*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪
〰〰❁✿🌹🌹✿❁ 〰〰
*ಅಂತ್ಯ. . . . !*
〰〰❁✿🌹🌹✿❁ 〰〰
ಈ ನಶ್ವರ ಜಗತ್ತು ಒಂದು ತಂಗುದಾಣ ಮಾತ್ರ, ನಾವು ಇಲ್ಲಿಂದ ಹೊರಟು ಶಾಶ್ವತ ಲೋಕಕ್ಕೆ ಹೋಗಬೇಕಾದವರು . ನಾವು ಮಾತ್ರವಲ್ಲ ಈ ಭೂಲೋಕದಲ್ಲಿರುವ ಪ್ರತಿಯೊಂದು ವಸ್ತುವು ವಿದಾಯ ಹೇಳಲಿರುವುದು .
ಹಚ್ಚ ಹಸುರಿನ ಸೊಬಗನ್ನು ಹರಡಿರುವ ಪೃಥ್ವಿ, ನೀಲ ವರ್ಣ ಚಾಪೆಯನ್ನು ಬಿರಿಸಿದ ಬಾನು, ಪ್ರಕಾಶಮಾನವಾಗಿ ಬೆಳಗುವ ಬೆಳದಿಂಗಳ ಬಾಲೆ , ಕತ್ತಲನ್ನು ಅಲಂಕರಿಸಿದಂತೆ ಬಾನಲ್ಲಿ ಹರಡಿದ ತಾರೆಗಳು , ಎಲ್ಲಾ ಜೀವಿಗಳ ಬಾಳಿಗೂ ಬೆಳಕನ್ನು ಹರಡುವ ಅರುಣ, ಈ ಎಲ್ಲಾ ಪ್ರಕೃತಿ ರಮಣೀಯತೆಗಳಲ್ಲಿ ವಿಹರಿಸುವ ಮನುಷ್ಯ ಎಲ್ಲವೂ ಎಲ್ಲವೂ ಸರ್ವನಾಶವಾಗಲಿದೆ . ಈ ಜಗತ್ತು ಯಾರಿಗೂ ಶಾಶ್ವತವಲ್ಲ ಇಂದಲ್ಲದಿದ್ದರೆ ನಾಳೆ ಅಥವಾ ನಾಳಿದ್ದು ಅಥವಾ ಮುಂದೊಂದು ದಿನ ಈ ಪ್ರಪಂಚ ನಾಮಾವಶೇಷವಾಗಲಿದೆ . ನಬಿ(ಸಅ) ರವರು ಹೇಳಿದ ಅಂತ್ಯ ದಿನದ ಮುನ್ಸೂಚನೆಗಳು ಕಣ್ಣ ಮುಂದೆ ಗೋಚರವಾಗುತ್ತಿದೆ , ಇನ್ನು ಅಲ್ಪ ಸ್ವಲ್ಪವೇನೋ ಬಾಕಿ ಇರಬಹುದು .
ಒಂದು ಕಡೆ ಬಿಸಿಲಿನ ತಾಪ ಸಹಿಸಲಾಗುತ್ತಿಲ್ಲ,
ಮತ್ತೊಂದು ಕಡೆ ವ್ಯಾಪಾರ ಹದಗೆಟ್ಟಿದೆ .
ಹಲವಾರು ಕಡೆ ಕೃಷಿ ಭೂಮಿ ಬರಡಾಗಿದೆ .
ವಿವಿಧೆಡೆಗಳಲ್ಲಿ ನೀರಿನ ಅಭಾವವಿದೆ . ಹೇರಳವಾಗಿ ಮಳೆ ಲಭಿಸುತ್ತಿದ್ದ ಮಲೆನಾಡುಗಳೂ ಕೂಡಾ ಮಳೆ ಇಲ್ಲದೆ ಕಂಗಾಲಾಗಿದೆ . ಕಶ್ಮಲ ವಾತಾವರಣದಲ್ಲಿ ವಾಸವಾಗಿರುವ ಜನತೆ ,
ಅಕ್ರಮ ಅನೀತಿಗಳಲ್ಲಿ ಮುಳುಗಿದ ಸಮೂಹ.
