Tuesday, 22 September 2020

ನಲ್ಲೊರೂ ನಸೀಹತ್ ಭಾಗ-01

 *══❁✿🕳.﷽ .🕳✿❁══* 


▪•••┈┈•••💧•••┈┈•••▪
*::::: ನಲ್ಲೊರು ನಸೀಹತ್ :::::*
▪•••┈┈•✿❁✿•┈┈•••▪

ಕವನ ರೀತಿ:- ಅಲ್ ಮವಾಹಿಬುಲ್ ಜಲಿಯ್ಯ
**************************

ಮುತ್ತಾಯೆ ನಬಿರೆ ಪಲ್ಕ ಈ ಒರು ಬೈತ್
ನಿಂಕಾಯಿ ತಂಡೋ ನಲ್ಲೆ ನಸೀಹತ್
ಬೇನೆಂಗ್ ಎಡ್ತೋ ನಿಕ್ಕ್ ಸಲಾಮತ್ತ್
ನಕ್ಕುನ್ಡು ಇಂಡ್ ನಲ್ಲೊರೂ ಹಾಜತ್ತ್
ನಿಂಕಿಂಡುಂ ಆಕ್ಕಾ ನಲ್ಲೊರೂ ನಿಯ್ಯತ್ತ್
ನಕ್ಕಾವೊನುಂ ಒರು ನಾಲ್ ನಲ್ಲೊರು ಮೌತ್ತ್
ನಕ್ಕಾಯಿ ತೇಡ್ ರಹ್ಮತುಲ್ಲೊರು ವಖ್ತ್
ಇದ್ ಮಾತ್ರ ನಕ್ಕಿಂಡುಲ್ಲೆ ವಸಿಯ್ಯತ್
ನಾನಾಯಿ ಪೋಯೆಂಗಿಂಡೊರೂ ಮಯ್ಯತ್ತ್
ನಕ್ಕಾಯಿ ಓದು ಸೂರ ಮುಲ್ಕುಂ ಪತ್ತ್
ನಕ್ಕಂಡ್ ನೀನುಂ ತೇಡ್ ಮಗ್-ಫೀರತ್ತ್
ತೇಡೊಂಬೊ ನೀನುಂ ಕೂಟ್ಟು ಮರ್ಹಮತ್ತ್
ನಕ್ಕುಂಡು ಆಸ ಕಿಟ್ಟೊಗುಂ ಜನ್ನತ್
ನಾನಿಕ್ಕೊನಲ್ಲೆ ಇಂಡ್ ನೆಬಿ ಮಿಲ್ಲತ್ತ್*

🛑ಪವಿತ್ರ ಖುರ್-ಆನ್👇🛑

ಖುರ್-ಆನ್ ರಬ್ಬುರೆ ಗ್ರಂಥಮೇ ಚಙ್ಙಾಯಿ
ಖೌಲುಂಡು ಮುಸ್ಹಫ್ ಚೊಲ್ಡೊರು ಪೇರಾಯಿ
ಖಲೀಫ ಸಿದ್ದೀಖ್ ಇಟ್ಟೆದೇ ಸ್ವರಫಾಯಿ
ಕಾನ್ ರಿಸಾಲ ತುಲ್ ಬುದೂರಿಲ್ ಪೋಯಿ
ಕೈಕಾಲ್ ಶುದ್ಧಿ ಆಕ್ಕೊನೂ ಕ್ಲೀನಾಯಿ
ಕೇಕ್ಕೋನು ನೀನುಂ ಗ್ರಂಥ ಕಾಮಿಲಾಯಿ

ಖುರ್-ಆಂಡೆ ಅಕ್ಷರ ಮದ್-ಲ್-ಲುಂ ಎಲ್ದಂಡ
ಅದ್ ಪಲ್ಲಿ ಆಯೆಂಗುಂ ಸಮಾ ಆಕ್ಕಂಡಾ
ಕರಾಹತ್ ಖೌಲುಂ ಶರ್ವಾನಿ ಅದ್ ಲುಂಡು
ಒನ್ನಾ ಕಿತಾಬು ಎಡ್ತ್ ನೋಕ್ಕದ್ ಕಾಂಡ್

ಅಮುಸ್ಲಿಮಾಯೊರು ವ್ಯಕ್ತಿಗುಂ ಕೊಡುಕ್ಕಂಡ
ಮರಿಕ್ಕೋಗು ಐತಾ ಕೊಡ್ಕೊಗುಂ ಮಡಿಕಂಡ
ಅದೊರು ಉರ್ಕುಲು ಕೆಟ್ಟಿ ಕೊಡ್ತೆಂಗುಂ ಸಮ
ಬಹುಮಾನ ಚೊಮ್ಮ ಯಾರ ಇನ್ನೆಂಗುಂ ಸಮ

ಖುರ್-ಆಂಡೆ ನೀನ್ ನಜಸುಲುಂ ಎಲ್ದಂಡ
ಅನರಬಿ ಬಾಸೆಲ್ ಎಲ್ದೊಗುಂ ನೋಕ್ಕಂಡ
ಫತ್ಹುಲ್ ಮುಈನಿ ಲುಂ ಹರಾಮುನ್ಟುಂಡು
ಇಬ್ನುಲ್ ಹಜಾರ್ ತಙ್ಙಲೇ ಖೌಲುಂಡು

ತುಪ್ನೇರ್ ಬೆರಲ್-ಲ್ ತೊಟ್ಟು ನೀ ತೊರಕಂಡ
ಫತಾವ ನೋಕ್ಕು ಹುಕುಮು ಚೊನ್ನುಟ್ಟುಂಡು
ನಜಸಾಯೆ ಒನ್ನುಂ ಎಡ್ಕೋಗೂ ಮರಕಂಡ
ನಷ್ಟೆಂದು ಬನ್ನೆಂಗುಂ ಪೆರಗ್ ನೀ ಜಾರಂಡ

ಮಿಸ್ವಾಕ್ ಓತುಗು ಮುನ್ನೊಲೇ ಆಕ್ಕೋನು
ಸುಗಂಧ ಉಲ್ಲೊರು ಗಂಧ ನೀ ಮೆತ್ತೊನು
ಕ್ಲೀನಾಯ ಜಾಗೆಲ್ ಚಂದ ನೀ ದೈಕೋನೂ
ಮೇಲಾಯೆ ನಲ್ಲೆ ಜಾಗೆಲುಂ ಬೈಕ್ಕೋನು

ಖಿಬ್ಲಕ್ಕ್ ನೇರ್ ದೆಕ್ಕೊಗುಂ ಸುನ್ನತ್
ಅದ್ ಪಲ್ಲಿ ಆಯೆಂಗುಂ ಸಮ ಬರ್ಕತ್ತ್
ಚಂದುಲ್ಲೆ ಚಟ್ಟ ಮುಂಡುಲುಂ ಚಂದತ್ತ್
ಚಾಯಾಂಟೆ ಓದು ನಿಕ್ಕದ್-ಲ್ ನಿಅಮತ್ತ್
 
ನೋಕಾಂಟೆ ಓದ್ಯೆಂ ಉಂಡು ಕೂಲೀ ನೂರು
ನೋಕಿಟ್ಟ್ ಓದುರೆ ಆಲ್-ಗುಂ ಇರ್ನೂರು
ಮುಂಡಾಟ್ಟ ಬುಟ್ಟು ಓದೊನೂ ಈ ನೂರು
ಮುರಿಯಾಂಟೆ ನಾಲ್ಕುಂ ಓದ್ ನೀನ್ ಜೋರು

*🛑ಮರಿಪು🛑*

ಪೆತ್ತೆಂಗ್ ಮರಿಕೋಗ್ ಉಲ್ಲೆದುಂ ನೇರಲ್ಲೆ
ಪೇರಿನ್ನೆ ಆಲುಂ ಪೋಯೆದುಂ ನೆನಪಿಲ್ಲೆ
ಪೊಡಿ ಕಾಸ್ ಇನ್ನೆ ಟೈಮುಲುಂ ಫ್ರೆಂಡ್ಸಿಲ್ಲೆ
ಪೊಡಿ ಮನ್ನ್ ಇಟ್ಟ್ ಪೋಯೆದುಂ ಕಂಡಿಲ್ಲೆ
ಕಾರ್ ರಿಕ್ಷ ಲಾರಿ ಪತ್ತಿ ಪೋಯವುನಲ್ಲೆ
ಕಾಲ್ ಆರ್ ಇನ್ನೆ ಕಟ್ಟಿಲುಂ ಪತ್ಯಲ್ಲೆ

ನಾಲಞ್ಜ್ ತಟ್ಟ್-ರೆ ಔತು ಕೆಡನ್ನವುನಲ್ಲೆ
ನಾಲೀ ಪೆಡಕ್ಕ್-ರೆ ಖಬುರುಲುಂ ಒರ್ತಲ್ಲೆ
ಮಣಿ ಮುತ್ತು ಪೋಲ್ತೊರು ಪೆನ್ನ್ ನಿಕ್ಕಿಂತಲ್ಲೆ
ಮರನ್ನ್-ಟ್ಟ್ ಪೋಯೆದ್ ನಿಂಡೆ ಬುಟ್ಟುತ್ತಲ್ಲೆ
ಕಟ್ಟಿಲ್ಲ್ ಕೆಡನ್ನ್ ಕಲಿ ಚಿರಿಚ್ಚೆದ್ ಅಲ್ಲೆ
ಕಟೀಲ್ ಇಲ್ಲಾ ತೌಡೆಗುಂ ಬನ್ನಲ್ಲೆ

ನಿಂಡೊಟ್ಟ ಇನ್ನೊರು ಆಲುಂ ಇಂಡಿಲ್ಲಲ್ಲೆ
ನಿಂಡಿಂಡ್ ಬುಟ್ಟು ಪೋಯೆದದ್ಬುತ ಅಲ್ಲೆ
ಕನ್ನಾಯೆ ಜಂಡುಂ ಮನ್ನ್ ತಿಂಡ್ ತ್ತಲ್ಲೆ
ಕಲ್ಲಾಯೆ ತಡಿಲುಂ ಪುಲು ನೊರಞ್ಞಿತ್ತಲ್ಲೆ
ಖಬುರುಲ್ಗ ಫುಲ್ಲುಂ ಪಾಂಬು ತೇಲೇ ಉಲ್ಲೆ
ಕೊತ್ತೋಗು ನಿಂಡೆ ಚುತ್ತು ನಿಂಡ್ ರಲ್ಲೆ

ಓಡಿಟ್ಟ್ ಪೋನುಗು ಒರು ತೆರುಂ ಇಲ್ಲಲ್ಲೆ
ಓಡ್ಪಾಟೊಗಂಡ್ ನಿಂಡೆ ಕೈ ಕಾವುಲ್ಲೆ
ಫ್ಯಾನ್ ಏಸಿ ರೂಮುಲು ಪಂಡ್ ಕೆಡನ್ನೌನಲ್ಲೆ
ಪಾಯ್ ಒಲ್ಲಿ ಇಲ್ಲಾಂ ಟಿಂಡ್ ಮರಕೆಟ್ಟಿಲ್ಲೆ
ಇಂಡುಲ್ಲೆ ನಿಂಡೆ ಅವಸ್ಥ ನೀ ಕಂಡಿಲ್ಲೆ
ಎಂದಾಕ್ಕೊಗುಂ ಆವಾಂಟ್ ನೀ ಕುಡುಙ್ಙಿಲ್ಲೆ

ನಿಕ್ಕಾಯಿ ಚೊನ್ನೊ ನಸೀಹತೊನ್ನುಂಡಲ್ಲೆ
ನೀ ಕೇಟ್ಟೆದೆಲ್ಲಾ ಇಂಡ್ ನೀ ಕಂಡಿಲ್ಲೆ
ಕೇಟ್ಟಪ್ಪ ಚೊನ್ನೆ ಪಲ್ಕ ನೆನಪುಂಡಲ್ಲೆ
ಮರ್ಚೆಂಗ್ ನೋಕ ಅಪ್ಪ ನೀ ಚೊನ್ನಿಲ್ಲೆ
ಪಡ್ಚಙ್ಙ ಚೊಲ್ಡೆದ್ ಕೇಕ್ಕೊಗುಂ ಮರನ್ನಲ್ಲೆ
ಕೇಟಿನ್ನ ಮಾತೂ ನೀ ಸಲಾಮತ್ತಲ್ಲೇ

ಮರಿಪುಂಡು ಚೊನ್ನೆ ಚೊಲ್ತು ನೀ ನೆನಚಿಲ್ಲೆ
ಮರ್ಚ್ಚಪ್ಪ ನಿಕ್ಕದ್ ನೇರುಲುಂ ಕಂಡಿಲ್ಲೆ
ನಾಲಾಯೆ ನಾಲುಂ ನಾಲಿ ಪರ್ಚವುನಲ್ಲೆ
ನಾಲತ್ತೆ ನಾಲುಂ ನಿಂಡೆ ಪರಿಕೋಗಿಲ್ಲೆ
ನೆಬಿ ಚೊನ್ನೆ ಪಲ್ಕ ಇಂಡದುಂ ನೇರಲ್ಲೆ
ಆಕಿನ್ನ ಮಾತೂ ನಿಕ್ಕದುಂ ಖೈರಲ್ಲೆ

ಮರಿಕೋಗು ನೀ ರೆಡಿ ಆವು ವಾಜಿಬಲ್ಲೆ
ಮೌತೂರೆ ಮುನ್ನೊಲು ತೌಬ ಚೊಲ್ಲು ನಲ್ಲೆ
ಸೀಕಿನ್ನೆ ಆಲ್-ಗ್ ಬೇಗಮೇ ಬೆಸ್ಟಲ್ಲೆ
ಸೀಕುಲ್ಲೆ ಆಲುಂ ಮೌತುಗುಂ ಮುಟ್ಟಲ್ಲೆ
ಸಕರಾತ್ ನ್ಯಾರ ಮುಸ್ಹಫ್ ಓದೂ ನಲ್ಲೆ
ಈ ಖೌಲು ದರ್ಸ್-ಲ್ ಕೇಟ್ಟೆದುಂ ನೆನಪಿಲ್ಲೆ

ಮೌತಾವೊಗಾಯೊ ರಾಲ್ಲೆ ಬಲ್ತುಂ ಕೆಡತ್ತೋನು
ಕಷ್ಟಾವುಡೆಂಗದ್ ಎಡ್ತೆ ಸೈಡ್-ಗುಂ ಆಕ್ಕೊನು
ಮೊಗ ಕಾಲ್ ಜಂಡುಂ ಖಿಬ್ಲ ನೇರೆ ಬೆಕ್ಕೊನು
ಆ ನ್ಯಾರ ಔನುಂ ನಲ್ಲೆ ಚಿಂತೆಲ್ ಇಕ್ಕೊನೂ
ನೇರಾಯೆ ರಬ್ಬುರೆ ರಹ್ಮತಂಡ್ ಕೇಕ್ಕೊನು
ನಿಕ್ಕಾವೊಗಂಡ್ ಮೌತು ನಲ್ಲೇದಾವೊನೂ

ಸಕರಾತ್ ಟೈಮುಂ ತಾಗ ಯಾರುಂಡಲ್ಲೆ
ಅದ್ಕಾಯಿ ಕುಡಿಕೋ ತನ್ನಿ ಕೊಡ್ಕೋನಲ್ಲೇ
ಇದ್ ಮುಗ್ನಿ ಫಸ್ಟ್ ಜುಝುಇಲುಂ ಉಂಡಲ್ಲೇ
ನಬಿ ತಙ್ಙ ಚೊನ್ನೇ ಪಲ್ಕ ಒನ್ನುಂಡಲ್ಲೇ
ತೇನಂಡ್ ಕುಡಿಪಾ ಟ್ಯೆಂಗ್ ನಲ್ಲೇದಲ್ಲೆ
ಇದ್ ಬರಕತಿಲ್ ಮಕ್ಕೀಯತಿಲ್ ಕಾಂಡಲ್ಲೆ

ಹೈಲುಲ್ಲೆ ಪೆನ್ನೌ ಡುಲ್ಲೆದುಂ ಕರಾಹತ್
ತೂಕಿಟ್ಟೆ ಫೋಟೋ ಉಲ್ಲೆದುಂ ಮುಸಿಬತ್
ಸುಗಂಧ ಉಲ್ಲೊರು ಸೆಂಟಿಡೋಗುಂ ಸುನ್ನತ್
ಅಂಲಾಕ್ ಬನ್ನೆಂ ಕಿಟ್ಟೊಗುಂಡು ಬರಕತ್
ಈ ಚೊನ್ನೆ ಸೊರ ನೀ ಆಕ್ಯೆ ಸಲಾಮತ್
ಇಲ್ಲೆಂಗ್ ನಿಕ್ಕಿದ್-ಲುಂಡ್ ಬೆಲ್ಯೆ ಮಲಾಮತ್

ಉಲು ಇನ್ನ್ ಮರ್ಚೆಗಂಡ್ ಜಿಬ್ರೀಲ್ ಬಂಡ್
ಇದ್ ಬಿಗ್ಯ ನಾಪ್ಪತೆಟ್ಟ್-ಲುಂ ನಿಕ್ಕಾಂಡ್
ಯಾಸೀನ್ ಓದೂ ತಾಗ ಕೊರಯೋಗಂಡ್
ಓದೊನು ರಅದುಂ ದರ್ದ್ ಕೊರಕೋಗಂಡ್
ಮರ್ಚೆಂಗ್ ಖುರ್ಆನ್ ಓದು ನಲ್ಲೇ ದಂಡ್
ರಂಲೀ ಇಮಾಮು ಚೊನ್ನೆ ಖೌಲುಂ ಕಾಂಡ್

ನೀ ಚೊನ್ನು ಕೊಡ್ಕೋನಾಯೆದುಂ ಶಹಾದತ್
ಲಾಸ್ಟ್ ಔನ್ಡೆ ಚೊಲ್ತಿಂ ಡಾಯಿಡೆಂಗಾ ಜನ್ನತ್
ಉಗುರೌಂಡೆ ಆನತ್ತೆಡ್ಕೊಗುಂ ಸುನ್ನತ್ತ್
ಜಾನೀಬ್ ಮೀಸಂ ಎಡ್ಕೊನೇ ಆ ನ್ಯಾರತ್
ಮಿಸ್ವಾಕ್ ಆಕ್ಕೋನಾಯೆದುಂ ಆ ಸಾಅತ್ತ್
ಮುತ್ತಾಯೆ ನಬಿಯುಂ ಚೊನ್ನೆದೇ ನಸೀಹತ್

ಇಬ್ನುಲ್ ಹುಳೈರ್ ಚೊಲ್ಡೊರೂ ಸ್ವಹಬತ್ತ್
ಮರಣತ್ತೆ ಕಂಡ ಐ ಲೆಸರ್ ತಪ್ಪಿ ಪೋಯ್ತ್ 
ಪಿನ್ನುಲ್ಲೆ ನಾಲುಂ ಪೈಚ್ ನಡನ್ನ್-ತ್ತ್
ಕಂಡೆಙ್ಙ ಚೊಲ್ಲು ಐಲೊರೂ ಮಯ್ಯತ್ತ್
ಈಸಾ ನಬಿಕ್ಕೀ ಚಿಂತ ಬನ್ನೆಂಗ್ ಐತ್
ತಡಿ ಎಲ್ಲ ಚ್ವಾರ ಬರ್ನುಗುಂ ಸುರುವೈತ್

ದಾವೂದ್ ನೆಬಿಕ್ಕುಂ ಇಂತೊರೂ ಹಾಲತ್ತ್
ಮರಣತ್ತೆ ವಾರ್ತ ಕೇಕ್ಕುಡೋ ನ್ಯಾರತ್ತ್
ಕೈಕಾಲ್ ತಡಿಯುಂ ಆವುಡುಂ ಫಿರ್ಖತ್ತ್
ಮುಂಡಾಟ್ಟ ಇಲ್ಲಾಂಟಾವುಡೇ ಆ ವಖ್ತ್
ಮರಣತ್ತೆ ಕನ್ನ್-ಲ್ ಕಂಡೆಂಗುಂ ಎಸರ್ತ್
ಮರಣತ್ತೆ ಚಿಂತೆ ಗಾಕ್ಕೊನೂ ಪುರ್ಸೊತ್ತ್

ನಲ್ಲಾವೊನು ನಾ ನಾಲ ಚೊನ್ನೊರು ಮುದ್ದತ್
ಪೋಯಿತ್ತ್ ಅರ್ಸ ಕೊರೊಡಿ ಇಲ್ಲದ್ ಶಿದ್ದತ್
ನಾಲತ್ತೆ ನಾಲುಂ ಪೋಯೆದುಂ ಕರಾಮತ್
ನಿಕ್ಕಾಯೆದೊನ್ನೆ ನಿಂಡೆ  ನಾಲ್ ಫಲೀಹತ್
ಇಂಡಾಕ್ಕೊಗುಲ್ಲೇ ದಿಂಡ್ ತೀರ್ಕ್ ಸಲಾಮತ್
ನಾಲತ್ತ್-ಗಾಯಿ ಬೆಚ್ಚಿರಂಡ ಮಲಾಮತ್

〰〰❁✿🌹🌹✿❁ 〰〰
*✒ದುಆ ವಸಿಯ್ಯತುಂಡು
ಮುಸಾಫಿರಾಯ ನಂಡೊ🤲*
〰〰❁✿🌹🌹✿❁ 〰〰

Friday, 10 July 2020

ಅಂಗೀಕೃತ ತ್ವರೀಖತುಗಳು

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

01. ಅನ್ನಖ್ಷಬನ್ಧೀ ======== ಖ್ವಾಜಗಾನ್ ಬಹಾಉದ್ದೀನ್ ನಕ್ಷಬಂಧೀ .
02. ಖಾದಿರಿಯ್ಯ ======== ಅಬ್ದುಲ್ ಖಾದಿರ್ ಜೀಲಾನಿ .
03. ಷಾದುಲಿಯ್ಯ ======== ಅಬುಲ್ ಹಸನ್ ಅಷ್ಷಾದುಲಿ .
04. ರಿಫಾಯಿಯ್ಯ ======== ಅಹ್ಮದ್ ಕಬೀರ್ ಅರ್ರಿಫಾಯಿ .
05. ಅಹ್ಮದಿಯ್ಯ ========= ಅಹ್ಮದ್ ಶಂಸುದ್ದೀನ್ ಬಿನ್ ಈಸ ಮರ್ಮರವಿ .
06. ದಸೂಖಿಯ್ಯ ======== ಇಬ್ರಾಹೀಂ ಅದ್ದಸೂಖಿ .
07. ಅಕ್ಬರಿಯ್ಯ ========= ಶೈಖ್ ಅಲ್ ಅಕ್ಬರ್ ಇಬ್ನು ಅರಬಿ .
08. ಮೌಲವಿಯ್ಯ ======== ಜಲಾಲುದ್ದೀನ್ ಮುಹಮ್ಮದ್ ರೂಮಿ .
09. ಖುಬ್ರವಿಯ್ಯ ========= ನಜ್ಮುದ್ದೀನ್ ಖುಬ್ರ.
10. ಸುಹ್ರವರ್ದಿಯ್ಯ ======= ಲಿಯಾಉದ್ದೀನ್ ಅಬೂ ನಜೀಬ್ ಸುಹ್ರವರ್ದಿ (ಶಹಾಬುದ್ದೀನ್ ಉಮರ್ ಸುಹ್ರವರ್ದಿ) .
11. ಖಲ್ವತಿಯ್ಯ ========= ಉಮರ್ ಅಲ್ ಖಲ್ವತಿ . (ಹಸನುಲ್ ಬಸ್ವರಿ) .
12. ಜಲ್ವತಿಯ್ಯ ========= ಅಕ್ಬಿಯಿಕ್ ಸುಲ್ತಾನ್ . (ಇಸ್ಮಾಈಲುಲ್ ಹಖ್ಖುಲ್ ಬರೂಸವಿ).
13. ಬಗ್ದಾಷಿಯ್ಯ ======== ಹಾಜಿ ಬಕ್ತಾಷ್ ವಲೀ ಬಾಲಿಂ ಸುಲ್ತಾನ್ .
14. ಗಝ್ಝಾಲಿಯ್ಯ ======== ಅಬೂ ಹಾಮಿದ್ ಮುಹಮ್ಮದುಬ್ನು ಮುಹಮ್ಮದುಲ್ ಗಝ್ಝಾಲಿ .
15. ರೂಮಿಯ್ಯ ========= ಜಲಾಲುದ್ದೀನ್ ಮುಹಮ್ಮದ್ ರೂಮಿ .
16. ಸಅದಿಯ್ಯ =========
17. ಚಿಸ್ತಿಯ್ಯ ========== ಗರೀಬ್ ನವಾಝ್ ಖಾಜಾ ಮುಈನುದ್ದೀನ್ ಚಿಸ್ತಿ .
18. ಶಅಬಾನಿಯ್ಯ ========
19. ವಲ್ಕಾಷನಿಯ್ಯ =======
20. ಹಂಝವಿಯ್ಯ ========
21. ಬೈರಾಮಿಯ್ಯ ======== ಹಾಜಿ ಬೈರಾಂ .
22. ಅಷಾಖಿಯ್ಯ =========
23. ಬಕರಿಯ್ಯ ========== ಅಹ್ಮದ್ ಬಿನ್ ಅಲ್ ಸಿದ್ದೀಖ್ ಅಲ್ ಗುಮರಿ .
24. ಉಮರಿಯ್ಯ =========
25. ಉಸ್ಮಾನಿಯ್ಯ ========
26. ಅಲವಿಯ್ಯ ========== ಇಬ್ನು ನುಸೈರ್ .
27. ಅಬ್ಬಾಸಿಯ್ಯ =========
28. ಝೈನಬಿಯ್ಯ =========
29. ಈಸವಿಯ್ಯ ========== ಶೈಖುಲ್ ಕಾಮಿಲ್ ಮುಹಮ್ಮದ್ ಅಲ್ ಹಾದಿ ಬಿನ್ ಈಸಾ .
30. ಬುಹೂರಿಯ್ಯ =========
31. ಹದ್ದಾದಿಯ್ಯ ========== ಅಬ್ದುಲ್ಲಾಹಿಬ್ನು ಅಲವಿ ಅಲ್ ಹದ್ದಾದ್ .
32. ಗೈಬಿಯ್ಯ ===========
33. ಹಳರಿಯ್ಯ =========== ದಾಊದ್ ಅಲ್ ಲಾಹಿರಿ .
34. ಷತ್ತ್ವಾರಿಯ್ಯ ========== ಸಿರಾಜುದ್ದೀನ್ ಅಬ್ದುಲ್ಲ ಷತ್ತಾರ್ .
35. ಬುಯೂಮಿಯ್ಯ ========
36. ಮಲಾಮಿಯ್ಯ ========= ಅಬೂ ಅಬ್ದುರ್ರಹ್ಮಾನ್ ಅಸ್ಸುಲ್ಲಮಿ .
37. ಐದರೂಸಿಯ್ಯ ========= ಸಯ್ಯಿದ್ ಅಬೂಬಕರ್ ಅಲ್ ಅದಾನಿಬ್ನು ಅಬ್ದುಲ್ಲಾ ಅಲ್ ಐದರೂಸ್ .
38. ಮತ್ಬೂಲಿಯ್ಯ =========
39. ಸುಂಬುಲಿಯ್ಯ ========= ಸುಂಬುಲ್ ಸಿನಾನ್ ಅಫೆಂದಿ .
40. ಉವೈಸಿಯ್ಯ ========== ಉವೈಸುಲ್ ಖರ್ನಿ
 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಮನ್ಸೂರ್ ಅಲ್ ಹಲ್ಲಾಜ್ (ರಅ)

*🌾ಮೊಳಕೆ🌾*
💐💐💐💐

*ಮನ್ಸೂರ್ ಅಲ್ ಹಲ್ಲಾಜ್ (ರ.ಅ)*
🍀🍀🍀🍀🍀🍀🍀🍀🍀🍀

ಸೂಫಿಗಳಲ್ಲಿ ಪ್ರಸಿಧ್ಧರೂ ತ್ಯಾಗಿಯೂ ಆಗಿದ್ದ ಮಹಾನರಾಗಿದ್ದರು *ಮನ್ಸೂರ್ ಅಲ್ ಹಲ್ಲಾಜ್* (ರಅ). ಪೂರ್ಣ ಹೆಸರು ಅಬುಲ್ ಮುಗೀಸ್ ಅಲ್ ಹುಸೈನ್ ಬಿನ್ ಮನ್ಸೂರ್ ಅಲ್ ಹಲ್ಲಾಜ್ (ರಅ). ಪೇರ್ಶ್ಯನ್ ಸೂಫೀ ಆಧ್ಯಾತ್ಮಿಕ ಲೋಕದ ಚಕ್ರವರ್ತಿಗಳಲ್ಲಿ ಅಗ್ರಗಣ್ಯರಾಗಿದ್ದರು . “ಅನಲ್ ಹಖ್” ಎಂಬ ಒಂದು ಪ್ರಖ್ಯಾಪನೆಯಿಂದ ಎಂದೆಂದೂ ಸ್ಮರಿಸಲ್ಪಡುವ ಒಬ್ಬರು ವಿವಾದ ಪುರುಷರಾಗಿ ಮಾರ್ಪಟ್ಟರು . ಪರಮ ಸತ್ಯ ನಾನಾಗಿರುವೆನು ಎಂಬ ಅರ್ಥ ಬರುವ ಪದ ಬಳಕೆಯನ್ನು ದೈವ ವಾದವಾಗಿ ಕಂಡವರು ಹಲ್ಲಾಜರನ್ನು ಬೇಟೆಯಾಡಲು ಶುರುಮಾಡಿದರು . ಅನುಚರರು ಆ ಮಾತನ್ನು ಅರ್ಥೈಸಿರುವುದು ಈ ರೀತಿಯಲ್ಲಾಗಿತ್ತು "ನಾನು ಪರಮ ಸತ್ಯದಲ್ಲಿ ಪೂರ್ಣಾವಾಗಿ ವಿಲೀನನಾಗಿರುವೆನು" . ಸೂಫೀ ಸಂತರುಗಳ ಅತ್ಯುನ್ನತಾವಸ್ಥೆಯಾದ *ಫನಾಉಲ್ ಫನಾ* ತಲುಪಿದ ಹಲ್ಲಾಜರ ಪರಾಮರ್ಶೆಗಳು ಕಾರಣವಾಗಿ ಅವರು ಕೊಲ್ಲಲ್ಪಟ್ಟರು.

*ಜೀವನ*

ಕ್ರಿ.ಶ 857 ರಲ್ಲಿ ಪೇರ್ಶ್ಯಾದ ಬೈಸ ಎಂಬಲ್ಲಿ  ಜನಿಸಿದರು . ತಂದೆ ತಾಯಿ ಪಾರ್ಸಿ ಧರ್ಮದವರಾಗಿದ್ದರು , ತನ್ನ ಬಾಲ್ಯದಲ್ಲೇ ಮುಸ್ಲಿಮರ ಪವಿತ್ರ ಗ್ರಂಥವನ್ನು ಕಂಟಪಾಠ ಮಾಡಿದರು . ಇಸ್ಲಾಮಿಕ ಕರ್ಮ ಶಾಸ್ತ್ರ ಮತ್ತು ಹದೀಸ್ ಎಂಬ ಪ್ರವಾದಿ ಚರ್ಯೆಯನ್ನು ಸುಧೀರ್ಘ ಕಾಲ ಕಲಿತರು . ತಸ್ತರಿ, ಬಸ್ರ, ಖುರಾಸಾನ್, ತುರ್ಕಿಸ್ಥಾನ್, ಚೆಚನ್ಯ, ಮಕ್ಕಾ ದಲ್ಲೂ ವಿಧ್ಯೆಗಾಗಿ ಸಂಚರಿಸುತ್ತಾ ಸುಧೀರ್ಘ ವರ್ಷಗಳ ಕಾಲ ಕಲಿಕೆಯಲ್ಲೇ ಮುಂದುವರೆದು ತಮ್ಮ ಮಾತೃ ಭಾಷೆ ಪಾರಿಸಿಗಿಂತಲೂ ಅರಬಿ ಭಾಷೆಯಲ್ಲಿ ನಿಪುಣತೆ ಹೊಂದಿದ್ದರು . ಖುರ್-ಆನ್ ಕಂಟಪಾಠ ಮಾಡಿದ ಹಲ್ಲಾಜರಿಗೆ ಧ್ಯಾನ ಮಾರ್ಗ ತಿಳಿಯಲು ಅಧಿಕ ಸಮಯವೇನೂ ಬೇಕಾಗಿ ಬರಲಿಲ್ಲ.

