದಿನದ ವರೆಗೂ ಆಯುಷ್ಯವಿರುತ್ತದೆ " ಎನ್ನುತ್ತಾ ಅವರು ಮಲಗಿದರು .
ಪಕ್ಕದ ಕೋಣೆಯಲ್ಲಿದ್ದ ಅವರ ಮಡದಿಯ ಸಹೋದರಿ ಇವರ ಮಾತುಕತೆಯನ್ನು ಕೇಳಿ ತಮಗೂ ಅಂತಹ ಮಗು ಲಭಿಸಬೇಕು ಎಂಬ ಆಗ್ರಹದಲ್ಲಿ ನಕ್ಷತ್ರ ಉದಯವನ್ನು ಕಾದು ಕುಳಿತರು .
ನಕ್ಷತ್ರ ಪ್ರತ್ರಕ್ಷವಾದ ಕೂಡಲೇ ಕಾದು ಕುಳಿದ ದಂಪತಿಗಳು ಶಾರೀರಿಕ ಬಂಧದಲ್ಲಿ ಏರ್ಪಟ್ಟರು . ಈ ಬಂಧದಲ್ಲಿ ಉಂಟಾದ ಮಗುವೇ ಹಿಳ್ರ್ ನಬಿ(ಅಸ) ಎಂಬ ಪವಾಡ ಪುರುಷ .
ಇದೊಂದೂ ತಿಳಿಯದೆ ಗಾಢ ನಿದ್ದೆಯಲ್ಲಿದ್ದ ಅಬ್ದುಲ್ಲ ರವರು ಏಳುವಾಗ ನಕ್ಷತ್ರ ಮರೆಯಾಗಿ ಹೋಗಿತ್ತು . ಅವರು ತನ್ನ ಮಡದಿಯಲ್ಲಿ "ನೀನೇಕೆ ನನ್ನನ್ನು ಎಬ್ಬಿಸಲಿಲ್ಲ" ಎಂದು ಕೇಳಿದಾಗ ಅವಳು "ನನಗೆ ನಾಚಿಕೆಯಾಯಿತು" ಎನ್ನುತ್ತಾ ತಲೆ ತಗ್ಗಿಸಿದಳು . ಆಗ ಅಬ್ದುಲ್ಲ "ಕಳೆದ ನಲವತ್ತು ವರ್ಷಗಳಿಂದ ನಾನು ಈ ಸಮಯಕ್ಕಾಗಿ ಕಾಯುತ್ತಿದ್ದೆ ನೀನು ನನ್ನ ಕಾಯುವಿಕೆಯನ್ನು ನಷ್ಟಪಡಿಸಿದೆ" ಎಂದಾಗ ಅವಳು ಮೌನಿಯಾದಳು .
ಏನೇ ಆಗಲಿ ನಷ್ಟವಾದದ್ದು ನಷ್ಟವಾಯಿತು , ಅದರಿಂದ ಬೇಸತ್ತು ಪ್ರಯೋಜನವಿಲ್ಲ. ಇನ್ನೊಂದು ನಕ್ಷತ್ರ ಪ್ರತ್ಯಕ್ಷವಾಗಲಿದೆ ಆಗ ಒಂದಾಗೋಣ , ಅದರಿಂದ ಉಂಟಾಗುವ ಮಗು ಲೋಕ ಪ್ರಶಸ್ತನಾಗುತ್ತಾನೆ .
ಹಾಗೆ ಅವರಿಬ್ಬರು ಆ ನಕ್ಷತ್ರದ ಉದಯವನ್ನು ಕಾದು ಕುಳಿತರು. ಅವರ ಕಾಯುವಿಕೆ ಹಸನಾಯಿತು . ಆ ನಕ್ಷತ್ರ ಪ್ರತ್ಯಕ್ಷವಾಯಿತು, ಅವರಿಬ್ಬರೂ ಶಾರೀರಿಕ ಬಂಧದಲ್ಲಿ ಏರ್ಪಟ್ಟರು . ಆ ಬಂಧದಲ್ಲಿ ಉಂಟಾದ ಮಗುವೇ ಪ್ರಪಂಚ ಆಳಿದ ದುಲ್ಖರ್ನೈನ್ ಚಕ್ರವರ್ತಿ.
ದುಲ್-ಖರ್ನೈನಿಯವರ ತಂದೆ ಅಬ್ದುಲ್ಲ ಹೇಳಿದಂತೆ ಖಿಳಿರ್ ನಬಿಯವರಿಗೆ ಅಲ್ಲಾಹನು ಅಂತ್ಯ ದಿನದ ವರೆಗೆ ಆಯುಷ್ಯವನ್ನು ನೀಡಿದನು .ದುಲ್-ಖರ್ನೈನಿ ಲೋಕ ಪ್ರಶಸ್ತ ವ್ಯಕ್ತಿಯೂ ಆದರು .
*ರೈತ ಮತ್ತು ಮೇಕೆ*
ಹಿಲ್ರ್ ನೆಬಿಯವರ ತಂದೆ ಮಲ್ಕಾನ್ ಪೇರ್ಶ್ಯದ ಒಂದು ಪ್ರಾಂತ್ಯದ ರಾಜನಾಗಿದ್ದನು . ತಾಯಿ ರೋಮಾ ರಾಜ್ಯದವರೂ ಆಗಿದ್ದರು. ಇದು ಪ್ರಮುಖ ತಾಬಿಈ ಶ್ರೇಷ್ಠರಾದ ಪಂಡಿತ ಸಈದ್ ಇಬ್ನು ಮುಸಯ್ಯಬ್ ರವರ ತೀರ್ಪು .
ಹಿಲ್ರ್ ನೆಬಿಯವರ ಜನನದ ನಂತರ ಶತ್ರುಗಳಿಂದ ಏನಾದರೂ ತೊಂದರೆ ಆಗಬಹುದೆಂದು ಭಾವಿಸಿದ ತಂದೆ ಮಲ್ಕಾನ್ ಮಗು ಮತ್ತು ತಾಯಿಯನ್ನು ನಿರ್ಜನ ಪ್ರದೇಶದ ಗುಹೆಯೊಂದರಲ್ಲಿ ವಾಸವಿಟ್ಟರು .
ಗುಹಾ ವಾಸದ ಮಧ್ಯೆ ತಾಯಿ ಮರಣ ಹೊಂದಿದರು , ಮುಂದಿನ ದಿನಗಳು ಆಶ್ಚರ್ಯಕರವಾದ ಘಟನೆಗಳಾಗಿತ್ತು .
ಬೆಟ್ಟದ ಕೆಳಗಡೆ ಒಬ್ಬ ರೈತ ತನ್ನ ಮೇಕೆಗಳನ್ನು ಮೇಯಿಸುತ್ತಿದ್ದನು . ಆತನ ಮೇಕೆಗಳು ಮೇಯುತ್ತಿದ್ದಂತೆ ಒಂದು ಮೇಕೆ ಮಾತ್ರ ಒಬ್ಬಂಟಿಯಾಗಿ ಮೇಯುತ್ತಾ ಸ್ವಲ್ಪ ಸಮಯಕ್ಕೆ ಮಾಯವಾಗಿ ಮತ್ತೆ ಮರಳಿ ಬರುತ್ತಿತ್ತು .
ದಿನಾಲು ಗುಂಪಿನಿಂದ ಬೇರ್ಪಟ್ಟು ಒಬ್ಬಂಟಿಯಾಗಿ ಮೇಯುತ್ತಾ ಸಾಗುತ್ತಿರುವ ಒಂದು ಮೇಕೆ ರೈತನ ಗಮನ ಸೆಳೆಯಿತು. ಒಂದು ದಿನ ರೈತ ಆ ಮೇಕೆಯನ್ನು ಹಿಂಬಾಲಿಸಿದನು. ಮೇಕೆ ಮುಂದೆ ಮುಂದೆ ನಡೆಯುತ್ತಾ ಬೆಟ್ಟದ ಕೆಳಗಿರುವ ಒಂದು ಗುಹೆಯೊಳಗೆ ಪ್ರವೇಶಿಸಿತು . ರೈತನಿಗೆ ಮತ್ತಷ್ಟು ಆಶ್ಚರ್ಯವಾಗಿ ಆತನೂ ಗುಹೆಯೊಳಗೆ ಪ್ರವೇಶಿಸಿದ . ಒಳಗೆ ನೋಡಿದಾಗ ರೈತ ಕುತೂಹಲದಿಂದ ಬೆರಗಾದನು . ತನ್ನ ಕಣ್ಣುಗಳಿಂದ ತನಗೇ ನಂಬಲಾಗದ ಆಶ್ಚರ್ಯ...!
ನೆಲದಲ್ಲಿ ಬಿರಿಸಿರುವ ಹಾಸಿಗೆಯಲ್ಲಿ ಸುಂದರವಾದ ಒಂದು ಮಗು ಮಲಗಿದೆ, ಮೇಕೆ ತನ್ನ ಕುಚವನ್ನು ಮಗುವಿನ ಬಾಯಿಗೆ ನೀಡಿದಾಗ ಮಗು ಅದರಿಂದ ಹಾಲು ಹೀರುತೊಡಗಿತು .
ನಂತರ ಒಂದೂ ತಿಳಿಯದಂತೆ ಮೇಕೆ ಮುಂದೆ ಸಾಗಿತು . ರೈತ ಗುಹೆಯ ಒಳಗಡೆ ಪ್ರವೇಶಿಸಿ ಮಗುವನ್ನು ಎತ್ತಿಕೊಂಡು ಮನೆಯ ಕಡೆ ದಾಪುಗಾಲಿತ್ತನು . ಇದೊಂದು ಅದ್ಭುತ ಮಗುವೆಂದು ರೈತನ ಅಂತರಂಗ ಮಂತ್ರಿಸುತ್ತಿತ್ತು .
ಮಗು ರೈತನ ಮನೆಯಲ್ಲಿ ಬೆಳೆಯತೊಡಗಿತು . ರೈತನ ಮಕ್ಕಳಿಂದ ಬರೆಯಲು ಓದಲು ಕಲಿಯಿತು. ಚಿಕ್ಕ ವಯಸ್ಸಿನಲ್ಲೇ ಮಾತಿನಲ್ಲೂ ಚಟುವಟಿಕೆಗಳಲ್ಲೂ ಸ್ವಭಾವದಲ್ಲೂ ಮಗುವಿನ ಸಾಮರ್ಥ್ಯ ರೈತನನ್ನು ಆಕರ್ಷಿಸಿತು . ಮಗುವಿನ ಸ್ಫುಟವಾದ ಬರವಣಿಗೆಯ ಅಕ್ಷರ ಶುದ್ಧಿ ಕಂಡು ರೈತ ಬೆರಗಾದನು ....
🍀ರಾಜನ ಘೋಷಣೆ🍀*
ರಾಜನು ದೇಶದ ಎಲ್ಲಾ ಅತ್ಯುತ್ತಮ ಕೈಬರಹದ ಬರಹಗಾರರನ್ನು ಅರಮನೆಗೆ ಆಹ್ವಾನಿಸುತ್ತಾನೆ. ಅತ್ಯುತ್ತಮ ಬರಹಗಾರನನ್ನು ಅರಮನೆಯ ಗುಮಾಸ್ತನಾಗಿ ನೇಮಿಸುವ ಸಲುವಾಗಿಯಾಗಿತ್ತು ಈ ಸ್ಪರ್ಧೆ .
ಇಬ್ರಾಹಿಮ್ ನೆಬಿ ಮತ್ತು ಶೀಸ್ ನೆಬಿ (ಅಸ)ರ
ಪ್ರಾಚೀನ ಏಡುಗಳಲ್ಲಿ ಉಲ್ಲೇಖಿಸಲ್ಪಟ್ಟ ವಿಧಿ ನಿಷೇಧಗಳು ಮತ್ತು ಐತಿಹಾಸಿಕ ಘಟನೆಗಳನ್ನು ನಕಲು ಮಾಡುವುದು ರಾಜಕೀಯ ನಿಯೋಜನೆಯಾಗಿತ್ತು .
ರೈತ ಚಿಕ್ಕ ಮಗುವನ್ನು ಎತ್ತಿಕೊಂಡು ಅರಮನೆ ತಲುಪಿದನು . ಚಿಕ್ಕವನಾದ ಹಿಲ್ರ್ ಸಹ ಶ್ರೇಷ್ಠ ಬರಹಗಾರರ ನಡುವೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಹಿಲ್ರ್ ಚಿಕ್ಕವನಾಗಿದ್ದರೂ ಅವರು ಚೆನ್ನಾಗಿ ಬರೆದಿದ್ದಾರೆಂದು ರಾಜನಿಗೆ ಅರಿವಾಯಿತು .
ರಾಜನು ರೈತನೊಂದಿಗೆ ಕೇಳಿದ "ಈ ಮಗು ಯಾರು...? ರೈತ ತನ್ನ ಮಗನೆಂದು ಉತ್ತರಿಸಿದನು. ಆದರೆ ರಾಜನಿಗೆ ರೈತನ ಮುಖಭಾವ ಬದಾಲುಗುವುದನ್ನು ಕಂಡು ಒಮ್ಮೆ ಮಗುವಿನ ಮುಖಕ್ಕೂ ಮತ್ತೆ ರೈತನ ಮುಖಕ್ಕೂ ನೋಡತೊಡಗಿದರು . ಮುಖ ಮತ್ತು ದೈಹಿಕ ನೋಟಕ್ಕೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ಯಾವುದೇ ಹೋಲಿಕೆ ಇಲ್ಲದಿರುವುದನ್ನು ಕಂಡ ರಾಜನ ಮನಸ್ಸು ಖಂಡಿತವಾಗಿಯೂ ಈ ಮಗು ರೈತನದಾಗಿರಲು ಸಾಧ್ಯವೇ ಇಲ್ಲವೆಂದು ಮಂತ್ರಿಸುತ್ತಿತ್ತು .
ರಾಜನು ರೈತನನ್ನು ಪಕ್ಕಕ್ಕೆ ಕರೆದು ಸ್ವಲ್ಪ ಜೋರಾಗಿಯೇ ಕೇಳಿದರು "ನಿಜ ಹೇಳು .. ಈ ಮಗು ಯಾರದು..? ಸುಳ್ಳು ಹೇಳಿ ನಮ್ಮಿಂದ ಶಿಕ್ಷೆಗೆ ಗುರಿಯಾಗಬೇಡ..! ಶಿಕ್ಷೆ ಕಠಿಣವಾಗಿರುತ್ತದೆ ನೆನಪಿರಲಿ.. "
ರಾಜನ ಬೆದರಿಕೆಯ ಮಾತು ಫಲಿಸಿತು . ರೈತ ನಡೆದ ಘಟನೆಗಳನ್ನು ವಿವರಿಸಿದನು. ರೈತನ ವಿವರಣೆಗಳನ್ನು ಕೇಳಿ ರಾಜನ ಕಣ್ಣು ತುಂಬಿತು . ತನ್ನ ಪೀಠದಿಂದ ಇಳಿದು ಬಂದು ಮಗುವನ್ನು ಅಪ್ಪಿಕೊಂಡರು.
ರಾಜ ರಹಸ್ಯವಾಗಿ ಮಗು ಇರುವ ಗುಹೆ ಸಂಧರ್ಶಿಸುತ್ತಿದ್ದರು ,
ಒಮ್ಮೆ ಹೋದಾಗ ಮಗುವನ್ನು ಕಾಣದಿರುವಾಗ ಯಾವುದಾದರೂ ಕಾಡುಪ್ರಾಣಿಗಳು ಕೊಂದು ತಿಂದಿರಬೇಕೆಂದು ಭಾವಿಸಿದ್ದರು . ಆದರೆ ನಷ್ಟವಾಯಿತೆಂದು ಭಾವಿಸಿದ ಮಗುವನ್ನು ಅಲ್ಲಾಹನು ತನ್ನ ಮುಂದೆ ಜೀವಂತವಾಗಿ ಯಾವುದೇ ತೊಂದರೆಗೊಳಗಾಗದೇ ತಂದಿರುವುದು ಅದೂ ಕೂಡಾ ಹಲವು ವರ್ಷಗಳ ನಂತರ .... ಅಲ್ಹಂದುಲಿಲ್ಲಾಹ್...!
ಈ ಪುನರ್ಮಿಲನದ ರಹಸ್ಯವನ್ನು ರಾಜನೇ ಬಹಿರಂಗಪಡಿಸಿದ. ರಾಜ ಪ್ರೇಕ್ಷಕರು ಬೆರಗಾದರು. ಅರಮನೆಯ ನಿವಾಸಿಗಳು ರಾಜನ ಸಂತೋಷದಲ್ಲಿ ಪಾಲ್ಗೊಂಡರು .
ರಾಜಕುಮಾರನನ್ನು ದೀರ್ಘಕಾಲ ಪೋಷಿಸಿದ ರೈತನಿಗೆ ರಾಜನು ಉಡುಗೊರೆಗಳನ್ನು ಕೊಟ್ಟನು ಮತ್ತು ಸಂತೋಷದಿಂದ ಅವನನ್ನು ಹಿಂದಿರುಗಿಸಿದನು .
ಅದರೊಂದಿಗೆ ಬಾಲನಾಗಿದ್ದ ಹಿಲ್ರ್ (ಅಸ) ರ ವಾಸ ಅರಮನೆಯಲ್ಲಾಯಿತು .