ವಂಚನೆಗಳಲ್ಲಿ ನಿತ್ಯರಾಗಿರುವ ಆಡಳಿತ ವಿಭಾಗ.
ಅಧಿಕಾರ ಮತ್ತು ಸಂಪತ್ತಿನ ಹಿಂದೆ ಬಿದ್ದ ಜನತೆ, ರೊಕ್ಕ ನೀಡುವವರನ್ನು ಪ್ರಭುವಾಗಿಯೂ , ಅಧಿಕಾರ ನೀಡುವವರನ್ನು ದೇವಮಾನವನಾಗಿಯೂ ಕಾಣುವ ಯುಗ. ತನ್ನ ಮಾತನ್ನು ಕೇಳುವವರು ಮಾತ್ರ ಒಳ್ಳೆಯವರು , ಉಳಿದವರೆಲ್ಲಾ ದಾರಿತಪ್ಪಿದವರೆಂದು ತನ್ನ ಯುಕ್ತಿಗೆ ಅನುಸಾರವಾಗಿ ನಡೆಯುವ ಒಂದು ಪೀಳಿಗೆ . ತಮ್ಮ ಬಾಳನ್ನು ಬಂಗಾರವಾಗಿಸಲು ಅನ್ಯರ ಅಭಿಮಾನಕ್ಕೆ ಕಳಂಕ ತರುವವರು . ಇವುಗಳೆಡೆಯಲ್ಲೂ ಧಾರ್ಮಿಕ ಚೌಕಟ್ಟಿನಲ್ಲಿ ಜೀವಿಸುವ ಪವಿತ್ರ ಧರ್ಮದ ಅನುಯಾಯಿಗಳು .
ಬದಲಾಗಬೇಕಾಗಿರೋದು ನಾವೇ. . . ನಾವು ಬದಲಾಗದ ಹೊರತು ನಮ್ಮಿಂದ ಏನು ಮಾಡಲೂ ಸಾಧ್ಯವಿಲ್ಲ.
ನಾಳೆ ನಾಳೆ ಎಂದು ಮುಂದೂಡಬೇಡ, ಇಂದು ಮಾಡಬೇಕಾಗಿರುವುದನ್ನು ಇಂದೇ ಮಾಡಿದರೆ , ಮುಂದಿನ ದಿನದಲ್ಲಿ ಯಶಸ್ಸು ಕಾಣಬಹುದು .
ಒಂದಲ್ಲ ಒಂದು ದಿನ ನಾವು ಮರಣವೆಂಬ ಮಂಚವೇರಿ ಯಾತ್ರೆ ಮಾಡಬೇಕಾದವರಲ್ಲವೇ. . . ! ?
ಮರಣ ಜೀವನದ ಅಂತ್ಯವಲ್ಲ,
ಅಂತ್ಯವಿಲ್ಲದ ಜೀವನದ ಆರಂಭವಾಗಿದೆ. ಅದು ಯಾವಾಗ ಯಾವ ರೀತಿಯಲ್ಲಿ ಸಂಭವಿಸಲಿದೆ ಎಂದು ಅಲ್ಲಾಹನಿಗಲ್ಲದೆ ಬೇರೆ ಯಾರಿಗೂ ತಿಳಿಯದು . ಮರಣ ನಮ್ಮನ್ನು ಸಮೀಪಿಸಲಿದೆ ಎಂಬ ವಿಶ್ವಾಸ ಹೊಂದಿದವರಾಗಿದ್ದಾರೆ ಮುಸ್ಲಿಮರು .