*ಆಧ್ಯಾತ್ಮಿಕತೆಯತ್ತ ಪಯಣ*

ಪ್ರಸಿಧ್ದ ಸೂಫೀ ಸಂತರಾಗಿದ್ದ *ದುನ್ನೂರುಲ್ ಮಿಸ್ರಿ* ಯವರ ಶಿಷ್ಯ ಪ್ರಮುಖರಾದ ತುಸ್ತರಿ ಮತ್ತು ಜುನೈದುಲ್ ಬಗ್ದಾದಿಯವರ ಶಿಷ್ಯತ್ವ ಸ್ವೀಕರಿಸಿದರು . ಅನೇಕ ಪಂಡಿತರಿಂದಲೂ, ಸೂಫಿಗಳಿಂದಲೂ, ಮಕ್ಬರಗಳಿಂದಲೂ ಸಂಪನ್ನವಾಗಿತ್ತು ಅಂದಿನ ಬಗ್ದಾದ್ . ತನ್ನ ಹದಿನಾರನೇ ವಯಸ್ಸಿನಲ್ಲಿ ಬಗ್ದಾದಿಗೆ ತೆರಳುವ ತೀರ್ಮಾನ ತೆಗೆದುಕೊಳ್ಳಲು ಇದುವೇ ಕಾರಣವಾಗಿತ್ತು . ಬಗ್ದಾದ್ ತಲುಪಿದ ಮನ್ಸೂರ್ ಅಲ್ ಹಲ್ಲಾಜರು ಸಅದ್ ಬಿನ್ ತುಸ್ತರಿಯವರಿಂದ ತ್ವರೀಖತ್ ಸ್ವೀಕರಿಸಿ ಬೈಅತ್(ಅನುಸರಣಾ ಪ್ರತಿಜ್ಞೆ) ನಡೆಸಿ ಶಿಷ್ಯರಾದರು . ಅಲ್ಲಾಹನ ದಿಕ್ರ್ ಗಳಲ್ಲಿ ತಲ್ಲೀನರಾಗುವ ಸದಸ್ಸುಗಳಲ್ಲಿ ಹಲ್ಲಾಜರು ಫನಾದ ಅವಸ್ಥೆಗೆ ನೀಗುತ್ತಿರುವುದನ್ನು ಕಂಡ ತುಸ್ತರಿಯವರು ಶಿಷ್ಯನೊಡನೆ ಯಾತ್ರೆ ಹೊರಡಲು ಆಜ್ಞೆಯಿಟ್ಟರು .
ಶರೀಅತ್ (ನಿಯಮ), ತ್ವರೀಖತ್(ಮಾರ್ಗ), ಹಖೀಖತ್(ಪರಮ ಸತ್ಯ), ಮಅರಿಫತ್(ಬ್ರಹ್ಮ ಜ್ಞಾನ) ಈ ರೀತಿಯಾಗಿದೆ ಸೂಫಿಸಂನ ಮೆಟ್ಟಿಲುಗಳು . ಶರೀಅತ್ ಹಿಡಿದು ತ್ವರೀಖತ್ ಸ್ವೀಕರಿಸುವುದರೊಂದಿಗೆ ಸೂಫಿಸಂ ಪ್ರಾರಂಭವಾಗತ್ತದೆ. ಹಖೀಖತು ದಾಟಿ ಮಅರಿಫತ್ ತಲುಪುವ ಸೂಫಿಗಳು ಆತ್ಮೀಯ ಮಾರ್ಗದಲ್ಲಿ ಉನ್ನತಿಗೇರುವುದರೊಂದಿಗೆ ಕೆಲವರು ಉನ್ಮಾದ ಸ್ಥಿತಿ ತಲುಪುತ್ತಾರೆ . ಇದು ಒಂದು ರೀತಿಯ ಪರೀಕ್ಷಣಾ ಘಟ್ಟವಾಗಿದೆ , ಈ ಅವಸ್ಥೆಯಲ್ಲಿ ಸೂಫಿಗಳು ಇಸ್ಲಾಮಿನ ನಿಯಮ ಶಾಸ್ತ್ರವಾದ ಶರೀಅತ್ ಪೂರ್ಣವಾಗಿ ಅನುಸರಿಸಬೇಕೆಂದಿಲ್ಲ. ಉನ್ಮಾದ ಸ್ಥಿತಿಯಲ್ಲಿನ ನಡತೆಗಳು ಸಾಮಾನ್ಯ ಜನರಲ್ಲಿ ಗೊಂದಲವನ್ನು ಉಂಟುಮಾಡುತ್ತದೆ . ಈ ಕಾರಣದಿಂದ ಏಕಾಂತ ವಾಸ ಅಥವಾ ಸಂಚಾರಗಳು ನಡೆಸಬೇಕಾಗುತ್ತದೆ . ಈ ಕಾರಣದಿಂದಾಗಿದೆ ಹಲ್ಲಾಜರನ್ನು ಯಾತ್ರೆ ಹೋಗಲು ನಿರ್ಧೇಶಿಸಿರುವುದು . ಅಥವಾ ಆಧ್ಯಾತ್ಮಿಕತೆಯ ಉನ್ನತ ಶಿಖರಗಳನ್ನು ಶಿಷ್ಯನಾದ ಹಲ್ಲಾಜರು ತಲುಪಿರುವರು ಎಂದು ಮನಗಂಡ ಗುರು ಯಾತ್ರೆಗೆ ಆದೇಶವಿತ್ತರು ಎಂದು ವ್ಯತ್ಯಸ್ಥ ಅಭಿಪ್ರಾಯಗಳಿವೆ .

*ಮಕ್ಕಾದಲ್ಲಿ*

ಪವಿತ್ರ ಮಕ್ಕಾ ತಲುಪಿದ ಮನ್ಸೂರ್ ಅಲ್ ಹಲ್ಲಾಜ್ ಮಕ್ಕಾದ ಮಸೀದಿಯಲ್ಲಿ ತಡೆಯಲಾರದ ಸೆಕೆ ಮತ್ತು ಕಠಿಣವಾದ ಚಳಿಯನ್ನೂ ಲೆಕ್ಕಿಸದೆ ಸುಮಾರು ವರ್ಷಗಳು ಕಳೆದರು. ಕಷ್ಟಗಳನ್ನು ಸಹಿಸುತ್ತಾ ಶರೀರದ ಇಛ್ಛೆಗಳೊಂದಿಗೆ ಹೋರಾಡುತ್ತಿದ್ದರು. ಪವಿತ್ರ ಮಕ್ಕಾ ಮಸೀದಿಯಲ್ಲಿ ಯಾವುದೇ ಮೇಲ್ಚಾವಣಿಯ ಅಡಿಯಲ್ಲೂ ಕುಳಿತುಕೊಳ್ಳುತ್ತಿರಲಿಲ್ಲ. ಒಂದು ವರ್ಷ ಪೂರ್ತಿ ಉಪವಾಸವು ಸ್ವಲ್ಪ ನೀರು ಮತ್ತು ತುಂಡು ರೊಟ್ಟಿಯಿಂದ ಮಾತ್ರ ಉಪವಾಸ ತೆರೆಯುತ್ತಿದ್ದರು. ತಡೆಯಲಾರದ ಸೆಖೆಯಲ್ಲೂ ಜಬಲ್ ಅಬೀ ಖುಬೈಸ್ ಪರ್ವತದ ಮೇಲೆ ಅಲ್ಲಾಹನ ಧ್ಯಾನದಲ್ಲಿ ಕುಳಿತುಕೊಳ್ಳುತ್ತಿದ್ದರು . ಮಕ್ಕಾದ ಸೂಫೀ ಪ್ರಮುಖರಾಗಿದ್ದ ಶೈಖ್ ಅಬ್ದುಲ್ಲಾಹಿಲ್ ಮಗ್ರಿಬಿಯವರು ತಮ್ಮ ಶಿಷ್ಯರೊಂದಿಗೆ ಹಲ್ಲಾಜರನ್ನು ಸಂದರ್ಶಿಸಲು ಹೊರಟರು . ಯಾವತ್ತೂ ಕುಳಿತುಕೊಳ್ಳುತ್ತಿದ್ದ ಹಿಜ್ರ್ ಇಸ್ಮಾಈಲ್ ಪಕ್ಕದಲ್ಲಿ ಹಲ್ಲಾಜರನ್ನು ಕಾಣದೆ ಹುಡುಕುತ್ತಾ ಅಬೀ ಖುಬೈಸ್ ಪರ್ವತವೇರಿದರು . ಆವಾಗ ಪರ್ವತ ಶಿಖರದಲ್ಲಿರುವ ಬಂಡೆಯ ಮೇಲೆ ಶಿರೋ ವಸ್ತ್ರ ಧರಿಸದೆ ನಗ್ನ ಕಾಲುಗಳೊಂದಿಗೆ ಹಲ್ಲಾಜರು ಕುಳಿತಿರುವುದನ್ನು ಕಂಡರು. ಶರೀರ ಪೂರ್ತಿ ಬೆವರ ಹನಿಗಳು ಹೊರಟು ಧರೆಯನ್ನು ಚುಂಬಿಸುತ್ತಿರುವುದನ್ನು ಕಂಡ ಮಗ್ರಿಬಿಯವರು ತಮ್ಮ ಶಿಷ್ಯರೊಂದಿಗೆ ಹೀಗೆ ಹೇಳಿದರು"ಮನಸು ತುಂಬಾ ವಿಶ್ವಾಸ ತುಳುಕುತ್ತಿದೆ ,ಇವರು ಕ್ಷಮಿಸಲಾಗದ ಪರೀಕ್ಷಣೆಗೆ ಒಳಗಾಗಲಿರುವರು" .

 *ಬಸರಾದಲ್ಲಿ*

ಬಸರಕ್ಕೆ ಯಾತ್ರೆ ಹೊರಟ ಹಲ್ಲಾಜರು ಮತ್ತೊಬ್ಬರು ಸೂಫಿ ವರ್ಯರಾದ ಅಂರ್ ಬಿನ್ ಉಸ್ಮಾನ್ ರವರ ಶಿಷ್ಯತ್ವ ಸ್ವೀಕರಿಸಿದರು. ಮುಂದುವರೆಯುತ್ತಾ ಬಸರದ ಅಬೂ ಯಅಖೂಬುಲ್ ಅಖ್ತಾಈಯವರ ಮಗಳನ್ನು ವಿವಾಹವಾದರು. ಉನ್ಮಾದ ಸ್ಥಿತಿ ಮರುಕಳಿಸಿದಾಗ, ಅವರ ಮಾತುಗಳನ್ನು ವಿಮರ್ಷಿಸುತ್ತಾ ಅಂರ್ ರವರು ಅವರನ್ನು ಹೊರಡುವಂತೆ ಕೇಳಿಕೊಂಡರು. ಅಲ್ಲಿಂದ ಬೀದಿಗಿಳಿದ ಹಲ್ಲಾಜರನ್ನು ಜನರು ಮಾನಸಿಕ ಅಸ್ವಸ್ಥರೆಂದು ಹೀಯಾಳಿಸಿದರು . ಅಲ್ಲಿಂದ ಹೊರಟ ಹಲ್ಲಾಜರು ಸೂಫೀ ಸಂತರಾದ ಜುನೈದುಲ್ ಬಗ್ದಾದಿಯ ಸನ್ನಿಧಿ ಸೇರಿದರು . ದಡ ಸೇರಲಿರುವ ಹಡಗಿನಂತೆ ಸದಾ ಸಮಯವೂ ಹಲ್ಲಾಜರು ಸೃಷ್ಟಿಕರ್ತನನ್ನು ಅರಸುತ್ತಾ ಅಲೆದಾಡಿದರು. ಅದರೊಂದಿಗೆ ಹಲ್ಲಾಜರು ಮಅರಿಫತ್ ಎಂಬ ಉನ್ನತ ಪದವಿಗೆ ತಲುಪಿದರು . ಆಧ್ಯಾತ್ಮಿಕತೆಯ ಮತ್ತಿನಲ್ಲಿ ಮುಳುಗಿದ ಹಲ್ಲಾಜರನ್ನು ಜುನೈದುಲ್ ಬಗ್ದಾದಿಯೂ ಹೊರಗಿಟ್ಟರು .
*ಭುಗಿಲೆದ್ದ ವಿವಾದ*

ಬೀದಿಗಿಳಿದ ಹಲ್ಲಾಹರು ನಾನು ನಾನು ನೀನು ಎಂಬ ಸ್ನೇಹ ಮಾದುರ್ಯದಲ್ಲಿ ಮುಳುಗಿದರು. ಹಲವು ವೇಳೆಗಳು ಇದೇ ರೀತಿಗೆ ಮರುಕಳಿಸುತ್ತಿತ್ತು , ಆವಾಗ ತಾನು ದೇವ ಸನ್ನಿಧಿಯಲ್ಲಿ ಇರುತ್ತಿದ್ದೆನೆಂದು ಹಲ್ಲಾಜರು ಹೇಳುತ್ತಿದ್ದರು . ಈ ಉನ್ಮಾದ ಸ್ಥಿತಿಯಲ್ಲಿ ಹಲ್ಲಾಜರು "ಅನಲ್ ಹಖ್" ಎಂದು ಪಠಿಸುತ್ತಲೇ ಇದ್ದರು. ಸೃಷ್ಟಿಕರ್ತನ ಅನುಪಮ ಪ್ರೀತಿಯಿಂದ ಹಲ್ಲಾಜರು "ಪರಮ ಸತ್ಯ ನಾನೇ(ಅನಲ್ ಹಖ್)" ಎಂದೂ "ಸುಬ್ಹಾನೀ (ನಾನು ನನ್ನನ್ನು ಪರಿಶುದ್ಧಗೊಳಿಸುವೆನು)" , "ಮಾಫಿಲ್ ಜೈಬಿ ಇಲ್ಲಲ್ಲಾ(ಇಲಾಹನ ಹೊರತು ಬೇರೇನೂ ಜೇಬಲ್ಲಿಲ್ಲ)", "ನಾ ಪ್ರೀತಿಸುವ ನಾನು ಅವನೇ , ನಾ ಪ್ರೀತಿಸುವ ಅವನು ನಾನೇ" "ನನ್ನ ಶಿರೋ ವಸ್ತ್ರದೊಳಗೆ ಇಲಾಹನ್ನಲ್ಲದೆ ನಾನು ಅಡಗಿಸಿಲ್ಲ", "ಪ್ರೀತಿಸುವವನು ನಾನೇ. . . ಪ್ರೀತಿಸಲ್ಪಡುವವನೂ ನಾನೇ. . ." ಈ ರೀತಿಯ ಪದಗಳು , ಕವಿತೆಗಳು ಹಲ್ಲಾಜರ ಮತ್ತುಭರಿತ ಪದಪ್ರಯೋಗಗಳು ಜನರ ವಿಶ್ವಾಸವನ್ನು ನಾಶಗೊಳಿಸುವುದೇ. . ? ಎಂದು ಉಲಮಾಗಳು ಬಯಪಟ್ಟರು . ಅವರಲ್ಲಿ ಅಲಿಯ್ಯಿಬಿನು ಈಸಾ ಹಲ್ಲಾಜರೊಂದಿಗೆ ವಾದಕ್ಕಿಳಿದರು . ಪರಸ್ಪರ ಮಾತಿನೆಡೆಯಲ್ಲಿ ಹಲ್ಲಾಹರು ಈಸರವರೊಂದಿಗೆ "ನೀವು ನಿಂತಲ್ಲೇ ನಿಲ್ಲಿ ಅಧಿಕವೇನು ಮುಂದುವರೆಯಬೇಡ, ಹಾಗೇನಾದರೂ ಮಾಡಲು ಶ್ರಮಿಸಿದರೆ ತಮ್ಮನ್ನು ಭೂಮಿಯೊಂದಿಗೆ ಬುಡಮೇಲು ಮಾಡುವೆ" ಈ ಮಾತು ಕೇಳಿದಂತೆ ಈಸರವರು ಸಂವಾದವನ್ನು ನಿಲ್ಲಿಸಿದರು .

*ಆರೋಪಗಳ ಸುರಿಮಳೆ*

ಹಲ್ಲಾಜರ ಮಾತುಗಳು ಕವನಗಳು ಬಗ್ದಾದ್ ನಗರವನ್ನು ತಲ್ಲಣಗೊಳಿಸಿತು. ಹಲ್ಲಾಜರು ಪ್ರವಾದಿ ಎಂದೂ ದೇವನೆಂದೂ ವಾದಿಸಿರುವನೆಂದೂ ಜನ ಆರೋಪಿಸಿ ತಕ್ಕ ಶಿಕ್ಷೆ ನೀಡುವಂತೆ ಕೇಳತೊಡಗಿದರು . ಹದ್ದು ಮೀರಿದ ಹಲ್ಲಾಜರ ನಡತೆ ಜನರನ್ನು ರೊಚ್ಚಿಗೆಬ್ಬಿಸಿತು , ಕೊನೆಗೆ ಹಲ್ಲಾಜರ ಮೇಲೆ ವಿಧಿ ಬರೆಯಲ್ಪಟ್ಟಿತು. ಖಲೀಫ ಮುಖ್ತದಿರ್ ಬಿಲ್ಲಾಹಿಯ ಮಂತ್ರಿ ಹಾಮಿದರು ಹಲ್ಲಾಜರನ್ನು ಪ್ರಶ್ನಿಸಿದರು . ಹಲ್ಲಾಜರು ಎಲ್ಲವನ್ನೂ ನಿಶೇಧಿಸುತ್ತಾ ತನಗೆ ಪ್ರವಾದಿ ಎಂದೋ ದೇವನೆಂದೋ ಯಾವುದೇ ರೀತಿಯ ವಾದವಿಲ್ಲ, ಅಂತವುಗಳಿಂದ ನಾನು ಅಲ್ಲಾಹನಲ್ಲಿ ಬೇಡುವೆನು . ನಾನು ಅಲ್ಲಾಹನ ಒಬ್ಬ ದಾಸ ಮಾತ್ರವಾಗಿರುವೆನು, ಉಪವಾಸ ಮತ್ತು ನಮಾಝ್ ಸ್ವಲ್ಪ ಜಾಸ್ತಿ ಮಾಡುತ್ತಿರುವೆನೇ ಹೊರತು ಬೇರೇನೂ ನನ್ನಲ್ಲಿ ಇಲ್ಲ. ಆರೋಪಗಳು ಜಾಸ್ತಿಯಾಗ ತೊಡಗಿದಾಗ ಖಲೀಫರು ಉಲಮಾಗಳ ಮೊರೆ ಹೋದರು . ಉಲಮಾಗಳು ಮೂರು ವಿಭಾಗಗಳಾಗಿ ನಿಂತರು . ಪ್ರಮುಖ ವಿಭಾಗವು ಹಖೀಖತ್ ಮತ್ತು ಮಅರಿಫತ್ ಇವೆರಡೂ ಅಧೃಶ್ಯ ಕಾರ್ಯವಾಗಿರೋದರಿಂದ ಹಲ್ಲಾಜರು ಮಹಾ ಪಾಪ ಮಾಡಿದರೆಂದೂ , ಕ್ಷಮೆ ಕೇಳದ ಹೊರತು ವಧಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು . ಅವರು ನೀಡಿದ ಕಾರಣ ನಮಾಝ್ ನಿರ್ವಹಿಸದ ವಲಿಯ್ಯಿನ ಮುಂದೆ ಖಡ್ಗ ಬೀಸಿದ ಎರಡನೇ ಖಲೀಫ ಉಮರ್(ರಅ) ರವರ ನಡತೆಯಾಗಿತ್ತು . ಆದರೆ ಮತ್ತೊಂದು ವಿಭಾಗ ಮೌನವಹಿಸಿತು , ಮೂರನೇ ವಿಭಾಗದವರು ಹಲ್ಲಾಜರು ಉನ್ಮಾದ ಸ್ಥಿತಿಯಲ್ಲಿರುವುದರಿಂದ ಶರೀಅತಿನ ನಿಯಮಕ್ಕೆ ಒಳಗಾಗುವುದಿಲ್ಲ ಎಂಬ ವಾದವಾಗಿತ್ತು . ಉಲಮಾಗಳ ಅಭಿಪ್ರಾಯಗಳಿಂದ ತೃಪ್ತಿಯಾಗದೆ ಖಲೀಫರು ಸೂಫಿಗಳನ್ನು ಸಮೀಪಿಸಿದರು . ಆಂತರಿಕ ಅರ್ಥ ಬಲ್ಲವರು ಸೂಫಿಗಳು ಮಾತ್ರವಾಗಿದ್ದಾರೆಂದೂ , ಈ ರೀತಿಯ ಪದ ಬಳಕೆಯು ಸಾಮನ್ಯ ಜನರೆಡೆಯಲ್ಲಿ ಮುಜುಗರಕ್ಕೊಳಗಾಗುವ ನಡವಳಿಕೆ ಕಂಡುಬರುವುದೆಂದೂ , ಈ ರೀತಿಯ ಮಾತುಗಳನ್ನಾಡುವವರ ವಿರುದ್ದ ಶರೀಅತ್ ಕಾನೂನು ಕ್ರಮ ಕೈಗೊಳ್ಳಬಹುದೆಂದೂ , ಹಲ್ಲಾಜ್ ಮತ್ತು ಸೃಷ್ಟಿಕರ್ತನ ನಡುವಿನ ಬಂಧವನ್ನು ಅರಸುವ ಅವಶ್ಯಕತೆ ಖಲೀಫರಿಗೆ ಇಲ್ಲವೆಂದೂ, ಖಲೀಫ ತೀರ್ಪು ನೀಡಬೇಕಾದುದು  ಶರೀಅತ್ ಕಾನೂನಿನ ಪ್ರಕಾರವೆಂದೂ ಅವರು ಅಭಿಪ್ರಾಯ ಪಟ್ಟರು.

ಸೂಫೀ ಭಾಷೆಯ ಆಂತರಿಕ ಅರ್ಥಗಳು ಸೂಫಿಗಳಿಗೆ ಮಾತ್ರ ಅರ್ಥವಾಗುವುದಾದರೂ ಮಜ್ತಬ ತಲುಪಿದ ಅವಸ್ಥೆಯಲ್ಲಿ ಹಲ್ಲಾಜರಿಂದ ಹೊರಡುತ್ತಿರುವ ಮಾತುಗಳು ಇಸ್ಲಾಮಿಕ ಶರೀಅತ್ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ ಎಂಬುವುದರಲ್ಲಿ ಯಾರಿಗೂ ವಿರೋಧವಿರಲಿಲ್ಲ.

*ಸೂಫೀ ಚಕ್ರರ್ತಿಯ ಮರಣ*

ನಿಯಮೋಪದೇಶ ಲಭ್ಯವಾದಂತೆ ಬಗ್ದಾದಿನ ಅಬ್ಬಾಸಿಯ ಖಲೀಫರಾದ *ಮುಖ್ತದಿರ್ ಬಿಲ್ಲಾಹಿ ಹಲ್ಲಾಜರೊಂದಿಗೆ ಪಶ್ಚಾತಾಪ ಪಡಲು ಕೇಳಿಕೊಂಡರು , ಆದರೆ ಹಲ್ಲಾಜರು ತಾನು ಪಶ್ಚಾತಾಪ ಪಡಲು ಯಾವ ತಪ್ಪನ್ನೂ ಮಾಡಿಲ್ಲವೆಂದು ಹೇಳುತ್ತಾ ಮುಗುಳ್ನಗೆಯೊಂದಿಗೆ ಕವನ ಆಲಾಪಿಸುತ್ತಾ ನಡೆದರು . ಇದರೊಂದಿಗೆ ಅನೇಕ ಸಮಯಗಳ ಕಾಲಾವಕಾಶಗಳು ನೀಡಿದ ಬಗ್ದಾದ್ ಸುಪ್ರೀಂ ಕೋರ್ಟ್ ವಧಶಿಕ್ಷೆ ಪ್ರಖ್ಯಾಪಿಸಿತು . ಖಾಝಿಯಾಗಿದ್ದ ಹಲ್ಲಾಜರ ಗುರು ಜುನೈದುಲ್ ಬಗ್ದಾದಿಯವರು ಸಹಿ ಹಾಕಲಾಗದೆ ಮೌನಿಯಾದರು . ಆಗ ಹಲ್ಲಾಜರು "ಗುರೋ. . ಸೂಫಿಸಂನ ಅಂಗಿಯನ್ನು ತೆಗೆದಿಟ್ಟಲ್ಲದೇ ನಿಮ್ಮಿಂದ ಸಹಿ ಹಾಕಲು ಸಾಧ್ಯವಿಲ್ಲ" ಎಂದು ಹೇಳಿದಾಗ ಜುನೈದುಲ್ ಬಗ್ದಾದಿಯವರು ನಿಯಮಜ್ಞರು ಧರಿಸುವ ಅಂಗಿಯುಟ್ಟು ಕೊಂಡು ಬಂದು ಸಹಿ ಹಾಕಿದರು . ನಂತರ ತನ್ನ ಕಣ್ಣು ತುಂಬಿಕೊಂಡು ಬಗ್ದಾದಿಯವರು ಹೀಗೆ ಹೇಳಿದರು *"ನಾನು ಮತ್ತು ಹಲ್ಲಾಜ್ ಒಂದೇ . . ಹುಚ್ಚು ನನ್ನನ್ನು ರಕ್ಷಿಸಿತು ಯುಕ್ತಿ ಹಲ್ಲಾಜರನ್ನು ಕೊನೆಗೊಳಿಸಿತು"* . ಕ್ರಿ. 922-ರಲ್ಲಿ ದುಲ್ಹಿಜ್ಜ 24 ರಂದು *ಹಲ್ಲಾಜ್ ಬಿನ್ ಮನ್ಸೂರ್* ಎಂಬ ಸೂಫೀ ಚಕ್ರವರ್ತಿಯ ವಧಶಿಕ್ಷೆಯು ಸಾರ್ವಜನಿಕವಾಗಿ ನಡೆಸಿದರು . ಕ್ರೂರವಾಗಿ ಹಲ್ಲೆಗೈದು ಕೈಕಾಲುಗಳನ್ನು ತಲೆಯನ್ನು ಕಡಿದು, ವಿವಿಧ ಅಂಗಾಂಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಬೆಂಕಿಯಿಟ್ಟು ಬಸ್ಮವನ್ನು ನದಿಗೆಸೆದು ಜನತೆಯು  ಸಂಭ್ರಮಿಸಿದರು . ಮೂರನೇ ದಿನ ಯೂಪ್ರಟೀಸ್ ನದಿಯಲ್ಲಿ ಪ್ರವಾಹ ಉಂಟಾಯಿತು . ತನ್ನ ಮರಣ ಸಮೀಪಿಸಿದಾಗಲೂ ಕೊಲ್ಲಲು ಬಂದವರ ಮುಖವನ್ನು ನೋಡಿ ಈ ರೀತಿ ಪ್ರಾರ್ಥಿಸಿದರು *"ನೀವು ನನ್ನನ್ನು ಕೊಂದರೂ. . . ನಿಮಗೆ ಪ್ರತಿಫಲ ಲಭಿಸುವುದು , ನನಗೆ ಶಹೀದಿನ ಪದವಿಯೂ .. ಅಲ್ಲಾಹನೇ .. ನನಗೆ ನಿನ್ನಲ್ಲಿಗಿರುವ ದೂರವನ್ನು ಕಡಿಮೆ ಮಾಡುತ್ತಿದ್ದಾರೆ . ಇವರ ಸಂತೋಷ, ಆನಂದಗಳನ್ನು ಇವರಲ್ಲಿ  ಸದಾ ಕರುಣಿಸು"* .

 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಪ್ರೇಮ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
*ಪ್ರೇಮ.!?*
〰〰❁✿🌹🌹✿❁ 〰〰


ಮುಸ್ಲಿಂ ಹೆಣ್ಣು ಮಕ್ಕಳಿಗೆ ಹೊರಗಡೆ ಅಲೆದಾಡಲು, ಗಂಡು ಮಕ್ಕಳೊಂದಿಗೆ ಬೆರೆಯಲು , ಸಲ್ಲಪಿಸಲು ಪ್ರಪಂಚದ ಎಲ್ಲಾ ಕಡೆಗಳಲ್ಲೂ ಸೌಕರ್ಯವಿದೆ . ಪೋಷಕರು , ಅಧ್ಯಾಪಕರು ಮತ್ತು ಸಮುದಾಯ ನಾಯಕರುಗಳು ನಿಯಂತ್ರಣವಿಟ್ಟಿದ್ದರೂ, ಪ್ರೇಮ ಸಲ್ಲಾಪಗಳನ್ನಾಗಲೀ, ಪ್ರೀತಿ ಬಂಧಗಳನ್ನಾಗಲೀ , ಶಾರೀರಿಕ ಲೈಂಗಿಕ ಬಂಧಗಳನ್ನಾಗಲೀ ತಡೆಯಲು ಸಾಧ್ಯವಾಗಲಿಲ್ಲ. ವ್ಯಕ್ತಿ ಸ್ವಾತಂತ್ರ್ಯ, ತಮ್ಮ ಅವಕಾಶಗಳು , ವಿಧ್ಯಾಬ್ಯಾಸ, ಕಸುಬು ಇವೆಲ್ಲವುಗಳು ಎಲ್ಲಾ ಧರ್ಮೀಯರಂತೆ ಮುಸ್ಲಿಂ ಹೆಣ್ಣುಮಕ್ಕಳೂ ಪಡೆಯುತ್ತಿದ್ದಾರೆ .

ಎಲ್ಲಾ ತಡೆಗಳನ್ನಿಟ್ಟು ಭದ್ರವಾಗಿಡಲು ಶ್ರಮಿಸುತ್ತಿರುವ ಕುಟುಂಬಗಳಲ್ಲೂ ಕೂಡ ಗಂಡು ಹೆಣ್ಣು ಸಮ್ಮಿಶ್ರವಾಗಿ ಶಾರೀರಿಕ ಹಾಗೂ ಲೈಗಿಕ ಬಂಧಗಳಲ್ಲಿ ತೊಡಗಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ . ಲೈಂಗಿಕತೆಗೆ ಪ್ರೀತಿ ಪ್ರೇಮದ ಅಗತ್ಯವಿಲ್ಲ,  ಸೌಹಾರ್ಧತೆ ಕೂಡಾ ಮನುಷ್ಯರನ್ನು ಕೆಲವೊಮ್ಮೆ ಲೈಂಗಿಕತೆಗೆ ಕೊಂಡೊಯ್ಯುತ್ತದೆ .
ಧಾರ್ಮಿಕ ನಿಯಮಾವಳಿಗಳನ್ನು ಗಾಳಿಗೆ ತೂರಿದ ಆಧುನಿಕ ಗಂಡು ಹೆಣ್ಣು ಬಂಧಗಳು ಧರ್ಮ ಸಂಸ್ಕೃತಿಯನ್ನು ದುರ್ಭಲವಾಗಿಸಿದೆ .

ಮುಸ್ಲಿಂ ಹೆಣ್ಣಿನ ಲೋಕ ಬದಲಾಗಿದೆ , ಒಂದು ಕಾಲದಲ್ಲಿ ಬುರ್ಖಾದಲ್ಲಿ ಶರೀರವನ್ನು ಅಡಗಿಸಿಟ್ಟಿದ್ದವರು , ಇಂದು ಅದೇ ಬುರ್ಖಾವನ್ನು ತಮ್ಮ ಶರೀರ ಉಬ್ಬು ತಗ್ಗುಗಳು ಅನ್ಯರಿಗೆ ಗೋಚರವಾಗುವಂತೆ ಹೊಸ ರೂಪು ಕೊಟ್ಟಿದ್ದಾರೆ .

ಯೌವ್ವನ ತುಂಬಿ ತುಳುಕುವ ಹೃದಯಗಳು , ಸಿನೆಮಾ ತಾರೆಗಳನ್ನು , ಆಟಗಾರರನ್ನು ಮಾದರಿಯನ್ನಾಗಿಸಿ ಪ್ರೀತಿ ಪ್ರೇಮಕ್ಕೆ ಮರುಳಾಗಿ ಹೋಗಿದ್ದಾರೆ . ಕಾಲ್ಪನಿಕ ಪ್ರೇಮ ಕಥೆಗಳನ್ನು ತಮ್ಮ ಗುರಿಯನ್ನಾಗಿಸಿದ ಯೌವ್ವನದ ಚಿಗುರೊಡೆಯುತ್ತಿರುವ ಮೃದು ಹೃದಗಳು. ಎಂಟು ಒಂಬತ್ತು ತರಗತಿಗಳಲ್ಲೇ ಮೊಳಕೆಯೊಡೆಯುವ ಈ ಪ್ರೀತಿ ಪ್ರೇಮಗಳು ಕ್ರಮೇಣ, ತಮ್ಮ ಹಾವಭಾವಗಳನ್ನು ಬದಲಿಸುತ್ತಾ ಇರುಳನ್ನು ಹುಡುಕಲು ಶುರುವಾಗುತ್ತದೆ . ತಾವಿಬ್ಬರಿರುವ ಒಂದು ಲೋಕವನ್ನು ಸಂಕಲ್ಪಿಸುತ್ತಾ ಯಾವುದಾದರೂ ಲಾಡ್ಜ್-ಗಳಲ್ಲೋ, ಗುಡ್ಡೆ-ಗಾಡುಗಳಲ್ಲೋ , ಯಾವುದಾದರೂ ಶಿಥಿಲಗೊಂಡ ಮನೆಯಲ್ಲೋ ತಮ್ಮ ಶಾರೀರಿಕ ಇಚ್ಛೆಗಳನ್ನು ಪೂರೈಸಿಕೊಳ್ಳಲು ನೋಡುತ್ತಾರೆ . ಈ ವಿಧ್ಯಾರ್ಥಿನಿಗಳ ಭಾವನೆ ತಾವು ತಮ್ಮ ಯೌವ್ವನವನ್ನು ಪ್ರೇಮಿಸಿ ಪ್ರೀತಿಸಿ ಆಗ್ರಹಗಳನ್ನು ಪೂರೈಸಿಕೊಂಡರೆ ಅದು ನಮಗೆ ಸಾರ್ಥಕ, ಮುಂದಕ್ಕೆ ಮುಂದೂಡಿದರೆ ಯೌವ್ವನದ ಉಲ್ಲಾಸ ನಿಮಿಶಗಳು ನಷ್ಟವಾದೀತು ಎಂದಾಗಿದೆ .