ರಾಜಕುಮಾರನಾದ ಹಿಲ್ರ್ ನ ಜೀವನ ಬದಲಾಯಿತು. ಧರಿಸಲು ರಾಯಲ್ ಬಟ್ಟೆಗಳು, ತಿನ್ನಲು ರಾಯಲ್ ಆಹಾರ, ಮತ್ತು ಅವನಿಗೆ ಸೇವೆ ಮಾಡಲು ದಾಸಿಯರು .
ರಾಜಕೀಯ ಸುಖಗಳಲ್ಲಿ ಜೀವಿಸುವಾಗ ಹಿಲ್ರ್ ರಿಗೆ ಅದರಲ್ಲಿ ಯಾವುದೇ ಆಸಕ್ತಿ ಇರಲಿಲ್ಲ.
ಜಿಬ್ರೀಲ್ (ಅಸ) ಹೇಳಿದ ಕಥೆ .
ಮಿಅರಾಜಿನ ರಾತ್ರಿ, ಅಂದರೆ ನುಬುವ್ವತ್ತಿನ ಹತ್ತನೇ ವರ್ಷ ರಜಬ್ 27ನೇ ರಾತ್ರಿ.
ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾ ಹು ಅಲೈಹಿ ವಸಲ್ಲಂ ಬುರಾಖಿನಲ್ಲಿ ಜಿಬ್ರೀಲ್ (ಅಸ) ರೊಂದಿಗೆ ಮಸ್ಜಿದುಲ್ ಅಖ್ಸವನ್ನು ಲಕ್ಷ್ಯವಿಟ್ಟು ಹೊರಟಾಗ . ಪ್ರಯಾಣ ಮಧ್ಯೆ ಎಲ್ಲಿಂದಲೋ ಸುಗಂಧ ವಾಸನೆ ತೇಲಿ ಬರುತ್ತಿತ್ತು. ಪ್ರವಾದಿ ವರ್ಯರು ಜಿಬ್ರೀಲ್ (ಅಸ) ರಲ್ಲಿ ಕೇಳಿದರು "ಇಷ್ಟೊಂದು ಪರಿಮಳ ಎಲ್ಲಿಂದ ಬರುತ್ತಿದೆ ...?" .
ಜಿಬ್ರೀಲ್ (ಅಸ) ಹೇಳಿದರು: "ಓ ಪ್ರವಾದಿಯವರೇ.... ಈ ಪರಿಮಳದ ಹಿಂದೆ ಬಲು ದೊಡ್ಡ ಕಥೆಯೊಂದಿದೆ"
ಪುಣ್ಯ ನೆಬಿ(ಸಅ) : ಕಥೆಯೋ... ಅದೆಂಥಾ ಕಥೆ....!?
ಜಿಬ್ರೀಲ್(ಅಸ) ವಿವರಿಸತೊಡಗಿದರು .
ಸುಮಾರು ವರ್ಷಗಳ ಹಿಂದೆ ಡಮಸ್ಕಸಿನಲ್ಲಿ ಒಬ್ಬ ಒಳ್ಳೆಯ ಸ್ವಭಾವದ ರಾಜನಿದ್ದನು . ಅವರ ಹೆಸರು ಮಲ್ಕಾನ್, ಅವರಿಗೆ ಒಬ್ಬ ಪುತ್ರನಿದ್ದ ಆತನ ಹೆಸರು ಬಲ್ಯಾ. ರಾಜಕುಮಾರ ಬೆಳೆದು ದೊಡ್ಡವನಾದಾಗ ರಾಜನು ಅವನನ್ನು ಕಲಿಯಲು ಕಳುಹಿಸಿದರು. ಎಂದು ಬೆಳಗ್ಗೆ ಕಲಿಯಲು ಹೊರಟು ಸಂಜೆಗೆ ಮರಳುತ್ತಿದ್ದ ಇದು ಅವರ ದಿನಚರಿಯಾಗಿತ್ತು.
ಕಲಿಯಲು ಹೋಗುತ್ತಿರುವ ದಾರಿಯಲ್ಲೊಂದು ಆಶ್ರಮವಿತ್ತು . ಅಲ್ಲಿ ಒಬ್ಬರು ಸೂಫೀ ಸಂತರು ವಾಸವಾಗಿದ್ದರು. ಆ ಸೂಫೀ ಸಂತರಲ್ಲಿ ಆಕರ್ಷಿತನಾದ ಬಲ್ಯ ಅವರೊಂದಿಗೆ ಸಂಪರ್ಕವಿರಿಸಿದರು. ಅವರಿಂದ ಹಲವು ವಿಧ್ಯೆಗಳನ್ನು ಕಲಿತರು . ಗುರುವಿನ ಸ್ವಭಾವ ಗುಣಗಳು , ಕರ್ಮಗಳೂ ಬಲ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು . ಗುರುವಿನ ಎಲ್ಲಾ ಕರ್ಮಗುಣಗಳೂ ಬಲ್ಯರ ದೈನಂದಿನ ಬದುಕಿನಲ್ಲಿ ಪ್ರತಿಫಲಿಸತೊಡಗಿತು .
ವರ್ಷಗಳು ಕಳೆಯಿತು ಬಲ್ಯ ಒಬ್ಬ ಸಮರ್ಥ ಯುವಕನಾದ . ಅರಮನೆಯಲ್ಲಿ ಕಲರವ ಶುರುವಾಯಿತು ಹಲವರೂ ಬಂದು ರಾಜರಲ್ಲಿ ಹೇಳತೊಡಗಿದರು "ಪ್ರಭು..!ನಿಮ್ಮ ನಂತರ ರಾಜ್ಯದ ಮುಂದಿನ ದೊರೆ ಬಲ್ಯರಲ್ಲವೆ , ಅವರೀಗ ಬೆಳೆದು ಸಮರ್ಥರಾಗಿದ್ದಾರೆ , ಅವರ ಮಧುವೆಯನ್ನು ನಡೆಸಬೇಕಿದೆ" . ಅವರ ಮಾತು ಸರಿಯೆಂದು ರಾಜರಿಗೂ ಅನಿಸಿತು . ಆದಿನವೇ ರಾಜ ಬಲ್ಯರಲ್ಲಿ ಆ ಕಾರ್ಯವನ್ನು ಸೂಚಿಸಿದರು . ಆದರೆ ಅವರ ಪ್ರತಿಕ್ರಿಯೆ ಸಮಾಧಾನಕರವಾಗಿರಲಿಲ್ಲ . ಇಹಲೋಕದ ಸುಖ ಸೌಕರ್ಯಗಳಲ್ಲಿ ಮತ್ತು ದಾಂಪತ್ಯ ಜೀವನದಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲದ ರಾಜಕುಮಾರನು ನಯವಾಗಿಯೆ ಮದುವೆಯ ಪ್ರಸ್ತಾಪದಿಂದ ಹಿಂದೆ ಸರಿದ.
ರಾಜನೂ ಕೂಡಾ ಮಗನನ್ನು ಅವನ ಪಾಡಿಗೆ ಬಿಡುವಂತಿರಲಿಲ್ಲ ದಿನಕಳೆಯುತ್ತಿರುವಂತೆ ಮದುವೆ ಕಾರ್ಯವನ್ನು ಮಗನಲ್ಲಿ ಹೇಳುತ್ತಲೇ ಇದ್ದರು . ಕೊನೆಗೂ ರಾಜನ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿಗೆ ನೀಡಿದರು . ರಾಜನ ಸಂತೋಷಕ್ಕೆ ಮಿತಿ ಇಲ್ಲದಂತಾಯಿತು . ತನ್ನ ಒಬ್ಬನೇ ಒಬ್ಬ ಮಗ ಅವನಿಗೆ ಹೋಲುವ ಒಂದು ಒಳ್ಳೆಯ ವಧುವನ್ನೇ ಹುಡುಕಬೇಕು . ವಿವಾಹ ಬಹಳ ಅದ್ಧೂರಿಯಲ್ಲೇ ನಡೆಸಬೇಕು, ಯಾವುದಕ್ಕೂ ಕೊರತೆ ಉಂಟಾಗಬಾರದು ಹೀಗೆ ಮುಂದುವರೆಯಿತು ರಾಜನ ಚಿಂತೆಗಳು. ಬಲ್ಯರ ಮದುವೆ ವಿಷಯ ತಿಳಿದ ರಾಜ್ಯದ ಜನತೆಯ ಸಂತೋಷ ಉತ್ಸಾಹದಿಂದ ಕುಣಿದಾಡಿದರು .
ಕಾಯುತ್ತಿದ್ದ ಆ ಮಾಂಗಲ್ಯ ದಿನ ಸಮೀಪವಾಯಿತು , ಅರಮನೆಯಲ್ಲಿ ಸಡಗರ ತಾರಕಕ್ಕೇರಿತು. ವಧೂ ನೆರೆಯ ರಾಜ್ಯದ ರಾಜನ ಒಬ್ಬಳೇ ಒಬ್ಬಳು ಸುದಂರಿ . ರಾಜ್ಯದೆಲ್ಲೆಡೆಯೂ ಮದುವೆಯ ಸಂಭ್ರಮ ಜನರು ಬಹಳ ಉತ್ಸಾಹದಲ್ಲಿ ತೇಲಾಡುತ್ತಿದ್ದರು . ಮದುವೆಯ ದಿನ ಬಂದೇ ಬಿಟ್ಟಿತು ರಾಜಕುಮಾರ ಮದುವೆಯ ಮಂಟಪವೇರಲು ತಯಾರಾಗುತ್ತಿದ್ದಾರೆ . ಸೌಂದರ್ಯ ತುಳುಕಾತ್ತಿರುವ ವಧು ಅಲಂಕಾರದೊಂದಿಗೆ ಮಂಟಪವೇರಿದಳು . ಅರಮನೆಯಲ್ಲಿ ಸೇರಿದವರೆಲ್ಲಾ ಹರ್ಷೋತ್ಸಾಹದಿಂದ ಕೀರ್ತನೆಗಳನ್ನು ಆಲಪಿಸಿದರು.
ಸಂಜೆಯಾಗುತ್ತಿದ್ದಂತೆಯೇ ಅತಿಥಿಗಳೆಲ್ಲಾ ಮರಳತೊಡಗಿದರು . ಎಲ್ಲದಕ್ಕೂ ಸಾಕ್ಷಿಯಾದ ಅರುಣ ಮೆಲ್ಲನೆ ತನ್ನ ಅಸ್ಥಮಾನದ ಕಡೆಗೆ ದಾಪುಗಾಲಿಡುತ್ತಿತ್ತು . ಅದರೊಂದಿಗೆ ಅರಮನೆಯ ಸಡಗರ ಸದ್ದುಗಳು ಕ್ಷೀಣಿಸತೊಡಗಿತು .
ಸೂರ್ಯ ಅಸ್ಥಮಿಸಿದನು, ಬದಲಾಗಿ ಬೆಳದಿಂಗಳ ಬಾಲೆ ಎಲ್ಲೆಂದರಲ್ಲಿ ಬೆಳಕನ್ನು ಚೆಲ್ಲುತ್ತಾ ಪ್ರತ್ಯಕ್ಷವಾಯಿತು . ಪಕ್ಕದಲ್ಲಿ ತಮ್ಮ ಪರಿವಾರ ಸಮೇತ ಮಿಂಚುತ್ತಿರುವ ತಾರೆಗಳು . ಆ ರಾತ್ರಿಗೇನೋ ಹೊಸ ಹುಮ್ಮಸ್ಸು, ಮನಸ್ಸಿಗೆ ಮುದ ನೀಡುವ ವಾತಾವರಣ . ಪಕ್ಷಿಮದಿಂದ ತಂಗಾಳಿ ಬೀಸುತ್ತಿದೆ. ಅರಮನೆಯ ಮೇಲಿನ ಕೊಠಡಿಯಲ್ಲಿ ಮಧುಮಗಳು ತನ್ನ ಪ್ರಥಮ ರಾತ್ರಿಯ ಸವಿಯನ್ನು ಕಾಯುತ್ತಿದ್ದಾಳೆ. ರಾಜಕುಮಾರ ಕೊಠಡಿಗೆ ಪ್ರವೇಶಿಸಿದರು , ಮಂಚದಲ್ಲಿ ಕುಳಿತಿರುವ ಮಧುಮಗಳನ್ನು ಕಂಡು ಯಾಕೋ ಏನೋ ಮನಸ್ಸಿಗೆ ಅಸಮಾಧಾನ ಉಂಟಾಗತೊಡಗಿತು. ಮೊದಲೇ ಇಹಲೋಕ ಸುಖ ಸೌಕರ್ಯದಲ್ಲಿ ಆಸಕ್ತಿ ಇಲ್ಲದ ನನ್ನೊಡನೆ ಇವಳಿಗೆ ಜೀವನ ನಡೆಸಲು ಸಾಧ್ಯವೇ..? ಏನೇ ಆಗಲಿ ಎಲ್ಲವೂ ಅವಳೊಂದಿಗೆ ಹೇಳೋಣಾ, ಅವಳಿಗೆ ಇಷ್ಟವಾದರೆ ನನ್ನೊಂದಿಗೆ ಜೀವನ ನಡೆಸುವಳು, ಇಲ್ಲವಾದರೆ ಅವಳ ದಾರಿ ಅವಳು ನೋಡಿಕೊಳ್ಳುವಳು . ನನ್ನಿಂದಾಗಿ ಅವಳ ಬಾಳು ನಾಶವಾಗದಿರಲಿ ಎನ್ನುತ್ತಾ ಅವಳನ್ನು ಸಮೀಪಿಸಿದರು .
ರಾಜಕುಮಾರ : *"ಪ್ರಿಯತಮೆ, ನಿನ್ನಲ್ಲಿ ಒಂದು ಮಾತು ಹೇಳಬೇಕಿತ್ತು , ನನ್ನನ್ನು ತಪ್ಪಾಗಿ ಅರ್ಥೈಸಬಾರದು , ಇದು ರಹಸ್ಯವಾದ ವಿಷಯವಾಗಿದೆ ದಯವಿಟ್ಟು ನೀನಿದನ್ನು ಯಾರಲ್ಲೂ ಬಹಿರಂಗಪಡಿಸಬಾರದು"* . ನಾಚುತ್ತಾ ಅವಳು ಹೇಳಿದಳು "ನಾನು ನಿಮಗೆ ಸೀಮಿತವಲ್ಲವೇ , ಇಂದಿನಿಂದ ನಾವಿಬ್ಬರೂ ಎರಡು ಶರೀರವಾದರೂ ಒಂದೇ ಮನಸ್ಸಲ್ಲವೇ ನಮ್ಮ ಮಧ್ಯೆ ಈ ರೀತಿ ಆಮುಖವೇಕೆ..?" ಎನ್ನುತ್ತಾ ತಲೆ ತಗ್ಗಿಸಿದಳು.
ರಾಜಕುಮಾರ ಪ್ರಾರಂಭಿಸಿದರು "ಪ್ರಿಯತಮೆ, ನಾನು ವೈವಾಹಿಕ ಜೀವನ ಇಷ್ಟಪಡದ ಒಬ್ಬ ವ್ಯಕ್ತಿ. ನನ್ನ ತಂದೆಯ ಬಲವಂತದಿಂದಾಗಿ ನಿನ್ನನ್ನು ನಾನು ಮದುವೆ ಆಗಿರುವೆನು. ನಾನು ಇಬಾದತ್ ಹೆಚ್ಚಿಸಲು ಇಷ್ಟಪಡುತ್ತೇನೆ, ನಿನಗೆ ನನ್ನೊಂದಿಗೆ ಹೊಂದಿಕೊಂಡು ಮುನ್ನಡೆಯಲು ಸಾಧ್ಯವಾದರೆ ಮಾತ್ರ ನನ್ನೊಂದಿಗೆ ಜೀವನ ನಡೆಸಬಹುದು . ಇಲ್ಲವಾದರೆ ನಾನು ನಿನ್ನಿಂದ ಮುಕ್ತನಾಗುವೆನು , ನನ್ನಿಂದಾಗಿ ಯಾರೂ ತೊಂದರೆ ಅನುಭವಿಸುವುದು ನಾನು ಇಷ್ಟಪಡುವುದಿಲ್ಲ" .
*ವಿವಾಹ ವಿಚ್ಛೇದನೆ*🤲
ವಧುವಿನ ಪ್ರತಿಕ್ರಿಯೆ ಏನೆಂದು ತಿಳಿಯಲು ಅವಳ ಮುಖವನ್ನು ನೋಡಿದರು ಅವಳು "ಇಲ್ಲ ರಾಜಕುಮಾರ ಖಂಡಿತವಾಗಿಯೂ ನಾನು ನಿಮ್ಮನ್ನು ಬಿಟ್ಟಿರಲ್ಲ ..! ನಿಮ್ಮನ್ನು ಉಪೇಕ್ಷಿಸಲು ನನ್ನಿಂದ ಸಾಧ್ಯವಿಲ್ಲ. ಪ್ರಥಮ ನೋಟದಲ್ಲೇ ನನ್ನ ಹೃದಯವನ್ನು ನಿಮಗೆ ನಾನು ಸಮರ್ಪಿಸಿರುವೆನು . ನಿಮ್ಮನ್ನು ಬಿಟ್ಟು ನಾನೆಲ್ಲೂ ಹೋಗುವುದಿಲ್ಲ ..!" .