ಈ ಪ್ರಪಂಚವು ನಂಬಿಕೆಯುಳ್ಳವರಿಗೆ ಕೃಷಿಭೂಮಿಯಾಗಿದೆ. ಪರಲೋಕದ ಯಶಸ್ಸಿಗೆ ಕೃಷಿ ನಡೆಸುವ ಸ್ಥಳವಾಗಿದೆ . ಪರಲೋಕದಲ್ಲಿ ನಮ್ಮನ್ನು ಕಾಯುತ್ತಿರುವುದು ನಾವು ಮಾಡಿದ ಕರ್ಮ ಫಲವಾಗಿದೆ .
ಮನುಷ್ಯ ಕಠುವಾಗಿ ಧ್ವೇಷಿಸುವ ಒಂದಾಗಿದೆ ಮರಣ. ಆದರೆ ಎಷ್ಟೇ ಧ್ವೇಶಿಸಿದರೂ , ಬಿಟ್ಟಗಲಿದರೂ ಕೂಡಾ ಮರಣ ಮನುಷ್ಯರನ್ನು ಸಮೀಪಿಸುವುದಂತೂ ಖಚಿತ.
ಯಾವ ಸಮಯದಲ್ಲಿ ಮರಣ ಸಂಭವಿಸುವುದಾದರೂ ನಾವು ಮುಸ್ಲಿಮರಾಗಿ ಮರಣ ಹೊಂದಲು ಆಗ್ರಹಿಸಬೇಕು . ಅದಕ್ಕಾಗಿ ದಿನನಿತ್ಯ ಅಲ್ಲಾಹನಲ್ಲಿ ಬೇಡುತ್ತಿರಬೇಕು , ಮರಣದ ನಂತರ ಬೇಡಲು ಸಾಧ್ಯವಿಲ್ಲ ತಾನೇ. . ! ? ಮರಣ ಸಮೀಪಿಸುವ ಮೊದಲೇ ಪರಿಪೂರ್ಣ ಮುಅಮಿನಾಗಿರಲು ಶ್ರಮಿಸಬೇಕು .
ನಮ್ಮ ಆತ್ಮ ನಮ್ಮಿಂದ ಅಗಲುವ ಮುನ್ನ ನಮ್ಮಿಂದ ಉಂಟಾದ ಪೂರ್ವ ಪಾಪ ಕರ್ಮಗಳಿಗೆ ಕ್ಷಮೆ ಕೇಳಬೇಕು . ಮನುಷ್ಯರೊಂದಿಗಿನ ತಪ್ಪುಗಳಿಗೆ ಅವರೊಂದಿಗೆ ಪರಸ್ಪರ ಕ್ಷಮಿಸಿಕೊಡಬೇಕು .
ಮರಣ ಸಮಯದಲ್ಲಿ ಆತ್ಮವು ಗಂಟಲು ತಲುಪುವ ವರೆಗೆ ಖಂಡಿತವಾಗಿಯೂ ಅಲ್ಲಾಹನು ದಾಸನ ಪಶ್ಚಾತಾಪವನ್ನು ಸ್ವೀಕರಿಸುವನು , ನಂತರ ತೌಬಕ್ಕೆ ಅವಸರವಿಲ್ಲ. ಇದು ಮರಣಕ್ಕೂ ಮುಂಚೆ ಮಾಡಬೇಕಾದ ಕಾರ್ಯವಾಗಿದೆ . ಅಲ್ಲಾಹನಲ್ಲಿ ವಿಶ್ವಾಸವಿಡಿ , ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗಬೇಡಿ .
ಪ್ರಯತ್ನ ನಮ್ಮದಾಗಲಿ , ಯಶಸ್ಸು ಅಲ್ಲಾಹನು ಕರುಣಿಸಲಿ . . . . ಆಮೀನ್.
*ಅಲ್ಲಾಹನು ಖೈರಾದ ಮರಣ ದಯಪಾಲಿಸಲಿ. . ಆಮೀನ್*
صلّوا على النبي ﷺ
اللهم صل على سيدنا محمد وعلى اله وصحبه وسلم
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*

No comments:
Post a Comment