ಯೂನಿಫೋಂ ಹಾಕಿದ ವಿಧ್ಯಾರ್ಥಿನಿಗಳು ಐಸ್ ಕ್ರೀಂ ಪಾರ್ಲರ್ಗಳಲ್ಲೂ , ಮಾಲ್-ಗಳಲ್ಲೂ , ಕಾಫಿ ಕೆಫೆಗಳಲ್ಲೂ , ಸೈಬರ್ ಸೆಂಟರ್ ಗಳಲ್ಲೂ ತಮ್ಮ ತಮ್ಮ ಗೆಳೆಯ ಗೆಳತಿಯರೊಂದಿಗೆ ಪ್ರೇಮ ಹಂಚಿಕೊಳ್ಳಲು ಅಲೆದಾಡುತ್ತಿದ್ದಾರೆ . ಜಾಗೃತರಾಗಬೇಕಾದ ಪೋಶಕರು ಮಕ್ಕಳಿಗೆ ಬುಧ್ದಿವಾದ ಹೇಳಲು ಹಿಂಜರಿಯುತ್ತಿದ್ದಾರೆ , ಮಕ್ಕಳೇನಾದರು ಎಡವಟ್ಟು ಮಾಡುವರೋ ಎಂಬ ಭಯ. 

ಧಾರ್ಮಿಕತೆಗೆ ಮಂಕು ಬೂದಿ ಎರಚಿದ ಹದಿ ಹರೆಯದ ಯುವಕ-ಯುವತಿಯರು ತಮ್ಮ ಬಾಳ ಬೆಳಕನ್ನು ತಾವಾಗಿಯೇ ನಂದಿಸುತ್ತಿದ್ದಾರೆ. ಪ್ರಾಯದ ಬಿಸುಪಿಗೆ ಹರೆಯದ ಆಸೆಗಳಿಗೆ ಕಡಿವಾಣ ಹಾಕಲಾರದೆ ಕ್ಷಣಿಕ ಸುಖದ ಬೆನ್ನು ಬಿದ್ದು ಜೀವನ ಏನೆಂದು ಅರ್ಥವಾಗುವ ಮೊದಲೇ ಜೀವನಕ್ಕೆ ನಾಂದಿ ಹಾಡುತ್ತಿದ್ದಾರೆ . ಸ್ವ ಶರೀರವನ್ನು ನಿಯಂತ್ರಿಸಲಾಗದ ಯುವತಿಯರನ್ನು ಕಂಡು , ತಮ್ಮ ಮಕ್ಕಳಿಗೆ ಸರಿದಾರಿ ತೋರಿಸಿ ಕೊಡಲಾಗದ ಪೋಷಕರು ತಲೆಯ ಮೇಲೆ ಕೈ ಇಟ್ಟು ಕುಳಿತಿದ್ದಾರೆ .

ಇಷ್ಟಕ್ಕೂ ಕಾರಣವೇನು. . ?
ಇದಕ್ಕೆಲ್ಲಾ ಹೊಣೆ ಯಾರು. . ?
ಸರಿಪಡಿಸಲು ದಾರಿ ಇದೆಯೇ. . ?


ಚಿಂತಿಸಿ,

*ನಿಮ್ಮ ಮಕ್ಕಳು ನಿಮಗೆ ಅನುಗ್ರಹವೆಂದು ನುಡಿದ ಅದೇ ಪವಿತ್ರ ಗ್ರಂಥ ಖುರ್-ಆನ್ ಮತ್ತೊಂದೆಡೆ ನಿಮ್ಮ ಮಕ್ಕಳು ನಿಮಗೆ ನಾಶವೆಂದೂ ನುಡಿದಿದೆ .*

ನಿಮ್ಮ ಮಕ್ಕಳು ನಿಮಗೆ ಅನುಗ್ರಹವಾಗಿರಬೇಕಾದರೆ ಧಾರ್ಮಿಕತೆಗೆ ಮರಳಿ , ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆಸಿ , , , , ,

*ಅಲ್ಲಾಹನು ಕರುಣಿಸಲಿ. . . .

 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಹಝ್ರತ್ ಫತಹ್ ಅಲಿ ಟಿಪ್ಪು ಸುಲ್ತಾನ್


 السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳🌱ಶಹೀದ್ ಆಝಮ್ ಸುಲ್ತಾನುಲ್ ಮುಜಾಹಿದ್ದೀನ್ ಅಬುಲ್ ಫತ್ತಾಹ್ ಫತಹ್ ಅಲಿ ಟಿಪ್ಪು ಸುಲ್ತಾನ್ (ಖಸಿ)🌱🌳:::*
▪•••┈┈•✿❁✿•┈┈•••▪
                       
ದೇಶ ಕಂಡ ಮಹಾನ್ ದೊರೆ, ಬದುಕನ್ನು ದೇಶಕ್ಕಾಗಿ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರ . ಜಾತಿ ಧರ್ಮ ಭೇದವಿಲ್ಲದೆ ಮಾನವ ಕುಲವನ್ನು ಪ್ರೀತಿಸಿದ ಶಾಂತಿ ಸೌಹಾರ್ದತೆಯ ಪ್ರತೀಕ. ಅದರೊಂದಿಗೆ ಆಧ್ಯಾತ್ಮಿಕ ಲೋಕದಲ್ಲಿ ಏಕಾಂತತೆಯನ್ನು ಪ್ರೀತಿಸಿದ ಅಲ್ಲಾಹನ ಆರಿಫರುಗಳಲ್ಲಿ ಶ್ರೇಷ್ಠ..... *ಶಹೀದ್ ಆಝಮ್ ಸುಲ್ತಾನುಲ್ ಮುಜಾಹಿದ್ದೀನ್ ಅಬುಲ್ ಫತ್ತಾಹ್ ಫತಹ್ ಅಲಿ ಟಿಪ್ಪು ಸುಲ್ತಾನ್ (ಖಸಿ)* ಪ್ರಮುಖರಾಗಿದ್ದರು .

ಮೈಸೂರು ದೇವನಹಳ್ಳಿಯಲ್ಲಿ ಹಿಜ್ರ 1163 ದುಲ್ ಹಿಜ್ಜ 20 ಶುಕ್ರವಾರ ದೇಶಭಕ್ತ ವೀರ ಶೂರ ಪರಾಕ್ರಮಿ ಬಾಬಾಜಾನ್ ಹೈದರ್ ಅಲಿ ಖಾನ್ ಮತ್ತು ಮಡದಿ ಫಾತಿಮಾ ಬೀಗಂ ದಂಪತಿಗಳ ಪುತ್ರರಾಗಿ ಮಹಾನುಭಾವರು ಜನಿಸಿದರು . ಮಗುವಿಗೆ ಫಾತಿಮಾ ಬೇಗಂ ಟಿಪ್ಪು ಮಸ್ತಾನ್ (ಖಸಿ) ಯವರ ನಿರ್ದೇಶನದಂತೆ *ಟಿಪ್ಪು ಸುಲ್ತಾನ್* ಎಂಬ ಹೆಸರನ್ನಿಟ್ಟರು . ಬಾಲ್ಯದಲ್ಲೇ ಪ್ರತಿಭಾಶಾಲಿಯಾಗಿದ್ದ ಟಿಪ್ಪು ಉಲೆಮಾ ಶ್ರೇಷ್ಠರಾದ ಮೌಲಾನಾ ಉಬೈದುಲ್ಲ  ಮೌಲವಿಯವರಲ್ಲಿ ಪ್ರಾಥಮಿಕ ವಿಧ್ಯೆಯನ್ನು ಪಡೆದರು . ಉನ್ನತ ವಿದ್ವಾಂಸರುಗಳಿಂದ ಧಾರ್ಮಿಕ ವಿಧ್ಯೆಯನ್ನು ಕರಗತಮಾಡಿದ ಸುಲ್ತಾನರು ಅಧಿಕ ಸಮಯವೂ ಸೃಷ್ಟಿಕರ್ತನಾದ ಅಲ್ಲಾಹನ ಧ್ಯಾನದಲ್ಲಿ ಕಳೆಯುತ್ತಿದ್ದರು . ಸೃಷ್ಠಿ ವೈಭವದ ಮಧುವನ್ನು ಹೀರಿದ ಸುಲ್ತಾನರು , ಹಲವು ತ್ವರೀಖತುಗಳನ್ನು ಸ್ವೀಕರಿಸಿದ್ದರು.  ಅಂತಿಮವಾಗಿ ಮೈಸೂರು ಸಾಮ್ರಾಜ್ಯದ ಅಜೇಯ ಬದುಶಾರಾಗಿ , ಮೈಸೂರು ಸಾಮ್ರಾಜ್ಯದ ಅಧಿಕಾರವೇರಿದರು . ಸ್ವರಾಜ್ಯ ಸ್ನೇಹಿಯಾಗಿದ್ದ ಯುಗ ಪುರುಷ ಸ್ವತಂತ್ರ ಭಾರತಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು . ಚರಿತ್ರೆ ಪರಿಶೀಲಿಸಿದರೆ ನಮಗೆ ಆ ಮಹಾನುಭಾವರ ಕುರಿತು ತಿಳಿಯಬಹುದು.

ಮುಗ್ಧರೂ , ನಿಸ್ವಾರ್ಥ ವ್ಯಕ್ತಿಯೂ ಆಗಿದ್ದ *ಮೈಸೂರು ಹುಲಿ* ಎಂಬ ನಾಮದಲ್ಲಿ ಪ್ರಸಿದ್ಧಿ ಹೊಂದಿದ ಹಝ್ರತ್ ಅಬುಲ್ ಫತ್ತಾಹ್ ಫತಹ್ ಅಲಿ ಟಿಪ್ಪು ಸುಲ್ತಾನ್ (ರಅ) ರವರು 1799 ರಂಜಾನ್ 14 ರಂದು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ವೀರ ಹೋರಾಟದಲ್ಲಿ ಶಹೀದರಾದರು .

ಅಲ್ಲಾಹನು ಮಹಾನುಭಾವರ ದರಜ ಮತ್ತಷ್ಟು ಉನ್ನತಿಗೇರಿಸಲಿ .
ಆ ಮಹಾನರ ಹಖ್ಖ್ ಜಾಹ್ ಬರಕತ್ತಿನಿಂದ ನಮ್ಮೆಲ್ಲರ ಪರಲೋಕ ಜೀವನ ಸುಗಮಗೊಳಿಸಲಿ.....ಆಮೀನ್. 

*ನೋಟ್:-* 👉 ಶೈಖುನಾ ಶಂಸುಲ್ ಉಲಮಾ (ಖಸಿ) ರವರು ತಮ್ಮ ಅನೇಕ ಪ್ರಸಿದ್ಧ ಭಾಷಣಗಳಲ್ಲಿ ಟಿಪ್ಪು ಸುಲ್ತಾನ್ (ರಅ) ರನ್ನು ಸ್ಮರಿಸುತ್ತಿದ್ದರು . ಸುಲ್ತಾನರನ್ನು ಆರಿಫ್ ಮತ್ತು ವಲಿಯ್ಯಿ ಎಂದು  ಸಮೂಹಕ್ಕೆ ಪರಿಚಯಿಸುತ್ತಿದ್ದರು . ಶೈಖುನಾ ಶಂಸುಲ್ ಉಲಮಾ (ಖಸಿ)ರವರು ಆಫತ್ ಮುಸೀಬತ್ಗಳಿಂಧ ರಕ್ಷೆಹೊಂದಲು ಸುಲ್ತಾನ್ (ರಅ) ರವರ ಸನ್ನಿಧಿಗೆ ಹತ್ತು ಫಾತಿಹಾಗಳನ್ನು ಪಠಿಸಿ ಹದಿಯ ಮಾಡಲು ನಿರ್ದೇಶಿಸುತ್ತಿದ್ದರು .

🤲ಆ ಸನ್ನಿಧಿಗೆ ಒಂದು ಫಾತಿಹ ಸಮರ್ಪಿಸೋಣ..!


صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰
   
   

ಅಪರೂಪದ ಉಡುಗೊರೆ

السَّلاَمُ عَلَيْكُمْ وَرحمة الله وبركاته

*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳ಅತಿಥಿಯ ಉಡುಗೊರೆ🌳:::*
▪•••┈┈•✿❁✿•┈┈•••▪

ಅತಿಥಿಗಳು ಮನೆಗೆ ಬರುವುದು ಮನೆಗೆ ಬರಕತ್ ಲಭಿಸುವ ಕಾರ್ಯವಾಗಿದೆ . ಒಬ್ಬೊಬ್ಬ ವ್ಯಕ್ತಿಯೂ ಮನೆಗೆ ಅತಿಥಿಯಾಗಿ ಬರುವುದು ಅವನಿಗೂ ಮನೆಯವರಿಗೂ ಬೇಕಾದ ಆಹಾರಗಳೊಂದಿಗೆ ಆಗಿರುತ್ತದೆ . ಅಲ್ಲದೆ ಅವನೊಂದಿಗೆ ಅಲ್ಲಾಹನ ಅನುಗ್ರಹಿತ ಮಲಕುಗಳೂ ಇರುವರು .

ಪ್ರತೀ ಆಹಾರದ ಸಮಯವೂ ಅತಿಥಿಗಳನ್ನು ಅರಸುತ್ತಾ ನಡೆಯುತ್ತಿದ್ದ ಹಝ್ರತ್ ಇಬ್ರಾಹಿಮ್ ನಬಿ ಅಲೈಹಿ ಸ್ಸಲಾಂ ರವರ ಆ ಒಂದು ಒಳ್ಳೆಯ ಗುಣ ಅವರನ್ನು ಖಲೀಲುಲ್ಲಾಹ್ ಎಂಬ ಸ್ಥಾನಕ್ಕೆ ತಲುಪಿಸಿತು  .

*ಒಬ್ಬ ಅತಿಥಿ ಮನೆಗೆ ಬರುವುದು ಆ ಮನೆಯವರ ಆಹಾರದೊಂದಿಗೆ ಆಗಿರುತ್ತದೆ ಮತ್ತು ಆತ ಮರಳುವುದು ಆ ಮನೆಯವರ ಪಾಪಗಳನ್ನೆಲ್ಲಾ ಹೊತ್ತುಕೊಂಡಾಗಿರುತ್ತದೆ .* ಅಂದರೆ ಆ ಮನೆಯವರ ಪಾಪಗಳನ್ನೆಲ್ಲಾ ಅಳಿಸಲಾಗುತ್ತದೆ . 

ಮನೆಗೆ ಅತಿಥಿಗಳು ಬರುವ ನಲ್ವತ್ತು ದಿನಗಳ ಮುಂಚೆಯೇ ಅಲ್ಲಾಹನು ಒಂದು ಮಲಕನ್ನು ಪಕ್ಷಿಯ ರೂಪದಲ್ಲಿ ಆ ಮನೆಗೆ ಕಳುಹಿಸಿಕೊಡುವನು. ಆ ಪಕ್ಷಿ ಮನಯವರೊಂದಿಗೆ ಹೇಳುತ್ತಿರುತ್ತದೆ "ಓ ಮನೆಯವರೇ.... ಇಂತಹ ಒಂದು ದಿನ ನಿಮ್ಮ ಮನೆಗೆ ಅತಿಥಿಗಳು ಬರಲಿದ್ದಾರೆ" ಎಂದು .
 (ಬುಸ್ತಾನುಲ್ ಆರಿಫೀನ್).

ಒಬ್ಬ ಅತಿಥಿ ಮನೆಯವರಿಗೆ ಹಲವಾರು ಬಹುಮಾನಗಳನ್ನು ( ಬರಕತ್,ನರಕ ಮೋಚನೆ, ಪಾಪ ಮೋಚನೆ) ತರುವನು.

ಪ್ರವಾದಿ (ಸಅ) ರವರು ಅಲೀ (ರಅ) ರೊಂದಿಗೆ ಹೇಳಿದರು "ಅಲೀ..... ನಿನ್ನ ಮನೆಗೆ ಒಬ್ಬ ಅತಿಥಿ ಬಂದರೆ ಅಲ್ಲಾಹನು ನಿನ್ನ ಪಾಪಗಳನ್ನು ಮನ್ನಿಸಲು ಆಗ್ರಹಿಸುವನು ಎಂದು ನೆನಪಿರಲಿ" .

ಆದ್ದರಿಂದ ಮನೆಗೆ ಬರುವ ಅತಿಥಿಗಳನ್ನು ಗೌರವಿಸಿ, ಅವರಿಗೆ ನಮಗಾಗುವ ರೀತಿಯಲ್ಲಿ ಸತ್ಕಾರ ಮಾಡಬೇಕು .

ಪುಣ್ಯ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಹೇಳಿದರು "ಅಲ್ಲಾಹನ ಪ್ರೀತಿಗಾಗಿ,  ಯಾರಾದರೂ ಅತಿಥಿಗಳನ್ನು ಚೆನ್ನಾಗಿ ನೋಡಿಕೊಂಡರೆ, ಅವನಿಗೆ ಅಲ್ಲಾಹನ ಅನುಗ್ರಹ ನೋಟ ಉಂಟಾಗುತ್ತದೆ" .

ನಮ್ಮ ಮನೆಗಳು ಅತಿಥಿಗಳಿಗಾಗಿ ತೆರೆದ ಬಾಗಿಲುಗಳಾಗಿರಲಿ . ಇನ್ಷಾಅಲ್ಲಾಹ್.

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰
   


ಅಂತ್ಯ ದಿನ ದೂರವಿಲ್ಲ

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳🌱ಅಂತ್ಯ ದಿನ ದೂರವಿಲ್ಲ🌱🌳:::*
▪•••┈┈•✿❁✿•┈┈•••▪

                           *****
ಅದು ಹಿರಾ ಪ್ರದೇಶ , ಅಲ್ಲಿ ಮೇಕೆಗಳ ಹಿಂಡು ಮೇಯುತ್ತಿದೆ. ಮೇಯಿಸುವವ ದೂರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ . ಇದ್ದಕ್ಕಿದ್ದಂತೆ ಅವನು ಅದನ್ನು ನೋಡಿದನು. ತೋಳವೊಂದು ನಡೆದು ಬರುತ್ತಿದೆ ..!
ಅದು ಮೇಕೆಯನ್ನು ಹಿಡಿಯಲು ಬರುತ್ತಿದೆ . ಕುರುಬ ತಟ್ಟನೆ ಜಿಗಿದು ಅದನ್ನು ಓಡಿಸಲು ಮುಂದಾದ....
ಆಗ...
ತೋಳ ಹೀಗೆ ಹೇಳಿತು "ಲೋ... ನಿನಗೆ ದೇವನ ಭಯವಿಲ್ಲವೇ..? ಈ ಮೇಕೆ ನನಗೆ ನಿಶ್ಚಯಿಸಲ್ಪಟ್ಟ ನನ್ನ ಆಹಾರ , ನಾನು ನನ್ನ ಆಹಾರವನ್ನು ಅರಸಿ ಬರುತ್ತಿರುವಾಗ ನೀನು ನನ್ನಿಂದ ಅದನ್ನು ಕಸಿಯುತ್ತಿರುವೆಯೇನೋ.?"
ತೋಳದ ಮಾತನ್ನು ಕೇಳಿದವನಿಗೆ ಆಶ್ಚರ್ಯವಾಗಿ , ತೋಳ ನಮ್ಮಂತೆ ಮಾತನಾಡುವುದೇ..? ಇದೇನು ಪವಾಡ..!
ಆತನ ನಿಲುವನ್ನು ಕಂಡು ತೋಳ ಹೀಗೆ ಹೇಳಿತು "ಇದರಲ್ಲೇನು ಮಹಾ ಆಶ್ಚರ್ಯ..?ಇದಕ್ಕಿತಲೂ ದೊಡ್ಡ ಪವಾಡ ನಾ ಹೇಳಬಲ್ಲೆ" .

ಆತ "ಅದೇನು..?" 🤔 .

"ಬೆಟ್ಟಗಳ ಮಧ್ಯದಲ್ಲಿರುವ ನಗರದಲ್ಲಿ, ಪುಣ್ಯ ಪ್ರವಾದಿ(ಸಅ)ರವರು ಪೂರ್ವಜರ ಇತಿಹಾಸವನ್ನು ಹೇಳುತ್ತಿದ್ದಾರೆ . ಓದಲು ಮತ್ತು ಬರೆಯಲು ತಿಳಿಯದ ಪ್ರವಾದಿ ವರ್ಯರು ಸಹಸ್ರಮಾನಗಳ ಕಾಲ ಬದುಕಿದ್ದ
ಸಮುದಾಯಗಳ ಇತಿಹಾಸವನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತಿದ್ದಾರೆ . ಆದರೂ ಅಲ್ಲಿನ ಜನರು ನಂಬುತ್ತಿಲ್ಲ ಇದಕ್ಕಿಂತ ದೊಡ್ಡ ಪವಾಡ ಬೇರೆ ಇದೆಯೇನೋ ...?"
ಆಶ್ಚರ್ಯ ಚಕಿತನಾದ ಆತ , ತೋಳ ಹೇಳಿದ ವಿಷಯದ ನಿಜಾಂಶ ತಿಳಿಯಲು ಮರು ದಿನವೇ ಹೊರಟನು...

ಪ್ರವಾದಿ ﷺ ರವರನ್ನು ಕಂಡು , ತೋಳ ಹೇಳಿದ ವಿಷಯಗಳನ್ನು ವಿವರಿಸಿದನು. ಎಲ್ಲವೂ ಕೇಳಿದ ನಂತರ ಪ್ರವಾದಿ ﷺ ರವರು ಹೇಳಿದರು "ಅಂತ್ಯ ದಿನ ಸಮೀಪಿಸುವಾಗ ಕಾಡು ಪ್ರಾಣಿಗಳು ಮನುಷ್ಯರೊಂದಿಗೆ ಮಾತನಾಡುತ್ತದೆ, ಅಂದು ಛಾಟಿಯ ತುದಿಯೂ ಮಾತನಾಡುತ್ತದೆ ಇವೆಲ್ಲವೂ ಅಂತ್ಯ ದಿನದ ಸೂಚನೆಯಾಗಿದೆ" .
ಎಲ್ಲೆವನ್ನು ಕೇಳಿದ ನಂತರ ಅವರು ಪ್ರವಾದಿ ಪ್ರವಾದಿ ﷺ ರವರ ಸಮ್ಮುಖದಲ್ಲಿ ಪವಿತ್ರ ಇಸ್ಲಾಂ ಧರ್ಮ ಸ್ವೀಕರಿಸಿದರು .

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰
   


ಅತ್ಯುತ್ತಮ ಧಾನ

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ

*══❁✿🕳.﷽ .🕳✿❁══*

▪••┈┈•••💧•••┈┈••▪
*::::: 🌳🌱ಮೊಳಕೆ🌱🌳 :::::*
▪••┈┈•✿❁✿•┈┈••▪

☘☘☘☘☘☘☘
💝ಅತ್ಯುತ್ತಮ ದಾನ💖
☘☘☘☘☘☘☘

                           *****

ಒಂದು ದಿನ ನೆಬಿಯವರು ﷺ ಮಸೀದಿಯಲ್ಲಿ ಕುಳಿತು ತಮ್ಮ ಮುಂದೆ ಆಸೀನರಾಗಿರುವ ಸ್ವಹಾಬಿ ವರ್ಯರುಗಳನ್ನು ನೋಡುತ್ತಾ "ಪ್ರೀತಿಯ ಸ್ವಹಾಬಿಗಳೆ ಬಡವರಿಗೆ ಸಹಾಯ ಮಾಡಲು ನಿಮ್ಮಲ್ಲಿ ಇರುವುದನ್ನು ಕೊಡಿ ಎಂದು ಕೇಳಿಕೊಂಡರು .
ಇದನ್ನು ಕೇಳಿದ ತಕ್ಷಣ ಸ್ವಹಾಬಿಗಳೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಓಡಿದರು . ತಮ್ಮಲ್ಲಿರುವುದನ್ನು ತಂದು ನೆಬಿಯವರಲ್ಲಿ ನೀಡಿದರು .

ಸ್ವಹಾಬಿಗಳೆಲ್ಲರೂ ಅತ್ತಿತ್ತ ಓಡಾಡುವುದನ್ನು ಕಂಡ ಎರಡು ಕಾಲೂ ಎಡಕೈಯ್ಯೂ ಇಲ್ಲದ ಇಬ್ನು ಮುಖೈಲ್ (ರಅ) ರವರು ಅವರನ್ನು ತಡೆದು ನೀವೇಕೆ ಇಷ್ಟು ಆತುರದಲ್ಲಿ ಓಡಾಡುತ್ತಿರುವಿರಿ ಎಂದು ಕೇಳಿದರು .

ಅವರಲ್ಲಿ ಒಬ್ಬರು ಸ್ವಹಾಬಿ ವರ್ಯರು ಹೇಳಿದರು: ನೆಬಿ ﷺ ರವರು ದಾನ ಕೇಳಿರುತ್ತಾರೆ ನಾವು ಅದನ್ನು ನೀಡಲು ಹೋಗುತ್ತಿದ್ದೇವೆ.
ಇದನ್ನು ಕೇಳುವಾಗ ಇಬ್ನು ಮುಖೈಲ್ (ರಅ) ವಿಗೆ ತುಂಬಾ ಬೇಸರವಾಯಿತು . ನಾಳೆ ಸ್ವರ್ಗ ದರ್ಶನ ಕಂಡು ಮರಣ ಹೊಂದುವ ದಾರಿಯಾಗಿದೆ ಪ್ರವಾದಿ ﷺ ಯವರು ಹೇಳಿರುವುದು . ಯಾ ಅಲ್ಲಾಹ್... ನಾನೇನು ನೀಡಲಿ ನನ್ನಲ್ಲೇನೂ ಇಲ್ಲ .

ಅವರು ತೆವಳುತ್ತಾ ತನ್ನ ನೆರೆ ಮನೆಯ ಯಹೂದಿಯನ್ನು ಸಮೀಪಿಸಿ ಅವರೊಂದಿಗೆ ನನಗೇನಾದರೂ ಕೆಲಸ ನೀಡಿ ಎಂದು ಕೇಳಿಕೊಂಡರು .

ಆತ ಕೇಳಿದ ನೀನು ಯಾವ ಕೆಲಸ ಮಾಡಬಲ್ಲೆ ..? ನಿನಗೆ ಎರಡು ಕಾಲೂ ಇಲ್ಲ ಒಂದು ಕೈಯ್ಯೂ ಇಲ್ಲ . ನಿನ್ನಿಂದ ಕೆಲಸ ಮಾಡಲು ಸಾಧ್ಯವೇ...?

ನಾನು ನಿಮ್ಮ ಖರ್ಜೂರದ ಮರಕ್ಕೆ ನೀರು ಹಾಯಿಸುವೆ , ನೀವು ಒಪ್ಪಿಗೆ ನೀಡಿದರೆ .

ಯಹೂದಿಯ ಅನುಮತಿಯೊಂದಿಗೆ ಇಬ್ನು ಮುಖೈಲ್ ರವರು ನೀರೆತ್ತಲು ಬಾವಿಯನ್ನು ಸಮೀಪಿಸಿದರು. ಒಂದು ಕೈಯಿಂದ ಹಗ್ಗವನ್ನು ಎಳೆದು ಹಲ್ಲಿನಿಂದ ಕಚ್ಚಿ ಹಿಡಿದು ತುಂಬಾ ಕಷ್ಟಪಟ್ಟು ನೀರೆತ್ತಿದರು .

ಸುಮಾರು ಹೊತ್ತಿನ ನಂತರ ಯಹೂದಿ ಬಂದು ನೋಡಿದಾಗ ಇಬ್ನು ಮುಖೈಲರನ್ನು ಅಲ್ಲಿ ಕಾಣಲಿಲ್ಲ . ಬಾವಿಯ ಸುತ್ತಲೂ ನೋಡಿದರು ಅಲ್ಲಿ ಅಲ್ಲಲ್ಲಿ ರಕ್ತದ ಕಲೆಗಳು ತುಂಬಿದೆ . ಯಹೂದಿಗೆ ಹೆದರಿಕೆಯಾಯಿತು ಬಾವಿನ್ನೊಮ್ಮೆ ಇಣುಕಿ ನೋಡಿದರು ಇಲ್ಲ ಅಲ್ಲಿ ಯಾವ ಸುಳಿವೂ ಇಲ್ಲ . ತನ್ನ ತೋಟದ ಸುತ್ತಲೂ ನೋಡಿದರು ಅಲ್ಲಿ ರಕ್ತಸಿಕ್ತವಾಗಿ ಮಲಗಿರುವ ಇಬ್ನು ಮುಖೈಲರನ್ನು ಕಂಡು ಓಡಿ ಬಂದು ನೀನು ಯಾಕಿಷ್ಟು ಕಷ್ಟ ಪಡುತ್ತಿದ್ದೀಯಾ...? ಹಣ ಬೇಕಿದ್ದರೆ ನನ್ನಲ್ಲಿ ಕೇಳಬಹುದಿತ್ತಲ್ಲವೇ..?

ಆಗ ಇಬ್ನು ಮುಖೈಲ್ ,

ಇದು ನನಗಾಗಿ ಅಲ್ಲ ಪ್ರವಾದಿಯವರು ಸ್ವದಖ ಕೇಳಿರುತ್ತಾರೆ . ಯಾಚನೆ ಮಾಡಿದ ಹಣ ದಾನಕ್ಕೆ ನೀಡಲು ನಾನು ಇಷ್ಟ ಪಡುವುದಿಲ್ಲ.

ನನಗೆ ಕೂಲಿ ಬೇಕು .

ಆ ಯಹೂದಿ ನಾಲ್ಕು ದಿನಾರನ್ನು ನೀಡಿದನು.
ಅದನ್ನು ಪಡೆದು ಸಂತೋಷದಿಂದ ಪ್ರವಾದಿಯವರ ಸನ್ನಿಧಿಗೆ ತೆವಳುತ್ತಾ ಸಾಗಿದರು .

ಪ್ರವಾದಿ (ಸ್ವ.ಅ) ರವರು ಕೇಳಿದರು ಇಬ್ನು ಮುಖೈಲ್ ಏನಾಯಿತು ನಿಮಗೆ, ನಿಮ್ಮನ್ನು ಯಾರಾದರೂ ಅಕ್ರಮಿಸಿದರೇ...?

ನನ್ನನ್ನು ಯಾರೂ ಅಕ್ರಮಿಸಲಿಲ್ಲ ನೆಬಿಯವರೇ....
ನಾನು ಕೆಲಸ ಮಾಡುತ್ತಿರುವಾಗ ಇದು ಸಂಭವಿಸಿದೆ .

ನೀವು ಯಾತಕ್ಕಾಗಿ ಕೆಲಸ ಮಾಡಿದಿರಿ..?

ನೀವು ನನ್ನಲ್ಲಿ ಸ್ವದಖ ಕೇಳಲಿಲ್ಲವೇ..? ಸ್ವದಖ ನೀಡುವ ಸಲುವಾಗಿ , ನಾನು ಕೆಲಸ ಮಾಡಿದೆನು

ಓ ಪ್ರವಾದಿ ವರ್ಯರೇ ನನಗೆ ಸ್ವರ್ಗ ಕಂಡು ಮರಣ ಹೊಂದಬೇಕು . ನಾನು ಏಕಾಂಗಿಯಾಗುವ ಖಬರಿನಲ್ಲಿ ನನಗೆ ರಕ್ಷಣೆ ಹೊಂದಬೇಕು .

ಪುಣ್ಯ ಪ್ರವಾದಿಯವರು (ಸ್ವ.ಅ) ಎದ್ದು ನಿಂತು ಇಬ್ನು ಮುಖೈಲರನ್ನು ಬಿಗಿಯಾಗಿ ಅಪ್ಪಿಕೊಂಡು ಅತ್ತು ಬಿಟ್ಟರು .

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ನಮ್ಮ ಉಪವಾಸ ಹೀಗೇಕೆ..?