ಪ್ರಿಯತಮೆಯ ಮಾತುಗಳನ್ನು ಕೇಳಿ ಬಲ್ಯರಿಗೆ ಸಂತೋಷವಾಯಿತು. "ಹಾಗಾದರೆ ಈ ವಿಷಯ ಯಾರಲ್ಲೂ ಹೇಳಬಾರದು , ಒಂದು ವೇಳೆ ನೀನು ಬಹಿರಂಗಪಡಿಸಿದರೆ ಇರು ಲೋಕದಲ್ಲೂ ನಿನಗೆ ನಾಶವಾಗುವುದು , ರಹಸ್ಯ ನೀನು ರಹಸ್ಯವಾಗಿಡುವುದಾದರೆ ಖಂಡಿತವಾಗಿಯೂ ನಿನಗೆ ಎರಡು ಲೋಕದಲ್ಲೂ ಸಂತೃಪ್ತಿ ಲಭಿಸುವುದು" ಎಂದರು , ಅವಳು ಒಪ್ಪಿಗೆ ನೀಡಿದಳು.
ಕಾಲ ಮುಂದೆ ಚಲಿಸುತ್ತಲೇ ಇತ್ತು , ಸುಖ ಸೌಖ್ಯಗಳೊಂದಿಗೆ ಆ ದಾಂಪತ್ಯ ಮುಂದೆ ಸಾಗಿತು . ಆದರೆ ಈ ದಾಂಪತ್ಯದಲ್ಲಿ ಮಕ್ಕಳಾಗದಿರುವುದು ರಾಜನಿಗೆ ಬೇಸರ ತಂದಿತು . ಜನತೆ ರಾಜಕುಮಾರನನ್ನು ನಪುಂಸಕನೆಂದು ಹೀಯಾಳಿಸತೊಡಗಿದರು . ವಿವರ ತಿಳಿದು ರಾಜನ ಬೇಸರ ದುಪ್ಪಟ್ಟಾಯಿತು . ಕೆಲವರಂತೂ ಪತ್ನಿಯನ್ನು ಆಕ್ಷೇಪಿಸಿದರು , ಅವಳಿಗೆ ಚಿಕಿತ್ಸೆ ಬೇಕಾಗಿದೆ ಎಂದು ಹೇಳಿದರು .
ಇದರ ಕಾರಣವೇನೆಂದು ತಿಳಿಯಲು ರಾಜ ಕುಮಾರನನ್ನು ಕರೆಸಿ ಕೇಳಿದರು "ಕುಮಾರ..! ನಿನ್ನನ್ನು ಮದುವೆ ಮಾಡಿಸಿರುವುದರ ಉದ್ದೇಶ ನಿನಗೆ ಚೆನ್ನಾಗಿ ಗೊತ್ತು, ನಿನಗೇನಾದರೂ ತೊಂದರೆ ಇದೆಯೇನೋ...? ಇದ್ದರೆ ಹೇಳು ವೈದ್ಯರಲ್ಲಿ ಪರಿಹಾರ ಕೇಳೋಣ , ಅದರಲ್ಲಿ ಸಂಕೋಚವೇನೂ ತೋರಬೇಡ" .
ರಾಜಕುಮಾರ ವಿನಯದಿಂದಲೇ "ಎಲ್ಲವನ್ನೂ ನೀಡುವವನು ಅಲ್ಲಾಹನು , ಅವನ ತೀರ್ಮಾನದಂತೆಯೇ ಎಲ್ಲವೂ ನಡೆಯುವುದು . ಮಕ್ಕಳನ್ನು ದಯಪಾಲಿಸುವವನು ಅವನೇ , ಸಿಗಲಿಲ್ಲವೆಂದು ಬೇಸರಪಟ್ಟು ಏನೂ ಲಾಭವಿಲ್ಲ . ಎಲ್ಲವನ್ನೂ ಅಲ್ಲಾಹನಿಗರ್ಪಿಸಿ ಕ್ಷಮಾಶೀಲರಾಗಬೇಕು" .
ಪ್ರತಿಕ್ರಿಯೆ ನೀಡಲಾಗದೆ ರಾಜನು ಮೌನ ಪಾಲಿಸಿದ.
ರಾಜ ರಾಜಕುಮಾರಿಯನ್ನು ಕರೆದು ಅದೇ ಪ್ರಶ್ನೆಯನ್ನು ಕೇಳಿದ . ಅವಳೂ ತನ್ನ ಗಂಡ ಹೇಳದಂತೆಯೇ ಹೇಳಿದಳು . ಕಾಲ ಚಕ್ರ ಮುಂದೆ ಸಾಗಿತು, ರಾಜನಿಗೆ ಕ್ಷಮೆ ತಾಳಲಾರದೆ ರಾಜಕುಮಾರನನ್ನು ಕರೆದು "ನೀನು ನಿನ್ನ ಮಡದಿಯನ್ನು ತೊರೆದು ಬೇರೆ ಒಬ್ಬಳನ್ನು ಮದುವೆಯಾಗಬೇಕು" ಎಂದು ಒತ್ತಾಯಿಸಿದರು . ಬಲ್ಯರಿಗೆ ಬೇರೆ ದಾರಿ ಇಲ್ಲದೆ ರಾಜನ ಒತ್ತಡಕ್ಕೆ ಮಣಿಯಲೇಬೇಕಾಯಿತು . ಆ ಮಧುರ ದಾಂಪತ್ಯ ಜೀವನದಿಂದ ಇಬ್ಬರೂ ಬೇರ್ಪಟ್ಟರು. ಎಲ್ಲವೂ ಸೃಷ್ಟಿಕರ್ತನಾದ ಅಲ್ಲಾಹನ ನಿಶ್ಚಯವೆಂದು ಕ್ಷಮಿಸಿದರು . ಈಮಾನಿನ ಮಧುರವನ್ನು ಸವಿದ ಆ ಮನಸ್ಸುಗಳು ಅಲ್ಲಾಹನ ಯಾವ ವಿಧಿಯನ್ನು ಸ್ವೀಕರಿಸಲು ತಯಾರಾಗಿದ್ದರು. ಪರಸ್ಪರ ದುಆ ವಸಿಯ್ಯತುಗಳೊಂದಿಗೆ ಅವರಿಬ್ಬರೂ ಬೇರ್ಪಟ್ಟರು.
ನಂತರ ರಾಜಕುಮಾರನಿಗೆ ಮಕ್ಕಳಿರುವ ಒಂದು ವಿಧವೆಯನ್ನು ಆರಿಸಿಕೊಟ್ಟರು .
ತಪ್ಪುಗಳು ಇನ್ನು ಪುನರಾವರ್ತಿಸಬಾರದು , ಇದಾಗಿತ್ತು ರಾಜನ ಉದ್ದೇಶ. ಆದರೆ ಬಲ್ಯರಿಗೆ ಕಾರಣವೇನೆಂದು ತಿಳಿದಿರಲಿಲ್ಲ .
ಅಷ್ಟೇನೂ ಅದ್ಧೂರಿಯಿಲ್ಲದ ಆ ಮದುವೆಯೂ ನಡೆಯಿತು .ಬಲ್ಯಾ ಮೊದಲ ಪತ್ನಿಯೊಂದಿಗೆ ಹೇಳಿದ ಎಲ್ಲಾ ವಿಷಯಗಳನ್ನು ಎರಡನೇ ಪತ್ನಿಯಲ್ಲಿಯೂ ಹೇಳಿದರು. ರಹಸ್ಯ ಬಹಿರಂಗಪಡಿಸಬಾರದು ಎಂಬ ಶರತ್ತನ್ನೂ ಇಟ್ಟರು , ಅವಳು ಅದಕ್ಕೆ ಒಪ್ಪಿಗೆಯನ್ನು ಸೂಚಿಸಿದಳು . ಆ ದಾಂಪತ್ಯ ಜೀವನ ಮುಂದೆ ಸಾಗಿತು .
ದಿನಕಳೆದರೂ ಮಕ್ಕಳಾಗದಿರುವುದನ್ನು ಕಂಡು ರಾಜನು ಕುಮಾರನ ಎರಡನೇ ಪತ್ನಿಯನ್ನು ಕರೆದು ವಿವರಣೆ ಕೇಳಿದರು. ಅವಳು ಪತಿಗೆ ನೀಡಿದ ಮಾತನ್ನು ಕಡೆಗಣಿಸುತ್ತಾ ಆ ರಹಸ್ಯ ಬಯಲು ಮಾಡಿದಳು . ವಿವರಣೆ ಕೇಳುತ್ತಿದ್ದಂತೆಯೇ ರಾಜನ ಕೋಪ ನೆತ್ತಿಗೇರಿತು .
ತಂದೆಯ ಕೋಪವನ್ನು ತಿಳಿದ ರಾಜಕುಮಾರ ಯಾರೂ ತಿಯದಂತೆ ತಡರಾತ್ರಿ ಅರಮನೆಯಿಂದ ಹೊರಟರು . ಮೊದಲೇ ಕುಮಾರನಿಗೆ ಅರಮನೆ ಸುಖಗಳಲ್ಲಿ ಆಸಕ್ತಿ ಇರಲಿಲ್ಲ . ಬೆಳಗಾಗುತ್ತಿಂದ್ದಂತೆ ರಾಜಕುಮಾರ ಕಾಣದಿರೂವುದನ್ನು ತಿಳಿದ ರಾಜ ತನ್ನ ಸೈನ್ಯವನ್ನು ಕರೆದು ಮಗನನ್ನು ಹುಡುಕಿ ತರಲು, ಹುಡುಕಿ ತರುವವರಿಗೆ ಅತ್ಯುತ್ತಮ ಬಹುಮಾನ ನೀಡುವುದಾಗಿಯೂ ಹೇಳಿ ಕಳುಹಿಸಿದರು.
*ವಂಚಕರಿಗೆ ತಕ್ಕ ಶಿಕ್ಷೆ*
ವಿಷಯ ತಿಳಿದ ರಾಜ್ಯದ ಪ್ರಜೆಗಳೆಲ್ಲರೂ ಕುಮಾರನನ್ನು ಅರಸುತ್ತಾ ಹೊರಟರು . ರಾಜ್ಯದ ಮೂಲೆ ಮೂಲೆಗಳೂ ಪರದಾಡಿ ನೋಡಿದರು ಆದರೆ ಎಲ್ಲೂ ಕುಮಾರನನ್ನು ಕಂಡು ಬರಲಿಲ್ಲ . ದೀರ್ಘ ಹುಡುಕಾಟದ ನಂತರ ಒಂದು ವಿಭಾಗ ನಿರ್ಜನ ಪ್ರದೇಶದ ಒಂದು ಗುಹೆಯೊಳಗೆ ಹೊಕ್ಕರು ಅಲ್ಲಿ ಅಲ್ಲಾಹನ ಧ್ಯಾನದಲ್ಲಿ ಮಗ್ನರಾಗಿರುವ ತಮ್ಮ ರಾಜಕುಮಾರನನ್ನು ಕಂಡು ಅವರಿಗೆ ಸಂತೋಷವಾಯಿತು . ಬಳಿಗೆ ಬಂದು ಅರಮನೆಗೆ ಬರುವಂತೆ ಕೇಳಿಕೊಂಡರು . ಕುಮಾರನು ಅವರೊಂದಿಗೆ ಹೇಳಿದ "ನಾನಿನ್ನು ಅರಮನೆಗಿಲ್ಲ , ಆ ಸುಖ ಸೌಕರ್ಯಗಳಲ್ಲಿ ನನಗೆ ಆಸಕ್ತಿಯೂ ಇಲ್ಲ , ನೀವು ನನ್ನನ್ನು ಕಂಡ ವಿಷಯ ಯಾರಲ್ಲೂ ಹೇಳಬಾರದು, ಖಂಡಿತವಾಗಿಯೂ ನಿಮಗೆ ಎರಡು ಲೋಕದಲ್ಲೂ ಜಯಗಳಿಸಬಹುದು , ನೀವು ಹೇಳುವುದಾದರೆ ಎರಡು ಲೋಕವೂ ನಿಮಗೆ ಕಠಿಣವಾಗಿರುತ್ತದೆ" . ಅವರು ನಾವು ಯಾರಲ್ಲೂ ಹೇಳುವುದಿಲ್ಲವೆಂದು ಭರವಸೆಯನ್ನು ಇತ್ತು ಮರಳಿದರು .
ಅವರು ಅರಮನೆ ಕಡೆಗೆ ತೆರಳುತ್ತಿದ್ದಂತೆ ರಾಜಕುಮಾರ ಬಲ್ಯರು ಮತ್ತೊಂದು ದಿಕ್ಕಿನತ್ತ ಹೊರಟಿದ್ದರು .
ಆದರೆ ಅರಮನೆಯತ್ತ ಬಂದ ಸಂಘದಲ್ಲಿನ ಒಬ್ಬನನ್ನು ಬಿಟ್ಟು ಉಳಿದವರು ಬಹುಮಾನದ ಆಸೆಯಲ್ಲಿ ಅವರು ಕಂಡ ಸ್ಥಳವನ್ನು ರಾಜನಲ್ಲಿ ಹೇಳಿದರು. ರಾಜನು ನಾಲ್ಕೈದು ಸಂಘ ಸೈನಿಕರನ್ನು ಅಲ್ಲಿಗೆ ಕಳುಹಿಸಿದನು. ಅಲ್ಪ ಸಮಯದಲ್ಲೇ ಅವರು ಬರಿಗೈಯಲ್ಲಿ ಮರಳಿದರು . ಅಲ್ಲಿ ನಮಗೆ ಯಾರೂ ಕಂಡುಬರಲಿಲ್ಲವೆಂದು ಸೈನಿಕರು ರಾಜನಲ್ಲಿ ಹೇಳಿದಾಗ ರಾಜನಿಗೆ ಆ ಸ್ಥಳವನ್ನು ಸೂಚಿಸಿದ ಆ ಸಂಘದವರ ಮೇಲೆ ಎಲ್ಲಿಲ್ಲದ ಕೋಪ ಬಂದು ಅವರನ್ನು ಕೊಲ್ಲಲು ಆಜ್ಞೆ ಇತ್ತನು. ಅವರು ಏನಾದರೂ ಹೇಳಬೇಕೆಂದು ಬಾಯಿ ತೆರೆಯುವ ಮುನ್ನವೇ ಶಿಕ್ಷೆಗೆ ಗುರಿಯಾದರು .
ತನ್ನ ನನ್ನ ಒಬ್ಬನೇ ಒಬ್ಬ ಮಗ ತನಗೆ ನಷ್ಟವಾಗಿರುತ್ತಾನೆ, ಇದರಿಂದ ಬೇಸರಗೊಂಡ ರಾಜನಿಗೆ ಪ್ರತಿ ವಿಷಯಕ್ಕೂ ಕೋಪ ಉಕ್ಕೇರತೊಡಗಿತು . ದಿನದಿಂದ ದಿನಕ್ಕೆ ರಾಜನ ಸ್ವಭಾವದಲ್ಲಿ ಬದಲಾವಣೆ ಉಂಟಾಗ ತೊಡಗಿತು . ಇಷ್ಟೆಲ್ಲಾ ಅವಘಡಕ್ಕೆ ಕಾರಣವಾದ ತನ್ನ ಮಗನ ಎರಡನೇ ಪತ್ನಿಯನ್ನು ಕೊಲ್ಲಲು ಆಜ್ಞೆ ಇತ್ತನು . ರಾಜನ ಆಜ್ಞೆಯಂತೆ ಅವಳನ್ನು ಕೊಲ್ಲಲಾಯಿತು . ಪತಿಯ ರಹಸ್ಯವನ್ನು ಬಯಲು ಮಾಡಿದ ಎರಡನೇ ಪತ್ನಿಯ ಇಹಲೋಕ ನಶ್ಟವಾಯಿತು ಅದರಂತೆ ಮದುವೆಯ ದಿನದಂದು ಪ್ರತಿಯು ಹೇಳಿದ ಮಾತು ಅಕ್ಷರಶಃ ಸತ್ಯವಾಯಿತು .