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
  *ನಮ್ಮ ರಮ್ಝಾನ್ ಹೀಗೇಕೆ. . ?*
〰〰❁✿🌹🌹✿❁ 〰〰


ಶಾರೀರಿಕವಾಗಿಯೂ ಮಾನಸಿಕವಾಗಿಯೂ ಅಲ್ಲಾಹನ ಸ್ಮರಣೆಯಲ್ಲಿ ತಲ್ಲೀನರಾಗಿ, ವೃತ ಅನುಷ್ಠಿಸಬೇಕಾಗಿರುವ ಪವಿತ್ರ ತಿಂಗಳಾಗಿದೆ ಪುಣ್ಯ ರಂಝಾನ್ . ಕಳೆದ ಜನ್ಮದಲ್ಲಿ ಮಾಡಿದ ಎಲ್ಲಾ ಪಾಪಕರ್ಮಗಳಿಗೆ ಮೋಕ್ಷ ಲಭಿಸುವ ತಿಂಗಳಾಗಿದೆ ಪವಿತ್ರ ರಂಝಾನ್ . ಒಂದು ಸತ್ಕರ್ಮಕ್ಕೆ ಎಪ್ಪತ್ತರಷ್ಟು ದುಪ್ಪಟ್ಟು ಪುಣ್ಯ ಲಭಿಸುವ ಮತ್ತು ಸಾವಿರಕ್ಕಿಂತಲೂ ಅಧಿಕ ತಿಂಗಳಿಗಿಂತ ಶ್ರೇಷ್ಠವಾದ ಲೈಲತುಲ್ ಖದ್ರ್ ಎಂಬ ಶ್ರೇಷ್ಠ ರಾತ್ರಿಯನ್ನು ಒಳಗೊಂಡಿರುವ ಪವಿತ್ರ ತಿಂಗಳಾಗಿದೆ. ಹೀಗೆ ಹಲವಾರು ಶ್ರೇಷ್ಠತೆಗಳನ್ನು ಹೊಂದಿರುವ ಪವಿತ್ರ ತಿಂಗಳು ರಂಝಾನನ್ನು ಆಧುನಿಕ ಸಮುದಾಯದ ಜನತೆಯು ಹಲವು ರೀತಿಯ ಆಹಾರ ಪದಾರ್ಥಗಳನ್ನು ತಿಂಡಿ ತಿನಿಸುಗಳನ್ನು ಮಾಡಿ , ಹೊಟ್ಟೆ ತುಂಬುವ ತಿಂಗಳನ್ನಾಗಿ ಬದಲಾಯಿಸಿದ್ದಾರೆ . ಒಂದು ಕಡೆ ಹೊಟ್ಟೆ ತುಂಬುವವರಾದರೆ, ಮತ್ತೊಂದೆಡೆ ಉತ್ತಮ ವ್ಯಾಪಾರವನ್ನು ಕಾಣುವವರು , ವ್ಯಾಪಾರಕ್ಕಾಗಿಯೇ ಪವಿತ್ರ ತಿಂಗಳನ್ನು ಬರಮಾಡಿಕೊಂಡರೋ ಏನೋ. . ?

ಇನ್ನೊಂದು ವಿಭಾಗ ವೃತ ಅನುಷ್ಠಿಸಿದ್ದರೂ ಪ್ರವಾದಿ ಚರ್ಯೆಯಾದ ಸುನ್ನತ್ತುಗಳನ್ನು ಉಪೇಕ್ಷಿಸಿ , ತಿಂಗಳ ಪವಿತ್ರತೆಗೆ ಎಳ್ಳಷ್ಟೂ ಗೌರವ ನೀಡದೆ ಕಂಡ ಕಂಡಲ್ಲಿ ಉಗುಳುತ್ತಾ ಜನರಿಗೆ ಅಸಹ್ಯಕರವಾಗುವ ರೀತಿಯಲ್ಲಿ ಪರಿಸರವನ್ನು ಬದಲಾಯಿಸಿದ್ದಾರೆ .

ಇಸ್ಲಾಂ ಧರ್ಮ ಮುಸ್ಲಿಮರ ಪ್ರತಿಯೊಂದು ನಡೆತೆಗೂ ಕೆಲವು ವಿಧಿ ವಿಧಾನಗಳನ್ನು ರೂಪಿಸಿ ಕೊಟ್ಟಿದೆ . ಜನರ ಮಧ್ಯೆ ಯಾವ ರೀತಿಯಲ್ಲಿ ಜೀವಿಸಬೇಕು. . . . ? ಇಬಾದತ್ ಕರ್ಮಗಳನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು. . ?

*ಧರ್ಮದ ನಸೀಹತ್👇*

ನಿಮ್ಮ ನಾಲಗೆಯಿಂದ ಹೊರಡುವ ಮಾತುಗಳು ಕೇಳುಗರಿಗೆ ಕರ್ಕಶವಾಗದಿರಲಿ .
ನೀವು ಉಗುಳುವಾಗ ಎಡ ಭಾಗಕ್ಕೆ ಉಗುಳಿ , ಎಡ ಭಾಗದಲ್ಲಿ ಸೌರ್ಯವಿಲ್ಲದಿದ್ದರೆ ಸೌಕರ್ಯ ಇರುವ ಸ್ಥಳವನ್ನು ನಿಮ್ಮ ಎಡ ಭಾಗವನ್ನಾಗಿಸಿಕೊಂಡು ಉಗುಳಿ . ಜನರು ನಡೆದಾಡುವ ದಾರಿಯಲ್ಲಾಗಿದ್ದರೆ ಉಗುಳಿದ ನಂತರ ಅದನ್ನು ಮಣ್ಣಿನಿಂದ ಮರೆಯಿರಿ . ಉಲೂ ನಿರ್ವಹಿಸುವ ಸಂಧರ್ಭ ಅಥವಾ ಜನರ ಮಧ್ಯೆ ಉಗುಳುವಾಗ ಇನ್ನೊಬ್ಬರ ಶರೀರಕ್ಕೆ ಮುಟ್ಟದಂತೆ ಜಾಗೃತೆ ವಹಿಸಿ . ನಮಾಝ್ ನಿರ್ವಹಿಸುವವರ, ಖುರ್-ಆನ್ ಓದುವವರ ಹತ್ತಿರ ಜೋರು ಶಬ್ದಗಳನ್ನು ಬಳಸಿ ಅವರ ಏಕಾಗ್ರತೆ ಮುರಿಯದಿರಿ . ರಂಝಾನ್ ಉಪವಾಸ ಕೇವಲ ಹೊಟ್ಟೆಗೆ ಸೀಮಿತವಲ್ಲ, ಶರೀರದ ಪ್ರತಿ ಭಾಗಗಳಿಗೂ , ಚಲನ ವಲನಗಳಿಗೂ ಉಪವಾಸವಿದೆ . ಆದ್ದರಿಂದಲೇ ಪ್ರತಿ ಅಂಗಗಳನ್ನು ಅವುಗಳ ಚಲನಗಳನ್ನು ಜಾಗ್ರತೆಯಿಂದ ನೋಡಿಕೊಳ್ಳಿ .

*ಅಜ್ಞಾನದಿಂದ ಉಂಟಾದ ತಪ್ಪುಗಳಿಂದ ನಮ್ಮ ಉಪವಾಸದ ಮೌಲ್ಯ ಕಡಿಮೆಯಾಗದಿರಲಿ*

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಇರುವೆ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
               *ಇರುವೆ*
〰〰❁✿🌹🌹✿❁ 〰〰

ಅತ್ಯಂತ ಚಿಕ್ಕ ಜೀವಿಯಾಗಿರುವ ಇರುವೆಯ ಕುರಿತು ನಿಮಗೆ ಗೊತ್ತೇ. . ! ?

ಪವಿತ್ರ ಖುರ್-ಆನಿನಲ್ಲಿ ಹೆಸರಿಸಲ್ಪಟ್ಟ ಜೀವಿಗಳಲ್ಲಿ ಇರುವೆಯೂ ಒಂದು . ಅಲ್ಲದೆ ಖುರ್-ಆನಿನಲ್ಲಿ ಒಂದು ಅಧ್ಯಾಯಕ್ಕೆ ಇರುವೆ (ಅನ್ನಮ್ಲ್) ಎಂಬ ನಾಮವೂ ಇದೆ . ಪವಿತ್ರ ಗ್ರಂಥದ ಹಲವು ಕಡೆಗಳಲ್ಲಿ ಇರುವೆಯ ಕುರಿತು ಚರ್ಚಿಸಲ್ಲಟ್ಟಿದೆ . ಮನುಷ್ಯರಂತೆ ಜೀವನ ನಡೆಸುವ ಜೀವಿಗಳಾಗಿವೆ ಇರುವೆಗಳು . ತನಗಿಂತಲೂ ದುಪ್ಪಟ್ಟು ಭಾರವನ್ನು ಹೊರುವ ಏಕೈಕ ಜೀವಿ ಕೂಡಾ ಹೌದು . ಆಹಾರ ಸಂಗ್ರಹಣೆಯಿಂದ ಹಿಡುದು ಶವ ಹೂಳುವುದರಲ್ಲೂ ಮನುಷ್ಯರು ಮಾಡುವಂತೆಯೇ ಕೆಲಸ ಕಾರ್ಯಗಳು ಮಾಡುವ ಶ್ರಮ ಜೀವಿಗಳಾಗಿವೆ . ಒಂದು ಇರುವೆ ಸತ್ತರೆ ಅದನ್ನು ಹೊತ್ತೊೖದು ಮನುಷ್ಯರು ಹೂಳುವಂತೆ ಹೂಳುತ್ತದೆ , ಆಹಾರ ಹುಡುಕಾಟ ಮತ್ತು ಶೇಖರಣೆ ಅವುಗಳ ದೈನಂದಿನ ಚಟುವಟಿಕೆಗಳಾಗಿವೆ . ಹೊತ್ತು ತಂದ ಕಾಳುಗಳನ್ನು ಅವು ಮೊಳಕೆಯೊಡೆಯದಿರಲು ಎರಡು ತುಂಡುಗಳನ್ನಾಗಿ ತುಂಡರಿಸಿ ಇಟ್ಟುಕೊಳ್ಳುತ್ತವೆ . ಕೊತ್ತಂಬರಿ ಬೀಜವನ್ನು ಮಾತ್ರ ನಾಲ್ಕು ತುಂಡುಗಳನ್ನಾಗಿ ಮಾಡುತ್ತದೆ ಕಾರಣ ಎರಡು ತುಂಡಾದರೂ ಕೊಂತ್ತಂಬರಿ ಬೀಜ ಮೊಳಕೆ ಒಡೆಯುತ್ತದೆ ಎಂದು ಬುದ್ಧಿವಂತ ಇರುವೆಗಳಿಗೆ ತಿಳಿದಿವೆ . ಇರುವೆಗಳ ಶಿಸ್ತನ್ನು ನೋಡಿ ಮನುಷ್ಯರು ಕೂಡಾ ತಲೆ ತಗ್ಗಿಸುವರು ಯಜಮಾನನನ್ನು ಚಾಚೂ ತಪ್ಪದೆ ಅನುಸರಿಸುತ್ತವೆ . ಚಿಕ್ಕ ಶರೀರವಾದರೂ ಕಿಲೋ ಮೀಟರ್ ದೂರದಲ್ಲಿರುವ ಆಹಾರದ ವಾಸನೆಯನ್ನು ಗ್ರಹಿಸುವ ಶಕ್ತಿ ಅವುಗಳಲ್ಲಿವೆ . ಮನುಷ್ಯರಂತೆ ಸುಮ್ಮನೆ ಕೂರುವುದಂತೂ ಕಾಣಲು ಸಾಧ್ಯವೇ ಇಲ್ಲ, ಯಾವಾಗಲೂ ಆಹಾರದ ಹುಡುಕಾಟದಲ್ಲಿ , ಅಥವಾ ಆಹಾರವನ್ನು ಕೊಂಡೊಯ್ಯುವ ಭರದಲ್ಲಿಯೇ ಇರುತ್ತವೆ . ಒಗ್ಗಟ್ಟಿನ ಭಲ ಕಾಣಬೇಕಾದರೆ ಇರುವೆಗಳನ್ನು ನೋಡಿದರೆ ಸಾಕಾಗಬಹುದು ಒಂದು ಇರುವೆಯಿಂದ ಕಾರ್ಯ ಸಾಧ್ಯವಾಗದಿದ್ದರೆ ತಟ್ಟನೆ ಉಳಿದವುಗಳು ಸಹಕಾರ ನೀಡುತ್ತವೆ .

*ಇರುವೆ ಕುರ್-ಆನಿನಲ್ಲಿ*

ಪ್ರವಾದಿ ಮೂಸಾ ನಬಿ (ಅಸ) ಒಮ್ಮೆ ಅಲ್ಲಾಹನಲ್ಲಿ ಒಂದು ಸಂಶಯವಿತ್ತರು "ಅಲ್ಲಾಹ್ , ಅಕ್ರಮಿಗಳನ್ನು ನೀನು ಶಿಕ್ಷಿಸುವಾಗ ಅದರಲ್ಲಿ ನಿರಪರಾದಿಗಳಾದ ಹಲವರು ಶಿಕ್ಷೆಗೆ ಗುರಿಯಾಗುತ್ತಾರೆ. . ! ಮಾಡದ ತಪ್ಪಿಗೆ ಅವರನ್ನು ಬಲಿಯಾಗಿಸುವುದು (ಶಿಕ್ಷಿಸುವುದು) ಸರಿಯೇ. . ?

ಸ್ವಲ್ಪ ಸಮಯದ ನಂತರ ಹಝ್ರತ್ ಮೂಸಾ ನಬಿ(ಅಸ) ರವರನ್ನು ಒಂದು ಇರುವೆ ಕಚ್ಚಿತು , ಕೋಪಗೊಂಡ ಪ್ರವಾದಿಯವರು ಇರುವೆಯ ಗೂಡನ್ನೇ ಕಾಲಿಂದ ತುಳಿದು ನಾಶಮಾಡಿದರು.   ಆವಾಗ ಅಲ್ಲಾಹನು ಮೂಸಾ ನಬಿಯರಲ್ಲಿ ಕೇಳಿದನು "ಓ ಮೂಸಾ ಒಂದು ಇರುವೆ ಅಲ್ಲವೇ ನಿನ್ನನ್ನು ಕಚ್ಚಿರುವುದು , ಅದಕ್ಕಾಗಿ ಉಳಿದ ಇರುವೆಗಳನ್ನೇಕೆ ನಾಶಮಾಡಿದಿರಿ" . ಉತ್ತರವಿಲ್ಲದೆ ಮೂಸಾ ನಬಿ(ಅಸ) ರವರು ತಲೆತಗ್ಗಿಸಿದರು . ಪ್ರವಾದಿ ಮೂಸರ ಪ್ರಶ್ನೆಗೆ ಮಾತಿನಿಂದಲೇ ಉತ್ತರಿಸುವ ಬದಲು ಅಲ್ಲಾಹನು ಮೂಸಾ ನಬಿಯರಿಂದಲೇ ಮಾಡಿ ತೋರಿಸಿದನು .

*ಇರುವೆಗಳನ್ನು ಕೊಲ್ಲದಿರಿ*

ನಬಿ (ಸಅ) ರವರು ಹೇಳಿದರು "ನೀವು ವಿನಾ ಕಾರಣ ಇರುವೆಗಳನ್ನು ಕೊಲ್ಲದಿರಿ . ಕಾರಣ ಒಮ್ಮೆ ಸುಲೈಮಾನ್ ನಬಿಯವರು ತನ್ನ ಅನುಚರರೊಂದಿಗೆ ಮಳೆಗಾಗಿ ಪ್ರಾರ್ಥಿಸಲು ಹೊರಟರು . ದಾರಿ ಮಧ್ಯೆ ಒಂದು ಇರುವೆಯು ತನ್ನ ಎರಡು ಕೊಂಬುಗಳನ್ನು ಮತ್ತು ಮುಂದಿನ ಎರಡು ಕಾಲುಗಳನ್ನು ಎತ್ತಿ ಹಿಡಿದು ಪ್ರಾರ್ಥಿಸುತ್ತಿತ್ತು

"ಯಾ ಅಲ್ಲಾ. . ಸರ್ವ ಸೃಷ್ಟಿಗಳ ಪರಿಪಾಲಕನೇ. . . ನಿನ್ನ ಕಾರುಣ್ಯ ನಮಗೆ ತಡೆಯದಿರು. . . ನಮಗೆ ನಿನ್ನ ಅನುಗ್ರಹವಾದ ಮಳೆಯನ್ನು ಕರುಣಿಸು ಅಲ್ಲಾಹ್".

ಇದನ್ನು ಕೇಳಿದ ಸುಲೈಮಾನ್ (ಅಸ) ರವರು ತನ್ನ ಅನುಚರರೊಂದಿಗೆ ಹೇಳಿದರು :- "ನೀವು ಹಿಂತಿರುಗಿ , ಇನ್ನು ನೀವು ಪ್ರಾರ್ಥಿಸಬೇಕೆಂದಿಲ್ಲ. ನೀವಲ್ಲದ ಇತರ ಜೀವಿಗಳು ಕಾರಣ ನಿಮಗೆ ಮಳೆ ಲಭಿಸಿರುತ್ತದೆ" .
(ಹಾಕಿಂ).

 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಕಾವಲುಗಾರ

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳🌱ಕಾವಲುಗಾರ🌱🌳:::*
▪•••┈┈•✿❁✿•┈┈•••▪
                       
ನಾನೊಬ್ಬ ಕಾವಲುಗಾರ , ನನ್ನ ಸಂಪತ್ತಿಗೆ ನಾನೇ ಕಾವಲುಗಾರ , ಯಾರಿಗಾಗಿಯೋ ದುಡಿದು ಯಾರಿಗಾಗಿಯೋ ಸಂಪತ್ತು ಶೇಖರಿಸುವ ಯಾರದೋ ಒಬ್ಬ ಗುಲಾಮನಂತೆ . ನನ್ನ ಶೇಖರಣೆಯಲ್ಲಿ ಏನಾದರೂ ಕೊರತೆ ಕಂಡುಬಂದರೆ ದುಃಖ ತಾಳಲಾಗುವುದಿಲ್ಲ . ಸಂಪಾದನೆಯಲ್ಲಿ ಅಭಿವೃದ್ಧಿ ಕಂಡು ಬಂದರೆ ಕೃತಜ್ಞತೆಯನ್ನೂ ಮರೆಯುತ್ತೇನೆ. ನಾನೇಕೆ ಹೀಗೆ...?

ಬರಿಗೈಯಲ್ಲಿ ಬಂದವನಲ್ಲವೇ...? ಬಲಹೀನನಾಗಿದ್ದವನಲ್ಲವೇ...?
ಪರ ಸಹಾಯವಿಲ್ಲದೆ ಜೀವಿಸಲು ತಿಯದವನಲ್ಲವೇ...?

ಅವನು ನನಗೆ ಆರೋಗ್ಯ ಕರುಣಿಸಿದ
ಅವನು ನನ್ನ ವ್ಯಾಪಾರವನ್ನು ಅಭಿವೃದ್ಧಿಗೊಳಿಸಿದ
ಅವನು ನೀಡಿದವುಗಳಲ್ಲಿ ಅನುಭವಿಸಲು ಕಾಲಾವಧಿ ನೀಡಿದ .
ಅವನು ಕಷ್ಟ ಸುಖಗಳೆರಡನ್ನೂ ನೀಡಿದ .
ಈಗ ಅವನು ನೀಡಿರುವುದನ್ನು ಬಿಟ್ಟು ಕೊಡಲು ಹೇಳುತ್ತಿದ್ದಾನೆ.
ನನ್ನಿಂದ ಈ ನಷ್ಟಗಳನ್ನು ಸಹಿಸಲು ಸಾಧ್ಯವೇ..?

ಇಹಲೋಕದ ನಷ್ಟಗಳು ಈಮಾನಿನ ಸಂಗಾತಿ ಅಲ್ಲವೇ...? ದೇಹದ ಬೆಳವಣಿಗೆ (ಆರೋಗ್ಯ) ಮತ್ತು ಹೇರಳ ಸಂಪತ್ತು ನನಗೆ ಲಭಿಸಿದ ಅನುಗ್ರಹಗಳಲ್ಲವೇ..? ಆದರೂ ಶರೀರದ ಬಲಹೀನತೆ ಮತ್ತು ಸಂಪತ್ತು ನಾಶ ನನಗೆ ತಾಳಲಾರದಷ್ಟು ದುಃಖವನ್ನು ಉಂಟುಮಾಡುತ್ತಿದೆ ಯಾಕೆ . ಈ ಕಷ್ಟ ನಷ್ಟಗಳಲ್ಲೂ ಒಡೆಯನ ಅನುಗ್ರಹವಿದೆ ಅನ್ನುವುದನ್ನು ನಾನು ಮರೆತೆನೇ...? .
ನನ್ನ ಪರಿಶ್ರಮಗಳೆಲ್ಲವೂ  ಇಹಲೋಕಕ್ಕೆ ಸೀಮಿತವಾಯಿತೇ....?
ನಾಳೆಗಾಗಿ ಏನಾದರೂ ಶ್ರಮಿಸಿದೆನೇ...?

ಬೆಳಕಿನ ಹಾದಿಯನ್ನು ತೋರಿದ ಪೂರ್ವಜರ ಜೀವನವು , ಪವಿತ್ರ ಇಸ್ಲಾಂ ಧರ್ಮಕ್ಕೆ ಒಂದು ದಾರಿ ದೀಪವಾಗಿತ್ತು , ಆದರೆ ಇಂದಿನ ತಲೆಮಾರು ಇಹದ ಶೋಕಿನಲ್ಲಿ ತಮಗೆ ನಷ್ಟಗಳನ್ನು ಮಾತ್ರ ಒದಗಿಸುತ್ತಿದೆ . ಸಂಪತ್ತಿನ ಮಹಿಮೆಯೋ...? ,ಅಧಿಕಾರದ ದರ್ಪವೋ..? ,ಆಡಂಬರದ ನಶೆಯೋ..? ನನಗೆ ಇದು ಶಾಶ್ವತವಲ್ಲ ಎಂಬ ತಿಳುವಳಿಕೆ ಇದೆ ಆದರೂ ... ಬಿಟ್ಟು ಕೊಡಲು ಮನಸ್ಸಿಲ್ಲ

ನಮ್ಮ ಪೂರ್ವಜರು..., ಇಹಲೋಕದಲ್ಲಿ ಸಂಪಾದನೆಗೈದ ಸಂಪತ್ತುಗಳನ್ನು ಅಲ್ಲಾಹನ ದಾರಿಯಲ್ಲಿ ನೀಡಿ ಅದಕ್ಕೆ ಬದಲಾಗಿ ಪರಿಪೂರ್ಣ ವಿಶ್ವಾಸವನ್ನು ಪಡೆದವರಾಗಿದ್ದರು . ಖಂಡಿತವಾಗಿಯೂ ಅವರ ಆ ತ್ಯಾಗ ಮಹತ್ವವಾದದ್ದೇ ಆಗಿದೆ .

ನಮ್ಮ ಸಂಪಾದನೆಯು ನಾವು ಭೂಮಿಯಿಂದ ಅಗಲುವಷ್ಟು ಕಾಲ ನಮ್ಮಲಿರುತ್ತದೆ ,ಹೊರತು ಅದು ನಮ್ಮೊಂದಿಗೆ ಶಾಶ್ವತವಾಗಿರುವುದಿಲ್ಲ . ಇರುವಷ್ಟು ಕಾಲ ನಾವು ನಮ್ಮ ಸಂಪತ್ತಿಗೆ ಕಾವಲುಗಾರನಾಗಿರುತ್ತೇವೆ . ನಮ್ಮ ನಂತರ ಬರುವ ವಾರೀಸುದಾರರಿಗೆ ಸೇರಬೇಕಾದ ಆಸ್ತಿಗಳ ಕಾವಲುಗಾರನಷ್ಟೆ...!

ಮಹಾನರಾದ ಶುಐಬ್ (ರಅ) ಹಿಜ್ರ ಹೊರಟಾಗ ದಾರಿ ಮಧ್ಯೆ , ಮುಶ್ರಿಕುಗಳ ಕೈಯಲ್ಲಿ ಸಿಕ್ಕಿಬಿದ್ದಾಗ , ಮಕ್ಕಾ ಕುಫ್ಫಾರುಗಳಾದ ಮುಶ್ರಿಕುಗಳು, "ಎಲ್ಲಿಂದಲೋ ನಮ್ಮ ಊರಿಗೆ ಬಂದು ವ್ಯಾಪಾರ ಮಾಡಿ , ದೊಡ್ಡ ಶ್ರೀಮಂತನಾಗಿ ಈಗ ನೀನು ನಿನ್ನ ಸಂಪತ್ತಿನೊಂದಿಗೆ ರಕ್ಷೆ ಪಡೆಯಲು ನೋಡುತ್ತಿಯೇನೊ..?" ಎಂದು ಹೇಳಿದಾಗ , ಸ್ವಹಾಬಿ ವರ್ಯರಾದ ಶುಐಬ್ (ರಅ) ಅವರಲ್ಲಿ ಹೇಳಿದರು "ದಯವಿಟ್ಟು ನೀವುಗಳು ನನ್ನನ್ನು ತಡೆಯಬೇಡಿ , ನನ್ನ ಸ್ವತ್ತುಗಳೆಲ್ಲವೂ ನಾನು ನಿಮಗೆ ಬಿಟ್ಟು ಕೊಟ್ಟಿರುವೆನು , ನಾನು ನನ್ನ ಪ್ರೀತಿಯ ಪ್ರವಾದಿ(ಸಅ) ರೊಂದಿಗೆ ಸೇರಲು ಹೊರಟಿರುವೆ" . ತನ್ನ ಆಯುಷ್ಯದ ಸಂಪಾದನೆಗಳೆಲ್ಲವನ್ನೂ ತ್ಯಜಿಸಿದ ಆ ಮಹಾನ್ ಸ್ವಹಾಬಿಯವರನ್ನು ಮದೀನದಲ್ಲಿ ಸ್ವೀಕರಿಸಿದ ಸಂದರ್ಭದಲ್ಲಿ ಪುಣ್ಯ ಪ್ರವಾದಿ (ಸಅ) ಹೇಳಿದರು "ನಿಮ್ಮ ವ್ಯಾಪಾರ ಎಷ್ಟೊಂದು ಮಹತ್ವವಾದದ್ದು ಶುಐಬ್ (ರಅ) ನಿಮ್ಮ ಈ ತ್ಯಾಗಕ್ಕೆ ಎಷ್ಟೊಂದು ಪ್ರತಿಫಲ ಲಭಿಸಲಿರುವುದು . ವಿಶ್ವಾಸಕ್ಕೆ ಬದಲಾಗಿ ಇಹಲೋಕವನ್ನು ನೀಡಿದ ಈ ಮಹತ್ ಕಾರ್ಯವು ಒಂದು ಅತ್ಯುತ್ತಮ ವ್ಯಾಪಾರವೆಂದು ಪ್ರವಾದಿಯವರು ಕಂಡರು . ನಮಗೆ ಸೃಷ್ಟಿಕರ್ತನಾದ ಅಲ್ಲಾಹನು ನೀಡಿದ ಸಂಪತ್ತಿನ ಕಾವಲುಗಾರ ಮಾತ್ರವಾಗಿದ್ದಾನೆ ನಾನೆಂಬ ಪ್ರತಿಯೊಬ್ಬರೂ.... ಇರುವುದನ್ನು ಯಾರಿಗೂ ನೀಡದೆ ಕೂಡಿಟ್ಟು ಏನುಮಾಡಲು ಸಾಧ್ಯ...? ಇತರರೊಂದಿಗೆ ಹಂಚಿಕೊಳ್ಳಿ,  ಅಲ್ಲಾಹನ ಮಾರ್ಗದಲ್ಲಿ ದಾನ ಮಾಡಿ ... ಪ್ರತಿಫಲ ಇನ್ಷಾಅಲ್ಲಾಹ್ ನಾಳೆ ಮಹ್ಷರದಲ್ಲಿ ಕಾಣಬಹುದಾಗಿದೆ.

ಅಲ್ಲಾಹನು ತೌಫೀಖ್ ನೀಡಲಿ...ಆಮೀನ್ 🤲

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰
   

ಗಡ್ಡ ಬೆಳೆಸಿ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
            *ಗಡ್ಡ ಬೆಳೆಸಿ*
〰〰❁✿🌹🌹✿❁ 〰〰


ಗಡ್ಡ ಬೆಳೆಸುವುದು ನಬಿ(ಸಅ) ರವರು ಕಲಿಸಿಕೊಟ್ಟ ಪ್ರಭಲವಾದ ಸುನ್ನತ್ತಾಗಿದೆ . ಗಡ್ಡ ಬೋಳಿಸುವುದು ನಿಷಿದ್ಧವೆಂದು ಬಹು ಸಂಖ್ಯಾ ಉಲಮಾ ಶ್ರೇಷ್ಠರ ಅಭಿಪ್ರಾಯವಾಗಿದೆ . ಗಡ್ಡ ಬೆಳೆಸಬೇಕೆಂಬುವುದು ಅಲ್ಲಾಹನ ಆಜ್ಞೆಯಾಗಿದೆ . ನಾವು ಅದನ್ನು ಉಪೇಕ್ಷಿಸಿದರೆ ನಾವು ಅಲ್ಲಾಹನ ಆಜ್ಞೆಯನ್ನು ತಿರಸ್ಕರಿಸಿದಂತೆ . ಪ್ರವಾದಿ ಚರ್ಯೆಯನ್ನು ನಾವು ಅನುಸರಿಸಬೇಕಾಗಿದೆ . ಗಡ್ಡ ಬೆಳೆಸುವುದಕ್ಕೆ ತಡೆ ಏನೆಂಬುದನ್ನು ತಿಳಿಯಿರಿ . ಜನರ ಅಪಹಾಸ್ಯವೇ ಕಾರಣವಾಗಿದ್ದರೆ ಜನರನ್ನು ಬದಿಗಿಟ್ಟು ಅಲ್ಲಾಹನ ಆಜ್ಞೆಯನ್ನು ಪೂರೈಸಿ ಅಲ್ಲಾಹನ ಪ್ರೀತಿಗೆ(ತೃಪ್ತಿ) ಪಾತ್ರರಾಗಿ . ಪುಣ್ಯ ಲಭಿಸುವ, ಯಾವುದೇ ತೊಂದರೆಗಳಿಲ್ಲದ ಗಡ್ಡ ಬೆಳೆಸುವುದನ್ನು ರೂಡಿ ಮಾಡಿ . ನನ್ನ ಜೀವನ ಅಲ್ಲಾಹನ ತೃಪ್ತಿಗಾಗಿ ಎಂದು ಮನಸ್ಸಲ್ಲಿ ದೃಢ ನಿಶ್ಚಯವನ್ನು ತೆಗೆಯಿರಿ . ಯಾವುದೇ ಸಿನೆಮಾ ತಾರೆಗಳನ್ನು ಅನುಕರಿಸದೆ ಪ್ರವಾದಿ ಚರ್ಯೆಯನ್ನು ಜೀವನದಲ್ಲಿ ಅಳವಡಿಸಿ . ಗಡ್ಡ ಶಿಲ್ಪ ಕಲೆ ಮೂಡಿಸಲಿರುವ ವಸ್ತುವಲ್ಲ ಪ್ರವಾದಿ ಮಾದರಿಯಾಗಿದೆ . ಆಧುನಿಕತೆಗೆ ಮಾರುಹೋದ ಯುವ ಪೀಳಿಗೆ ಗಡ್ಡಗಳಲ್ಲಿ ವಿವಿಧ ರೀತಿಯ ಕೆತ್ತನೆಗಳನ್ನು ಮೂಡಿಸಿ ಸಮುದಾಯದ ಇಝ್ಝತ್ತನ್ನು ಅಡವಿಟ್ಟಿರುತ್ತಾರೆ . ಅಂತಹ ವೇಷ ವಿಧಾನಗಳನ್ನು ಬದಿಗಿರಿಸಿ ಒಳಿತಿನತ್ತ ಮುಖ ಮಾಡಿ .

ಅಲ್ಲಾಹನು ಅನುಗ್ರಹಿಸಲಿ. . . ಆಮೀನ್.

 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಜಂಉ ಮತ್ತು ಖಸ್ರ್ ನಮಾಝ್

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
    *ಜಂಅ್ & ಖಸ್ರ್ ನಮಾಝ್*
    (ಯಾತ್ರೆಯಲ್ಲಿನ ನಮಾಝ್)
〰〰❁✿🌹🌹✿❁ 〰〰

*ಖಸ್ರ್*

ಹಲಾಲಾದ ಯಾತ್ರೆಯಲ್ಲಿ ಎಲ್ಲಾ ಷರತ್ತುಗಳನ್ನು ಪಾಲಿಸಿ ನಾಲ್ಕು ರಕಅತಿನ ಫರ್ಲ್ ನಮಾಝನ್ನು ಎರಡು ರಕಅತಾಗಿ ಕಡಿತಗೊಳಿಸಿ ನಮಾಝ್ ನಿರ್ವಹಿಸುವುದೇ *ಖಸ್ರ್* .

*ಜಂಅ್*

ಷರತ್ತುಗಳನ್ನು ಪಾಲಿಸಿಕೊಂಡು *ಲುಹರ್* ಮತ್ತು *ಅಸ್ವರ್* ಅನ್ನು  ಹಾಗೂ *ಮಗ್ರಿಬ್* ಮತ್ತು *ಇಶಾ* ನಮಾಝನ್ನು ಒಟ್ಟಿಗೆ ನಿರ್ವಹಿಸುವುದಾಗಿದೆ *ಜಂಅ್*

*ಷರತ್ತುಗಳು*

*🔴ಎರಡು ಮರ್ಹಲ ಅಂದರೆ 132 ಕಿಲೋ ಮೀಟರ್ ಗಿಂತ ಕಡಿಮೆ ಅಲ್ಲದ ಯಾತ್ರೆ ಆಗಿರಬೇಕು .*

_*🔴ಹೊರಡಲಿರುವ ಸ್ಥಾನ ಮತ್ತು ನಿಷ್ಚಿತ ದೂರ 132 ಕಿಲೋ ಮೀಟರ್ ಗಿಂತ ಅಧಿಕವಾಗಿದೆ ಎಂದು ತಿಳಿದಿರಬೇಕು.*_

*🔴ಹಲಾಲಾದ ಯಾತ್ರೆ ಆಗಿರಬೇಕು*

_*🔴ಯಾತ್ರೆ ಹೊರಡುವ ಪ್ರದೇಶದ ಗಡಿ ದಾಟಿರಬೇಕು*_

👉*ಖಸ್ರ್ ಮಾಡುವಾಗ ಗಮನಿಸಬೇಕಾದ ಕಾರ್ಯ*


*💡ಖಸ್ರಾಗಿ ನಿರ್ವಹಿಸುತ್ತಿದ್ದೇನೆ ಎಂದು ಹೇಳಬೇಕು*

_*💡ನಾಲ್ಕು ರಕಅತ್ ನಿರ್ವಹಿಸುವ ಇಮಾಂ ಜಮಾಅತಿನಲ್ಲಿ ಸೇರಬಾರದು*_

*💡ನಿಯ್ಯತ್ತಿಗೆ ವಿರುದ್ಧವಾದ ಕಾರ್ಯಗಳು ಉಂಟಾಗಬಾರದು*

_*💡ನಮಾಝ್ ಮುಗಿಯುವ ವರೆಗೆ ಯಾತ್ರೆಯಲ್ಲಿರಬೇಕು*_

*💡ಖಸ್ರ್ ನಮಾಝ್ ಜಾಯಿಝ್ ಎಂದು ತಿಳಿದಿರಬೇಕು*

*👉ಜಂಉತ್ತಖ್ದೀಂ ಮತ್ತು ಜಂಉತ್ತಅ್-ಖೀರ್*

ಮೊದಲನೇ ನಮಾಝಿನೊಂದಿಗೆ ಎರಡನೇ ವಖ್ತ್ ನಮಾಝನ್ನು ಮೊದಲನೇ ವಖ್ತಿನಲ್ಲಿ ನಿರ್ವಹಿಸುವುದನ್ನು *ಜಂಉತ್ತಖ್ದೀಂ* ಎಂದೂ ಮೊದಲನೇ ವಖ್ತ್ ನಮಾಝನ್ನು ಎರಡನೇ ವಖ್ತ್ ನಮಾಝಿನೊಂದಿಗೆ ಎರಡನೇ ವಖ್ತಿನಲ್ಲಿ ನಿರ್ವಹಿಸುವುದನ್ನು *ಜಂಉತ್ತಅ್-ಖೀರ್* ಎಂದೂ ಹೇಳುವರು.

*🌼ನಿಯ್ಯತ್-ಗಳು*

*ಲುಹರ್* ಮತ್ತು *ಅಸ್ವರ್* *ಜಂಅ್* ಮತ್ತು *ಖಸ್ರ್* ಮಾಡುವಾಗ 👇

*ಲುಹರಿನ ನಿಯ್ಯತ್* :- (ಖಸ್ರ್ ಮಾಡಲು ಬಯಸುವುದಾದರೆ ಈ ರೀತಿಯಲ್ಲಿ ನಿಯ್ಯತ್ ಗೈಯ್ಯಿರಿ) ಉಸ್ವಲ್ಲೀ ಫರ್ಲ ಸ್ವಲಾತ ಲ್ಲುಹ್ರಿ ಮಖ್ಸೂರತನ್ ರಕಅತೈನಿ ಮಜ್ಮೂಅತನ್ ಮಅಲ್ ಅಸ್ರಿ ಜಂಉ ತ್ತಖ್ದೀಮಿ(ಅಥವಾ ಜಂಉತ್ತಅ್-ಖೀರಿ) ಮುತವಜ್ಜಿಹಂ ಇಲಲ್ ಖಿಬ್ಲತಿ ಅದಾಅನ್ ಲಿಲ್ಲಾಹಿ ತಆಲಾ .

*ಅಸ್ವರಿನ ನಿಯ್ಯತ್* :- (ಖಸ್ರ್ ಮಾಡಲು ಬಯಸುವುದಾದರೆ ಈ ರೀತಿಯಲ್ಲಿ ನಿಯ್ಯತ್ ಗೈಯ್ಯಿರಿ)ಉಸ್ವಲ್ಲಿ ಫರ್ಲ ಸ್ವಲಾತಲ್ ಅಸ್ರಿ ಮಖ್ಸೂರತನ್ ರಕಅತೈನಿ ಮುತವಜ್ಜಿಹನ್ ಇಲಲ್ ಖಿಬ್ಲತಿ ಅದಾಅನ್ ಲಿಲ್ಲಾಹಿ ತಆಲಾ .

*ಮಗ್ರಿಬ್* ಮತ್ತು *ಇಶಾಅ್* *ಜಂಅ್* ಮತ್ತು *ಖಸ್ರ್* ಮಾಡುವಾಗ 👇

*ಮಗ್ರಿಬಿನ ನಿಯ್ಯತ್* :- ಉಸ್ವಲ್ಲೀ ಫರ್ಲ ಸ್ವಲಾತಲ್ ಮಗ್ರಿಬಿ ಸಲಾಸ ರಕ್ಅತಿನ್ ಮಜ್ಮೂಅತನ್ ಮಅಲ್ ಇಶಾಯಿ ಜಂಉತ್ತಖ್ದೀಮಿ(ಅಥವಾ ಜಂಉತ್ತಅ್-ಖೀರಿ) ಮುತವಜ್ಜಿಹನ್ ಇಲಲ್ ಖಿಬ್ಲತಿ ಅದಾಅನ್ ಲಿಲ್ಲಾಹಿ ತಆಲಾ .

*ಇಶಾ ನಿಯ್ಯತ್* :- ಉಸ್ವಲ್ಲೀ ಫರ್ಲ ಸ್ವಲಾತಲ್ ಇಶಾಇ ಮಖ್ಸೂರತನ್ ರಕಅತೈನಿ ಮುತವಜ್ಜಿಹನ್ ಇಲಲ್ ಖಿಬ್ಲತಿ ಅದಾ ಅನ್ ಲಿಲ್ಲಾಹಿ ತಆಲಾ.

*ಸೂಚನೆ:-👇*

*❌ಸುಬಹಿ ನಮಾಝನ್ನು ಜಂಉ ಮತ್ತು ಖಸ್ರ್ ಮಾಡಲು ಜಾಯಿಝಿಲ್ಲ(ಅನುಮತಿ ಇಲ್ಲ). ಅದರಂತೆ ಮಗ್ರಿಬನ್ನು ಖಸ್ರ್ ಮಾಡಲು ಜಾಯಿಝಿಲ್ಲ(ಅನುಮತಿ ಇಲ್ಲ)❌* .

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ತಪ್ಪುಗಳನ್ನು ಹುಡುಕಬೇಡ..!

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
  *ತಪ್ಪುಗಳನ್ನು ಹುಡುಕುವವರೇ*
〰〰❁✿🌹🌹✿❁ 〰〰

ಇತರರ ನ್ಯೂನತೆಗಳ ಹಿಂದೆ ಸಂಚರಿಸುವ ಮುನ್ನ. . . . !

ನಾವೆಲ್ಲರೂ ಮನುಷ್ಯರಲ್ಲವೇ. . ?
ಬರೆಯುವ ನನಗೂ ಓದುವ ನಿಮಗೂ ಯಾವುದೇ ನ್ಯೂನತೆಗಳಿಲ್ಲವೆಂದು ಭಾವಿಸಿದ್ದೀರೇನು. . ?

ಸಣ್ಣ ಪುಟ್ಟ ನ್ಯೂನತೆಗಳು ಎಲ್ಲರಲ್ಲೂ ಇದೆ , ಆದರೂ ನಮ್ಮಲ್ಲಿ ಕೆಲವರು ಉಳಿದವರ ನ್ಯೂನತೆಗಳ ಹಿಂದೆ ಸಂಚರಿಸುವವರಾಗಿದ್ದಾರೆ.   ಅದರಲ್ಲಿ ಆನಂದವನ್ನು ಕಾಣುವವರೂ ಇದ್ದಾರೆ . ಒಬ್ಬ ಗೆಳೆಯನಲ್ಲಿ ಮಾತಿಗೆ ನಿಂತರೆ ನಮ್ಮ ನಾಲಗೆಯಿಂದ ಹೊರಬೀಳುವುದು ಇತರರ ತಪ್ಪುಗಳಾಗಿವೆ . ಇದರಿಂದ ನಮಗೆ ಕಿಂಚಿತ್ತು ಲಾಭವಿಲ್ಲದಿದ್ದರೂ ನಾವು ಅದನ್ನೇ ಹಿಂಬಾಲಿಸುತ್ತೇವೆ . ಇತರರ ತಪ್ಪುಗಳನ್ನು ಹೇಳುವುದರಿಂದ ಅವರ ನ್ಯೂನತೆಗಳಿಗೆ ಪರಿಹಾರ ಲಭ್ಯವಾಗುತ್ತದೆಯೇ. . ? ಇನ್ನೊಬ್ಬರ ಅಭಾವದಲ್ಲಿ ಅವರ ತಪ್ಪುಗಳನ್ನು ಹೇಳುವುದು ಕೂಡ ಪಾಪವಾಗಿದೆ .

ಗೆಳೆಯಾ. . . ಸಣ್ಣ ಪುಟ್ಟ ತಪ್ಪುಗಳನ್ನು ಕಂಡರೆ ಅದನ್ನು ತಿದ್ದಿಕೊಡಬೇಕಾಗಿರುವುದು ನಮ್ಮ ಕರ್ತವ್ಯ.
"ಖಂಡಿತವಾಗಿಯೂ ಸತ್ಯ ವಿಶ್ವಾಸಿಗಳೆಡೆಯಲ್ಲಿ ಅಪ ಪ್ರಚಾರ ಮಾಡುವವರು ಯಾರೋ. . ಅವರಿಗೆ ಇಹಲೋಕದಲ್ಲೂ ಪರಲೋಕದಲ್ಲೂ ಕಠಿಣವಾದ ಶಿಕ್ಷೆ ಇದೆ" ಎಂದು ಪವಿತ್ರ ಖುರ್-ಆನ್ ಹೇಳುತ್ತದೆ .

ನಬಿ (ಸಅ) ರವರು ಹೇಳಿದರು :- "ನೀವು ಅಲ್ಲಾಹನ ದಾಸರಿಗೆ ದ್ರೋಹ ಮಾಡಬೇಡಿ . ಅವರನ್ನು ನೀವು ಆಕ್ಷೇಪಿಸಬೇಡಿ, ಅವರ ನ್ಯೂನತೆಗಳನ್ನು ಹುಡುಕಬೇಡಿ . ಕಾರಣ ಯಾರಾದರೂ ಒಬ್ಬ ಮುಸಲ್ಮಾನನ ನ್ಯೂನತೆಗಳ ಹಿಂದೆ ಸಂಚರಿಸಿದರೆ , ಅವನ ನ್ಯೂನತೆಗಳನ್ನು ಹುಡುಕಿ ಅವನ ಮನೆಯಲ್ಲೇ ಅವನ ಮಾನವನ್ನು ಹರಾಜು ಮಾಡುವನು .

ತನ್ನ ಸಹೋದರನ ಅಭಿಮಾನವನ್ನು ಸಂರಕ್ಷಿಸಿದರೆ ಖಿಯಾಮತ್ ದಿನದಲ್ಲಿ ಅಲ್ಲಾಹನು ಅವನನ್ನು ನರಕದಿಂದ ತಡೆಯುವನು .

ಆದ್ದರಿಂದ ತಪ್ಪು ಮಾಡುವವರ ತಪ್ಪುಗಳ ಹಿಂದೆ ಹೋಗಬೇಡಿ . ತಪ್ಪುಗಳು ಕಂಡಲ್ಲಿ ಸರಿಪಡಿಸಿ , ಮನವರಿಕೆ ಮಾಡಿ , ತಪ್ಪುಗಳಿಂದ ಹಿಂದೆ ಸರಿಯಲು ಉಪದೇಶ ನೀಡಿ , ಅವರ ಅಭಿಮಾನಕ್ಕೆ ಧಕ್ಕೆ ಉಂಟುಮಾಡಬೇಡಿ .

ಪರಲೋಕದಲ್ಲಿ ನಾವು ಅವರೊಂದಿಗೆ ವಿಜಯಿಗಳಾಗೋಣಾ. . . !

ಅಲ್ಲಾಹನು ಅನುಗ್ರಹಿಸಲಿ. . . ಆಮೀನ್.

 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ತಸ್ಬೀಹ್ ನಮಾಝ್

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
        *ತಸ್ಬೀಹ್ ನಮಾಝ್*
〰〰❁✿🌹🌹✿❁ 〰〰

ತಸ್ಬೀಹ್ ನಮಾಝ್ ಅತ್ಯಂತ ಶ್ರೇಷ್ಠವಾದ ಒಂದು ನಮಾಝ್ ಆಗಿದೆ . ಜೀವನದಲ್ಲಿ ಒಮ್ಮೆಯಾದರೂ ತಸ್ಬೀಹ್ ನಮಾಝ್ ನಿರ್ವಹಿಸಿರಬೇಕೆಂಬ ಅನೇಕ ಪ್ರವಾದಿ ವಚನಗಳಿವೆ .

*🔲ತಸ್ಬೀಹ್ ನಮಾಝಿನ ರೂಪ🔲*

ಎರಡೆರಡು ರಕಅತಾಗಿಯೂ ನಾಲ್ಕು ರಕಅತಾಗಿಯೂ ನಿರ್ವಹಿಸಬಹುದು .

*💈ನಿಯ್ಯತ್💈*

*ತಸ್ಬೀಹ್ ನಮಾಝ್ ಎಂಬ ಸುನ್ನತ್ ನಮಾಝ್ ಎರಡು ರಕಅತ್ (ನಾಲ್ಕು ರಕಅತ್) ಖಿಬ್ಲಾಗೆ ಮುನ್ನಿಟ್ಟು ಅಲ್ಲಾಹನಿಗಾಗಿ ನಾನು ನಮಾಝ್ ನಿರ್ವಹಿಸುತ್ತಿದ್ದೇನೆ .*

*💈ಮೊದಲನೇ ರಕಅತ್💈*

✴ನಿಯ್ಯತ್ತಿನ ನಂತರ ತಕ್ಬೀರತುಲ್ ಇಹ್ರಾಂ ಹೇಳಿ ಕೈ ಕಟ್ಟುವುದು .
✴ಫಾತಿಹ ಓದುವುದು. 
✴ಅಲಂ ನಶ್ರಹ್ ಸೂರತ್ ಓದುವುದು.
✴ಸುಬ್ಹಾನಲ್ಲಾಹಿ ವಲ್-ಹಂದುಲಿಲ್ಲಾಹಿ ವ-ಲಾಇಲಾಹ ಇಲ್ಲಲ್ಲಾಹು ವಅಲ್ಲಾಹು ಅಕ್ಬರ್ ಎಂದು ಹದಿನೈದು ಸಲ ಹೇಳುವುದು .
✴ನಂತರ ರೂಕೂಅ್ ಮಾಡುವುದು ರುಕೂಇನಲ್ಲಿನ ದಿಕ್ರಿನ ನಂತರ ಮೇಲೆ ಹೇಳಿದ ತಸ್ಬೀಹನ್ನು ಹತ್ತು ಸಲ ಹೇಳುವುದು .
✴ಮರಳಿ ಇಅ್-ತಿದಾಲಿಗೆ , ಇಅ್-ತಿದಾಲಿನ ದಿಕ್ರಿನ ನಂತರ ಮೇಲೆ ಹೇಳಿದ ತಸ್ಬೀಹನ್ನು ಹತ್ತು ಸಲ ಹೇಳುವುದು .
✴ಮೊದಲ ಸುಜೂದಿನಲ್ಲಿನ ದಿಕ್ರಿನ ನಂತರ ಮೇಲೆ ಹೇಳಿದ ತಸ್ಬೀಹನ್ನು ಹತ್ತು ಸಲ ಹೇಳುವುದು .
✴ಎರಡು ಸುಜೂದುಗಳ ಎಡೆಯಲ್ಲಿ ಕುಳಿತುಕೊಂಡು ಅಲ್ಲಿ ಹೇಳಬೇಕಾದ ದಿಕ್ರಿನ ನಂತರ ಮೇಲೆ ಹೇಳಿದ ತಸ್ಬೀಹನ್ನು ಹತ್ತು ಸಲ ಹೇಳುವುದು .
✴ಎರಡನೇ ಸುಜೂದಿನ ದಿಕ್ರಿನ ನಂತರ ಮತ್ತೆ ಮೇಲೆ ಹೇಳಿದ ತಸ್ಬೀಹನ್ನು ಹತ್ತು ಸಲ ಹೇಳುವುದು .
✴ಸುಜೂದಿನಿಂದ ಎರಡನೇ ರಕಅತಿಗೆ ಎದ್ದೇಳುವಾಗ ಕುಳಿತ ಸ್ಥಿತಿಯಲ್ಲಿ ಮೇಲೆ ಹೇಳಿದ ತಸ್ಬೀಹನ್ನು ಹತ್ತು ಸಲ ಹೇಳಿ ಎರಡನೇ ರಕಅತಿಗೆ ಏಳುವುದು .

🚥 ಹೀಗೆ ಒಂದು ರಕಅತಿನಲ್ಲಿ ಎಪ್ಪತ್ತೈದು ತಸ್ಬೀಹುಗಳನ್ನು ಹೇಳುವುದು .

*💈ಎರಡನೇ ರಕಅತ್💈*

✴ಫಾತಿಹ ಓದಿದ ನಂತರ ಸೂರ ಅಲಂತರ ಓದುವುದು .
✴ಉಳಿದ ರುಕೂಅ್ ಸುಜೂದುಗಳಲ್ಲಿ ಮೊದಲಿನ ರಕಅತಿನಲ್ಲಿ ಮಾಡಿದಂತಹ ಕ್ರಮವನ್ನು ಅನುಸರಿಸಿ ರಕಅತ್ ಪೂರ್ತಿಗೊಳಿಸುವುದು .
✴ಅತ್ತಹಿಯಾತಿಗೂ ಮುಂಚಿತವಾಗಿ ಮೇಲೆ ಹೇಳಿದ ತಸ್ಬೀಹನ್ನು ಹತ್ತು ಸಲ ಹೇಳುವುದು .
✴ಸಲಾಂ ಹೇಳಿ ಮೂರು ಮತ್ತು ನಾಲ್ಕನೇ ರಕಅತ್ಗಾಗಿ ಎದ್ದೇಳುವುದು .

*💈ಮೂರನೇ ರಕಅತ್💈*

✴ಫಾತಿಹ ಓದಿದ ನಂತರ ಸೂರ ಕಾಫಿರೂನ ಓದುವುದು .
✴ಉಳಿದ ರುಕೂಅ್ ಸುಜೂದುಗಳಲ್ಲಿ ಮೊದಲಿನ ರಕಅತಿನಲ್ಲಿ ಮಾಡಿದಂತಹ ಕ್ರಮವನ್ನು ಅನುಸರಿಸಿ ರಕಅತ್ ಪೂರ್ತಿಗೊಳಿಸಿ ನಾಲ್ಕನೇ ರಕಅತಿಗೆ ಮರಳುವುದು .

*💈ನಾಲ್ಕನೇ ರಕಅತ್💈*

✴ಫಾತಿಹ ಓದಿದ ನಂತರ ಸೂರ ಇಖ್ಲಾಸ್ ಓದುವುದು .
✴ಉಳಿದ ರುಕೂಅ್ ಸುಜೂದುಗಳಲ್ಲಿ ಮೊದಲಿನ ರಕಅತಿನಲ್ಲಿ ಮಾಡಿದಂತಹ ಕ್ರಮವನ್ನು ಅನುಸರಿಸಿ ರಕಅತ್ ಪೂರ್ತಿಗೊಳಿಸುವುದು .
✴ಅತ್ತಹಿಯಾತಿಗೂ ಮುಂಚಿತವಾಗಿ ಮೇಲೆ ಹೇಳಿದ ತಸ್ಬೀಹನ್ನು ಹತ್ತು ಸಲ ಹೇಳುವುದು .
✴ಸಲಾಂ ಹೇಳಿ ವಿರಮಿಸುವುದು .

*🚥 ಒಂದೊಂದು ರಕಅತುಗಳಲ್ಲಿ ಎಪ್ಪತ್ತೈದರಂತೆ ನಾಲ್ಕು ರಕಅತುಗಳಲ್ಲಿ ಒಟ್ಟು ಮುನ್ನೂರು ತಸ್ಬೀಹುಗಳು .*

ಅಲ್ಲಾಹನು ತೌಫೀಖ್ ನೀಡಿ ಅನುಗ್ರಹಿಸಲಿ. . . ಆಮೀನ್

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ದುಆ ನಮ್ಮ ಆಯುಧ

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳ದುಆ ಮುಅಮಿನರ ಆಯುಧ🌳:::*
▪•••┈┈•✿❁✿•┈┈•••▪

                           *****

ಹಜ್ಜಾಜ್ ಇಬ್ನು ಯೂಸುಫ್ ಅಕ್ರಮಿಯಾದ ಆಡಳಿತಾರನಾಗಿದ್ದ . ಅಧಿಕಾರದ ದರ್ಪದೊಂದಿಗೆ ಅಹಂಕಾರ, ಕರುಣೆ ಇಲ್ಲದ ಆಡಳಿತ , ಜನರ ಜೀವನದೊಂದಿಗೆ ಚೆಲ್ಲಾಟ . ಅದೆಷ್ಟೋ ಸತ್ಕರ್ಮಿಗಳನ್ನು ಕೊಂದು ಹಾಕಿದ್ದನು . *ಹಜ್ಜಾಜ್ ಇಬ್ನು ಯೂಸುಫ್* ಎಂಬ ಆಡಳಿತಗಾರನ ಅನೈತಿಕತೆ ಮತ್ತು ಸರ್ವಾಧಿಕಾರಕ್ಕೆ ಇಮಾಮ್ ಹಸನುಲ್ ಬಸ್ವರಿ (ರಅ) ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದರು. ಹಜ್ಜಾಜ್ ವಿರುದ್ಧ ಬೆರಳು ಎತ್ತುವ ಧೈರ್ಯ ಯಾರಿಗೂ ಇರಲಿಲ್ಲ. ಹಸನುಲ್
ಬಸ್ವರಿ (ರಅ) ರವರನ್ನು ಅರಮನೆಗೆ ಕರೆತರಲು ಹಜ್ಜಾಜ್ ಆದೇಶಿಸಿದನು .

ಹಜ್ಜಾಜ್  ಇಮಾಮ್ ಹಸನುಲ್ ಬಸ್ವರಿಯವರನ್ನು  ಜನರ ಮುಂದೆ ನಿಲ್ಲಿಸಿ ಹೀಗೆ ಹೇಳಿದನು "ಓ ಜನರೇ, ನೀವು ಬಸ್ವರಿಯ ಗುಲಾಮರಾಗಿದ್ದೀರಾ? ಹೇಡಿಗಳು ..ನಾನು ನಿಮ್ಮನ್ನು ಹಸನ್ ಬಸ್ವರಿಯ ರಕ್ತವನ್ನು ಕುಡಿಯುವಂತೆ ಮಾಡುತ್ತೇನೆ. ”

ಇಮಾಮ್ ಹಸನುಲ್ ಬಸ್ವರಿ (ರಅ) ರವರನ್ನು  ಹಜ್ಜಾಜನ ಸೈನಿಕರು ಮರಣದಂಡನೆ ಸ್ಥಳಕ್ಕೆ ಕರೆದೊಯ್ದರು. ಆಗ ಬಸ್ವರಿಯವರು ತನ್ನ  ಮುಖವನ್ನು ಹಜ್ಜಾಜನ ಕಡೆಗೆ ತಿರುಗಿಸಿದರು . ಆಗಲೂ ಮಹಾನವರ ತುಟಿಗಳು ಅಲ್ಲಾಹನ ಪವಿತ್ರ ನಾಮಗಳನ್ನು ಜಪಿಸುತ್ತಿತ್ತು . ಮಹಾನರ ಮುಖವನ್ನು ನೋಡಿದ ಹಜ್ಜಾಜ್ ಭಯಭೀತನಾಗಲು ಪ್ರಾರಂಭಿಸಿದನು , ಆತನನ್ನು ಭಯ ಆವರಿಸಿಕೊಂಡಿತು .

ಅಲ್ಲಾಹನ ಕಾರುಣ್ಯ ಜ್ವಾಲೆ ಬಸ್ವರಿಯವರ ಮುಖದಲ್ಲಿ ಹರಿಯಿತು. ಹಜ್ಜಾಜನು ಭಯದಿಂದ ಕೂಗಿದನು: "ಹೇ ಅಬು ಸಯೀದ್, ನನ್ನನ್ನು ಕ್ಷಮಿಸು ,ನೀವು ವಿದ್ವಾಂಸರ ಆಧ್ಯಾತ್ಮಿಕ ನಾಯಕ” ಎನ್ನುತ್ತಾ ಹಸನುಲ್ ಬಸ್ವರಿ (ರಅ) ರವರ ಗಡ್ಡ ಮತ್ತು ತಲೆಯ ಮೇಲೆ ಸುಗಂಧ ಲೇಪಿಸಿ ಹಜ್ಜಾಜ್ ಗೌರವಿಸಿದನು.

ಮಹಾನರಾದ ಹಸನುಲ್ ಬಸ್ವರಿಯವರು ಹಜ್ಜಾಜನ ಮುಖವನ್ನು ನೋಡಿ ಈ ರೀತಿ ಪ್ರಾರ್ಥಿಸಿದ್ದರು "ಅಲ್ಲಾಹನೇ...ಹಝ್ರತ್ ಇಬ್ರಾಹಿಮ್ ನಬಿಯವರಿಗೆ ಬೆಂಕಿಯ ಕೆನ್ನಾಲಗೆಯಿಂದ ರಕ್ಷಣೆ ಮತ್ತು ತಂಪನ್ನು ನೀಡಿದಂತೆ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನನಗೂ ರಕ್ಷಣೆ ಮತ್ತು ತಂಪನ್ನು ನೀಡು.." .

💝👇💖

ನೋಟ್ :- ವರ್ತಮಾನದ ಎಲ್ಲಾ ಕಷ್ಟ ಕಾರ್ಪಲ್ಯಗಳಿಂದ ರಕ್ಷಣೆ ಹೊಂದಲು ನಾವೂ ಕೂಡಾ ಪ್ರಾರ್ಥಿಸೋಣ...! ಇನ್ಶಾ ಅಲ್ಲಾಹ್.
ನಿಮ್ಮ ಪ್ರಾರ್ಥನೆಯಲ್ಲಿ ನಮನ್ನೂ ನಮ್ಮ ಗೆಳೆಯರನ್ನೂ ಪ್ರತ್ಯೇಕವಾಗಿ ನಮ್ಮ ಗುರುವರ್ಯರಾದ ಉಲೆಮಾ ನೇತಾರರನ್ನೂ ಒಳಪಡಿಸಲು ಮರೆಯದಿರಿ.... ಅಲ್ಲಾಹನು ತೌಫೀಖ್ ಕರುಣಿಸಲಿ... ಆಮೀನ್. 🤲
 
صلّوا على النبي ﷺ 
اللهم صل على سيدنا محمد وعلى اله وصحبه وسلم

 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰
   
   

ಪಿಶಾಚಿ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
                  *ಪಿಶಾಚಿ*
〰〰❁✿🌹🌹✿❁ 〰〰

ಜೀವನದಲ್ಲಿ ಉಂಟಾಗುವ ತಪ್ಪುಗಳಿಗೆ ಪ್ರೇರಣೆ ಮನುಷ್ಯ ಮನಸ್ಸುಗಳಲ್ಲಿ ಉದಯಿಸುವ ಕೆಟ್ಟ ಚಿಂತೆಗಳಾಗಿವೆ . ಈ ರೀತಿಯ ಚಿಂತೆಗಳು ಎಲ್ಲಿಂದ ಬರುತ್ತಿದೆ ಎಂದು ಲಾಬೋರೇಟರಿಗಳಲ್ಲಿ ತಪಾಸಣೆ ಗೈದರೆ ತಿಳಿಯಲು ಸಾಧ್ಯವಿಲ್ಲ. ಆದರೆ ಮನಸ್ಸಿನಲ್ಲಿ ಕೆಟ್ಟ ಚಿಂತೆಗಳು ಮೂಡುತ್ತಿರುವುದು ಯಾರಿಂದಲೂ ನಿಶೇಧಿಸಲಾಗದ ಸತ್ಯವಾಗಿದೆ . ಈ ಕೆಟ್ಟ ಚಿಂತೆಗಳ ಪ್ರೇರಕ ಶಕ್ತಿ ಪಿಶಾಚಿಗಳಾಗಿವೆ . ಪಿಶಾಚಿಗಳು ಮನುಷ್ಯರನ್ನು ಕ್ರಿಯಾತ್ಮಕವಾಗಿ ಆಕ್ರಮಿಸುವುದಿಲ್ಲ ಬದಲಾಗಿ ಮನುಷ್ಯ ಮನಸ್ಸುಗಳಲ್ಲಿ ಅಶ್ಲೀಲ ಅಸಹ್ಯ ಚಿಂತನೆಗಳನ್ನಿಟ್ಟು ಅವುಗಳು ಹಿಂದೆ ಸರಿಯುತ್ತವೆ . ಈ ಕೆಟ್ಟ ಚಿಂತನೆಗಳೊಂದಿಗೆ ಸಂಚರಿಸುವ ಮನುಷ್ಯರು ತಪ್ಪುಗಳಿಗೆ ಶರಣಾಗುತ್ತಾರೆ . ಮನುಷ್ಯ ಮತ್ತು ಜಿನ್ನ್ ವಿಭಾಗಗಳಲ್ಲಿರುವ ಪಿಶಾಚಿಗಳು ಮನುಷ್ಯರಿಗೆ ಮೋಹಗಳನ್ನು ಉಂಟುಮಾಡಿ ದಾರಿತಪ್ಪಿಸಲು ಶ್ರಮಿಸುತ್ತವೆ .