ಅರಮನೆಯಲ್ಲಿ ನಡೆದ ವಿಷಯವು ಕಾಡ್ಗಿಚ್ಚಿನಂತೆ ಹರಡಲು ಹೆಚ್ಚು ಸಮಯ ಬೇಕಾಗಲಿಲ್ಲ . ಮೊದಲ ಪತ್ನಿಗೂ ವಿಷಯ ತಿಳಿಯಿತು ಅದರಂತೆ ರಾಜಕುಮಾರನನ್ನು ಹುಡುಕಲು ಹೋಗಿ ರಹಸ್ಯ ಸಂರಕ್ಷಿಸಿದ ಮತ್ತೊಬ್ಬ ವ್ಯಕ್ತಿಗೂ ವಿಷಯ ತಿಳಿಯಿತು. ತಾವು ತಪ್ಪು ಮಾಡಿಲ್ಲವಾದರೂ ರಾಜನ ರೋಶಕ್ಕೆ ತಪ್ಪು ಸರಿ ಎಂದೇನೂ ಇಲ್ಲ..! , ತಮ್ಮನ್ನು ಕೊಲ್ಲವರೇನೋ ಎಂದು ಭಯಪಟ್ಟು ಮೊದಲ ಪತ್ನಿ ಊರು ಬಿಟ್ಟಳು . ಅದೇ ಸಮಯ ಮತ್ತೊಂದೆಡೆಯಲ್ಲಿ ರಹಸ್ಯ ಸಂರಕ್ಷಿಸಿದ ಆ ವ್ಯಕ್ತಿಯೂ ಊರು ಬಿಟ್ಟಿದ್ದನು . ಅಲ್ಲಾಹನ ವಿಧಿಯಂತೆ ಎಲ್ಲೆಂದರಲ್ಲಿ ಅಲೆದಾಡಿ ಯಾವುದೋ ಒಂದು ರಾಜ್ಯದಲ್ಲಿ ಇಬ್ಬರೂ ಸಂಧಿಸಿದರು . ಅವರಿಬ್ಬರ ಆ ಬೇಠಿ ಅವರಿಗೆ ಅನುಗ್ರಹವಾಯಿತು . ಎಲ್ಲವೂ ಅಲ್ಲಾಹ ವಿಧಿಯಂತೆ ನಡೆಯಿತು . ಒಳ್ಳೆಯವರಾದ ಅವರಿಬ್ಬರೂ ಪರಸ್ಪರ ಒಂದಾಗಿ , ಅವರು ವಿವಾಹವಾದರು ರಹಸ್ಯ ಸಂರಕ್ಷಿಸಿದ ಮಹಿಳೆಗೆ ರಹಸ್ಯ ಸಂರಕ್ಷಿಸಿದ ವ್ಯಕ್ತಿಯನ್ನೇ ಪತಿಯಾಗಿ ಲಭಿಸಿತು . ಆ ದಾಂಪತ್ಯ ಜೀವನದಲ್ಲಿ ಅವರಿಗೆ ಮೂರು ಮಕ್ಕಳುಂಟಾಯಿತು . ಕಾಲ ಕಳೆದಂತೆ ಪತಿ ಮರಣ ಹೊಂದಿದನು , ಅವಳು ವಿಧವೆಯಾದಳು . ಹೀಗಿರುವಾಗ ಆ ರಾಜ್ಯದ ಅಧಿಕಾರ ಒಬ್ಬ ಧರ್ಮ ವಿರೋಧಿಯಾದ ರಾಜನ ತೆಕ್ಕೆಗೆ ಸೇರಿತು. ಆತ ವಿಶ್ವಾಸಿಗಳನ್ನು ಹುಡುಕಾಡಿ ಕೊಲ್ಲಲು ಆಜ್ಞೆಗಳನ್ನು ಹೊರಡಿಸಿದನು . ಈ ಮಹಿಳೆ ಮತ್ತು ತನ್ನ ಮೂರು ಮಕ್ಕಳು ರಾಜನ ಅಧೀನದಲ್ಲಿ ಸೆರೆಯಾದರು . ಬಲವಂತದಿಂದ ಧರ್ಮವನ್ನು ತೊರೆಯಲು ಚಿತ್ರಹಿಂಸೆ ನೀಡಿದನು . ಆ ಮಹಿಳೆಯ ಈಮಾನಿನ ಶಕ್ತಿಯ ಮುಂದೆ ರಾಜನ ಪ್ರಯತ್ನ ಶೂನ್ಯವಾಯಿತು. ಎಲ್ಲರನ್ನೂ ಕೊಲ್ಲಲು ಆಜ್ಞಾಪಿಸಿದನು. ಒಂದು ದೊಡ್ಡ ಪಾತ್ರೆಯಲ್ಲಿ ನೀರು ಕಾಯಿಸಿ ಕುದಿಯುವ ಬಿಸಿ ನೀರಿಗೆ ಎಲ್ಲರನ್ನೂ ಎಸೆದು ಕೊಲ್ಲಲು ತೀರ್ಮಾನಿಸಿದನು . ಅವರನ್ನು ತಂದು ಕುದಿಯುತ್ತಿರುವ ನೀರಿನ ಮುಂದೆ ನಿಲ್ಲಿಸಿ "ಸತ್ಯ ವಿಶ್ವಾಸವನ್ನು ತೊರೆಯದಿದ್ದರೆ , ಈ ಮಕ್ಕಳನ್ನು ಕುದಿಯುವ ನೀರಿಗೆ ಹಾಕಲು ರಾಜನ ಆಜ್ಞೆ ಆಗಿದೆ" . ಆದರೆ ಆ ಮಹದಿಯ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ , ಅದು ಆ ಮಹದಿಯ ಈಮಾನಿನ ಶಕ್ತಿ ಆಗಿತ್ತು . ಸೈನಿಕರು ಮೂರು ಮಕ್ಕಳಲ್ಲಿ ಮೊದಲನೆಯವನನ್ನು ಎತ್ತಿ ಕುದಿಯುವ ನೀರಿಗೆಸೆದರು . ಆದರೂ ಮಹದಿಯಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ . ಎರಡನೇ ಮಗುವನ್ನು ಎತ್ತಿ ಎಸೆದರು.
ಇನ್ನಿರುವುದು ಚಿಕ್ಕ ಮಗುವಾಗಿದೆ, ಈಗ ಆ ಮಹದಿ ಮಗುವಿನ ಮುಗ್ಧ ಮುಖವನ್ನು ಕಂಡು ಸ್ವಲ್ಪ ಹಿಂದೆ ಸರಿದಳೇನೋ..? ಆಗ ಆ ಮುಗ್ಧ ಮಗು ಮಾತನಾಡಿತು "ಅಮ್ಮಾ... ನನ್ನನ್ನೂ ಎಸೆಯಲಿ ನೀನು ಹಿಂಜರಿಯಬೇಡ , ನಾವು ಸ್ವರ್ಗ ಲೋಕದಲ್ಲಿ ಸಂದಿಸೋಣ..'' ಹಾಗೆ ಮಗುವನ್ನೂ ಎಸೆಯಲ್ಪಟ್ಟಿತು .
ಕೊನೆಗೆ ಅವರ ಸರದಿ ಬಂತು , ಅವರನ್ನು ಅದಕ್ಕೆ ಎಸೆಯುವ ಮುನ್ನ ಸೈನಿಕರು ಅವರ ಕೊನೇ ಆಗ್ರಹವೇನೆಂದು ಕೇಳಿದರು ಆಗ ಆ ಮಹದಿ ಹೇಳಿದರು "ನನ್ನನ್ನೂ ನನ್ನ ಮಕ್ಕಳನ್ನೂ ನನ್ನ ಪತಿಯ ಸಮೀಪದಲ್ಲೇ ಧಫನ ಮಾಡಬೇಕು" .
ಅವರ ಕೊನೇ ಆಗ್ರಹ ಪೂರ್ತಿಗೊಳಿಸಿದರು . ಅವರೆಲ್ಲರನ್ನೂ ಅದರ ಸಮೀಪದಲ್ಲೇ ಧಫನ ಮಾಡಲಾಯಿತು .
ಓ ಪ್ರವಾದಿಯವರೇ.... ಅವರುಗಳ ಖಬರಿನಿಂದ ಬರುವ ಪರಿಮಳವಾಗಿದೆ ನೀವು ಈಗ ಅನುಭವಿಸುತ್ತಿರುವ ಸುಗಂಧ . ಜಿಬ್ರೀಲ್ (ಅಸ) ಕಥೆ ಹೇಳಿ ಮುಗಿಸಿದರು .
*ಐನುಲ್ ಹಯಾತ್*
ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರಿಗೆ ಅಂತ್ಯ ದಿನದ ವರೆಗೆ ಆಯುಷ್ಯ ಲಭಿಸಲು ಕಾರಣವೇನೆಂದು ಉಲೆಮಾ ಶ್ರೇಷ್ಠರಿಗೆ ಹಲವು ಅಭಿಪ್ರಾಯಗಳಿವೆ.
ಐನುಲ್ ಹಯಾತ್ ಎಂಬ ಒಂದು ಜಲಾಶಯದಿಂದ ಯಾರಾದರೂ ನೀರು ಕುಡಿದರೆ ಅವನಿಗೆ ಅಂತ್ಯ ದಿನದ ವರೆಗೂ ಆಯುಷ್ಯ ಲಭಿಸುವುದು ಎಂದಾಗಿದೆ ವಿಶ್ವಾಸ.
ಅರಮನೆಯಿಂದ ಪಲಾಯನಗೈದ ನಂತರ ಈ ಜಲಾಶಯದಿಂದ ನೀರು ಕುಡಿದ ಕಾರಣದಿಂದಾಗಿದೆ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರಿಗೆ ಅಂತ್ಯ ದಿನದ ವರೆಗೆ ಆಯುಷ್ಯ ಲಭಿಸಲು ಕಾರಣವೆಂದು ಉಲಮಾ ಪಕ್ಷದ ಅಭಿಪ್ರಾಯ.
ಮತ್ತೊಂದು ಅಭಿಪ್ರಾಯವೆಂದರೆ ದುಲ್-ಖರ್ನೈನ್ ಚಕ್ರವರ್ತಿಗೆ ಒಬ್ಬ ಗೆಳೆಯನಿದ್ದ . ಅದು ಮನುಷ್ಯನಾಗಿರಲಿಲ್ಲ ಅದು ಒಂದು ಮಲಕ್ ಆಗಿತ್ತು , ಹೆಸರು ಸನಾಖಿಲ್ .
ಒಮ್ಮೆ ಚಕ್ರವರ್ತಿ ಸನಾಖಿಲ್ ನೊಂದಿಗೆ ಐನುಲ್ ಹಯಾತ್ ಇರುವ ಸ್ಥಳವನ್ನು ಕೇಳಿದರು. ಮಲಕ್ ಅದು ಇರುವ ಸ್ಥಳ ಹೇಳಿತು . ಚಕ್ರವರ್ತಿಯ ಮಂತ್ರಿಯಾಗಿದ್ದ ಹಿಲ್ರ್ ನೆಬಿಯ ನಾಯಕತ್ವದಲ್ಲಿ ಸೇನೆಯೊಂದಿಗೆ ಐನುಲ್ ಹಯಾತ್ ಜಲಾಶಯವನ್ನು ಅರಸುತ್ತಾ ಹೊರಟರು .
ದೀರ್ಘ ಪ್ರಯಾಣದ ನಂತರ ಭೂಮಿಯ ಇರುಳು ಕವಿದ ಒಂದು ಪ್ರದೇಶ ತಲುಪಿದರು. ಒಂದು ಪರ್ವತದ ಸಮೀಪ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರಿಗೆ ಆ ಜಲಾಶಯ ಕಂಡಿತು. ಅವರು ಅದರಿಂದ ನೀರನ್ನು ಕುಡಿದು ಅದರಲ್ಲಿ ಸ್ನಾನ ಮಾಡಿದರು . ಹಿಲ್ರ್ ನಬಿಯವರ ಹಿಂದೆ ಬಂದಂತಹ ಸೈನಿಕರಿಗಾಗಲೀ ಚಕ್ರವರ್ತಿಗಾಗಲೀ ಆ ಜಲಾಶಯ ಕಾಣಲು ಸಾಧ್ಯವಾಗಲಿಲ್ಲ .(ಇದು ಅಸಾಕಿರ್(ರಅ) ರವರ ಅಭಿಪ್ರಾಯ.
ಪ್ರಯಾಣ ಮಧ್ಯೆ ಚಕ್ರವರ್ತಿ ಮತ್ತು ಮಲಕ್ ಒಂದು ಕೋಟೆಯೊಳಗೆ ಸಂಧಿಸಿದರು. ಮಲಕ್ ಚಕ್ರವರ್ತಿಗೆ ಒಂದು ಕಲ್ಲನ್ನು ನೀಡಿ ಮರಳಿತು . ಆ ಕಲ್ಲಿನ ಕುರಿತಾಗಲೀ ಚಕ್ರವರ್ತಿಗೆ ಏನೂ ಅರ್ಥವಾಗಲಿಲ್ಲ.
ಮರಳಿ ಬಂದ ಚಕ್ರವರ್ತಿ ತನ್ನ ಸೈನ್ಯದಲ್ಲಿರುವ ಪಂಡಿತರೊಂದಿಗೆ ಆ ಕಲ್ಲಿನ ಬಗ್ಗೆ ಕೇಳಿದರು. ಅವರು ಅದನ್ನು ಪರೀಕ್ಷಿಸಿ ನೋಡಿದರು . ಅದರ ತೂಕವನ್ನಳೆಯಲು ಒಂದು ತಕಡಿಯಲ್ಲಿಟ್ಟರು . ಆಶ್ಚರ್ಯವೇನಂದರೆ ತಕಡಿಯ ಮತ್ತೊಂದು ಭಾಗದಲ್ಲಿ ಎಷ್ಟು ಕಲ್ಲುಗಳನ್ನಿಟ್ಟರೂ ಮಲಕ್ ನೀಡಿದ ಆ ಕಲ್ಲು ಸ್ವಲ್ಪವೂ ಅಲುಗಾಡಲಿಲ್ಲ . ಅವರಿಗೆ ಅದರ ರಹಸ್ಯವೇನೆಂದು ತಿಳಿಯಲಿಲ್ಲ . ಅವರು ತಮ್ಮ ಮಂತ್ರಿಗಳಾದ ಹಿಲ್ರ್ ನಬಿಯವರಲ್ಲಿ ಆ ಕಲ್ಲಿನ ರಹಸ್ಯ ಹೇಳಬೇಕೆಂದರು.
ಸ್ವಲ್ಪ ಅಲೋಚಿಸಿದ ನಂತರ ಅವರು ತೂಕದ ಇನ್ನೊಂದು ತುದಿಯಲ್ಲಿ ಕಲ್ಲಿಟ್ಟು ಅದರ ಮೇಲೆ ಸ್ವಲ್ಪ ಮಣ್ಣನ್ನು ಸುರಿದರು . ಆಗ ತೂಕವು ಅಲುಗಾಡಿತು ತೂಕದ ಕಲ್ಲಿಟ್ಟ ಭಾಗವು ಮೇಲೆದ್ದಿತು . ಹಿಲ್ರ್ ನಬಿಯವರು ಹೇಳಿದರು ಇದು ಮನುಷ್ಯ ಉದಾಹರಣೆಯನ್ನು ಆ ಕಲ್ಲಿನ ಮೂಲಕವಾಗಿದೆ ಮಲಕ್ ನಮಗೆ ವ್ಯಕ್ತಪಡಿಸಿರುವುದು .
ಮಣ್ಣಿಟ್ಟು ಹೂಳುವ ತನಕ ಮನುಷ್ಯನ ಆಸೆ ಆಗ್ರಹಗಳು ಮನುಷ್ಯನನ್ನು ಶರಣಾಗಿಸುತ್ತಲೇ ಇರುತ್ತದೆ . ಮಣ್ಣಿನಡಿಗೆ ತಲುಪುವ ತನಕ ಅವನಿಗೆ ಯಾವುದೂ ಸಾಕಾಗುವುದಿಲ್ಲ .
ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರ ವಿವರಣೆಯನ್ನು ಕೇಳಿದ ಸೈನ್ಯ ಪ್ರಮುಖರು ಅವರ ಜ್ಞಾನವನ್ನು ಅಭಿನಂದಿಸಿ , ಅವರನ್ನು ಗೌರವಿಸಿದರು .
*ಆದಂ ನಬಿಯವರ(ಅಸ) ವಸಿಯ್ಯತ್*
ಆದಿಮ ಮನುಷ್ಯರೂ ಪ್ರಥಮ ಪ್ರವಾದಿಯೂ ಆಗಿದ್ದ ಆದಂ ನಬಿ(ಅಸ) ರವರು ತಮ್ಮ ಮರಣ ಸಮೀಪಿಸಿದ ಸಂದರ್ಭದಲ್ಲಿ ತನ್ನ ಮಕ್ಕಳನ್ನು ಕರೆದು "ಮುಂಬರುವ ಕಾಲದಲ್ಲಿ ಒಂದು ದೊಡ್ಡ ಪ್ರಳಯ ಉಂಟಾಗಲಿದೆ ಆಗ ನನ್ನ ಶರೀರವನ್ನು ಹಡಗಿನಲ್ಲಿ ಹೊತ್ತೊಯ್ಯಬೇಕು ಮತ್ತು ನಾನು ಹೇಳುವ ಸ್ಥಳದಲ್ಲಿ ಧಫನ ನಡೆಸಬೇಕು" ಎಂದು ವಸಿಯ್ಯತ್ ಮಾಡಿದರು . ಆದಂ ನಬಿಯವರು ತಮ್ಮ ಮಕ್ಕಳಿಗೆ ಆ ಸ್ಥಳವನ್ನು ಸೂಚಿಸಿದರು .
ಅವರು ಹೇಳಿದಂತೆ ಪ್ರಳಯ ನಡೆಯಿತು , ಅವರ ಶರೀರವನ್ನು ಹಡಗಿನಲ್ಲಿ ಇಟ್ಟರು .
ತಿಂಗಳುಗಳ ಕಾಲ ನೀರಿನಲ್ಲಿ ತೇಲಾಡಿದ ಹಡಗು ಕೊನೆಗೆ ಜೂದೀ ಪರ್ವತ ಸೇರಿತು . ಆದಂ ನಬಿಯವರ ವಸಿಯ್ಯತಿನಂತೆ ಅವರ ಶರೀರವನ್ನು ಧಫನ ಮಾಡಲು ಹಝ್ರತ್ ನೂಹ್ ನಬಿ (ಅಸ) ತಮ್ಮ ಮಕ್ಕಳಿಗೆ ಹೇಳಿದರು.
ಮಕ್ಕಳು ಹೇಳಿದರು: "ಯಾರೂ ಇಲ್ಲದ ಈ ಏಕಾಂತತೆಯಲ್ಲಿ ಧಫನ ಮಾಡಲು ನಮ್ಮಿಂದ ಸಾಧ್ಯವಿಲ್ಲ" ಎಂದು ಹಿಂಜರಿದರು .