ಪಿಶಾಚಿಗಳು ಮನುಷ್ಯರನ್ನು ದಾರಿ ತಪ್ಪಿಸಲು ಸೂಕ್ಷ ತಂತ್ರಗಳನ್ನು ಪ್ರಯೋಗಿಸುತ್ತವೆ . ಪ್ರತಿಯೊಬ್ಬರನ್ನೂ ಅವರವರ ಸ್ಥಾನ ಮಾನ ಗೌರವಕ್ಕನುಗುಣವಾಗಿ ಅವರ ಮನಸ್ಸಲ್ಲಿ ಕೆಟ್ಟ ಚಿಂತೆಗಳನ್ನು ಮೂಡಿಸುತ್ತವೆ . ಕೆಲವರಲ್ಲಿ ಅಹಂಕಾರವನ್ನು ಬಿತ್ತಿದರೆ ಮತ್ತೆ ಕೆಲವರಲ್ಲಿ ಹಗೆಯನ್ನು ಸೃಷ್ಟಿಮಾಡುತ್ತವೆ . ಕೆಲವರಲ್ಲಿ ಅಮಿತ ಭಕ್ತಿಯನ್ನು ಉಂಟುಮಾಡುತ್ತದೆ ಮತ್ತೆ ಕೆಲವರಲ್ಲಿ ಅಮಿತ ಮೋಹಗಳನ್ನು ಉಂಟುಮಾಡುತ್ತದೆ . ಜ್ಞಾನಿಗಳನ್ನು ದಾರಿ ತಪ್ಪಿಸಲು ಬೇಕಾದ ತಂತ್ರಗಳನ್ನು ರೂಪಿಸುತ್ತವೆ, ಅಜ್ಞಾನಿಯನ್ನು ಭೌತಿಕ ಮೋಹಗಳನ್ನಿಟ್ಟು ವಂಚಿಸುವನು . ಧನಿಕನಿಗೆ ಸಂಪತ್ತಿನಿಂದ ಅಹಂಕಾರ ಉಂಟುಮಾಡುವನು , ಬಡವನಿಗೆ ದಾರಿಧ್ರ್ಯದ ಕಷ್ಟಗಳನ್ನು ತೋರಿಸಿ ತಪ್ಪುಗಳಿಗೆ ಪ್ರಚೋದನೆ ನೀಡುವನು .
ಒಬ್ಬರನ್ನು ಕೂಡಾ ಭಲಪ್ರಯೋಗದಿಂದ ತಪ್ಪುಗಳಿಗೆ ದೂಡಲು ಪಿಶಾಚಿನಿಂದ ಸಾಧ್ಯವಿಲ್ಲ. ಆದರೆ ತಪ್ಪುಗಳಲ್ಲಿ ನಿತ್ಯನಾಗಿರಲು ಎಲ್ಲಾ ಪ್ರಯೋಗಗಳನ್ನು ಪಿಶಾಚಿ ಬಳಸುವನು . ಪಿಶಾಚಿಗಳ ಮೂಲಕ ಉಂಟಾಗುವ ದುಷ್ಚಿಂತೆಗಳಿಂದ ಮನುಷ್ಯರು ಜಾಗರೂಕರಾಗಬೇಕಾಗಿದೆ . ಅದರಂತೆ ಪಿಶಾಚಿಗಳ ಕುತಂತ್ರಗಳಿಂದ ರಕ್ಷಣೆ ಹೊಂದಲು ಯಾವಾಗಲೂ ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾಗಿದೆ .
ಪಿಶಾಚಿಗಳ ಪ್ರೇರಣೆ ಯಾವ ರೀತಿಯಲ್ಲಿ ಎಂದು ಖುರ್-ಆನ್ ವಿವರಿಸಿಕೊಡುತ್ತದೆ . ಪವಿತ್ರ ಗ್ರಂಥದ ವಿವರಣೆಗಳನ್ನು ಸರಿಯಾಗಿ ಅರ್ಥೈಸಿ ಪಿಶಾಚಿನ ಕುತಂತ್ರಗಳಲ್ಲಿ ಬೀಳದಿರಲು ಪ್ರಯತ್ನಿಸಬೇಕು . ಪಿಶಾಚಿ ನಮ್ಮ ಶತ್ರು ಎಂಬುದು ಸದಾ ನೆನಪಿನಲ್ಲಿರಲಿ . 

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰


ಪಾಝಿಟಿವ್ ಚಿಂತೆ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
     *ಪೋಝಿಟಿವ್ ಚಿಂತೆಗಳು*
〰〰❁✿🌹🌹✿❁ 〰〰

ಮನುಷ್ಯ ಮನಸ್ಸುಗಳು ಎರಡು ವಿಧ  ಒಂದು ಜಾಗೃತ ಮನಸ್ಸು ಮತ್ತೊಂದು ಉಪ ಪ್ರಜ್ಞೆ ಮನಸ್ಸು . ಮನುಷ್ಯನ ಮನಸ್ಸು ಸದಾ ಚಂಚಲ ಭಾವ ಹೊಂದಿರುತ್ತದೆ. ಮನುಷ್ಯನ ಉಪ ಪ್ರಜ್ಞೆ ಮನಸ್ಸಿಗೆ ತಪ್ಪು ಸರಿಯನ್ನು ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲ. ಮನುಷ್ಯ ನಿರಂತರವಾಗಿ  ತನ್ನೊಂದಿಗೆ ಏನನ್ನು ಹೇಳುತ್ತಾನೋ ಅದನ್ನು ಮನುಷ್ಯನ ಉಪ ಪ್ರಜ್ಞೆ ಮನಸ್ಸು ಅಂಗೀಕರಿಸುತ್ತದೆ .
"ನಾನೊಬ್ಬ ರೋಗಿ" "ನಾನೊಬ್ಬ ಸೋಮಾರಿ" "ನನ್ನಿಂದ ಏನೂ ಮಾಡೋಕಾಗಲ್ಲ" ಅಂತ ಯಾವಾಗಲೂ ಚಿಂತಿಸುತ್ತಲೇ ಇದ್ದರೆ ಹಲವು ವಿಧದ ರೋಗಗಳು ಉಂಟಾಗಲು ಸಾಧ್ಯತೆ ಇದೆ ಅಲ್ಲದೇ ಜೀವನ ಪೂರ್ತಿ ಕೊರಗುತ್ತಲೇ ಇರಬೇಕಾಗುತ್ತದೆ .

ನೆಗೆಟಿವ್ ಆಗಿ ಚಿಂತಿಸುವುದರಿಂದ ಮನುಷ್ಯನಿಗೆ ದೋಷವೇ ಹೊರತು ಯಾವುದೇ ಲಾಭಗಳಿಲ್ಲ.  ಪೋಝಿಟಿವ್ ಆದ ಪುಸ್ತಕಗಳು ಓದುವುದು , ಕಥೆಗಳು ಕೇಳುವುದು , ಪೋಝಿಟಿವ್ ಆದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗುವುದು , ಪೋಝಿಟಿವ್ ಆಗಿರುವ ಜನರೊಂದಿಗೆ ಸಂಪರ್ಕವಿರಿಸುವುದು ಮುಂತಾದವುಗಳಿಂದ ಪೋಝಿಟಿವ್ ಚಿಂತೆಗಳನ್ನು ಬೆಳೆಸಬಹುದು .

ನೆಗೆಟಿವ್ ಚಿಂತೆಗಳು ಮನುಷ್ಯರೇ ಸೃಷ್ಟಿಸಿದ ಗೋಡೆಗಳು , ಅದರ ಹಿಂದೆ ಅವರೇ ಅಡಗಿಕೊಳ್ಳುತ್ತಾರೆ . ಅವರು ಯಾರಿಗೋ ಹೆದರಿದಂತೆ , ಯಾರದೋ ಗುಲಾಮರಂತೆ , ನಮ್ಮಿಂದೇನೂ ಸಾಧ್ಯವಿಲ್ಲ ಎಂದು ತಾವೇ ಸ್ವಯಂ ಗೋಶಿಸುತ್ತಾ ಹಿಂಜರಿಯುತ್ತಾರೆ . ವಾಸ್ತವದಲ್ಲಿ ಇವರನ್ನು ಯಾರೂ ಹೀಯಾಳಿಸುತ್ತಿಲ್ಲ, ಯಾರೂ ತಮಾಷೆ ಮಾಡುತ್ತಿಲ್ಲ ಆದರೂ ಇವರು ತಮ್ಮನ್ನು ಅವರು ಹೀಗೆಲ್ಲಾ ಮಾಡುವರು ಎನ್ನುವ ಕೃತಕ ನಂಬಿಕೆಯನ್ನು ಸೃಷ್ಟಿ ಮಾಡಿದ್ದಾರೆ .

*ಬದಲಾಗಬೇಕಾಗಿರೋದು ನಾವೇ , ಯಾರು ಏನೇ ಹೇಳಲಿ , ಏನೇ ಮಾಡಲಿ , ಮಾಡುವವರು ಮಾಡುತ್ತಲೇ ಇರಿ , ಹೇಳುವವರು ಹೇಳುತ್ತಲೇ ಇರಿ , ನಾವು ನಮ್ಮ ಗುರಿಯತ್ತ ಹೊರಡಬೇಕಿದೆ . ಮನಸ್ಸನ್ನು ನಿಯಂತ್ರಣದಲ್ಲಿಡಬೇಕಾಗಿದೆ .*

ಒಂದು ದಿನದಲ್ಲಿ ಎಂಟರಿಂದ ಹತ್ತರಷ್ಟು ಚಿಂತೆಗಳು ಮನುಷ್ಯ ಮನಸ್ಸಿನಲ್ಲಿ ಉದ್ಬವವಾಗುತ್ತದೆ . ಇದು ಮುವ್ವತ್ತೈದು ಸಾವಿರದಿಂದ ಐವತ್ತು ಸಾವಿರ ಬಾರಿ ಮರುಕಳಿಸುತ್ತದೆ . ಈ ಎಂಟು ಹತ್ತು ಚಿಂತೆಗಳಲ್ಲಿನ ಅಧಿಕ ಚಿಂತೆಗಳು ನಮ್ಮ  ವಿಫಲತೆಯ ಕುರಿತು, ಕಷ್ಟ ಕಾರ್ಪಲ್ಯಗಳ ಕುರಿತು, ರೋಗಗಳ ಕುರಿತು , ಭಯದ ಕರಿತು ಚಿಂತಿಸುವರಾಗಿದ್ದರೆ ನಮ್ಮ ಈ ನೆಗೆಟಿವ್ ಚಿಂತೆಗಳು ನಮ್ಮ ಉಪ ಪ್ರಜ್ಞೆ ಮನಸ್ಸನ್ನು ಸ್ವಾಧೀನಿಸುತ್ತದೆ . ನಾವೊಬ್ಬ ನೆಗೆಟಿವ್ ವ್ಯಕ್ತಿಯಾಗಿ ಮಾರ್ಪಟ್ಟು ನೆಗೆಟಿವ್ ಚಿಂತೆಗಳಲ್ಲೇ ಕಾಲ ಕಳೆಯಬೇಕಾಗುತ್ತದೆ .

_*ನೆಗೆಟಿವ್ ಚಿಂತೆಗಳ ಸ್ಥಾನಗಳಲ್ಲಿ ಪೋಝಿಟಿವ್ ಚಿಂತೆಗಳನ್ನು ತುಂಬಿರಿ, ಭವಿಷ್ಯದ ಕುರಿತು ಭರವಸೆ ಇರುವವರಾಗಿ . ನಿಮ್ಮ ಜಾಗೃತ ಮನಸ್ಸನ್ನು ಎಬ್ಬಿಸಿ ಪೋಝಿಟಿವ್ ಚಿಂತೆಗಳನ್ನು ಹೆಚ್ಚಿಸಿ,  ಚಿಂತೆಗಳು ಪೋಝಿಟಿವ್ ಆಗುತ್ತಿರುವಂತೆ ನಿಮ್ಮ ಜೀವನವು ಪೋಝಿಟಿವ್ ಆಗುವುದನ್ನು ನೀವು ಕಾಣುವಿರಿ .*_

*ಅಲ್ಲಾಹನು ಕರುಣಿಸಲಿ. . . ಆಮೀನ್.*
 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಬಂದರ್ ಮೌಲಾ (ಖಸಿ)

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳ಬಂದರ್ ಮೌಲ(ಖಸಿ)🌳:::*
▪•••┈┈•✿❁✿•┈┈•••▪
                         
ಕಣ್ಣೂರೂ ಮಹಾ ನಗರದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸಯ್ಯಿದ್ ಮುಹಮ್ಮದ್ ಮೌಲಲ್ ಬುಖಾರಿ (ಖಸಿ) ರವರ ಕರಾಮತ್ತಿನ ಸಂತತಿಯಾದ ಸಲ್ಮಾ ಬೀವಿಯವರ ಐದನೇ ಪೀಳಿಗೆಯ ಮೊಮ್ಮಗಳು ಫಾತಿಮಾ ಬೀವಿ ಮತ್ತು ಅಹಮದ್ ಎಂಬ ಮಹಾನರಿಗೂ  ಜನಿಸಿದ ಪವಾಡ ಪುರುಷರಾಗಿದ್ದಾರೆ ಬಂದರ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ (ಖಸಿ) .

ಹಿಜ್ರ 1284 ರಜಬ್ 27 ಶುಕ್ರವಾರ ಲಕ್ಷದ್ವೀಪದ ರಾಜಧಾನಿ ಕವರತ್ತಿ ದ್ವೀಪದಲ್ಲಿ ಜನಿಸಿದರು.

ಸದಾ ಸಮಯವೂ ಆಧ್ಯಾತ್ಮಿಕ ಲೋಕದ ನಶೆಯಲ್ಲಿ ಮುಳುಗುತ್ತಿದ್ದ ಮೌಲಾ(ಖಸಿ) ರವರು ತಮ್ಮ ಊರಿನ ಸೂಫೀ ಶ್ರೇಷ್ಠರಾದ ಜೀಲಾನಿ ಖಬೀಲದ ಸುಪ್ರಸಿದ್ಧ ನೇತಾರರೂ ಆಗಿದ್ದ ಸಯ್ಯಿದ್ ಯೂಸುಫ್ ರಬ್ಬಾನಿ (ಖಸಿ) ಯವರ ಖಿದ್ಮತಿನಲ್ಲಿ ಕಳೆಯುತ್ತಿದ್ದರು . ಯೂಸುಫ್ ರಬ್ಬಾನಿ(ಖಸಿ) ಯವರಿಂದ
ಖಾದಿರಿಯ್ಯಾ ಮತ್ತು ರಿಫಾಯಿಯ್ಯಾ ತ್ವರೀಖತಿನ ಖಿಲಾಫತ್ ಪಡೆದರು .

ನಂತರ ಅಜ್ಮೀರ್ ಖಾಜಾ (ಖಸಿ) ಯವರ ನಿರ್ದೇಶನದಂತೆ ಬೈಂದೂರು ಹಝ್ರತ್ ಗುಲ್ಷಾಹ್ ವಲೀ(ಖಸಿ) ರವರ ಸನ್ನಿಧಿ ಸೇರಿದರು, ಅವರಿಂದ ಚಿಸ್ತೀ ತ್ವರೀಖತಿನ ಖಿಲಾಫತ್ ಲಭಿಸಿತು. ಜ್ಞಾನ ದಾಹದಿಂದ ನಂತರ ಜಲಾಲ್ ಮೌಲಾ (ಖಸಿ) ಸುಹ್ರವರ್ದಿಯ್ಯಾ ಸರಣಿಯನ್ನು ಅರಸುತ್ತಾ ನಡೆದರು . ಸುಹ್ರವರ್ದಿಯ್ಯಾ ತ್ವರೀಖತ್ ಪಡೆಯಲು ಯೋಗ್ಯರಾದ ಮಹಾನರುಗಳ ಹುಡುಕಾಟದಲ್ಲಿ ಅವರು ಚಾಲಿಯಂ ಶೈಖ್ ನೂರುದ್ದೀನ್ ಹಮದಾನಿ (ಖಸಿ) ತಂಙ್ಙಳರ ಸಂತಾನ ಪರಂಪರೆಯ ಪ್ರಮುಖರೂ ಕಲ್ಲಾಯಿ ಶೈಖ್ ಎಂದೇ ಖ್ಯಾತರಾದ ಶೈಖ್ ಮುಹಮ್ಮದ್ ಬಿನ್ ಕಮಾಲುದ್ದೀನ್ ಹಮದಾನಿ (ಖಸಿ) ರವರ ಸನ್ನಿಧಿ ಸೇರಿದರು. ಅಲ್ಲಿ ಮಹಾನುಭಾವರಿಂದ ಸುಹ್ರವರ್ದಿಯ್ಯಾ ಸರಣಿಯ ಖಿಲಾಫತ್ ಲಭಿಸಿತು. ಹೀಗೆ ಮೂರು ಮಶಾಇಖುಗಳಿಂದ ನಾಲ್ಕು ಸರಣಿಗಳ ಖಿಲಾಫತ್ ಪಡೆದ ಜಲಾಲ್ ಮೌಲಾ (ಖಸಿ) ಯವರು ಆತ್ಮೀಯ ಲೋಕದಲ್ಲಿ ತೇಲಿದರು.

ಶೈಖ್ ಜಲಾಲ್ ಮೌಲಾ (ಖಸಿ) ಸುಮಾರು ಲಕ್ಷದಷ್ಟು ಮುರೀದರುಗಳನ್ನು ಹೊಂದಿದ್ದರು . ಅವರ ಸನ್ನಿಧಿಯಲ್ಲಿ ಖಲೀಫರಾಗಿದ್ದವರಲ್ಲಿ ಅಂಬಂಕುನ್ನು ಬೀರಾನ್ ಔಲಿಯಾ ಉಪ್ಪಾಪರ ಶೈಖರಾದ ಚೇಲೂರ್ ಸೂಫಿ ಹಾಜಿ , ಝೀನತ್ ಬಕ್ಷ್ ಮಸೀದಿ ಮುಂಬಾಗದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಯ್ಯಿದ್ ಮುಹಮ್ಮದ್ ಮೌಲ , ಸಯ್ಯಿದ್ ಮುಹಮ್ಮದ್ ಖಾಸಿಂ ಸಾನಿ ಕವರತ್ತಿ(ಖಸಿ) , ಪಾಡತ್ತಕ್ಕಾಯಿಲ್ ಅಶೈಖ್ ಮುಹಮ್ಮದ್ ಸ್ವಾಲಿಹ್ ಮೌಲ (ಖಸಿ) ಇವರುಗಳೆಲ್ಲಾ ಪ್ರಧಾನಿಗಳಾಗಿದ್ದರು .

ಆಧ್ಯಾತ್ಮಿಕತೆಯ ಮಧು ಹರಡುವ ಕಾವ್ಯ ಬರಹದಿಂದ ಸುಪ್ರಸಿದ್ಧರಾದ ಸೂಫೀ ಸಂತ ಪುಲವರ್ ಮೊಯ್ದೀನ್ ಕುಟ್ಟಿ ಹಾಜಿ (ಖಸಿ) ಬಗ್ದಾದಿನಲ್ಲಿ ಖುತುಬುಲ್ ಆಲಂ ಶೈಖ್ ಮುಹ್ಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖಸಿ) ರವರ ನಿರ್ಧೇಶನದಂತೆ ಮೌಲರ ಸನ್ನಿಧಿ ಸೇರಿದರು . ಮಿಫ್ತಾಹುಸ್ಸಲಾಮ ಎಂದೂ ನಿಯಾಝುಲ್ ಕಿರಾಂ ಎಂದೂ ಹೆಸರುವಾಸಿಯಾದ ಮೌಲರ ಕುರಿತು ಅರಬಿ ಮಲಯಾಳದಲ್ಲಿ ಒಂದು ಕವನ ರಚಿಸಿದ್ದಾರೆ .

ಅನೇಕ ಕಷ್ಫ್ ಕರಾಮತುಗಳಿಂದ ಜನ ಮನ ಹೃದಯಗಳಲ್ಲಿ ಸ್ಥಾನ ಪಡೆದ ಬಂದರ್ ಮೌಲಾ (ಖಸಿ) ರವರು ಈ ನಾಡಿನ ರಕ್ಷಾ ಕವಚವಾಗಿದ್ದರು .

ಹಿಜ್ರ 1347 ದುಲ್ ಖಅದ 23 ಶನಿವಾರ ಲುಹಾ ನಮಾಝಿನ ಸಮಯ ಮಂಗಳೂರು ಬಂದರಿನ ಸಮೀಪ ಆ ಯುಗ ಪುರುಷ ಇಹಲೋಕ ತ್ಯಜಿಸಿದರು . ಅಂದವರಿಗೆ 63 ವಯಸ್ಸು ಪ್ರಾಯವಾಗಿತ್ತು .

ಅಲ್ಲಾಹನು ಆ ಮಹಾನುಭಾವರೊಂದಿಗೆ ನಮ್ಮನ್ನು ಅವನ ಸ್ವರ್ಗೀಯ ಭವನದಲ್ಲಿ ಒಂದುಗೂಡಿಸಲಿ .....ಆಮೀನ್.

ಮೂಲ : ಮಲೆಯಾಳಂ .
ಕನ್ನಡಕ್ಕೆ: 👇

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰


ಮಿಲಿಯಾದಿಪತಿ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
*ಯಾರೀ ಮಿಲಿಯಾಧಿಪತಿ..?*
〰〰❁✿🌹🌹✿❁ 〰〰

ಪ್ರಪಂಚ ಕಂಡ ಅತೀ ದೊಡ್ಡ ಮಿಲಿಯಾಧಿಪತಿ ಯಾರೂಂತ ಗೊತ್ತೇ. . . ! ?
ಅದು ಮತ್ಯಾರೂ ಅಲ್ಲ. . ! ದೈನಂದಿನ ಸುಬಹಿ ನಮಾಝಿನ ಮೊದಲಿನ ಎರಡು ರಕಅತ್ ಸುನ್ನತ್ ನಮಾಝಿನ ಮೊದಲಿನ ರಕಅತಿನಲ್ಲಿ *ಅಲಂ ನಶ್ರಹ್* ಸೂರ ಮತ್ತು ಎರಡನೇ ರಕಅತಿನಲ್ಲಿ *ಅಲಂತರ ಕೈಫ* ಸೂರಗಳನ್ನು ಓದಿ ನಿಯಮಿತವಾಗಿ ಸುನ್ನತ್ ನಮಾಝ್ ನಿರ್ವಹಣೆ ಮಾಡುವವರು . ಅವನಾಗಿರುವನು ಈ ಪ್ರಪಂಚದ ಅತೀ ದೊಡ್ಡ ಮಿಲಿಯಾಧಿಪತಿ . ಒಂದು ಕಡೆ ಈ ಪ್ರಪಂಚವನ್ನೂ ಮತ್ತೊಂದು ಕಡೆ ಸುಬಹಿಯ ಮುಂಚಿನ ಈ ಎರಡು ರಕಅತನ್ನು ನಿಲ್ಲಿಸಿದರೆ ಅತೀ ಹೆಚ್ಚು ಪ್ರತಿಫಲ ಲಭಿಸುವುದು ಈ ಸುನ್ನತ್ ನಮಾಝಿಗಾಗಿದೆ ಎಂದು ಉಲಮಾ ಪಕ್ಷ ಹೇಳುತ್ತದೆ . ಇದಲ್ಲದೆ ಮಾರಕ ರೋಗವಾಗಿರುವ *ಬಾಸೂರ್* (ಮೂಲವ್ಯಾಧಿ) ಯಿಂದಲೂ ರಕ್ಷೆ ಹೊಂದಬಹುದು . ಎಲ್ಲಾ ರೀತಿಯ ರೋಗಗಳಿಂದಲೂ ಮುಕ್ತಿ ಹೊಂದಲು ಈ ನಮಾಝನ್ನು ಮೊಟಕು ಗೊಳಿಸದೆ , ಎಡೆ-ಬಿಡದೆ ನಿರ್ವಹಿಸುತ್ತಿರಿ , ಅಲ್ಲಾಹನು ತೌಫೀಖ್ ನೀಡಲಿ. . . . ಆಮೀನ್.
〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ವಂಚನೆ

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳🌱ವಂಚನೆ🌱🌳:::*
▪•••┈┈•✿❁✿•┈┈•••▪

                           *****

ಮೋಸ ಮಾಡಿ ಸಂಪಾದನೆ ಮಾಡುವುದರಲ್ಲಿ ಯಾವುದೇ ಬರಕತ್ ಇರುವುದಿಲ್ಲ . ನಾವು ಎಷ್ಟು ಪಡೆದರೂ ನಮಗದು ತೃಪ್ತಿ ನೀಡುವುದಿಲ್ಲ. ಇದರಿಂದ ನಾವು ಎರಡೂ ಜಗತ್ತಿನಲ್ಲಿಯೂ ಕಣ್ಣೀರು ಕುಡಿಯಬೇಕಷ್ಟೆ . ಅದಲ್ಲದೆ, ಪರಲೋಕದಲ್ಲಿ ನಾವು ಮೋಸಗೊಳಿಸಿದ ಸರಕುಗಳೊಂದಿಗೆ ಬರುಬೇಕಾದ ಬಯಾನಕ ಅವಸ್ಥೆ ಉಂಟಾಗುತ್ತದೆ.

*ವಂಚಕನ ಅಂತ್ಯ* 👇

ಮಾಲಿಕ್ ಇಬ್ನು ದೀನಾರ್ (ರಅ) ರವರು ಒಮ್ಮೆ ಮರಣ ಸನಿಹವಾದ ರೋಗಿಯನ್ನು ಭೇಟಿಯಾಗಲು ಹೋದರು. ಆ ಸಮಯದಲ್ಲಿ ಅವನು ಕಿರುಚುತ್ತಾ ಹೇಳುತ್ತಿದ್ದಾನೆ -
"ಅಗೋ... ಅಲ್ಲಿ ಬೆಂಕಿಯಿಂದ ತುಂಬಿದ ಎರಡು ಪರ್ವತಗಳು ನನ್ನ ಮುಂದೆ ನಿಂತಿದೆ . ನನ್ನನ್ನು ಹತ್ತಿರಕ್ಕೆ ಕರೆಯುತ್ತಿದೆ ನನಗೇಕೋ  ಭಯವಾಗುತ್ತಿದೆ" . ಇದನ್ನು ಕೇಳಿದ ಮಲಿಕ್ ಬಿನು ದಿನಾರ್ (ರಅ) ರವರು ಕುಟುಂಬದವರೊಂದಿಗೆ ಆತನ ಕೆಲಸದ ಬಗ್ಗೆ ವಿಚಾರಿಸಿದರು . ಅವರು ಹೇಳಿದರು ಆತ ವ್ಯಾಪಾರ ಮಾಡುತ್ತಿದ್ದವನು .
ಗಾತ್ರ ಮತ್ತು ತೂಕದಲ್ಲಿ ಜನರಿಗೆ ವಂಚನೆ ಮಾಡುವುದು ಆತನ ವಾಡಿಕೆಯಾಗಿತ್ತು .
ಅವರು ವಿವರಣೆಯನ್ನು ಕೇಳಿದಾಗ, ಮಹಾನರು "ಇವನ ತೂಕ ಮಾಡುವ ಪಾತ್ರೆಗಳನ್ನು ತರಲು ಹೇಳಿದರು. ನಂತರ ಅವರು ಅದನ್ನು ಎತ್ತಿಕೊಂಡು ಒಡೆದು ಹಾಕಿದರು .ನಂತರ ಆತನಲ್ಲಿ ಕೇಳಿದರು "ಈಗ ನಿನ್ನ ಅವಸ್ಥೆ ಹೇಗಿದೆ" . ಆಗ ಆತ "ಮೊದಲಿಗಿಂತಲೂ ಭಯಾನಕವಾಗಿದೆ" ಎಂದು ಹೇಳುತ್ತಾ ಅದೇ ಅವಸ್ಥೆಯಲ್ಲಿ ಮರಣ ಹೊಂದಿದನು.


 صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ನೀರು ಅಮೂಲ್ಯವಾದುದು .

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
                 *ನೀರು*
〰〰❁✿🌹🌹✿❁ 〰〰

ಎಲ್ಲಾ ಜೀವಜಾಲಗಳ ಬದುಕಿಗೂ ನೀರು ಅತ್ಯಮೂಲ್ಯವಾಗಿದೆ . ನೀರಿಗಾಗಿ ಪರದಾಡುವ ಅದೆಷ್ಟು ರಾಜ್ಯಗಳಿವೆ , ನೀರನ್ನು ಅರಸುತ್ತಾ ಕಿಲೋಮೀಟರ್ ದೂರಗಳಿಂದ ನೀರನ್ನು ಹೊತ್ತು ತರುವವರೆಷ್ಟು . ಎಲ್ಲವೂ ನಮ್ನ ಕಣ್ಣಮುಂದೆ ಗೋಚರವಾಗುತ್ತಿದ್ದರೂ ನಾವು ಮಾತ್ರ ನೀರನ್ನು ದುರುಪಯೋಗ ಪಡಿಸುವುದು , ನೀರನ್ನು ವ್ಯಯಗೊಳಿಸುವುದು ನಮ್ಮ ದೈನಂದಿನ ಕೆಲಸವಾಗಿಬಿಟ್ಟಂತಿದೆ . ಅಂಗಶುದ್ದಿ ಮಾಡುವುದು ನದಿಯಲ್ಲಾದರೂ ಅಮಿತವಾಗಿ ನೀರನ್ನು ಬಳಸಬೇಡಿ ಎಂಬ ಪ್ರವಾದಿ ನಿರ್ಧೇಶವು ನೀರಿಗಿರುವ ಪ್ರಾಧಾನ್ಯತೆಯನ್ನು ತೋರಿಸುತ್ತದೆ .

ಕುಡಿಯಲು ನೀರಿಲ್ಲದೆ ಬಾಯಾರಿಕೆಯಿಂದ ನರಳುತ್ತಿರುವ ಅದೆಷ್ಟು ಜನರು ನಮ್ಮ ನೆರೆಯ ರಾಜ್ಯಗಳಲ್ಲೂ ಪ್ರದೇಶಗಳಲ್ಲೂ ವಾಸವಾಗಿದ್ದಾರೆ . ಸಂಪನ್ನರು ನೀರಿನಲ್ಲಿ ಸ್ನಾನ ಮಾಡುವಾಗ ಕುಡಿಯಲು ನೀರಿಲ್ಲದೆ ನಲ್ಲಿ ನೀರಿನ ಬರುವಿಕೆಯನ್ನು ಕಾಯುತ್ತಿರುವವರೆಷ್ಟು . ಕಂಡೂ ಕಾಣದಂತೆ ನಟಿಸುವವರೇ , , , ಒಂದು ಬಾವಿ ತೋಡಿ ಕೊಡಲೋ , ನೀರನ್ನು ತಲುಪಿಸುವ ಒಂದು ಒಳ್ಳೆಯ ಕಾರ್ಯವನ್ನು ಮಾಡಲಾಗದೇ. . ! ?  ಬಾಯಾರಿದವರ ದಾಹ ತಣಿಸುವುದು ಪುಣ್ಯ ಕರ್ಮವಲ್ಲವೇ. . ? ಪವಿತ್ರ ಇಸ್ಲಾಂ ಧರ್ಮವು  ತುಂಬಾ ಪ್ರೋತ್ಸಾಹವನ್ನೂ ನೀಡಿದ ಕಾರ್ಯವಲ್ಲವೇ. . ?

ಒಮ್ಮೆ ಸಅದ್(ರಅ) ರವರು ಪ್ರವಾದಿ(ಸ.ಅ) ರವರೊಂದಿಗೆ ಕೇಳಿದರು :- ಪ್ರವಾದಿಯವರೇ. . ! ನನ್ನ ತಾಯಿ ಮರಣಹೊಂದಿರುವರು ಅವರಿಗಾಗಿ ನಾನು ಏನಾದರೂ ಸತ್ಕರ್ಮ ಮಾಡಲೇ. . . ?
ನಬಿ(ಸ.ಅ) ಹೇಳಿದರು :- ಹೌದು. . ! ಬಾಯಾರಿದವರ ದಾಹ ತಣಿಸುವುದಾಗಿದೆ ನೀನು ಮಾಡಬೇಕಾದ ಸತ್ಕರ್ಮ.(ಅಹ್ಮದ್).

ಮನುಷ್ಯರಿಗೆ ಮಾತ್ರವಲ್ಲ ಇತರ ಜೀವಿಗಳ ಬಾಯಾರಿಕೆ ನೀಗಿಸುವುದು ಕೂಡ ಒಂದು ಪುಣ್ಯವಾದ ಸತ್ಕರ್ಮವಾಗಿದೆ. ಬಾಯಾರಿಕೆಯಿಂದ ಬಳಲಿದ ಒಂದು ನಾಯಿಗೆ ನೀರು ಕುಡಿಸಿದ ಕಾರಣಕ್ಕಾಗಿ ಒಬ್ಬ ವ್ಯಕ್ತಿಯ ಪಾಪಕರ್ಮಗಳನ್ನು ಅಲ್ಲಾಹನು ಅಳಿಸಿಹಾಕಿದನೆಂದು ಬುಖಾರಿ ಇಮಾಮರ ಹದೀಸಿನಲ್ಲಿ ಕಾಣಬಹುದಾಗಿದೆ .

ಒಮ್ಮೆ ಸ್ವಹಾಬಿ ವರ್ಯರು ಪ್ರವಾದಿಯವರಲ್ಲಿ ಕೇಳಿದರು :- ಪ್ರವಾದಿ ವರ್ಯರೇ. . ! ಪ್ರಾಣಿ ಪಕ್ಷಿಗಳಿಗೆ ಏನಾದರೂ ಉಪಕಾರ ಮಾಡಿದರೆ ನಮಗೆ ಪ್ರತಿಫಲ ಲಭಿಸುವುದೇ. . ?
ಪ್ರವಾದಿ(ಸ.ಅ) ರವರು ಹೇಳಿದರು :- ಜೀವವಿರುವ ಯಾವುದೇ ಜೀವಿಗಳಿಗೂ ಉಪಕಾರ ನೀಡಿದರೆ ಪ್ರತಿಫಲ ಲಭಿಸುವುದು (ಬುಖಾರಿ).

ನೀರನ್ನು ತನ್ನದೆಂದು ಶೇಖರಿಸಿಟ್ಟು ಇತರರಿಗೆ ನೀಡದೆ ತಡೆಯಿಟ್ಟರೆ ಪರಲೋಕದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುವರು .

ನಬಿ(ಸ.ಅ)ರವರು ಹೇಳಿದರು :- "ಪರಲೋಕದಲ್ಲಿ ಮೂರು ವಿಭಾಗದೊಂದಿಗೆ ಅಲ್ಲಾಹನು ಮಾತನಾಡುವುದಾಗಲೀ ಅವರನ್ನು ನೋಡುವುದಾಗಲೀ ಮಾಡುವುದಿಲ್ಲ". 👇

1. ವ್ಯಾಪಾರದಲ್ಲಿ ಸಾಮಾನ್ಯವಾಗಿ ನೀಡುವುದಕ್ಕಿಂತ ಅಧಿಕ ಮೊತ್ತ ನೀಡಿರುವೆನು ಎಂದು ಕಳ್ಳಸತ್ಯ ಹೇಳುವವನು .

2. ಒಬ್ಬ ಮುಸ್ಲಿಮನ ಸಂಪತ್ತನ್ನು ಅನ್ಯಾಯವಾಗಿ ಕಬಳಿಸಲು ಕಳ್ಳ ಸತ್ಯ ಹಿಡಿಯುವವನು . 

3. ತನ್ನ ಅಗತ್ಯಗಳು ಮುಗಿದೂ ಬಾಕಿ ನೀರನ್ನು ಯಾರಿಗೂ ನೀಡದೆ ತಡೆದಿಟ್ಟವನು, ಅಂತ್ಯ ದಿನದಲ್ಲಿ ಅಲ್ಲಾಹನು ಅವರೊಂದಿಗೆ ಹೇಳುವನು "ನಿನ್ನ ಅಗತ್ಯ ಮುಗಿದೂ ನೀನು ನೀರನ್ನು ತಡೆದಂತೆ ನಾವು ನಮ್ಮ ಕರುಣೆಯನ್ನು ನಿನಗೆ ತಡೆದಿಡುತ್ತೇವೆ, ಅದು ನಿನ್ನ ಶ್ರಮದಿಂದ ಲಭಿಸಿರುವುದಂತೂ ಅಲ್ಲ.''

ಇನ್ನೊಂದು ಹದೀಸ್ ನಬಿ(ಸಅ)ರವರು ಹೇಳಿದರು : "ಜನರು ಮೂರು ಕಾರ್ಯಗಳಲ್ಲಿ ಸಮಾನ ಅಧಿಕಾರವನ್ನು ಹೊಂದಿರುವರು, ನೀರು , ಹುಲ್ಲು , ಬೆಂಕಿ ಇವುಗಳಾಗಿವೆ"

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಅಂತ್ಯ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
     *ಅಂತ್ಯ. . . . !*
〰〰❁✿🌹🌹✿❁ 〰〰

ಈ ನಶ್ವರ ಜಗತ್ತು ಒಂದು ತಂಗುದಾಣ ಮಾತ್ರ, ನಾವು ಇಲ್ಲಿಂದ ಹೊರಟು ಶಾಶ್ವತ ಲೋಕಕ್ಕೆ ಹೋಗಬೇಕಾದವರು . ನಾವು ಮಾತ್ರವಲ್ಲ ಈ ಭೂಲೋಕದಲ್ಲಿರುವ ಪ್ರತಿಯೊಂದು ವಸ್ತುವು ವಿದಾಯ ಹೇಳಲಿರುವುದು .
ಹಚ್ಚ ಹಸುರಿನ ಸೊಬಗನ್ನು ಹರಡಿರುವ ಪೃಥ್ವಿ, ನೀಲ ವರ್ಣ ಚಾಪೆಯನ್ನು ಬಿರಿಸಿದ ಬಾನು, ಪ್ರಕಾಶಮಾನವಾಗಿ ಬೆಳಗುವ ಬೆಳದಿಂಗಳ ಬಾಲೆ , ಕತ್ತಲನ್ನು ಅಲಂಕರಿಸಿದಂತೆ ಬಾನಲ್ಲಿ ಹರಡಿದ ತಾರೆಗಳು , ಎಲ್ಲಾ ಜೀವಿಗಳ ಬಾಳಿಗೂ ಬೆಳಕನ್ನು ಹರಡುವ ಅರುಣ, ಈ ಎಲ್ಲಾ ಪ್ರಕೃತಿ ರಮಣೀಯತೆಗಳಲ್ಲಿ ವಿಹರಿಸುವ ಮನುಷ್ಯ ಎಲ್ಲವೂ ಎಲ್ಲವೂ ಸರ್ವನಾಶವಾಗಲಿದೆ . ಈ ಜಗತ್ತು ಯಾರಿಗೂ ಶಾಶ್ವತವಲ್ಲ ಇಂದಲ್ಲದಿದ್ದರೆ ನಾಳೆ ಅಥವಾ ನಾಳಿದ್ದು ಅಥವಾ ಮುಂದೊಂದು ದಿನ ಈ ಪ್ರಪಂಚ ನಾಮಾವಶೇಷವಾಗಲಿದೆ . ನಬಿ(ಸಅ) ರವರು ಹೇಳಿದ ಅಂತ್ಯ ದಿನದ ಮುನ್ಸೂಚನೆಗಳು ಕಣ್ಣ ಮುಂದೆ ಗೋಚರವಾಗುತ್ತಿದೆ , ಇನ್ನು ಅಲ್ಪ ಸ್ವಲ್ಪವೇನೋ ಬಾಕಿ ಇರಬಹುದು .

ಒಂದು ಕಡೆ ಬಿಸಿಲಿನ ತಾಪ ಸಹಿಸಲಾಗುತ್ತಿಲ್ಲ,
ಮತ್ತೊಂದು ಕಡೆ ವ್ಯಾಪಾರ ಹದಗೆಟ್ಟಿದೆ .
ಹಲವಾರು ಕಡೆ ಕೃಷಿ ಭೂಮಿ ಬರಡಾಗಿದೆ .
ವಿವಿಧೆಡೆಗಳಲ್ಲಿ ನೀರಿನ ಅಭಾವವಿದೆ . ಹೇರಳವಾಗಿ ಮಳೆ ಲಭಿಸುತ್ತಿದ್ದ ಮಲೆನಾಡುಗಳೂ ಕೂಡಾ ಮಳೆ ಇಲ್ಲದೆ ಕಂಗಾಲಾಗಿದೆ . ಕಶ್ಮಲ ವಾತಾವರಣದಲ್ಲಿ ವಾಸವಾಗಿರುವ ಜನತೆ ,
ಅಕ್ರಮ ಅನೀತಿಗಳಲ್ಲಿ ಮುಳುಗಿದ ಸಮೂಹ.
ವಂಚನೆಗಳಲ್ಲಿ ನಿತ್ಯರಾಗಿರುವ ಆಡಳಿತ ವಿಭಾಗ.
ಅಧಿಕಾರ ಮತ್ತು ಸಂಪತ್ತಿನ ಹಿಂದೆ ಬಿದ್ದ ಜನತೆ, ರೊಕ್ಕ ನೀಡುವವರನ್ನು ಪ್ರಭುವಾಗಿಯೂ , ಅಧಿಕಾರ ನೀಡುವವರನ್ನು ದೇವಮಾನವನಾಗಿಯೂ ಕಾಣುವ ಯುಗ. ತನ್ನ ಮಾತನ್ನು ಕೇಳುವವರು ಮಾತ್ರ ಒಳ್ಳೆಯವರು , ಉಳಿದವರೆಲ್ಲಾ ದಾರಿತಪ್ಪಿದವರೆಂದು ತನ್ನ ಯುಕ್ತಿಗೆ ಅನುಸಾರವಾಗಿ ನಡೆಯುವ ಒಂದು ಪೀಳಿಗೆ . ತಮ್ಮ ಬಾಳನ್ನು ಬಂಗಾರವಾಗಿಸಲು ಅನ್ಯರ ಅಭಿಮಾನಕ್ಕೆ ಕಳಂಕ ತರುವವರು .  ಇವುಗಳೆಡೆಯಲ್ಲೂ ಧಾರ್ಮಿಕ ಚೌಕಟ್ಟಿನಲ್ಲಿ ಜೀವಿಸುವ ಪವಿತ್ರ ಧರ್ಮದ ಅನುಯಾಯಿಗಳು .

ಬದಲಾಗಬೇಕಾಗಿರೋದು ನಾವೇ. . . ನಾವು ಬದಲಾಗದ ಹೊರತು ನಮ್ಮಿಂದ ಏನು ಮಾಡಲೂ ಸಾಧ್ಯವಿಲ್ಲ.

ನಾಳೆ ನಾಳೆ ಎಂದು ಮುಂದೂಡಬೇಡ, ಇಂದು ಮಾಡಬೇಕಾಗಿರುವುದನ್ನು ಇಂದೇ ಮಾಡಿದರೆ , ಮುಂದಿನ ದಿನದಲ್ಲಿ ಯಶಸ್ಸು ಕಾಣಬಹುದು .

ಒಂದಲ್ಲ ಒಂದು ದಿನ ನಾವು ಮರಣವೆಂಬ ಮಂಚವೇರಿ ಯಾತ್ರೆ ಮಾಡಬೇಕಾದವರಲ್ಲವೇ. . . ! ?
ಮರಣ ಜೀವನದ ಅಂತ್ಯವಲ್ಲ,
ಅಂತ್ಯವಿಲ್ಲದ ಜೀವನದ ಆರಂಭವಾಗಿದೆ. ಅದು ಯಾವಾಗ ಯಾವ ರೀತಿಯಲ್ಲಿ ಸಂಭವಿಸಲಿದೆ ಎಂದು ಅಲ್ಲಾಹನಿಗಲ್ಲದೆ ಬೇರೆ ಯಾರಿಗೂ ತಿಳಿಯದು . ಮರಣ ನಮ್ಮನ್ನು ಸಮೀಪಿಸಲಿದೆ ಎಂಬ ವಿಶ್ವಾಸ ಹೊಂದಿದವರಾಗಿದ್ದಾರೆ ಮುಸ್ಲಿಮರು .
ಈ ಪ್ರಪಂಚವು ನಂಬಿಕೆಯುಳ್ಳವರಿಗೆ ಕೃಷಿಭೂಮಿಯಾಗಿದೆ. ಪರಲೋಕದ ಯಶಸ್ಸಿಗೆ ಕೃಷಿ ನಡೆಸುವ ಸ್ಥಳವಾಗಿದೆ . ಪರಲೋಕದಲ್ಲಿ ನಮ್ಮನ್ನು ಕಾಯುತ್ತಿರುವುದು ನಾವು ಮಾಡಿದ ಕರ್ಮ ಫಲವಾಗಿದೆ .

ಮನುಷ್ಯ ಕಠುವಾಗಿ ಧ್ವೇಷಿಸುವ ಒಂದಾಗಿದೆ ಮರಣ. ಆದರೆ ಎಷ್ಟೇ ಧ್ವೇಶಿಸಿದರೂ , ಬಿಟ್ಟಗಲಿದರೂ ಕೂಡಾ ಮರಣ ಮನುಷ್ಯರನ್ನು ಸಮೀಪಿಸುವುದಂತೂ ಖಚಿತ.
ಯಾವ ಸಮಯದಲ್ಲಿ ಮರಣ ಸಂಭವಿಸುವುದಾದರೂ ನಾವು ಮುಸ್ಲಿಮರಾಗಿ ಮರಣ ಹೊಂದಲು ಆಗ್ರಹಿಸಬೇಕು . ಅದಕ್ಕಾಗಿ ದಿನನಿತ್ಯ ಅಲ್ಲಾಹನಲ್ಲಿ ಬೇಡುತ್ತಿರಬೇಕು , ಮರಣದ ನಂತರ ಬೇಡಲು ಸಾಧ್ಯವಿಲ್ಲ ತಾನೇ. . ! ? ಮರಣ ಸಮೀಪಿಸುವ ಮೊದಲೇ ಪರಿಪೂರ್ಣ ಮುಅಮಿನಾಗಿರಲು ಶ್ರಮಿಸಬೇಕು .

ನಮ್ಮ ಆತ್ಮ ನಮ್ಮಿಂದ ಅಗಲುವ ಮುನ್ನ ನಮ್ಮಿಂದ ಉಂಟಾದ ಪೂರ್ವ ಪಾಪ ಕರ್ಮಗಳಿಗೆ ಕ್ಷಮೆ ಕೇಳಬೇಕು . ಮನುಷ್ಯರೊಂದಿಗಿನ ತಪ್ಪುಗಳಿಗೆ ಅವರೊಂದಿಗೆ ಪರಸ್ಪರ ಕ್ಷಮಿಸಿಕೊಡಬೇಕು .

ಮರಣ ಸಮಯದಲ್ಲಿ ಆತ್ಮವು ಗಂಟಲು ತಲುಪುವ ವರೆಗೆ ಖಂಡಿತವಾಗಿಯೂ ಅಲ್ಲಾಹನು ದಾಸನ ಪಶ್ಚಾತಾಪವನ್ನು ಸ್ವೀಕರಿಸುವನು , ನಂತರ ತೌಬಕ್ಕೆ ಅವಸರವಿಲ್ಲ. ಇದು ಮರಣಕ್ಕೂ ಮುಂಚೆ ಮಾಡಬೇಕಾದ ಕಾರ್ಯವಾಗಿದೆ . ಅಲ್ಲಾಹನಲ್ಲಿ ವಿಶ್ವಾಸವಿಡಿ , ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗಬೇಡಿ .

ಪ್ರಯತ್ನ ನಮ್ಮದಾಗಲಿ , ಯಶಸ್ಸು ಅಲ್ಲಾಹನು ಕರುಣಿಸಲಿ . . . . ಆಮೀನ್.

*ಅಲ್ಲಾಹನು ಖೈರಾದ ಮರಣ ದಯಪಾಲಿಸಲಿ. . ಆಮೀನ್*

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಮಲಕುಗಳು ಧಫನ ಮಾಡಿದ ಸ್ವಹಾಬಿ

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::ಮಲಕುಗಳು ಧಫನ ಮಾಡಿದ ಸ್ವಹಾಬಿ :::*
▪•••┈┈•✿❁✿•┈┈•••▪

ಖುರೈಶಿ ಕುಫ್ಫಾರುಗಳು ಮಹಾನರಾದ ಖುಬೈಬ್ (ರಅ) ಕೊಲ್ಲಲು ಖರ್ಜೂರದ ಮರಕ್ಕೆ ಕಟ್ಟಿಹಾಕಿದರು . ಅಬೂ ಸುಫ್ಯಾನ್ ಖುಬೈಬ್(ರಅ) ರವರನ್ನು ಸಮೀಪಿಸಿ ಕೇಳಿದರು "ನಿನ್ನ ಸ್ಥಾನದಲ್ಲಿ ಮುಹಮ್ಮದ್ ಇರುವುದನ್ನು ನೀನು ನೆನೆಸಿಕೊಳ್ಳುವೆಯಾ..? ಆಗ ಖುಬೈಬ್ (ರಅ) "ಅಲ್ಲಾಹನ ಮೇಲಾಣೆ ನನ್ನ ಪ್ರವಾದಿಯವರ ಕಾಲಿಗೆ ಒಂದು ಮುಳ್ಳು ಚುಚ್ಚುವುದೂ ಕೂಡಾ ನನ್ನಿಂದ ಸಹಿಸಲು ಸಾಧ್ಯವಿಲ್ಲ" . ನಂತರ ಅಬೂ ಸುಫ್ಯಾನ್ ಹೇಳಿದರು "ನಿನಗೆ ಕೊನೇ ಆಗ್ರಹ ಏನಾದರೂ ಇದೆಯೇ...?" ಖುಬೈಬ್ (ರಅ) "ನನಗೆ ಎರಡು ರಕಅತ್ ನಮಾಝ್ ನಿರ್ವಹಿಸಬೇಕು" . ನಮಾಝಿಗೆ ಅನುವು ಮಾಡಿಕೊಡಲಾಯಿತು . ನಮಾಝ್ ಪೂರ್ತಿಗೊಳಿಸಿದ ಖುಬೈಬ್ (ರಅ) ಹೇಳಿದರು "ನಾನು ಮರಣವನ್ನು ಭಯಪಡುವೆನೆಂದು ನೀವುಗಳು ಭಾವಿಸುತ್ತಿರದಿದ್ದರೆ, ಅಲ್ಲಾಹನಿಗೆ ಇನ್ನೂ ಹೆಚ್ಚಿನ ನಮಾಝ್ ನಿರ್ವಹಿಸುತ್ತಿದ್ದೆ" . ನಂತರ ಅವರನ್ನು ಮರಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿ ಕೊಂದರು . ಅವರು ಕೊಲ್ಲಲು ಮುಂದಾದಾಗ ಖುಬೈಬ್ (ರಅ) ಹೀಗೆ ಪ್ರಾರ್ಥಿಸಿದ್ದರು "ಅಲ್ಲಾಹನೇ ನನ್ನೀ ತ್ಯಾಗ ನನ್ನ ಪ್ರವಾದಿಯವರಿಗೆ ತಿಳಿಯುವಂತಾಗಲಿ" .

ಜಿಬ್ರೀಲ್ (ಅಸ) ರವರ ಮೂಲಕ ವಿವರ ತಿಳಿದ ಪುಣ್ಯ ಪ್ರವಾದಿ ಮಹಮದ್ ಮುಸ್ತಫಾ ಸ್ವಲ್ಲಲ್ಲಾ ಹು ಅಲೈಹಿ ವಸಲ್ಲಂ ರವರು, ಖುಬೈಬ್ (ರಅ) ರವಲ ಮಯ್ಯಿತನ್ನು ತರಲು  ಒಬ್ಬರು ಸ್ವಹಾಬಿಯನ್ನು ಕಳುಹಿಸಿದರು.

ಸ್ವಹಾಬಿ ಮಕ್ಕಾ ತಲುಪಿದಾಗ ರಾತ್ರಿಯಾಗಿತ್ತು, ಯಾರೂ ಕಾಣದಂತೆ ಖುಬೈಬ್ (ರಅ) ರವರ ಶರೀರ ನೇತಾಡುತ್ತಿದ್ದ ಮರವನ್ನು ಸಮೀಪಿಸಿ, ಮೇಲೇರಿದರು. ಮರಕ್ಕೆ ಬಿಗಿದಿದ್ದ ಹಗ್ಗವನ್ನು ಬಿಚ್ಚಿ ಶರೀರವನ್ನು ಕೆಳಗಿಳಿಸಿದರು . ನಂತರ ಆ ಸ್ವಹಾಬಿ ಮರದಿಂದ ಕೆಳಗಿಳಿದು ನೋಡಿದರೆ ಅಲ್ಲಿ ಖುಬೈಬ್ (ರಅ) ರವರ ಶರೀರ ಕಂಡು ಬರಲಿಲ್ಲ.  ಸುತ್ತಲೂ ಹುಡುಕಾಡಿದರು ಆದರೆ ಎಲ್ಲೂ ಕಾಣಲಿಲ್ಲ, ಏನಾಯಿತು, ಮಯ್ಯಿತ್ ಎಲ್ಲಿ ಮಾಯವಾಯಿತು..? ರಾತ್ರಿ ಆದ್ದರಿಂದ ಕತ್ತಲಲ್ಲಿ ಕಾಣದೆ ,ಬೆಳಗಾದ ನಂತರ ಹುಡುಕಿ ಕಂಡೊಯ್ಯೋಣವೆಂದು ಬೆಳಗಾಗುವುದನ್ನು ಕಾದು ಕುಳಿತರು.  ಬೆಳಗಾದರೂ ಕಾಣದಿರುವಾಗ ಆ ಸ್ವಹಾಬಿ ಬೇಸರದಿಂದ ಪ್ರವಾದಿಯವರ(ಸಅ) ಸನ್ನಿಧಿಗೆ ಮರಳಿದರು .   ಆ ಸ್ವಹಾಬಿಯನ್ನು ನೋಡಿ ಪ್ರವಾದಿ (ಸಅ) ಹೇಳಿದರು ಆ ಶರೀರ ನಿನಗಿರುವುದಲ್ಲ , ಅವರ ಶರೀರವನ್ನು ಮಲಕುಗಳು ಧಫನ ಮಾಡಿದರು . ಎಂದರು .

🤲ಅಲ್ಲಾಹನ ಇಷ್ಟ ದಾಸರುಗಳ ಬರಕತ್ತಿನಿಂದ ನಮ್ಮ ಈಮಾನ್ ವೃಧ್ಧಿಸಲಿ.....!ಆಮೀನ್.

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಸೇಬು ಹಣ್ಣಿನ ಬೆಲೆ

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ

*══❁✿🕳.﷽ .🕳✿❁══*

▪••┈┈•••💧•••┈┈••▪
*::::: 🌳🌱ಮೊಳಕೆ🌱🌳 :::::*
▪••┈┈•✿❁✿•┈┈••▪

▪••┈┈•••💧•••┈┈••▪
*:::🌱ಸೇಬು ಹಣ್ಣಿನ ಬೆಲೆ🌱:::*
▪••┈┈•✿❁✿•┈┈••▪

                           *****

ಒಮ್ಮೆ ಖಲೀಫ ಉಮರ್ ಇಬ್ನು ಅಬ್ದುಲ್ ಅಝೀಝ್ (ರಅ) ತಮ್ಮ ರಾಜ್ಯದ ಅಧಿಕಾರ ವ್ಯಾಪ್ತಿಯಲ್ಲಿರುವ ತೋಟದಿಂದ ಕೀಳಲ್ಪಟ್ಟ ಸೇಬು ಹಣ್ಣುಗಳನ್ನು ಅಲ್ಲಿನ ಬಡವರಿಗೆ ವಿತರಿಸುತ್ತಿದ್ದರು . ಆ ಸಂದರ್ಭದಲ್ಲಿ ಅವರ ಪುಟ್ಟ ಮಗು ಒಂದು ಸೇಬನ್ನು ಎತ್ತಿಕೊಂಡಿತು . ಇದನ್ನು ಕಂಡ ಖಲೀಫರು ಮಗುವಿನ ಕೈಯಿಂದ ಅದನ್ನು ಕಿತ್ತು ತೆಗೆದುಕೊಂಡರು . ಇದರಿಂದ ನೊಂದ ಮಗು ಕೂಗುತ್ತಾ ತಾಯಿಯ ಮಡಿಲಿಗೆ ಓಡಿತು. ತಾಯಿಯು ಸೇಬು ಖರೀದಿಸಲು ಮಗುವನ್ನು ಅಂಗಡಿಗೆ ಕಳುಹಿಸಿದರು . ಮಗು ತಾನು ಖರೀದಿಸಿದ ಸೇಬಿನೊಂದಿಗೆ ಮನೆ ಸೇರಿದ .
ಸ್ವಲ್ಪ ಸಮಯದ ನಂತರ ಮರಳಿದ ಖಲೀಫರು ಮಗುವಿನ ಕೈಯ್ಯಲ್ಲಿ ಸೇಬು ಇರುವುದನ್ನು ಕಂಡು , ಹೀಗೆ ಹೇಳಿದರು "ಫಾತಿಮಾ, ಬಡವರಿಗಾಗಿ ಮೀಸಲಿಟ್ಟ ಸೇಬಿನಿಂದ ಏನಾದರೂ ತೆಗೆದಿರುವೆಯೇನೋ..?"

ಫಾತಿಮಾ(ರಅ) ನಡೆದ ವಿಷವನ್ನು  ವಿವರಿಸಿದರು ....

ಇದನ್ನು ಕೇಳಿದ ಖಲೀಫರು ಹೇಳಿದರು "ನಮ್ಮ ಮಗುವಿನ ಕೈಯಿಂದ ಸೇಬನ್ನು ಕೀಳುವಾಗ ನನ್ನ ಕರುಳು ಕಿತ್ತಂತೆ ಭಾಸವಾಯಿತು. ಆದರೆ ಅಲ್ಲಾಹನ ಸನ್ನಿಧಿಯಲ್ಲಿ , ಬಡವರ ಅವಕಾಶವಾದ ಸೇಬು ಹಣ್ಣಿಗೆ ಬದಲಾಗಿ ಅಲ್ಲಾಹನು ನೀಡುವ ಪ್ರತಿಫಲ ನಷ್ಟವಾಗುವುದೇ ಎಂದು ನಾನು ಭಯಪಟ್ಟೆ" .


صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰
   

ಸಯ್ಯಿದುತ್ತಾಬಿಈನ್ ಉವೈಸುಲ್ ಖರ್ನಿ (ರಅ)

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳ಸಯ್ಯಿದು ತ್ತಾಬಿಈನ್🌳:::*
▪•••┈┈•✿❁✿•┈┈•••▪

                           *****
ಉವೈಸುಲ್ ಖರ್ನಿ ತಾಬಿಉಗಳಲ್ಲಿ ಪ್ರಧಾನಿಯಾಗಿದ್ದಾರೆ(ಸಯ್ಯಿದು ತ್ತಾಬಿಈನ್) . ಅವರ ಪೂರ್ಣ ಹೆಸರು  ಅಬೂ ಅಂರ್ ಉವೈಸ್ ಇಬ್ನು ಆಮಿರ್ ಇಬ್ನು ಜುಝ್ಅ ಇಬ್ನು ಮಾಲೀಕ್ ಅಲ್ ಖರ್ನಿ ಅಲ್ಮುರಾದಿ ಅಲ್ಯಮಾನಿ(ರಅ) . ಅವರು ಸ್ವಹಾಬಿ ಎಂದು ಅಭಿಪ್ರಾಯವಿದ್ದರೂ ಪ್ರಭಲ ಅಭಿಪ್ರಾಯ ತಾಬಿಈ ಎಂದಾಗಿದೆ . ಪ್ರವಾದಿ ವರ್ಯರ ಕಾಲದಲ್ಲಿ ಜೀವಿಸಿ ಇಸ್ಲಾಂ ಸ್ವೀಕರಿಸಿದ್ದರೂ ಪ್ರವಾದಿಯವರನ್ನು ಕಾಣಲು ಭಾಗ್ಯ ಉಂಟಾಗಲಿಲ್ಲ . ಪ್ರವಾದಿಯವರನ್ನು ಅತಿಯಾಗಿ ಪ್ರೀತಿಸುತ್ತಿದ್ದರೂ ತನ್ನ ವಯಸ್ಸಾದ ತಾಯಿಯನ್ನು ಬಿಟ್ಟು ಮದೀನಕ್ಕೆ ಹೋಗಲು ಕಷ್ಟವಾಯಿತು.
ಪುಣ್ಯ ಪ್ರವಾದಿಯವರು ಈ ಮಹಾನರ ಕುರಿತು ಸ್ವಹಾಬಿಗಳಿಗೆ ಹೇಳಿಕೊಡುತ್ತಿದ್ದರು . ಖಲೀಫ ಉಮರ್(ರಅ) ರವರು ತನ್ನ ಬಳಿಗೆ ಯಮನಿನಿಂದ ಯಾವುದೇ ವ್ಯಾಪಾರಿ ಸಂಘ ಬಂದರೆ ಅವರಲ್ಲಿ ಉವೈಸ್ ಖರ್ನಿಯ ಕುರಿತು ಕೇಳುತ್ತಿದ್ದರು . ತನ್ನ ಸರ್ವಸ್ವವನ್ನೂ ತಾಯಿಗಾಗಿ ಮೀಸಲಿಟ್ಟ ಮಹಾನ್ ತ್ಯಾಗಿ, ಇಹಲೋಕದ ಸುಖ ಸೌಕರ್ಯಗಳನ್ನು ತೊರೆದು ಪರಲೋಕ ಮೋಕ್ಷ ಮತ್ತು ಪ್ರವಾದಿ ಸ್ನೇಹಕ್ಕಾಗಿ ಅರೆ ಬಟ್ಟೆಯಲ್ಲಿ ಅಲೆದಾಡಿದ ಆತ್ಮೀಯ ಲೋಕದ ಬೆಳ್ಳಿ ನಕ್ಷತ್ರ . ಹಗಲಿರುಳು ಅಲ್ಲಾಹನ ಧ್ಯಾನದಲ್ಲಿ ತಲ್ಲೀನರಾಗಿ ಸೃಷ್ಟಿಕರ್ತನ ಸಾಮೀಪ್ಯ ಪಡೆದ ಮುಸ್ತಜಾಬು ದಅವ .

ಮುರಾದ್ ಗೋತ್ರದ ಒಬ್ಬರು ಉವೈಸುಲ್ ಖರ್ನಿಯವರನ್ನು ಸಂದರ್ಶಿಸಿದಾಗ ಮಾತಿನೆಡೆಯಲ್ಲಿ ಆತ ಹೇಳಿದ ಸಮಯ ಎಷ್ಟು ಬೇಗ ಚಲಿಸುತ್ತಿದೆ ಅಲ್ಲವೇ..? ಅದಕ್ಕುತ್ತರವಾಗಿ ಉವೈಸುಲ್ ಖರ್ನಿ(ರಅ) ರವರು ಹೇಳಿದರು: "ಬೆಳಿಗ್ಗೆಯಾದರೆ ಸಂಜೆ ಆಗುವುದಿಲ್ಲವೆಂದೂ , ಸಂಜೆಯಾದರೆ ಬೆಳಗಾಗುವುದಿಲ್ಲವೆಂದೂ ಭಾವಿಸುವ ಒಬ್ಬ ಮನುಷ್ಯ ಸಮಯದ ಕುರಿತು ಏನು ತಾನೇ ಹೇಳಬಲ್ಲ...!? ಆವಾಗ ಕೆಲವರಿಗೆ ಸ್ವರ್ಗ ಲಭಿಸಿರುತ್ತದೆ ಮತ್ತೆ ಕೆಲವರು ನರಕ ವಾಸಿಗಳಾಗಿರುತ್ತಾರೆ . ಓ ಗೆಳೆಯಾ..! ಮರಣ ಮತ್ತು ಅದರ ಕುರಿತಾದ ಚಿಂತೆ ಉಂಟಾದರೆ ಮುಅಮಿನಾದವನಿಗೆ ಸಂತೋಷ ಉಂಟಾಗದು . ಅವನಿಗೆ ಅಲ್ಲಾಹನ ಕುರಿತಾದ ಭೋಧವಿದ್ದರೆ ಅವನ ಸಂಪತ್ತಿನಲ್ಲಿ ಒಂದು ಅಣುವಿನಷ್ಟು ಚಿನ್ನ ಅಥವಾ ಬೆಳ್ಳಿ ಉಳಿಯುವುದಿಲ್ಲ" .

ಸ್ವಿಫ್ಫೀನ್ ಯುದ್ದದಲ್ಲಿ ಅಲೀ(ರಅ) ರವರೊಂದಿಗೆ ಸೇರಿ ಯುದ್ಧ ನಡೆಸಿ , ಆ ಯುದ್ದದಲ್ಲಿ ಅವರ ಶರೀರ ನಲ್ವತ್ತಕ್ಕಿಂತಲೂ ಅಧಿಕ ಗಾಯಗಳೊಂದಿಗೆ ಶಹೀದ್ ಆದರು ಎಂದೂ ಅಝರ್ಬೈಜಾನಿನ ಒಂದು ಯುದ್ಧದಲ್ಲಿ ಅವರು ಶಹೀದ್ ಆದರು ಎಂದೂ ಅಭಿಪ್ರಾಯಗಳಿವೆ. 
ಅಲ್ಲಾಹನು ಅವರೊಂದಿಗೆ ನಮ್ಮನ್ನೂ ಅವನ ಸ್ವರ್ಗ ಲೋಕದಲ್ಲಿ ಒಂದುಗೂಡಿಸಲಿ ...ಆಮೀನ್. 🤲

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰
   


ಹಿಲ್ರ್ ನಬಿ ಅಲೈಹಿಸ್ಸಲಾಂ

*══❁✿🕳.﷽ .🕳✿❁══*
السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
▪••┈┈•••💧•••┈┈••▪
*::::: 🌳🌱ಮೊಳಕೆ🌱🌳 :::::*
▪••┈┈•✿❁✿•┈┈••▪

*🍃ಹಿಳ್ರ್ ನಬಿ (ಅ.ಸ)🍃*

*ಜನನ*

ಹಿಲ್ರ್ ನೆಬಿಯವರ ಹೆಸರು ಕೇಳದವರು ವಿರಳ ಅನ್ನಬಹುದು . ಆದರೆ ಅವರ ಚರಿತ್ರೆ ಜನಸಾಮಾನ್ಯರಲ್ಲಿ ತಿಳಿಯದವರೇ ಹೆಚ್ಚು.
ಹಿಲ್ರ್ ನೆಬಿಯವರ ಕುರಿತು ಪವಿತ್ರ ಖುರ್-ಆನಿನ ಸೂರತ್ ಕಹ್ಫಿನಲ್ಲಿ ನಮಗೆ ಕಾಣಬಹುದಾಗಿದೆ .