ನೂಹ್ ನಬಿ : "ಮಕ್ಕಳೇ.. ನಮ್ಮೆಲ್ಲರ ತಂದೆಯವರಾದ ಆದಂ ನಬಿ ಪ್ರಾರ್ಥಿಸಿದ್ದರು ತನ್ನನ್ನು ಧಫನ ಮಾಡುವವರಿಗೆ ದೀರ್ಘಾಯುಷ್ಯ ನೀಡಬೇಕೆಂದು.
ಆದರೆ ಧಫನ ಮಾಡಲು ಯಾರಿಗೂ ಧೈರ್ಯ ಬರಲಿಲ್ಲ . ಆ ಶರೀರ ಮತ್ತೆ ಹಲವಾರು ವರ್ಷಗಳ ಕಾಲ ಹಡಗಿನಲ್ಲೇ ಉಳಿಯಿತು . ಪ್ರವಾದಿಗಳ ಶರೀರ ಭೂಮಿ ಭಕ್ಷಿಸುವುದಿಲ್ಲ.!!
ಅದೆಷ್ಟೋ ವರ್ಷಗಳ ನಂತರ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಆ ಶರೀರವನ್ನು ನಿಶ್ಚಯಿಸಲ್ಪಟ್ಟ ಸ್ಥಳದಲ್ಲಿ ಧಫನ ಮಾಡಿದರು .
ಆದ್ದರಿಂದಲೇ ಆದಂ ನಬಿಯವರ (ಅಸ) ಪ್ರಾರ್ಥನೆಯೂ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರಿಗೆ ಲಭಿಸಿತು.
*ಗುಲಾಮರಾದ ಸಂದರ್ಭ*
ಹಿಲ್ರ್ ನಬಿ ಒಂದು ದಾರಿಯಲ್ಲಿ ನಡೆಯುತ್ತಿರುವಾಗ ಎಲ್ಲಿದಲೋ ಬಂದ ಒಬ್ಬ ಭಿಕ್ಷುಕ ಹತ್ತಿರ ಬಂದು ಹೇಳಿದ "ನಿಶ್ಚಯಿಸಲ್ಪಟ್ಟ ದಿವಸದೊಳಗೆ ದೊಡ್ಡ ಮೊತ್ತ ಒಟ್ಟುಗೂಡಿಸಬೇಕಿದೆ ಅದಕ್ಕಾಗಿ ನೀವೇನಾದರೂ ನೀಡಬೇಕು , ಅಲ್ಲಾಹನು ನಿಮ್ಮನ್ನು ಅನುಗ್ರಹಿಸಲಿ.
ಹಿಲ್ರ್ ನಬಿ(ಅಸ) ಹೇಳಿದರು "ಅಲ್ಲಾಹನು ನಿಮ್ಮ ಕಾರ್ಯವನ್ನು ಸುಲಭಗೊಳಿಸಲಿ, ನಿಮಗೆ ನೀಡಲು ನನ್ನಲ್ಲಿ ಏನೂ ಇಲ್ಲ"
ಭಿಕ್ಷುಕ ಬಿಡುವಂತಿರಲಿಲ್ಲ "ಹಾಗೆ ಹೇಳಬಾರದು , ನೀವೊಬ್ಬರು ಒಳ್ಳೆಯ ವ್ಯಕ್ತಿಯಂತೆ ಕಾಣುತ್ತೀರಿ, ಆದ್ದರಿಂದಲೇ ನಾನು ನಿಮ್ಮನ್ನು ಸಮೀಪಿಸಿರುವೆ ನನ್ನ ಬರಿಗೈಯಲ್ಲಿ ಮರಳಿಸಬೇಡಿ" .
ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಮೊದಲು ಹೇಳಿದಂತೆಯೇ ಪುನಃ ಹೇಳಿದರು. ಆಗ ಆತ "ಅಲ್ಲಾಹನನ್ನು ಮುನ್ನಿಟ್ಟು ನಿಮ್ಮಲ್ಲಿ ಕೇಳುವೆನು ಏನಾದರೂ ನೀಡಲೇ ಬೇಕು"
ಈ ಬಾರಿ ಹಿಲ್ರ್ ನಬಿಯವರು ಸಿಕ್ಕಿಹಾಕಿಕೊಂಡರು , ಅಲ್ಲಾಹನನ್ನು ಮುಂದಿಟ್ಟು ಕೇಳಿರುತ್ತಾನೆ, ಏನಾದರೂ ಕೊಡಲೇ ಬೇಕು . ಕೊಡಲು ನನ್ನಲ್ಲಿ ಏನೂ ಇಲ್ಲ , ಕೊಡದೇ ಇರಲೂ ಸಾಧ್ಯವಿಲ್ಲ. ಏನು ಮಾಡಲಿ..?
ಕೊನೆಗೆ ಹಿಲ್ರ್ ನಬಿ ಅಲೈಹಿ ಸ್ಸಲಾಂ ಹೇಳಿದರು "ನೀನು ಅಲ್ಲಾಹನನ್ನು ಮುದಿಟ್ಟು ಕೇಳಿರುವೆ, ನಿನ್ನನ್ನು ಬರಿಗೈಯಲ್ಲಿ ಕಳುಹಿಸಲು ಸಾಧ್ಯವಿಲ್ಲ ಆದ್ದರಿಂದ ನೀನು ನನ್ನನ್ನು ಕೊಂಡುಹೋಗಿ ಸಂತೆಯಲ್ಲಿ ಮಾರಾಟಕ್ಕಿಡು" . ಆತ ಬಹಳ ಸಂತೋಷದಿಂದಲೇ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರೊಂದಿಗೆ ಸಂತೆಯ ಕಡೆಗೆ ನಡೆದ .
ಸಂತೆ ತಲುಪಿದರು ಮನುಷ್ಯರನ್ನು ಮೃಗಗಳಂತೆ ಮಾರಾಟ ಮಾಡುವ ಕಾಲವದು. ಹಿಲ್ರ್ ನಬಿಯವರನ್ನು ನಾನ್ನೂರ ಐವತ್ತು ಬೆಳ್ಳಿ ನಾಣ್ಯಕ್ಕೆ ಮಾರಿದನು. ಸಿಕ್ಕಿದ ಹಣದೊಂದಿಗೆ ಆತ ನಗುತ್ತಲೇ ಸಂತೋಷದಿಂದ ಹೊರಟ .
ಹಿಲ್ರ್ ನಬಿ ಅಲೈಹಿ ಸ್ಸಲಾಂ ತನ್ನನ್ನು ಖರೀದಿಸಿದ ಹೊಸ ಯಜಮಾನನೊಂದಿಗೆ ಹೊರಟರು . ಎಲ್ಲವೂ ಜಗದೊಡೆಯನ ವಿಧಿ ಎನ್ನುತ್ತಾ ಕ್ಷಮಿಸಿದರು.
ಮನೆಗೆ ತಲುಪಿದ ಯಜಮಾನ ತನ್ನ ಗುಲಾಮರಾದ ಹಿಲ್ರ್ ನಬಿಯವರಿಗೆ ಯಾವುದೇ ಕೆಲಸವನ್ನು ನೀಡಲಿಲ್ಲ . ದಿನ ಕಳೆಯುತ್ತಲಿತ್ತು , ಯಾವುದೇ ಕೆಲಸಗಳಿಲ್ಲದೆ ಸುಮ್ಮನೆ ಕೂರುವುದೇ ದನಚರಿಯಂತಾಯಿತು .
ಒಮ್ಮೆ ಹಿಲ್ರ್ ನಬಿ ಅಲೈಹಿ ಸ್ಸಲಾಂ ಯಜಮಾನನಲ್ಲಿ ಕೇಳಿದರು "ನೀವು ನನ್ನನ್ನು ಹಣ ಕೊಟ್ಟು ಖರೀದಿಸಿರುವಿರಿ , ಮತ್ಯಾಕೆ ನನಗೆ ಯಾವುದೇ ಕೆಲಸ ನೀಡುತ್ತಿಲ್ಲ..?" .
ಯಜಮಾನ "ನೀವು ವೃದ್ಧರಲ್ಲವೇ...ಹಾಗಿರುವಾಗ ನಿಮಗೆ ತೊಂದರೆ ಕೊಡುವುದು ನನಗಿಷ್ಟವಿಲ್ಲ" ಎಂದಾಗ ,
ಹಿಲ್ರ್ ನಬಿ ಅಲೈಹಿ ಸ್ಸಲಾಂ ಹೇಳಿದರು "ನನಗೇನೂ ತೊಂದರೆ ಇಲ್ಲ ಯಾವ ಕೆಲಸ ಬೇಕಾದರೂ ನಾನು ಮಾಡಬಲ್ಲೆ" .
ಯಜಮಾನ "ಹಾಗಾದರೆ ಈ ಕಲ್ಲುಗಳನ್ನು ಮನೆಯ ಹಿಂದೆ ಕೊಂಡುಹೋಗಿ ಇಡು" .
ತಲೆದೂಗುತ್ತಾ ತನ್ನ ಕೆಲಸದತ್ತ ಹೊರಟ ಹಿಲ್ರ್ ನಬಿಯವರು ಶಕ್ತರಾದ ಆರು ಜನರು ದಿನ ಪೂರ್ತಿ ಮಾಡಬೇಕಾದ ಕೆಲಸ ಒಂದು ಗಂಟೆಯಲ್ಲಿ ಅಲ್ಲಾಹನ ಮಲಕಿನ ಸಹಾಯದೊಂದಿಗೆ ಪೂರ್ತಿಗೊಳಿಸಿ ಯಜಮಾನನನ್ನು ಸಮೀಪಿಸಿ "ನೀವು ಹೇಳಿದ ಕೆಲಸ ಪೂರ್ತಿ ಮಾಡಿ ಆಯಿತು" ಎಂದಾಗ ಯಜಮಾನನಿಗೆ ಆಶ್ಚರ್ಯವಾಯಿತು.
ಈ ವ್ಯಕ್ತಿ ಸಾಮಾನ್ಯ ವ್ಯಕ್ತಿ ಆಗಿರಲಾರ....! ಮರುದಿನ ಯಜಮಾನನು ಹೇಳಿದನು "ನೀವು ವಿಶ್ವಾಸ ಯೋಗ್ಯರೆಂದು ಮನದಟ್ಟಾಗಿದೆ . ನಾಳೆ ನಾನು ಪ್ರಯಾಣ ಹೊರಡುತ್ತಿರುವೆನು , ನಾನು ಮರಳಿ ಬರುವ ತನಕ ಮನೆ ಮತ್ತು ಮನೆಯವರನ್ನು ಚೆನ್ನಾಗಿ ನೋಡಬೇಕು" .
ಹಿಲ್ರ್ ನಬಿ "ಅದರ ಒಟ್ಟಿಗೆ ಏನಾದರೂ ಕೆಲಸವೂ ನೀಡುತ್ತಿದ್ದರೆ ಒಳ್ಳೆಯದಾಗುತ್ತಿತ್ತು" . ಯಜಮಾನ "ಅದು ನಿಮಗೆ ತೊಂದರೆ ಅಲ್ಲವೇ..? ಒಳ್ಳೆಯವರಾದ ನಿಮಗೆ ತೊಂದರೆ ನೀಡಲು ನಾನು ಇಷ್ಟಪಡುವುದಿಲ್ಲ" ಎಂದಾಗ , ಹಿಲ್ರ್ ನಬಿ "ನನಗೇನೂ ತೊಂದರೆ ಇಲ್ಲ ಕೆಲಸವೇನೆಂದು ಹೇಳಿದರೆ ಸಾಕು" .
ಯಜಮಾನ "ಹಾಗಾದರೆ ಸ್ವಲ್ಪ ಇಟ್ಟಿಗೆಗಳನ್ನು ತಯಾರಿಸಿಡು , ನಾನು ಮರಳಿದ ನಂತರ ಒಂದು ಮನೆ ಕಟ್ಟುವ ಉದ್ದೇಶವಿದೆ" . ಯಜಮಾನನನ್ನು ಪ್ರೀತಿಯಿಂದಲೇ ಕಳುಹಿಸಿಕೊಟ್ಟಿದ್ದರು .
ಹಲವು ದಿನಗಳ ಬಳಿಕ ಮರಳಿದ ಯಜಮಾನ ನಿಗೆ ತನ್ನ ಕಣ್ಣುಗಳನ್ನೇ ನಂಬಲಾರದಂತಾದರು . ತನ್ನ ಕಣ್ಣ ಮುಂದೆ ಕಂಗೊಳಿಸುತ್ತಿರುವ ಅತಿ ಸುಂದರವಾದ ಮನೆ ಅದೂ ಅಲ್ಪಾವದಿಯಲ್ಲಿ ನಿರ್ಮಿಸಲ್ಪಟ್ಟಿದೆ. ಇಟ್ಟಿಗೆಗಳನ್ನು ತಯಾರಿಸಿಡಲು ಹೇಳದಾಗ ತನ್ನ ಗುಲಾಮ ಇಟ್ಟಿಗೆ ತರಾರಿಸಿದ್ದಲ್ಲದೆ , ಮನೆಯನ್ನೂ ನಿರ್ಮಿಸಿಟ್ಟಿದ್ದಾನೆ . ಇದೇನಿದು..! ಮಹಾಶ್ಚರ್ಯ...! , ಅದೂ ಹತ್ತು ಹದಿನೈದು ಮಂದಿ ತಿಂಗಳು ಗಟ್ಟಲೆಯಲ್ಲಿ ಮಾಡಬೇಕಾದ ಕಾರ್ಯ , ಈತ ಒಬ್ಬನೇ ಒಂದೆರಡು ದಿನಗಳಲ್ಲಿ ಮಾಡಿ ಮುಗಿಸಿದ್ದಾನೆ, ಈತ ಸಾಮಾನ್ಯ ವ್ಯಕ್ತಿ ಆಗಿರಲು ಸಾಧ್ಯವೇ ಇಲ್ಲ, ಈ ವ್ಯಕ್ತಿ ಯಾರಾಗಿರಬಹುದು..?
*ಗುಲಾಮ ಮುಕ್ತಿ*
ತಾನು ನೆನೆಸಿರುವುದಕ್ಕಿಂತಲೂ ಅಂದವಾದ ಮನೆ , ಇಷ್ಟು ಕಡಿಮೆ ಸಮಯದಲ್ಲಿ ಇವರಿಂದ ಇದನ್ನು ನಿರ್ಮಿಸಲು ಹೇಗೆ ಸಾಧ್ಯವಾಯಿತು ಎಂದು ಯಜಮಾನನಿಗೆ ಆಶ್ಚರ್ಯವಾಯಿತು.
ಮೊದಲೇ ಇವರಲ್ಲಿ ಸಂಶಯವಿದ್ದಿರೂವುದರಿಂದ ಇವರು ಸಾಮಾನ್ಯ ವ್ಯಕ್ತಿಯಲ್ಲವೆಂದು ಯಜಮಾನನಿಗೆ ಮನದಟ್ಟಾಯಿತು.
ಇನ್ನು ಕಾಯೂವುದು ಬೇಡ ಅವರಲ್ಲೇ ಕೇಳೋಣವೆಂದು , ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರನ್ನು ಕರೆದು "ನೀವೂ ಸಾಮಾನ್ಯ ವ್ಯಕ್ತಿಯಲ್ಲವೆಂದು ನನಗೆ ಮೊದಲೇ ಸಂಶಯವಿತ್ತು ಈಗ ಅದು ದುಪ್ಪಟ್ಟಾಯಿತು. ನಿಜವಾಗಿ ನೀವು ಯಾರು..?" .
ಹಿಲ್ರ್ ನಬಿ "ಯಜಮಾನರೆ ನಿಮಗೆ ಸಂಶಯವೇಕೆ ನಾನು ನಿಮ್ಮ ಗುಲಾಮ" ಎಂದರು . ಯಜಮಾನ "ಅಲ್ಲಾಹನನ್ನು ಸಾಕ್ಷಿಯಾಗಿಸಿ ಕೇಳುತ್ತಿರುವೆ ಸತ್ಯ ಹೇಳು" .
ಈಗ ಸತ್ಯವನ್ನು ಹೇಳಲೇ ಬೇಕಾದ ಅವಸ್ಥೆ ಅವರು ನಡೆದ ಘಟನೆಗಳನ್ನು ವಿವರಿಸಿದರು .
ವಿವರಣೆಯನ್ನು ಕೇಳಿದ ಯಜಮಾನ ಹಿಲ್ರ್ ನಬಿಯವರನ್ನು ಬಿಗಿಯಾಗಿ ಅಪ್ಪಿಕೊಂಡು ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿದರು . ಹಿಲ್ರ್ ನಬಿಯವರು ಯಜಮಾನನನ್ನು ಪಕ್ಕಕ್ಕೆ ಸೇರಿಸಿ ನೀವು ಕ್ಷಮೆ ಕೇಳುವ ಅಗತ್ಯವಿಲ್ಲ , ನನಗೆ ನಿಮ್ಮಿಂದ ಏನಾದರೂ ತೊಂದರೆ ಆಗಿದ್ದರೆ ತಾನೆ . ಇಷ್ಟು ದಿನ ನೀವು ನನಗೆ ಯಾವುದೇ ರೀತಿಯ ಕಿರುಕುಳವಾಗಲೀ , ಅಕ್ರಮಗಳಾಗಲೀ ಮಾಡಲಿಲ್ಲ ..!
ಯಜಮಾನ "ಹಳೆಯ ಘಟನೆಗಳನ್ನು ಮರೆತು ನೀವು ನನ್ನೊಂದಿಗೆ ಇಲ್ಲಿ ಕಳೆಯಿರಿ , ನನ್ನ ಸಂಪತ್ತನ್ನು ನಿಮಗೆ ನಾ ನೀಡುವೆ ನಿಮ್ಮಿಷ್ಟದಂತೆ ಉಪಯೋಗಿಸಬಹುದು ನಿಮ್ಮೊಂದಿಗೆ ಜೀವನ ನಡೆಸುವುದು ನನ್ನಂಥವರ ಭಾಗ್ಯವಾಗಿದೆ" ಎಂದು ಹೇಳಿದರು . ಇನ್ನು ತನ್ನ ಮುಂದಿನ ಜೀವನ ಇವರೊಂದಿಗೆ ಕಳಯಬಹುದೆಂದು ಭಾವಿಸಿ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರ ಪ್ರತಿಕ್ರಿಯೆಗಾಗಿ ಅವರ ಮುಖವನ್ನು ನೋಡಿದರು . ರಾಜ ಮನೆತನದಲ್ಲಿನ ಸುಖ ಸೌಕರ್ಯಗಳನ್ನೇ ತೊರೆದು ಅಲ್ಲಾಹನ ಆರಾಧನೆಗೆ ಜೀವನವನ್ನು ಸಮರ್ಪಿಸಿದ ಆ ಮಹಾ ಮನೀಷಿ ಮಂದಹಾಸ ಬೀರುತ್ತಾ ಹೇಳಿದರು "ನಶ್ವರವಾದ ಇಹಲೋಕದ ಯಾವುದೇ ಸಂಪತ್ತನ್ನು ನಾನು ಮೋಹಿಸಿಲ್ಲ..! , ಅಲ್ಲಾಹನ ಧ್ಯಾನದಲ್ಲಿ ನನ್ನ ಜೀವನ ಕಳೆಯುವುದನ್ನು ನಾನು ಇಷ್ಟಪಡುತ್ತೇನೆ. ಅದಕ್ಕೆ ಆನುಕೂಲ ಆಗುವಂತೆ ನನ್ನನ್ನು ಬಿಡುಗಡೆ ಗೊಳಿಸಿದರೆ ದೊಡ್ಡ ಉಪಕಾರವಾಗುತ್ತಿತ್ತು . ಎಂದು ಹೇಳಿದರು . ಅವರಿಂದ ಅಗಲುವುದು ಇಷ್ಟವಿಲ್ಲದಿದ್ದರೂ ಅವರ, ಸಂತೋಷಕ್ಕೆ ತನ್ನಿಂದ ಯಾವುದೇ ರೀತಿಯ ತೊಂದರೆ ಉಂಟಾಗಬಾರದೆಂದು ಭಾವಿಸಿ ಯಜಮಾನನು ಅವರನ್ನು ಅವರು ಹೇಳಿದಂತೆ ಸ್ವತಂತ್ರ ಗೊಳಿಸಿದನು . ತನ್ನನ್ನು ಮುಕ್ತಗೊಳಿಸಿದ ಯಜಮಾನನಿಗೆ ಕೃತಜ್ಞತೆ ಅರ್ಪಿಸುತ್ತಾ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಮುಂದೆ ಸಾಗಿದರು .
*ಮೂಸಾ ನಬಿಯವರ ಗುರು*
ಒಮ್ಮೆ ಹಝ್ರತ್ ಮೂಸಾ (ಅಸ) ರು ಬನೂ ಇಸ್ರಾಈಲ್ ಜನತೆಗೆ ಉಪದೇಶ ನೀಡುತ್ತಿದ್ದರು . ಮಧ್ಯೆ ಸಭಿಕರಲ್ಲಿ ಒಬ್ಬರು ಮೂಸಾ ನಬಿಯವರಲ್ಲಿ ಕೇಳಿದರು "ಓ ಪ್ರವಾದಿಯವರೇ ನಿಮಗಿಂತಲೂ ಹೆಚ್ಚು ತಿಳಿದವರು ಯಾರಾದರೂ ಇಂದು ಜೀವಿಸಿರುವರೇ...?" . ಮೂಸಾ ನೆಬಿಯವರು ನನಗೆ ತಿಳಿದಿಲ್ಲ ಅಲ್ಲಾಹನಿಗೇ ಗೊತ್ತು ಅನ್ನುವ ಬದಲು "ಇಲ್ಲ" ಎಂದು ಉತ್ತರಿಸಿದರು. ಆ ಸಂದರ್ಭದಲ್ಲಿ ಅಲ್ಲಾಹನು ಮೂಸಾ ನಬಿಯವರಿಗೆ ದಿವ್ಯ ಸಂದೇಶ ನೀಡುತ್ತಾ "ಮೂಸಾ... ನಿನಗಿಂತಲೂ ತಿಳಿದ ಒಬ್ಬ ದಾಸ ನನಗಿದ್ದಾನೆ, ಎರಡು ಸಮುದ್ರಗಳು ಸಂಗಮಿಸುವ ಜಾಗದಲ್ಲಿ ಅವರಿದ್ದಾರೆ"
ಮೂಸಾ: "ಅವರನ್ನು ಸಮೀಪಿಸಲು ಏನಾದರೂ ಒಂದು ದಾರಿ ತೋರಿಸುವೆಯಾ..?"
ಅಲ್ಲಾಹನ ಆಜ್ಞೆ "ಮೂಸಾ ನೀನೊಂದು ಮೀನನ್ನು ಬೇಯಿಸಿ ಬುಟ್ಟಿಯಲ್ಲಿಟ್ಟು ಸಮುದ್ರ ತೀರದಲ್ಲಿ ನಡೆದುಕೊಂಡು ಹೋಗು , ನಿನ್ನ ಬುಟ್ಟಿಯಲ್ಲಿರುವ ಮೀನು ನಿನ್ನಿಂದ ಎಲ್ಲಿ ನಷ್ಟವಾಗುತ್ತದೆ ಅಲ್ಲಿ ನೀನು ಅವರನ್ನು ಸಂಧಿಸುವೆ" .
ಮೂಸಾ ನಬಿಯವರು ಅಲ್ಲಾಹನ ಆಜ್ಞೆಯಂತೆ ಮೀನನ್ನು ಬೇಯಿಸಿ ಬುಟ್ಟಿಯಲ್ಲಿಟ್ಟುಕೊಂಡು ತನ್ನ ಶಿಷ್ಯ ಯೂಶಅ ಇಬ್ನು ನೂರಾನಿನೊಂದಿಗೆ ಸಮುದ್ರ ತೀರದಲ್ಲಿ ನಡೆಯುತ್ತಾ ಸಾಗಿದರು . ತುಂಬಾ ಹೊತ್ತು ನಡೆದ ನಂತರ ಮೀನಿರುವ ಬುಟ್ಟಿಯನ್ನು ತನ್ನ ಶಿಷ್ಯನಲ್ಲಿ ನೀಡಿ , ವಿಶ್ರಮಿಸಲು ಒಂದು ಬಂಡೆಯ ಸಮೀಪ ಹೋಗಿ ಮಲಗಿದರು .
ಸ್ವಲ್ಪ ಹೊತ್ತಿನ ನಂತರ ಆ ಮೀನಿಗೆ ಜೀವ ಬಂತು, ಬುಟ್ಟಿಯಿಂದ ಜಿಗಿದು ಸಮುದ್ರಕ್ಕೆ ಹಾರಿ ಸಮುದ್ರದಲ್ಲಿ ಮರೆಯಾಯಿತು. ಅದು ಹೋದ ದಾರಿಯಲ್ಲಿ ಒಂದು ಗುಹೆ ಗೋಚರವಾಯ್ತು. ಇದೆಲ್ಲವನ್ನು ನೋಡುತ್ತಿದ್ದ ಮೂಸಾ ನಬಿಯವರ ಶಿಷ್ಯ ನಿದ್ದೆಯಲ್ಲಿರುವ ಗುರುವನ್ನು ಎಬ್ಬಿಸುವುದು ಸರಿಯಲ್ಲವೆಂದು ಭಾವಿಸಿ, ಅಚ್ಚರಿಯಿಂದ ಹೊರಬರಲಾಗದೆ ನಿಶ್ಚಲರಾದರು. ಗುರು ನಿದ್ದೆಯಿಂದ ಎದ್ದ ನಂತರ ಹೇಳೋಣವೆಂದು, ಗುರು ಏಳುವುದನ್ನು ಕಾದು ಕುಳಿತರು.
ಆದರೆ ಮೂಸಾ ನಬಿಯವರು ಏಳುವಾಗ ಶಿಷ್ಯನಿಗೆ ಆ ಸಂಭವ ಹೇಳಲು ಮರೆತು ಹೋಯಿತು . ಮೂಸಾ(ಅಸ) ಎದ್ದ ಕೂಡಲೇ ಮುಂದೆ ನಡೆಯಲು ಶುರುಮಾಡಿದರು.
ನಡೆದು ನಡೆದು ಸುಸ್ತಾದಾಗ ಶಿಷ್ಯನಲ್ಲಿ ಆಹಾರವನ್ನು ಕೇಳಿದರು ಆಗ ಶಿಷ್ಯನಿಗೆ ಮೀನಿನ ನೆನಪಾಯಿತು . ನಡೆದ ಘಟನೆಯನ್ನು ವಿವರಿಸಿದರು. ಎಲ್ಲವನ್ನೂ ಕೇಳಿಸಿಕೊಂಡು ಮೂಸಾ ನಬಿಯವರು ಬಂದ ದಾರಿಯಲ್ಲೇ ಹಿಂದೆ ನಡೆದರು. ಅವರು ಮೊದಲು ತಂಗಿದ ಜಾಗ ತಲುಪಿದಾಗ ಅಲ್ಲಿ ವಯಸ್ಸಾದ ಒಬ್ಬರು ಕುಳಿತಿರುವುದನ್ನು ಗಮನಿಸಿ ಅವರನ್ನು ಸಮೀಪಿಸಿ ಸಲಾಂ ಹೇಳಿದರು. ಅದು ಅವರು ಹುಡುಕುತ್ತಿರುವ ಹಿಲ್ರ್ ನಬಿ ಎಂದು ಅರಿವಾದಾಗ, ಮೂಸಾ ನಬಿಯವರು ತನ್ನ ಶಿಷ್ಯನನ್ನು ಕಳುಹಿಸಿ, ಹಿಲ್ರ್ ನಬಿಯವರ ಸಮೀಪ ಬಂದರು . ಯಾರು ಎಂಬಂತೆ ಮೂಸಾ ನಬಿಯನ್ನು ನೋಡಿದಾಗ , ಮೂಸಾ ನಬಿಯವರು "ನಾನು ಮೂಸಾ ನಬಿ" ಎಂದು ಹೇಳಿದಾಗ, ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಬನೂ ಇಸ್ರಾಈಲ್ ಜನತೆಗೆ ಗುರು ಮೂಸರೇನೋ...? , ಅವರು ಹೌದೆಂಬಂತೆ ತಲೆದೂಗಿದರು.
ಹಿಲ್ರ್ ನಬಿ ಅಲೈಹಿ ಸ್ಸಲಾಂ ಬಂದಿರುವ ಕಾರಣವನ್ನು ಕೇಳಿದರು. ಮೂಸಾ (ಅಸ) ರು "ನಿಮ್ಮಿಂದ ಏನಾದರೂ ಕಲಿಯಬೇಕು , ಅದಕ್ಕಾಗಿ ನಾನು ಬಂದಿರುವೆ" . ಹಿಲ್ರ್ ನಬಿಯವರು "ನಿನಗೆ ನನ್ನೊಂದಿಗೆ ಕ್ಷಮೆಯಿಂದ ನಡೆಯಲು ಸಾಧ್ಯವೇ..?"
ಮೂಸಾ ನಬಿಯವರು "ಇನ್ಷಾಅಲ್ಲಾಹ್..! ನಾನು ಕ್ಷಮೆ ಉಳ್ಳವನಾಗುವೆ , ನಿಮಗೆ ವಿರುದ್ದವಾಗಿ ನಾನು ನಡೆದು ಕೊಳ್ಳವುದಿಲ್ಲ" . ಹಿಲ್ರ್ ನಬಿಯವರು "ಹಾಗಾದರೆ ಸರಿ.. ನಾನಾಗಿಯೇ ವಿವರಿಸುವ ವರೆಗೆ ನಾನು ಮಾಡುವ ಕೆಲಸಗಳ ಕುರಿತು ಯಾವುದೇ ಕಾರಣಕ್ಕೂ ನನ್ನಲ್ಲಿ ಕೇಳಬಾರದು" . ಮೂಸಾ ನೆಬಿಯವರು ಒಪ್ಪಿದರು.
ಹಿಲ್ರ್ ನಬಿ ಅಲೈಹಿ ಸ್ಸಲಾಂ ಎದ್ದು ನಿಂತು ಸಮುದ್ರ ತೀರದಲ್ಲಿ ನಡೆಯ ಹೊರಟರು. ಅವರ ಹಿಂದೆ ಹಝ್ರತ್ ಮೂಸಾ (ಅಸ) ರು ಒಬ್ಬ ಶಿಷ್ಯನಂತೆ ಅವರನ್ನು ಹಿಂಬಾಲಿಸಿದರು.
*ಹಡಗಿನಲ್ಲಿ ಪ್ರಯಾಣ*
ನಡೆಯುತ್ತಾ ದೂರ ತಲುಪಿದಾಗ ಅಲ್ಲಿ ಒಂದು ಹಡಗು ನಿಂತಿತ್ತು. ತಮ್ಮನ್ನು ಕೂಡಾ ಹಡಗಿನಲ್ಲಿ ಹತ್ತಿಸಿಕೊಳ್ಳಿ ಎಂದು ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಹಡಗಿನಲ್ಲಿ ಇರುವವರಲ್ಲಿ ಕೇಳಿಕೊಂಡಾಗ ಹಿಲ್ರ್ ನಬಿಯವರನ್ನು ಪರಿಚಯವಿದ್ದ ಆ ನಾವಿಕರು ಯಾವುದೇ ಶುಲ್ಕವನ್ನು ಕೇಳದೆ ಹತ್ತಿಸಿಕೊಂಡರು. ಅವರನ್ನೊಳಗೊಂಡ ಹಡಗು ಇತರ ಪ್ರಯಾಣಿಕರೊಂದಿಗೆ ಮುಂದೆ ಸಾಗಿತು.
ಸ್ವಲ್ಪ ದೂರ ತಲುಪಿರಬಹುದು ಹಿಲ್ರ್ ನಬಿ ಅಲೈಹಿ ಸ್ಸಲಾಂ ತಮ್ಮ ಕೈಯ್ಯಲ್ಲಿದ್ದ ಕೊಡಲಿಯಿಂದ ಹಡಗಿನ ಮಧ್ಯದ ಹಲಗೆಯನ್ನು ತುಂಡರಿಸಿದರು . ಇದನ್ನು ಕಂಡ ಮೂಸಾ ನಬಿಯವರು ಮೊದಲೇ ಮಾಡಿದ್ದ ಒಪ್ಪಂದವನ್ನು ಮರೆತು ಕೇಳಿದರು "ನಮ್ಮಿಂದ ಯಾವುದೇ ಹಣವನ್ನೂ ಪಡೆಯದೆ ಹತ್ತಿಸಿದರು , ಅಂತಿದ್ದೂ ನೀವು ಈಗ ಮಾಡಿರುವುದು ಅನ್ಯಾಯವಲ್ಲವೇ..? ನಮ್ಮೊಡನೆ ಈ ಹಡಗಿನಲ್ಲಿರುವ ಪ್ರಯಾಣಿಕರೂ ಸಾಯುವುದಿಲ್ಲವೇ...? ಎಂತಹ ಕೆಲಸ ಮಾಡಿದ್ದೀರಿ ನೀವು....!!?" . ಹಿಲ್ರ್ ನಬಿಯವರು ಶಾಂತರಾಗಿಯೇ ಪ್ರತಿಕ್ರಿಯೆ ನೀಡಿದರು "ನಾನು ಹೇಳಿರಲಿಲ್ಲವೇ..ನಿನ್ನಿಂದ ಕ್ಷಮಿಸಲು ಸಾಧ್ಯವಿಲ್ಲವೆಂದು" .
ಮೂಸಾ ನಬಿಯವರಿಗೆ ತಮ್ಮ ತಪ್ಪಿನ ಅರಿವಾಯಿತು ಅವರು "ನಾನದನ್ನು ಮರೆತುಹೋದೆನು , ಈ ಕಾರಣದಿಂದ ನನ್ನನ್ನು ಉಪೇಕ್ಕಿಸಬೇಡಿ..!" ಎಂದು ಬೇಡಿಕೊಂಡರು.
ಹಡಗಿನ ಒಂದು ಹಲಗೆ ತುಂಡಾಗಿರುವುದನ್ನು ಕಂಡ ನಾವಿಕನು ಹಡಗನ್ನು ಹತ್ತಿರದ ತೀರಕ್ಕೆ ಸೇರಿಸಿದನು. ಈ ಸಂದರ್ಭದಲ್ಲಿ ಅವರಿಬ್ಬರೂ ಹಡಗಿನಿಂದ ಇಳಿದು ಮುಂದೆ ನಡೆದರು .
ನಡೆಯುತ್ತಿದ್ದಂತೆ ಒಂದು ಹಕ್ಕಿ ಸಮುದ್ರದಿಂದ ನೀರನ್ನು ಅದರ ಬಾಯಿಗೆ ತುಂಬಿಸುತ್ತಿರುವ ದೃಶ್ಯವನ್ನು ಕಂಡರು. ಹಿಲ್ರ್ ನಬಿಯವರು "ಮೂಸಾ....ಅಲ್ಲಾಹನ ಜ್ಞಾನದೊಂದಿಗೆ ಹೋಲಿಸಿದರೆ ವಿಶಾಲವಾದ ಸಮುದ್ರದಿಂದ ಆ ಹಕ್ಕಿ ಪಡೆಯುತ್ತಿರುವಷ್ಟು ತೂಕದ ಜ್ಞಾನವೇ ನಾವಿಬ್ಬರಿಗೂ ಇರುವುದು" . ಮೂಸಾ ನಬಿಯವರಿಗೆ ವಿಶಯದ ಅರಿವಾಯಿತು .
*ಪುನಃ ಒಪ್ಪಂದಗಳ ಉಲ್ಲಂಘನೆ*
ಪಯಣ ಮುಂದುವರೆಯುತ್ತಾ ಸುಮಾರು ದೂರ ತಲುಪಿದಾಗ, ಚಿಕ್ಕ ಮಕ್ಕಳು ಆಟವಾಡೂವುದನ್ನು ಕಂಡರು. ಹಿಲ್ರ್ ನಬಿಯವರು ಅದರಲ್ಲಿದ್ದ ಒಂದು ಮಗುವನ್ನು ಕರೆದರು . ಬಳಿಗೆ ಬಂದ ಮಗುವಿನ ತಲೆಹಿಡಿದು ತನ್ನ ಕೈಯ್ಯಿದಲೇ ತಿರುಚಿ ರುಂಡವನ್ನು ತೆಗೆದು , ಯಾರಾದರೂ ನೋಡುವುದಕ್ಕೂ ಮುಂಚೆ ಅವರಿಬ್ಬರೂ ಅಲ್ಲಿಂದ ಕಾಲ್ಕಿತ್ತರು . ಇದನ್ನು ಕಂಡ ಮೂಸಾ ನಬಿಗೆ ಈ ಬಾರಿಯೂ ಸಹಿಸಲಾಗದೆ ಅವರಲ್ಲಿ "ಯಾವುದೇ ತಪ್ಪನ್ನು ಮಾಡದ ಈ ಚಿಕ್ಕ ಮಗುನ್ನು ವಿನಾ ಕಾರಣ ನೀವು ಕೊಂದು ಹಾಕಿದಿರಲ್ಲವೋ...! ನೀವು ಮಾಡಿರುವುದು ಘೋರ ಅಪರಾಧವಲ್ಲವೇ...!?" ಎಂದು ಕೇಳಿಯೇ ಬಿಟ್ಟರು. ಈ ಸಲ ಹಿಲ್ರ್ ನಬಿಯವರು ಕೋಪದಿಂದಲೇ "ನಾನು ಮೊದಲೇ ನಿನ್ನಲ್ಲಿ ಹೇಳಲಿಲ್ಲವೇ...!? ನಿನಗೆ ನನ್ನೊಂದಿಗೆ ಕ್ಷಮಿಸಲು ಸಾಧ್ಯವಿಲ್ಲವೆಂದು" .
ಮೂಸಾ ನಬಿಯವರು ತಲೆತಗ್ಗಿಸಿ ಈ ಬಾರಿಯೂ ನನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡರು ,ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಮೌನವಾಗಿಯೇ ಮುಂದೆ ಸಾಗಿದರು .
ಅವರು ನಡೆಯುತ್ತಾ ಶಾಮಿನ ಅಂದಾಕ್ಯ ಎಂಬ ಪ್ರದೇಶ ತಲುಪಿದರು . ದೀರ್ಘ ಪ್ರಯಾಣದಿಂದ ಆಯಾಸಗೊಂಡು , ಹಸಿವು ಉಂಟಾಗತೊಡಗಿತು . ಅವರು ಆ ಊರಿನವರಲ್ಲಿ ಆಹಾರವನ್ನು ಕೇಳಿದರು , ಆದರೆ ಯಾರು ಕೂಡಾ ಆಹಾರ ನೀಡಲಿಲ್ಲ .
ಮೂಸಾ ನಬಿಯವರಿಗೆ ಕೋಪ ತಾಳಲಾರದೆ ಏನೋ ಹೇಳಬೇಕೆನ್ನುವಷ್ಟರಲ್ಲಿ , ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಪಕ್ಕದಲ್ಲೆ ಕುಸಿದು ಬಿದ್ದಿರುವ ಗೋಡೆಯೊಂದನ್ನು ಸರಿಪಡಿಸತೊಡಗಿದರು , ಸ್ವಲ್ಪ ಸಮಯದಲ್ಲೇ ಅದು ಪೂರ್ತಿಯಾಯಿತು . ಇದನ್ನು ಕಂಡ ಮೂಸಾ ನಬಿಯವರು ಮೊದಲೇ ಮಾಡಿದ್ದ ಒಪ್ಪಂದವನ್ನು ಮರೆತು ಪುನಃ ಹೇಳಿದರು "ನಮಗೆ ಆಹಾರ ನೀಡಲು ಹಿಂಜರಿದ ಇವರ ಗೋಡೆಯನ್ನು ಸರಿಪಡಿಸಿ ಕೊಡುತ್ತಿದ್ದೀರಲ್ಲವೇ...? ನಿಮಗೆ ಏನಾಗಿದೆ..?"
ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರಿಗೆ ಹೇಳಿದರು "ಮೂಸಾ.... ನಾವು ಪರಸ್ಪರ ಬಿಟ್ಟು ಹೋಗುವ ಸಮಯವಾಯಿತು , ಇನ್ನು ನಿನಗೆ ನಿನ್ನ ದಾರಿ , ನಾನು ನನ್ನ ದಾರಿಯತ್ತ . ನಿನಗೆ ನನ್ನನ್ನು ಕ್ಷಮಿಸಲು ಸಾಧ್ಯವಾಗದ ಆ ವಿಷಯಗಳನ್ನು ನಾನು ನಿನಗೆ ವಿವರಿಸುತ್ತೇನೆ.
*ಹಿಲ್ರ್ ನಬಿಯವರ ವಿವರಣೆ*
ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ವಿವರಿಸಿದರು "ಮೊದಲು ನಾವು ಹತ್ತಿದ ಹಡಗು , ಅದು ಒಂದೆರಡು ಬಡ ಯುವಕರು ಸೇರಿದ ಹಡಗಾಗಿದೆ . ಅವರು ಹೋಗುತ್ತಿರುವ ದಾರಿಯಲ್ಲಿ ಒಬ್ಬ ಅಕ್ರಮಿಯಾದ ರಾಜನಿದ್ದಾನೆ . ಅವನಿಗೆ ಒಳ್ಳೆಯ ಹಡಗುಗಳನ್ನು ಕಂಡರೆ ಅವನು ಅದನ್ನು ಅವರಿಂದ ಕಿತ್ತುಕೊಳ್ಳುತ್ತಿದ್ದ , ಏನಾದರೂ ಲೋಪಗಳಿರುವ ಹಡಗಾದರೆ ಹಾಗೆಯೇ ಬಿಡುತ್ತಿದ್ದ . ನಾವು ಹತ್ತಿದ ಹಡಗು ಸುಂದರವಾದ ಹಡಗಾಗಿತ್ತು ಅದೇನಾದರೂ ಅವರ ಕಣ್ಣಿಗೆ ಕಂಡರೆ ಖಂಡಿತವಾಗಿಯೂ ಅವರು ಅದನ್ನು ವಶಪಡಿಸಿಕೊಳ್ಳುತ್ತಿದ್ದರು . ಅದಕ್ಕಾಗಿಯೇ ನಾನು ಅದರ ಹಲಗೆಯನ್ನು ಒಡೆದು ಹಾಕಿದೆನು. ಹಡಗಿನ ಮಧ್ಯೆ ಒಡೆದಿರುವುದನ್ನು ಖಂಡರೆ ಅವರು ಅದನ್ನು ಹಾಗೇಯೇ ಬಿಡುವರು. ಹಡಗಿನ ಯುವಕರಿಗೆ ಮುಂದೆ ಆದರೂ ಅದನ್ನು ಸರಿಪಡಿಸಬಹುದಲ್ಲವೇ" .
ಅವರು ತಮ್ಮ ವಿವರಣೆ ಮುಂದುವರಿಸುತ್ತಾ...
"ಮತ್ತೆ ನಾನೊಂದು ಮಗುವನ್ನು ಕೊಂದು ಹಾಕಿದೆ"
"ಆ ಮಗುವಿನ ತಂದೆತಾಯಿ ಸತ್ಯ ವಿಶ್ವಾಸಿಗಳಾಗಿದ್ದಾರೆ . ಈ ಮಗು ಬೆಳೆದು ದೊಡ್ಡವನಾದರೆ ಆ ತಂದೆ ತಾಯಿ ಅವಿಶ್ವಾಸಿಗಳಾಗಲು ಸಾಧ್ಯತೆಯಿದೆ . ಇದು ಮೊದಲೇ ನನಗೆ ತಿಳಿದಿರುವುದರಿಂದಲೇ ನಾನು ಆ ಮಗುವನ್ನು ಕೊಂದು ಹಾಕಿದೆ . ಇದರಿಂದ ಆ ತಂದೆ ತಾಯಿ ವಿಶ್ವಾಸಿಗಳಾಗಿಯೇ ಉಳಿದರು ಮತ್ತು ಅವರು ನರಕ ಶಿಕ್ಷೆಯಿಂದಲೂ ಪಾರಾದರು. ಅದಲ್ಲದೆ ಆ ದಂಪತಿಗಳಿಗೆ ಈ ಮಗುವಿಗಿಂತಲೂ ಒಳ್ಳೆಯ ಒಂದು ಮಗುವನ್ನು ಅಲ್ಲಾಹನು ಕರುಣಿಸುವನು ಎಂದು ನನಗೆ ತಿಳಿದಿರುವುದರಿದ ನಾನು ಈ ಕೃತ್ಯವನ್ನು ಮಾಡಿರುವೆನು .
ಹಿಲ್ರ್ ನಬಿಯವರು ಹೇಳಿದಂತೆ ಅವರ ಮಾತನ್ನು ಸತ್ಯವಾಗಿಸುತ್ತಾ , ಆ ದಂಪತಿಗಳಿಗೆ ಒಂದು ಮಗು ಜನಿಸಿತು. ಆ ಮಗುವಿನ ಸಂತಾನದಲ್ಲಿ ಸುಮಾರು 70 ರಷ್ಟು ಪ್ರವಾದಿಗಳು ಉಂಟಾದರೆಂದೂ ಹೇಳಲ್ಪಟ್ಟಿದೆ .
""ಇನ್ನೊಂದು , ಕುಸಿದ ಗೋಡೆ ಸರಿಪಡಿಸಿದ್ದು""
""ನಾನು ಸರಿಪಡಿಸಿದ ಆ ಗೋಡೆ ಇಬ್ಬರು ಅನಾತ ಮಕ್ಕಳ ಗೋಡೆಯಾಗಿದೆ . ಅಝ್ರಾಂ ಮತ್ತು ಝ್ವರೀಂ ಎಂಬ ಹೆಸರಿನ ಇಬ್ಬರು ಅನಾತರುಗಳಿಗೆ ಸೇರಬೇಕಾದ ಅವರ ಆಸ್ತಿ ಆ ಗೋಡೆಯ ಅಡಿಯಲ್ಲಿದೆ . ಆ ಮಕ್ಕಳ ತಂದೆ ಮಕ್ಕಳ ಭವಿಷ್ಯಕ್ಕೆ ಬೇಕಾಗಿ ಒಂದು ಪೆಟ್ಟಿಗೆಯಲ್ಲಿ ನಿಧಿಯನ್ನು ಇಟ್ಟು ಈ ಗೋಡೆಯ ತಳಭಾಗದಲ್ಲಿ ಅಡಗಿಸಿಟ್ಟಿದ್ದಾರೆ . ಈ ಗೋಡೆ ಕುಸಿದು ಬಿದ್ದರೆ ಆ ನಿಧಿಯು ಬೇರೆ ಯಾರದೋ ಪಾಲಾಗಬಹುದು . ಅದಕ್ಕಾಗಿ ನಾನು ಆ ಮಕ್ಕಳಿಗೆ ಸೇರಬೇಕಾಗಿರೋ ಅವರ ಸಂಪತ್ತು ಅವರಿಗೇ ಸೇರಲಿ ಎಂದು ಗೋಡೆಯನ್ನು ಸರಿಪಡಿಸಿದೆ" .
""ಅನಾತರುಗಳ ಆಸ್ತಿಗಳು ಸಂರಕ್ಷಿಸುವುದು ನಮ್ಮ ಧರ್ಮವಲ್ಲವೇ...? ಅದನ್ನೇ ನಾನು ಮಾಡಿರುತ್ತೇನೆ . ನಾನು ಮಾಡಿರುವ ಈ ಕೆಲಸವೆಲ್ಲವೂ ನನಗಾಗಿ ಮಾಡಿರುವುದಲ್ಲ , ಇದೆಲ್ಲವೂ ಅಲ್ಲಾಹನ ಆಜ್ಞೆಯಂತೆ ನಾನು ಮಾಡಿರುವೆನು ಅಷ್ಟೇ...." .
ಹಿಲ್ರ್ ನಬಿಯವರ ವಿವರಣೆಯಿಂದ ಮೂಸಾ ನಬಿಯವರಿಗೆ ತನ್ನ ಪ್ರಶ್ನೆಗಳಿಗಿರುವ ಉತ್ತರಗಳು ಏನೆಂದು ತಿಳಿಯಿತು. ವಿಷಯದ ಗೌರವವೇನೆಂದು ತಿಳಿಯದೆ ದುಡುಕಿ ಅವರನ್ನು ಪ್ರಶ್ನಿಸಿರುವುದು ಮತ್ತು ಅವರನ್ನು ಬಿಟ್ಟು ಅಗಲುವುದು ಮೂಸಾ ನಬಿಯವರಿಗೆ ಬೇಸರ ತಂದಿತು.
ಹಿಲ್ರ್ ನಬಿಯವರೊಂದಿಗಿನ ಯಾತ್ರೆಯಲ್ಲಿ ತಾನು ಪಡೆದ ಜ್ಞಾನವು , ಮಹಾಸಾಗರದಿಂದ
ಪಡೆದ ಒಂದೆರಡು ಹನಿಗಳಷ್ಟೇ ಎಂದು ಹಝ್ರತ್ ಮೂಸಾ (ಅಸ) ರವರಿಗೆ ಮನವರಿಕೆಯಾಯಿತು .
*ಪರ್ವತ ನುಂಗಲು ಎಷ್ಟು ಸುಲಭ*
▪•••┈┈•✿❁✿•┈┈•••▪
ಶೈಖ್ ಅಹಮದ್ (ರಅ) ಹೇಳುತ್ತಾರೆ ನಾನು ಖುರ್-ಆನ್ ಓದುತ್ತಿದ್ದೆ, ಸತ್ಯ ವಿಶ್ವಾಸಿಗಳು ಕೋಪವನ್ನು ನುಂಗುವವರೂ ಜನರೊಂದಿಗೆ ಸೌಮ್ಯತೆಯಿಂದ ವರ್ತಿಸುವವರೂ ಆಗಿರುತ್ತಾರೆ ಎನ್ನುವಂತಹ ಸೂಕ್ತ ತಲುಪಿದಾಗ ನನ್ನ ಚಿಂತೆ ಆ ಸೂಕ್ತದಲ್ಲೇ ತಲ್ಲೀನವಾಯಿತು . ಸ್ವಲ್ಪ ಸಮಯ ನಾನು ಓದುವುದನ್ನು ನಿಲ್ಲಿಸಿ ಅದೇ ಚಿಂತೆಯಲ್ಲಿ ಮಗ್ನನಾಗಿ ನನಗರಿವಿಲ್ಲದೆಯೇ ನಿದ್ದೆಗೆ ಶರಣಾದೆ. ನಿದ್ದೆಯಲ್ಲಿ ಸುಂದರ ವ್ಯಕ್ತಿಯೊಬ್ಬರು ನನ್ನನ್ನು ಸಮೀಪಿಸಿದರು. ಅವರು ನನ್ನ ಹೆಸರು ಕರೆದು ಹೇಳಿದರು "ಅಹಮದ್ ನೀನು ಮುಂದೆ ಸಾಗು ,ನಂತರ ನಿನ್ನ ಮುಂದೆ ಮೊದಲು ಕಾಣುವುದನ್ನು ನೀನು ನುಂಗಬೇಕು . ನಂತರ ಮುಂದೆ ಸಾಗಬೇಕು ಆಗ ನಿನ್ನ ಮುಂದೆ ಕಾಣುವುದನ್ನು ನೀನು ಹೂಳಬೇಕು." ಆ ನಿರ್ಧೇಶನದಂತೆ ನಾನು ಮುಂದೆ ಸಾಗಿದೆ ಆದರೆ ಪ್ರಥಮವಾಗಿ ನನ್ನ ಮುಂದೆ ಗೋಚರಿಸಿದ್ದು ಒಂದು ಪರ್ವತವಾಗಿತ್ತು . ಇದನ್ನಲ್ಲವೇ ನುಂಗಲು ಹೇಳಿರುವುದು , ಪರ್ವತ ಬಿಟ್ಟು ಅದರಲ್ಲಿರುವ ಒಂದು ಕಲ್ಲು ಕೂಡಾ ನುಂಗಲು ಸಾಧ್ಯವಿಲ್ಲ. ಏನು ಮಾಡಲಿ...!? ಸ್ವಲ್ಪ ಹೊತ್ತು ಚಿಂತಿತನಾದೆ . ನಂತರ ಏನೇ ಆಗಲಿ ಆಜ್ಞೆಯನ್ನು ಪಾಲಿಸಬೇಕಲ್ಲವೇ..? ನಾನು ಪರ್ವರಕ್ಕೆ ಮುಖಮಾಡಿಕೊಂಡು ನನ್ನ ಬಾಯಿಯನ್ನು ತೆರೆದು ಹಿಡಿದೆ , ಆಶ್ಚರ್ಯ.....! ಇದ್ದಕ್ಕಿದ್ದಂತೆ ಪರ್ವತ ಚಿಕ್ಕದಾಗತೊಡಗಿತು, ಕೊನೆಗದು ಒಂದು ಖರ್ಜೂರದ ಗಾತ್ರದಷ್ಟಾದಾಗ ನಾನು ಅದನ್ನು ನುಂಗಿದೆ. ನನಗರಿವಿಲ್ಲದೆಯೇ ನಾನು ಹೇಳಿದೆ ಎಷ್ಟೊಂದು ಸಿಹಿಯಾಗಿದೆ...! .
ಆ ಅಧ್ಬುತವನ್ನು ಅನುಭವಿಸಿ ನಾನು ಮುಂದೆ ಸಾಗಿದೆ, ಆಗ ನನ್ನ ಮುಂದೆ ಕಂಡು ಬಂದದ್ದು ಒಂದು ಚಿನ್ನದ ಪಾತ್ರೆಯಾಗಿತ್ತು . ಅವರು ಹೇಳಿದಂತೆ ನಾನು ಅದನ್ನು ಗುಂಡಿ ತೆಗೆದು ಹೂಳಲು ನೋಡಿದೆ, ಎಷ್ಟು ಶ್ರಮಿಸಿದರೂ ನನ್ನಿಂದ ಅದನ್ನು ಹೂಳಲು ಸಾಧ್ಯವಾಗಲಿಲ್ಲ . ಅದನ್ನು ಎಷ್ಟು ಸಲ ಹೂಳಲು ಶ್ರಮಿಸಿದರೂ ಅದು ಹೊರಗೆ ಬರುತ್ತಲೇ ಇತ್ತು . ತುಂಬಾ ಹೊತ್ತಿನ ನಂತರ ಆ ವ್ಯಕ್ತಿ ನನ್ನನ್ನು ಸಮೀಪಿಸಿದರು. ನಾನು ಅವರಲ್ಲಿ ಹೇಳಿದೆ "ನೀವು ಹೇಳಿದಂತೆ ನಾನು ಇದನ್ನು ಹೂಳಲು ಎಷ್ಟು ಶ್ರಮಿಸಿದರೂ ಆಗುತ್ತಿಲ್ಲ" . ಆಗ ಅವರು "ನೀವೆಂದಲ್ಲಾ ಯಾರೇ ಶ್ರಮಿಸಿದರೂ ಅದನ್ನು ಹೂಳಲು ಸಾಧ್ಯವಿಲ್ಲ, ಕಾರಣ ಇದು ಮನುಷ್ಯನ ಒಳಿತುಗಳ ಸಂಕೇತವಾಗಿದೆ . ಒಬ್ಬರು ಮಾಡಿದ ಒಳಿತು ಅವನಾಗಲೀ ಅವನ ಶತ್ರುವಾಗಲೀ ಮರೆಮಾಚಲು ನೋಡಿದರೆ ಅದು ಹೊರಗೆ ಬರುತ್ತಲೇ ಇರುತ್ತದೆ" .
ನಾನು ಕೇಳಿದೆ: "?ಹಾಗಾದರೆ ಮೊದಲು ಕಂಡ ಪರ್ವತ..?"
ಅವರು ಹೇಳಿದರು "ನೀವು ನುಂಗಿದ ಆ ಪರ್ವತ ಕೋಪದ ಪ್ರತಿರೂಪವಾಗಿದೆ. ಕೋಪ ಬಂದರೆ ನಿಯಂತ್ರಿಸಲು ಬಹಳ ಕಂಷ್ಟವೆಂದು ಭಾವಿಸುತ್ತೇವೆ. ಆದರೆ ನಾವು ಅದನ್ನು ನಿಯಂತ್ರಿಸಲು ಶ್ರಮಿಸಿದರೆ ಅದು ಒಂದು ಖರ್ಜೂರ ನುಂಗಿದಷ್ಟೇ ಸುಲಭ , ಮತ್ತು ತುಂಬಾ ಮಧುರವೂ ಕೂಡಾ" .
ಅವರು ಮುಂದುವರಿಸುತ್ತಾ "ಕೋಪವನ್ನು ನಿಯಂತ್ರಿಸುವ ಕುರಿತಲ್ಲವೇ ನೀವು ಖುರ್-ಆನ್ ಓದಿ ಚಿಂತಿತರಾಗಿರುವುದು ... ಈಗ ತಿಳಿಯಿತಲ್ಲವೇ..!?" .
ನಾನು "ಹೌದು" ಎಂದು ಹೋಗಲು ಮುಂದಾದ ಅವರಲ್ಲಿ "ನೀವು ಯಾರೂಂತ ಹೇಳಲಿಲ್ಲ..!"
ಅವರು ಹೇಳಿದರು : "ನಾನು ಹಿಲ್ರ್ ನಬಿ ಅಲೈಹಿ ಸ್ಸಲಾಂ , ಈ ವಿಷಯವನ್ನು ನಿಮಗೆ ತಿಳಿಸುವ ಸಲುವಾಗಿ ಬಂದಿರುವೆನು" .
ನಾನು ಸಂತೋಷ ತಾಳಲಾರದೆ ಅವರನ್ನು ಬಿಗಿಯಾಗಿ ಅಪ್ಪಿಕೊಂಡೆ. ಆಗಲೆ ನಾನು ನನ್ನ ನಿದ್ದೆಯಿಂದ ಬೆಚ್ಚಿಬಿದ್ದು ಸುತ್ತಲೂ ನೋಡಿದೆ ಆದರೇ ಯರದೇ ಸುಳಿವೂ ಇಲ್ಲ .....
ನಿದ್ದೆಯಲ್ಲಿ ಅವರು ಕಲಿಸಿದ ಪಾಠ ನಾನು ಹಲವರಿಗೂ ಕಲಿಸಿಕೊಟ್ಟೆ... .
*ಹುತಾತ್ಮರ ನೇತಾರ*
(ಇದು👇 ಇನ್ನು ನಡೆಯಲಿಕ್ಕಿರುವ ಘಟನೆಯಾಗಿದೆ)
ಅಂತ್ಯ ದಿನ ಸಮೀಪಿಸುವಾಗ ದಜ್ಜಾಲ್ ಹೊರಬರುವನು, ಅವನನ್ನು ಹಿಲ್ರ್ ನಬಿ ಅಲೈಹಿಸ್ಸಲಾಂ ಕಾಣಲು ಹೊರಡುತ್ತಾರೆ ದಜ್ಜಾಲನನ್ನು ಸಮೀಪಿಸುವಾಗ ಅವನ ಸೈನಿಕರು ಅವರನ್ನು ತಡೆದು ಎಲ್ಲಿಗೆ ಎಂದು ಕೇಳುವಾಗ ಹಿಲ್ರ್ ನಬಿ ಅಲೈಹಿ ಸ್ಸಲಾಂ "ಅಲ್ಲಾಹನೆಂದು ಹೇಳಿ ನಡೆಯುತ್ತಿರುವ ಒಬ್ಬನಿಲ್ಲವೇ..? ಅವನ ಬಳಿಗೆ" , ಆಗ ಆ ಸೈನಿಕರು "ನಿನಗೆ ನಮ್ಮ ದೇವನಲ್ಲಿ ವಿಶ್ವಾಸವಿದೆಯೇ...?" ಹಿಲ್ರ್ ನಬಿಯವರು "ಇಲ್ಲ" ಎನ್ನುವಾಗ ,ಅವರು ಕೊಲ್ಲಲು ಮುಂದಾಗುತ್ತಾರೆ . ತಮ್ಮ ದೇವನ ಅನುಮತಿ ಇಲ್ಲದೆ ಕೊಲ್ಲಬಾರದೆಂದು , ಹಿಲ್ರ್ ನಬಿಯವರನ್ನು ಅವನ ಬಳಿಗೆ ಕೊಂಡು ಹೋಗುತ್ತಾರೆ.
ದಜ್ಜಾಲನನ್ನು ಕಾಣುತ್ತಿಂದತೆಯೇ ಹಿಲ್ರ್ ನಬಿ ಜೋರಾಗಿ "ಓ ಜನರೇ... ಖಂಡಿತವಾಗಿಯೂ ಇವನು ಪ್ರವಾದಿಯವರು ಹೇಳಿದ ದಜ್ಜಾಲನಾಗಿದ್ದಾನೆ" ಎನ್ನುತ್ತಾರೆ .
ದಜ್ಜಾಲನು ಅವರನ್ನು ಬಂಧಿಸಿ ಕ್ರೂರವಾಗಿ ಶಿಕ್ಷಿಸುವನು , ಬಳಿಕ ತನ್ನ ಸೈನಿಕರಲ್ಲೂ ಅವರನ್ನು ಕಟುವಾಗಿ ಶಿಕ್ಷಿಸಲು ಆಜ್ಞಾಪಿಸುವನು . ನಂತರ ಅವರಲ್ಲಿ ಕೇಳುತ್ತಾನೆ "ನೀನು ನನ್ನನ್ನು ದೇವನಾಗಿ ಅಂಗೀಕರಿಸುವೆಯಾ..?" ಆಗ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು "ಇಲ್ಲ" ಎಂದು ಕಠಿಣವಾಗಿಯೇ ಹೇಳುತ್ತಾರೆ .
ಇಷ್ಟು ಕಠಿಣವಾಗಿ ಶಿಕ್ಷೆ ನೀಡಿಯೂ ತನ್ನನ್ನು ದೇವನಾಗಿ ಅಂಗೀಕರಿಸದ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರ ಶರೀರವನ್ನು ತುಂಡರಿಸಲು ತನ್ನ ಸೈನಿಕರಲ್ಲಿ ಖಡ್ಗವನ್ನು ತರುವಂತೆ ಹೇಳುವನು .
ಆ ಖಡ್ಗದಿಂದ ಮಹಾನರ ದೇಹವನ್ನು ಎರಡು ಭಾಗಗಳಾಗಿ ತುಂಡರಿಸುವನು . ಇಬ್ಬಾಗವಾಗಿ ಬಿದ್ದಿರುವ ಶರೀರದ ಮಧ್ಯೆ ನಡೆದುಕೊಂಡು ಅವನು ಹೇಳುವನು "ಎದ್ದೇಳು" , ಏನೂ ಸಂಭವಿಸದಂತೆ ಹಿಲ್ರ್ ನಬಿಯವರು ಎದ್ದೇಳುವರು.
ಪುನಃ ಕೇಳುವನು "ನೀನು ನನ್ನಲ್ಲಿ ವಿಶ್ವಾಸವಿರಿಸುತ್ತಿಯಾ..?" ಆಗ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಹೇಳುವರು "ನೀನು ದಜ್ಜಾಲನೆಂದು ಈಗ ನನಗೆ ಮನದಟ್ಟಾಯಿತು" . ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಜನರನ್ನು ನೋಡಿ ಹೇಳುವರು "ಜನರೇ ಇನ್ನು ಇವನಿಂದ ಯಾವುದೇ ಆಕ್ರಮಣ ಮಾಡಲು ಸಾಧ್ಯವಿಲ್ಲ" . ಇದನ್ನು ಕೇಳಿದ ದಜ್ಜಾಲನ ಕೋಪದಿಂದ ಕುದಿಯತೊಡಗುತ್ತಾನೆ . ಹಿಲ್ರ್ ನಬಿಯವರನ್ನು ಹಿಡಿದು ಅವರ ಶರೀರವನ್ನು ಕೊಯ್ಯಲು ನೋಡುವಾಗ ಅವನಿಂದ ಅದು ಸಾಧ್ಯವಾಗುವುದಿಲ್ಲ .
ನಂತರ ಹಿಲ್ರ್ ನಬಿ ಅಲೈಹಿ ಸ್ಸಲಾಂ ರನ್ನು ಏನೂ ಮಾಡಲು ಸಾಧ್ಯವಾಗದೆ ,ದಜ್ಜಾಲನು ಅವರ ಕೈ ಕಾಲುಗಳನ್ನು ಬಿಗಿದು ಅವನ ನರಕಕ್ಕೆ ಎಸೆಯುತ್ತಾನೆ . ಜನರು ಭಾವಿಸುವರು ಹಿಲ್ರ್ ನಬಿ ನರಕಕ್ಕೆ ಬಿದ್ದಿರಬೇಕೆಂದು , ಆದರೆ ಅವರು ಸ್ವರ್ಗ ಪ್ರವೇಶಿಸಿರುತ್ತಾರೆ ಕಾರಣ ಅವನ ನರಕವು ಮುಸಲ್ಮಾನರಿಗೆ ಸ್ವರ್ಗವಾಗಿರುತ್ತದೆ .
ಈ ಹದೀಸ್ ವ್ಯಾಖ್ಯಾನ ಮಾಡಿದ ನಂತರ ಪ್ರವಾದಿ ﷺ ರು ಹೇಳಿದರು "ಇವರಾಗಿರುವರು ಅಂತ್ಯದಿನದಲ್ಲಿ ಅಲ್ಲಾಹನ ಸಮೀಪ ಉನ್ನತ ಸ್ಥಾನ ಪಡೆಯುವ ಶಹೀದ್" .
ಮುಗಿಯಿತು /.🙏🤲
*ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರ ಸಾಮೀಪ್ಯ ಬಯಸುವವರು ಇದನ್ನು 👇 ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಿ....*
1.7 ಸಲ ಫಾತಿಹ .
2.7 ಸಲ ಆಯತುಲ್ ಕುರ್ಸಿ.
3.7 ಸಲ ಸೂರ ಕಾಫಿರೂನ್ .
4.7 ಸಲ ಸೂರ ಇಖ್ಲಾಸ್ .
5.7 ಸಲ ಸೂರ ಅಲ್ ಫಲಖ್ .
6.7 ಸಲ ಸೂರ ಅನ್ನಾಸ್ .
7.7 ಸಲ سُبْحَانَ اللهِ وَالْحَمْدُ لِلهِ وَلاَ اِلَهَ اِلَّا اللهُ اَللهُ اَكْبَرْ وَلَا حَوْلَ وَلَا قُوَّةَ اِلَّا بِاللهِ الْعَلِيمِ
8.7 ಸಲ اَللَّهُمَّ صَلِّ عَلَى سَيِّدِنَا مُحَمَّدٍ نَبِيِّ الْاُمِّيِّ وَعَلَى آلِهِ وَصَحَبِهِ وَسَلَّمَ
9.7 ಸಲ اَللَّهُمَّ اِغْفِرْلِي وَلِوَالِدَيَّ وَلِلْمُؤْمِنِينَ وَالْمُؤْمِنَاتِ وَالْمُسْلِمِينَ وَالْمُسْلِمَاتِ اَلْاَحْيَاءِ مِنْهُمْ وَالْاَمْوَاتِ
10.7 ಸಲ اَللَّهُمَّ اِفْعَلْ بِي وَبِهِمْ عَاجِلاً وَآجِلاً فِي الدِّينِ وَالدُّنْيَا وَالْآخِرَةِ مَا أنْتَ لَهُ أَهْلٌ وَلاَ تَفْعَلُ بِناَ يَا مَوْلاَنَا مَا نَحْنُ لَهُ أَهْلٌ إِنَّكَ غَفُورٌ حَلِيمٌ جَوَادٌ كَرِيمٌ رَءُوفٌ رَحِيمٌ
🍃ಇನ್ಷಾಅಲ್ಲಾಹ್...! ಕರುಣಾಮಯನೂ ಕಾರುಣ್ಯದ ಅಧಿಪತಿಯೂ ಆದ ಅಲ್ಲಾಹನ ದಯೆಯಿಂದ ಜೀವನದಲ್ಲಿ ಒಮ್ಮೆಯಾದರೂ ಆ ಮಹಾನರನ್ನು ಕಾಣುವ ಭಾಗ್ಯ ಉಂಟಾಗಲಿ🍃
ಆಮೀನ್ ಯಾ ರಬ್ಬಲ್ ಆಲಮೀನ್ 🤲
*ನಿಮ್ಮ ಪ್ರಾರ್ಥನೆಯಲ್ಲಿ ನನ್ನ ಒಳಿತನ್ನೂ ಬಯಸುವಿರಿ ಎಂಬ ವಿಶ್ವಾಸದಲ್ಲಿ ನನ್ನೊಂದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತಾ ನನ್ನ ಬರಹಕ್ಕೆ ವಿರಾಮವಿಡುತ್ತಿದ್ದೇನೆ*
صلّوا على النبي ﷺ
اللهم صل على سيدنا محمد وعلى اله وصحبه وسلم
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*
〰〰❁✿🌹•🌹✿❁〰〰
No comments:
Post a Comment