ಒಮ್ಮೆ ಹಝ್ರತ್ ಮೂಸಾ(ಅಸ) ರಲ್ಲಿ ಹೆಚ್ಚು ತಿಳಿದವರು ಯಾರು ಎಂದು ಕೇಳಿದಾಗ ಅವರು ತಾನೇ ಎಂದು ಉತ್ತರಿಸಿದರು. ಅವರ ಆ ತಪ್ಪು ತಿಳುವಳಿಕೆಯನ್ನು ಸರಿಪಡಿಸುವ ಸಲುವಾಗಿ ಸೃಷ್ಟಿಕರ್ತನಾದ ಅಲ್ಲಾಹನು ಮೂಸಾ ನಬಿಯವರಲ್ಲಿ ಮಜ್ಮಉಲ್ ಬಹರೈನಿ (ಎರಡು ಸಮುದ್ರ ಸೇರುವ ಸ್ಥಳ) ಗೆ ಹೋಗಲು ಮತ್ತು ಅಲ್ಲಿ ಅಲ್ಲಾಹನ ದಿವ್ಯ ಪುರುಷರೊಬ್ಬರನ್ನು ಸಂದರ್ಶಿಸಲು ಹೇಳಿದನು. ಆ ಮಹಾನ್ ಹಝ್ರತ್ ಅಬುಲ್ ಅಬ್ಬಾಸ್ ಬಲ್ಯ ಇಬ್ನು ಮಲ್ಕಾನ್ ಹಳಿರ್ ನಬಿ (ಅಸ) ಆಗಿದ್ದರು . ಅವರು ಅಪಾರ ಅದೃಶ್ಯತೆ, ಮತ್ತು ಅಸಾಧಾರಣ ಜೀವನ ಇತಿಹಾಸ ಹೊಂದಿರುವ ಮಹಾನ್ ವ್ಯಕ್ತಿಯಾಗಿದ್ದರು .

🌺ಆ ಮಹಾನರ ಕುರಿತು ಒಂದಿಷ್ಟು🌺 👇

☘*ದುಲ್ ಖರ್ನೈನಿ ಮತ್ತು ಹಿಲ್ರ್ ನಬಿ*☘

ವಿಶ್ವವನ್ನಾಳಿದ ಮುಸ್ಲಿಂ ಆಡಳಿತಗಾರರಲ್ಲಿ ಒಬ್ಬರು . ಅವರ ತಂದೆ ಅಬ್ದುಲ್ಲಾ ಒಬ್ಬ ಮಹಾನ್ ಖಗೋಳಶಾಸ್ತ್ರಜ್ಞರಾಗಿದ್ದರು .

ಒಂದು ದಿನ ರಾತ್ರಿ ಅಬ್ದುಲ್ಲಾ ರವರು ತನ್ನ ಮಡದಿಯಲ್ಲಿ ಆಕಾಶದಲ್ಲಿ ಒಂದು ಪ್ರತ್ಯೇಕ ಸ್ಥಳವನ್ನು ತೋರಿಸುತ್ತಾ ಹೇಳಿದರು : "ಆ ಸ್ಥಳದಲ್ಲಿ ಒಂದು ನಕ್ಷತ್ರದ ಉದಯವಾಗುತ್ತದೆ , ಆ ನಕ್ಷತ್ರ ಪ್ರತ್ಯಕ್ಷವಾದರೆ ನನಗೆ ತಿಳಿಸಬೇಕು . ಆ ಸಂದರ್ಭದಲ್ಲಿ ನಡೆಯುವ ಲೈಂಗಿಕ ಬಂಧದಲ್ಲಿ  ಉಂಟಾಗುವ ಮಗುವಿಗೆ ಅಂತ್ಯ ದಿನದ ವರೆಗೂ ಆಯುಷ್ಯವಿರುತ್ತದೆ " ಎನ್ನುತ್ತಾ ಅವರು ಮಲಗಿದರು .
ಪಕ್ಕದ ಕೋಣೆಯಲ್ಲಿದ್ದ ಅವರ ಮಡದಿಯ ಸಹೋದರಿ ಇವರ ಮಾತುಕತೆಯನ್ನು ಕೇಳಿ ತಮಗೂ ಅಂತಹ ಮಗು ಲಭಿಸಬೇಕು ಎಂಬ ಆಗ್ರಹದಲ್ಲಿ ನಕ್ಷತ್ರ ಉದಯವನ್ನು ಕಾದು ಕುಳಿತರು .
ನಕ್ಷತ್ರ ಪ್ರತ್ರಕ್ಷವಾದ ಕೂಡಲೇ ಕಾದು ಕುಳಿದ ದಂಪತಿಗಳು ಶಾರೀರಿಕ ಬಂಧದಲ್ಲಿ ಏರ್ಪಟ್ಟರು . ಈ ಬಂಧದಲ್ಲಿ ಉಂಟಾದ ಮಗುವೇ ಹಿಳ್ರ್ ನಬಿ(ಅಸ) ಎಂಬ ಪವಾಡ ಪುರುಷ .

ಇದೊಂದೂ ತಿಳಿಯದೆ ಗಾಢ ನಿದ್ದೆಯಲ್ಲಿದ್ದ ಅಬ್ದುಲ್ಲ ರವರು ಏಳುವಾಗ ನಕ್ಷತ್ರ ಮರೆಯಾಗಿ ಹೋಗಿತ್ತು . ಅವರು ತನ್ನ ಮಡದಿಯಲ್ಲಿ "ನೀನೇಕೆ ನನ್ನನ್ನು ಎಬ್ಬಿಸಲಿಲ್ಲ" ಎಂದು ಕೇಳಿದಾಗ ಅವಳು "ನನಗೆ ನಾಚಿಕೆಯಾಯಿತು" ಎನ್ನುತ್ತಾ ತಲೆ ತಗ್ಗಿಸಿದಳು . ಆಗ ಅಬ್ದುಲ್ಲ "ಕಳೆದ ನಲವತ್ತು ವರ್ಷಗಳಿಂದ ನಾನು ಈ ಸಮಯಕ್ಕಾಗಿ ಕಾಯುತ್ತಿದ್ದೆ ನೀನು ನನ್ನ ಕಾಯುವಿಕೆಯನ್ನು ನಷ್ಟಪಡಿಸಿದೆ" ಎಂದಾಗ ಅವಳು ಮೌನಿಯಾದಳು .

ಏನೇ ಆಗಲಿ ನಷ್ಟವಾದದ್ದು ನಷ್ಟವಾಯಿತು , ಅದರಿಂದ ಬೇಸತ್ತು ಪ್ರಯೋಜನವಿಲ್ಲ.  ಇನ್ನೊಂದು ನಕ್ಷತ್ರ ಪ್ರತ್ಯಕ್ಷವಾಗಲಿದೆ ಆಗ ಒಂದಾಗೋಣ , ಅದರಿಂದ ಉಂಟಾಗುವ ಮಗು ಲೋಕ ಪ್ರಶಸ್ತನಾಗುತ್ತಾನೆ .
ಹಾಗೆ ಅವರಿಬ್ಬರು ಆ ನಕ್ಷತ್ರದ ಉದಯವನ್ನು ಕಾದು ಕುಳಿತರು. ಅವರ ಕಾಯುವಿಕೆ ಹಸನಾಯಿತು . ಆ ನಕ್ಷತ್ರ ಪ್ರತ್ಯಕ್ಷವಾಯಿತು, ಅವರಿಬ್ಬರೂ ಶಾರೀರಿಕ ಬಂಧದಲ್ಲಿ ಏರ್ಪಟ್ಟರು . ಆ ಬಂಧದಲ್ಲಿ ಉಂಟಾದ ಮಗುವೇ ಪ್ರಪಂಚ ಆಳಿದ ದುಲ್ಖರ್ನೈನ್ ಚಕ್ರವರ್ತಿ.

ದುಲ್-ಖರ್ನೈನಿಯವರ ತಂದೆ ಅಬ್ದುಲ್ಲ ಹೇಳಿದಂತೆ ಖಿಳಿರ್ ನಬಿಯವರಿಗೆ ಅಲ್ಲಾಹನು ಅಂತ್ಯ ದಿನದ ವರೆಗೆ ಆಯುಷ್ಯವನ್ನು ನೀಡಿದನು .ದುಲ್-ಖರ್ನೈನಿ ಲೋಕ ಪ್ರಶಸ್ತ ವ್ಯಕ್ತಿಯೂ ಆದರು .

*ರೈತ ಮತ್ತು ಮೇಕೆ*

ಹಿಲ್ರ್ ನೆಬಿಯವರ ತಂದೆ ಮಲ್ಕಾನ್ ಪೇರ್ಶ್ಯದ ಒಂದು ಪ್ರಾಂತ್ಯದ ರಾಜನಾಗಿದ್ದನು . ತಾಯಿ ರೋಮಾ ರಾಜ್ಯದವರೂ ಆಗಿದ್ದರು. ಇದು ಪ್ರಮುಖ ತಾಬಿಈ ಶ್ರೇಷ್ಠರಾದ ಪಂಡಿತ ಸಈದ್ ಇಬ್ನು ಮುಸಯ್ಯಬ್ ರವರ ತೀರ್ಪು .

ಹಿಲ್ರ್ ನೆಬಿಯವರ ಜನನದ ನಂತರ ಶತ್ರುಗಳಿಂದ ಏನಾದರೂ ತೊಂದರೆ ಆಗಬಹುದೆಂದು ಭಾವಿಸಿದ ತಂದೆ ಮಲ್ಕಾನ್ ಮಗು ಮತ್ತು ತಾಯಿಯನ್ನು  ನಿರ್ಜನ ಪ್ರದೇಶದ ಗುಹೆಯೊಂದರಲ್ಲಿ ವಾಸವಿಟ್ಟರು .
ಗುಹಾ ವಾಸದ ಮಧ್ಯೆ ತಾಯಿ ಮರಣ ಹೊಂದಿದರು , ಮುಂದಿನ ದಿನಗಳು ಆಶ್ಚರ್ಯಕರವಾದ ಘಟನೆಗಳಾಗಿತ್ತು .

ಬೆಟ್ಟದ ಕೆಳಗಡೆ ಒಬ್ಬ ರೈತ ತನ್ನ ಮೇಕೆಗಳನ್ನು ಮೇಯಿಸುತ್ತಿದ್ದನು . ಆತನ ಮೇಕೆಗಳು ಮೇಯುತ್ತಿದ್ದಂತೆ ಒಂದು ಮೇಕೆ ಮಾತ್ರ ಒಬ್ಬಂಟಿಯಾಗಿ ಮೇಯುತ್ತಾ ಸ್ವಲ್ಪ ಸಮಯಕ್ಕೆ ಮಾಯವಾಗಿ ಮತ್ತೆ ಮರಳಿ ಬರುತ್ತಿತ್ತು .

ದಿನಾಲು ಗುಂಪಿನಿಂದ ಬೇರ್ಪಟ್ಟು ಒಬ್ಬಂಟಿಯಾಗಿ ಮೇಯುತ್ತಾ ಸಾಗುತ್ತಿರುವ ಒಂದು ಮೇಕೆ ರೈತನ ಗಮನ ಸೆಳೆಯಿತು. ಒಂದು ದಿನ ರೈತ ಆ ಮೇಕೆಯನ್ನು ಹಿಂಬಾಲಿಸಿದನು. ಮೇಕೆ ಮುಂದೆ ಮುಂದೆ ನಡೆಯುತ್ತಾ ಬೆಟ್ಟದ ಕೆಳಗಿರುವ ಒಂದು ಗುಹೆಯೊಳಗೆ ಪ್ರವೇಶಿಸಿತು . ರೈತನಿಗೆ ಮತ್ತಷ್ಟು ಆಶ್ಚರ್ಯವಾಗಿ ಆತನೂ ಗುಹೆಯೊಳಗೆ ಪ್ರವೇಶಿಸಿದ . ಒಳಗೆ ನೋಡಿದಾಗ ರೈತ ಕುತೂಹಲದಿಂದ ಬೆರಗಾದನು . ತನ್ನ ಕಣ್ಣುಗಳಿಂದ ತನಗೇ ನಂಬಲಾಗದ ಆಶ್ಚರ್ಯ...!

ನೆಲದಲ್ಲಿ ಬಿರಿಸಿರುವ ಹಾಸಿಗೆಯಲ್ಲಿ ಸುಂದರವಾದ ಒಂದು ಮಗು ಮಲಗಿದೆ, ಮೇಕೆ ತನ್ನ ಕುಚವನ್ನು ಮಗುವಿನ ಬಾಯಿಗೆ ನೀಡಿದಾಗ ಮಗು ಅದರಿಂದ ಹಾಲು ಹೀರುತೊಡಗಿತು .

ನಂತರ ಒಂದೂ ತಿಳಿಯದಂತೆ ಮೇಕೆ ಮುಂದೆ ಸಾಗಿತು . ರೈತ ಗುಹೆಯ ಒಳಗಡೆ ಪ್ರವೇಶಿಸಿ ಮಗುವನ್ನು ಎತ್ತಿಕೊಂಡು ಮನೆಯ ಕಡೆ ದಾಪುಗಾಲಿತ್ತನು . ಇದೊಂದು ಅದ್ಭುತ ಮಗುವೆಂದು ರೈತನ ಅಂತರಂಗ ಮಂತ್ರಿಸುತ್ತಿತ್ತು .

ಮಗು ರೈತನ ಮನೆಯಲ್ಲಿ ಬೆಳೆಯತೊಡಗಿತು . ರೈತನ ಮಕ್ಕಳಿಂದ ಬರೆಯಲು ಓದಲು ಕಲಿಯಿತು. ಚಿಕ್ಕ ವಯಸ್ಸಿನಲ್ಲೇ ಮಾತಿನಲ್ಲೂ ಚಟುವಟಿಕೆಗಳಲ್ಲೂ ಸ್ವಭಾವದಲ್ಲೂ ಮಗುವಿನ ಸಾಮರ್ಥ್ಯ ರೈತನನ್ನು ಆಕರ್ಷಿಸಿತು . ಮಗುವಿನ ಸ್ಫುಟವಾದ ಬರವಣಿಗೆಯ ಅಕ್ಷರ ಶುದ್ಧಿ ಕಂಡು ರೈತ ಬೆರಗಾದನು ....

🍀ರಾಜನ ಘೋಷಣೆ🍀*

ರಾಜನು ದೇಶದ ಎಲ್ಲಾ ಅತ್ಯುತ್ತಮ ಕೈಬರಹದ ಬರಹಗಾರರನ್ನು ಅರಮನೆಗೆ ಆಹ್ವಾನಿಸುತ್ತಾನೆ. ಅತ್ಯುತ್ತಮ ಬರಹಗಾರನನ್ನು ಅರಮನೆಯ ಗುಮಾಸ್ತನಾಗಿ ನೇಮಿಸುವ ಸಲುವಾಗಿಯಾಗಿತ್ತು ಈ ಸ್ಪರ್ಧೆ .

ಇಬ್ರಾಹಿಮ್ ನೆಬಿ ಮತ್ತು ಶೀಸ್ ನೆಬಿ (ಅಸ)ರ
ಪ್ರಾಚೀನ ಏಡುಗಳಲ್ಲಿ ಉಲ್ಲೇಖಿಸಲ್ಪಟ್ಟ ವಿಧಿ ನಿಷೇಧಗಳು ಮತ್ತು ಐತಿಹಾಸಿಕ ಘಟನೆಗಳನ್ನು ನಕಲು ಮಾಡುವುದು ರಾಜಕೀಯ ನಿಯೋಜನೆಯಾಗಿತ್ತು .

ರೈತ ಚಿಕ್ಕ ಮಗುವನ್ನು ಎತ್ತಿಕೊಂಡು ಅರಮನೆ ತಲುಪಿದನು . ಚಿಕ್ಕವನಾದ ಹಿಲ್ರ್ ಸಹ ಶ್ರೇಷ್ಠ ಬರಹಗಾರರ ನಡುವೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಹಿಲ್ರ್ ಚಿಕ್ಕವನಾಗಿದ್ದರೂ ಅವರು ಚೆನ್ನಾಗಿ ಬರೆದಿದ್ದಾರೆಂದು ರಾಜನಿಗೆ ಅರಿವಾಯಿತು .

ರಾಜನು ರೈತನೊಂದಿಗೆ ಕೇಳಿದ "ಈ ಮಗು ಯಾರು...? ರೈತ ತನ್ನ ಮಗನೆಂದು ಉತ್ತರಿಸಿದನು. ಆದರೆ ರಾಜನಿಗೆ ರೈತನ ಮುಖಭಾವ ಬದಾಲುಗುವುದನ್ನು ಕಂಡು ಒಮ್ಮೆ ಮಗುವಿನ ಮುಖಕ್ಕೂ ಮತ್ತೆ ರೈತನ ಮುಖಕ್ಕೂ ನೋಡತೊಡಗಿದರು . ಮುಖ ಮತ್ತು ದೈಹಿಕ ನೋಟಕ್ಕೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ಯಾವುದೇ ಹೋಲಿಕೆ ಇಲ್ಲದಿರುವುದನ್ನು ಕಂಡ ರಾಜನ ಮನಸ್ಸು ಖಂಡಿತವಾಗಿಯೂ ಈ ಮಗು ರೈತನದಾಗಿರಲು ಸಾಧ್ಯವೇ ಇಲ್ಲವೆಂದು ಮಂತ್ರಿಸುತ್ತಿತ್ತು .

ರಾಜನು ರೈತನನ್ನು ಪಕ್ಕಕ್ಕೆ ಕರೆದು ಸ್ವಲ್ಪ ಜೋರಾಗಿಯೇ ಕೇಳಿದರು "ನಿಜ ಹೇಳು .. ಈ ಮಗು ಯಾರದು..? ಸುಳ್ಳು ಹೇಳಿ ನಮ್ಮಿಂದ ಶಿಕ್ಷೆಗೆ ಗುರಿಯಾಗಬೇಡ..! ಶಿಕ್ಷೆ ಕಠಿಣವಾಗಿರುತ್ತದೆ  ನೆನಪಿರಲಿ.. "

ರಾಜನ ಬೆದರಿಕೆಯ ಮಾತು ಫಲಿಸಿತು . ರೈತ ನಡೆದ ಘಟನೆಗಳನ್ನು ವಿವರಿಸಿದನು. ರೈತನ ವಿವರಣೆಗಳನ್ನು ಕೇಳಿ ರಾಜನ ಕಣ್ಣು ತುಂಬಿತು . ತನ್ನ ಪೀಠದಿಂದ ಇಳಿದು ಬಂದು ಮಗುವನ್ನು ಅಪ್ಪಿಕೊಂಡರು.
ರಾಜ ರಹಸ್ಯವಾಗಿ ಮಗು ಇರುವ ಗುಹೆ ಸಂಧರ್ಶಿಸುತ್ತಿದ್ದರು ,

ಒಮ್ಮೆ ಹೋದಾಗ ಮಗುವನ್ನು ಕಾಣದಿರುವಾಗ ಯಾವುದಾದರೂ ಕಾಡುಪ್ರಾಣಿಗಳು ಕೊಂದು ತಿಂದಿರಬೇಕೆಂದು ಭಾವಿಸಿದ್ದರು . ಆದರೆ ನಷ್ಟವಾಯಿತೆಂದು ಭಾವಿಸಿದ ಮಗುವನ್ನು ಅಲ್ಲಾಹನು ತನ್ನ ಮುಂದೆ ಜೀವಂತವಾಗಿ ಯಾವುದೇ ತೊಂದರೆಗೊಳಗಾಗದೇ ತಂದಿರುವುದು ಅದೂ ಕೂಡಾ ಹಲವು ವರ್ಷಗಳ ನಂತರ .... ಅಲ್ಹಂದುಲಿಲ್ಲಾಹ್...!

ಈ ಪುನರ್ಮಿಲನದ ರಹಸ್ಯವನ್ನು ರಾಜನೇ ಬಹಿರಂಗಪಡಿಸಿದ. ರಾಜ ಪ್ರೇಕ್ಷಕರು ಬೆರಗಾದರು. ಅರಮನೆಯ ನಿವಾಸಿಗಳು ರಾಜನ ಸಂತೋಷದಲ್ಲಿ ಪಾಲ್ಗೊಂಡರು .

ರಾಜಕುಮಾರನನ್ನು ದೀರ್ಘಕಾಲ ಪೋಷಿಸಿದ ರೈತನಿಗೆ ರಾಜನು ಉಡುಗೊರೆಗಳನ್ನು ಕೊಟ್ಟನು ಮತ್ತು ಸಂತೋಷದಿಂದ ಅವನನ್ನು ಹಿಂದಿರುಗಿಸಿದನು .

ಅದರೊಂದಿಗೆ ಬಾಲನಾಗಿದ್ದ ಹಿಲ್ರ್ (ಅಸ) ರ ವಾಸ ಅರಮನೆಯಲ್ಲಾಯಿತು .
ರಾಜಕುಮಾರನಾದ ಹಿಲ್ರ್ ನ ಜೀವನ ಬದಲಾಯಿತು. ಧರಿಸಲು ರಾಯಲ್ ಬಟ್ಟೆಗಳು, ತಿನ್ನಲು ರಾಯಲ್ ಆಹಾರ, ಮತ್ತು ಅವನಿಗೆ ಸೇವೆ ಮಾಡಲು ದಾಸಿಯರು .
ರಾಜಕೀಯ ಸುಖಗಳಲ್ಲಿ ಜೀವಿಸುವಾಗ ಹಿಲ್ರ್ ರಿಗೆ ಅದರಲ್ಲಿ ಯಾವುದೇ ಆಸಕ್ತಿ ಇರಲಿಲ್ಲ.

ಜಿಬ್ರೀಲ್ (ಅಸ) ಹೇಳಿದ ಕಥೆ .

ಮಿಅರಾಜಿನ ರಾತ್ರಿ, ಅಂದರೆ ನುಬುವ್ವತ್ತಿನ ಹತ್ತನೇ ವರ್ಷ ರಜಬ್ 27ನೇ ರಾತ್ರಿ.

ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾ ಹು ಅಲೈಹಿ ವಸಲ್ಲಂ ಬುರಾಖಿನಲ್ಲಿ ಜಿಬ್ರೀಲ್ (ಅಸ) ರೊಂದಿಗೆ ಮಸ್ಜಿದುಲ್ ಅಖ್ಸವನ್ನು ಲಕ್ಷ್ಯವಿಟ್ಟು ಹೊರಟಾಗ . ಪ್ರಯಾಣ ಮಧ್ಯೆ ಎಲ್ಲಿಂದಲೋ ಸುಗಂಧ ವಾಸನೆ ತೇಲಿ ಬರುತ್ತಿತ್ತು. ಪ್ರವಾದಿ ವರ್ಯರು ಜಿಬ್ರೀಲ್ (ಅಸ) ರಲ್ಲಿ ಕೇಳಿದರು "ಇಷ್ಟೊಂದು ಪರಿಮಳ ಎಲ್ಲಿಂದ ಬರುತ್ತಿದೆ ...?" .

ಜಿಬ್ರೀಲ್ (ಅಸ) ಹೇಳಿದರು: "ಓ ಪ್ರವಾದಿಯವರೇ.... ಈ ಪರಿಮಳದ ಹಿಂದೆ ಬಲು ದೊಡ್ಡ ಕಥೆಯೊಂದಿದೆ"

ಪುಣ್ಯ ನೆಬಿ(ಸಅ) : ಕಥೆಯೋ... ಅದೆಂಥಾ ಕಥೆ....!?

ಜಿಬ್ರೀಲ್(ಅಸ) ವಿವರಿಸತೊಡಗಿದರು .

ಸುಮಾರು ವರ್ಷಗಳ ಹಿಂದೆ ಡಮಸ್ಕಸಿನಲ್ಲಿ ಒಬ್ಬ ಒಳ್ಳೆಯ ಸ್ವಭಾವದ ರಾಜನಿದ್ದನು . ಅವರ ಹೆಸರು ಮಲ್ಕಾನ್, ಅವರಿಗೆ ಒಬ್ಬ ಪುತ್ರನಿದ್ದ ಆತನ ಹೆಸರು ಬಲ್ಯಾ. ರಾಜಕುಮಾರ ಬೆಳೆದು ದೊಡ್ಡವನಾದಾಗ ರಾಜನು ಅವನನ್ನು ಕಲಿಯಲು ಕಳುಹಿಸಿದರು.  ಎಂದು ಬೆಳಗ್ಗೆ ಕಲಿಯಲು ಹೊರಟು ಸಂಜೆಗೆ ಮರಳುತ್ತಿದ್ದ ಇದು ಅವರ ದಿನಚರಿಯಾಗಿತ್ತು. 

ಕಲಿಯಲು ಹೋಗುತ್ತಿರುವ ದಾರಿಯಲ್ಲೊಂದು ಆಶ್ರಮವಿತ್ತು . ಅಲ್ಲಿ ಒಬ್ಬರು ಸೂಫೀ ಸಂತರು ವಾಸವಾಗಿದ್ದರು. ಆ ಸೂಫೀ ಸಂತರಲ್ಲಿ ಆಕರ್ಷಿತನಾದ ಬಲ್ಯ ಅವರೊಂದಿಗೆ ಸಂಪರ್ಕವಿರಿಸಿದರು. ಅವರಿಂದ ಹಲವು ವಿಧ್ಯೆಗಳನ್ನು ಕಲಿತರು . ಗುರುವಿನ ಸ್ವಭಾವ ಗುಣಗಳು , ಕರ್ಮಗಳೂ ಬಲ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು . ಗುರುವಿನ ಎಲ್ಲಾ ಕರ್ಮಗುಣಗಳೂ ಬಲ್ಯರ ದೈನಂದಿನ ಬದುಕಿನಲ್ಲಿ ಪ್ರತಿಫಲಿಸತೊಡಗಿತು .

ವರ್ಷಗಳು ಕಳೆಯಿತು ಬಲ್ಯ ಒಬ್ಬ ಸಮರ್ಥ ಯುವಕನಾದ . ಅರಮನೆಯಲ್ಲಿ ಕಲರವ ಶುರುವಾಯಿತು ಹಲವರೂ ಬಂದು ರಾಜರಲ್ಲಿ ಹೇಳತೊಡಗಿದರು "ಪ್ರಭು..!ನಿಮ್ಮ ನಂತರ ರಾಜ್ಯದ ಮುಂದಿನ ದೊರೆ ಬಲ್ಯರಲ್ಲವೆ , ಅವರೀಗ ಬೆಳೆದು ಸಮರ್ಥರಾಗಿದ್ದಾರೆ , ಅವರ ಮಧುವೆಯನ್ನು ನಡೆಸಬೇಕಿದೆ" . ಅವರ ಮಾತು ಸರಿಯೆಂದು ರಾಜರಿಗೂ ಅನಿಸಿತು . ಆದಿನವೇ ರಾಜ ಬಲ್ಯರಲ್ಲಿ ಆ ಕಾರ್ಯವನ್ನು ಸೂಚಿಸಿದರು . ಆದರೆ ಅವರ ಪ್ರತಿಕ್ರಿಯೆ ಸಮಾಧಾನಕರವಾಗಿರಲಿಲ್ಲ . ಇಹಲೋಕದ ಸುಖ ಸೌಕರ್ಯಗಳಲ್ಲಿ ಮತ್ತು ದಾಂಪತ್ಯ ಜೀವನದಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲದ ರಾಜಕುಮಾರನು ನಯವಾಗಿಯೆ ಮದುವೆಯ ಪ್ರಸ್ತಾಪದಿಂದ ಹಿಂದೆ ಸರಿದ. 

ರಾಜನೂ ಕೂಡಾ ಮಗನನ್ನು ಅವನ ಪಾಡಿಗೆ ಬಿಡುವಂತಿರಲಿಲ್ಲ ದಿನಕಳೆಯುತ್ತಿರುವಂತೆ ಮದುವೆ ಕಾರ್ಯವನ್ನು ಮಗನಲ್ಲಿ ಹೇಳುತ್ತಲೇ ಇದ್ದರು . ಕೊನೆಗೂ ರಾಜನ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿಗೆ ನೀಡಿದರು . ರಾಜನ ಸಂತೋಷಕ್ಕೆ ಮಿತಿ ಇಲ್ಲದಂತಾಯಿತು . ತನ್ನ ಒಬ್ಬನೇ ಒಬ್ಬ ಮಗ ಅವನಿಗೆ ಹೋಲುವ ಒಂದು ಒಳ್ಳೆಯ ವಧುವನ್ನೇ ಹುಡುಕಬೇಕು . ವಿವಾಹ ಬಹಳ ಅದ್ಧೂರಿಯಲ್ಲೇ ನಡೆಸಬೇಕು,  ಯಾವುದಕ್ಕೂ ಕೊರತೆ ಉಂಟಾಗಬಾರದು ಹೀಗೆ ಮುಂದುವರೆಯಿತು ರಾಜನ ಚಿಂತೆಗಳು. ಬಲ್ಯರ ಮದುವೆ ವಿಷಯ ತಿಳಿದ ರಾಜ್ಯದ ಜನತೆಯ ಸಂತೋಷ ಉತ್ಸಾಹದಿಂದ ಕುಣಿದಾಡಿದರು .

ಕಾಯುತ್ತಿದ್ದ ಆ ಮಾಂಗಲ್ಯ ದಿನ ಸಮೀಪವಾಯಿತು , ಅರಮನೆಯಲ್ಲಿ ಸಡಗರ ತಾರಕಕ್ಕೇರಿತು. ವಧೂ ನೆರೆಯ ರಾಜ್ಯದ ರಾಜನ ಒಬ್ಬಳೇ ಒಬ್ಬಳು ಸುದಂರಿ . ರಾಜ್ಯದೆಲ್ಲೆಡೆಯೂ ಮದುವೆಯ ಸಂಭ್ರಮ ಜನರು ಬಹಳ ಉತ್ಸಾಹದಲ್ಲಿ ತೇಲಾಡುತ್ತಿದ್ದರು . ಮದುವೆಯ ದಿನ ಬಂದೇ ಬಿಟ್ಟಿತು ರಾಜಕುಮಾರ ಮದುವೆಯ ಮಂಟಪವೇರಲು ತಯಾರಾಗುತ್ತಿದ್ದಾರೆ . ಸೌಂದರ್ಯ ತುಳುಕಾತ್ತಿರುವ ವಧು ಅಲಂಕಾರದೊಂದಿಗೆ ಮಂಟಪವೇರಿದಳು . ಅರಮನೆಯಲ್ಲಿ ಸೇರಿದವರೆಲ್ಲಾ ಹರ್ಷೋತ್ಸಾಹದಿಂದ ಕೀರ್ತನೆಗಳನ್ನು ಆಲಪಿಸಿದರು. 

ಸಂಜೆಯಾಗುತ್ತಿದ್ದಂತೆಯೇ ಅತಿಥಿಗಳೆಲ್ಲಾ ಮರಳತೊಡಗಿದರು . ಎಲ್ಲದಕ್ಕೂ ಸಾಕ್ಷಿಯಾದ ಅರುಣ ಮೆಲ್ಲನೆ ತನ್ನ ಅಸ್ಥಮಾನದ ಕಡೆಗೆ ದಾಪುಗಾಲಿಡುತ್ತಿತ್ತು . ಅದರೊಂದಿಗೆ ಅರಮನೆಯ ಸಡಗರ ಸದ್ದುಗಳು ಕ್ಷೀಣಿಸತೊಡಗಿತು . 

ಸೂರ್ಯ ಅಸ್ಥಮಿಸಿದನು, ಬದಲಾಗಿ ಬೆಳದಿಂಗಳ ಬಾಲೆ ಎಲ್ಲೆಂದರಲ್ಲಿ ಬೆಳಕನ್ನು ಚೆಲ್ಲುತ್ತಾ ಪ್ರತ್ಯಕ್ಷವಾಯಿತು . ಪಕ್ಕದಲ್ಲಿ ತಮ್ಮ ಪರಿವಾರ ಸಮೇತ ಮಿಂಚುತ್ತಿರುವ ತಾರೆಗಳು . ಆ ರಾತ್ರಿಗೇನೋ ಹೊಸ ಹುಮ್ಮಸ್ಸು,  ಮನಸ್ಸಿಗೆ ಮುದ ನೀಡುವ ವಾತಾವರಣ . ಪಕ್ಷಿಮದಿಂದ ತಂಗಾಳಿ ಬೀಸುತ್ತಿದೆ.  ಅರಮನೆಯ ಮೇಲಿನ ಕೊಠಡಿಯಲ್ಲಿ ಮಧುಮಗಳು ತನ್ನ ಪ್ರಥಮ ರಾತ್ರಿಯ ಸವಿಯನ್ನು ಕಾಯುತ್ತಿದ್ದಾಳೆ. ರಾಜಕುಮಾರ ಕೊಠಡಿಗೆ ಪ್ರವೇಶಿಸಿದರು , ಮಂಚದಲ್ಲಿ ಕುಳಿತಿರುವ ಮಧುಮಗಳನ್ನು ಕಂಡು ಯಾಕೋ ಏನೋ ಮನಸ್ಸಿಗೆ ಅಸಮಾಧಾನ ಉಂಟಾಗತೊಡಗಿತು. ಮೊದಲೇ ಇಹಲೋಕ ಸುಖ ಸೌಕರ್ಯದಲ್ಲಿ ಆಸಕ್ತಿ ಇಲ್ಲದ ನನ್ನೊಡನೆ ಇವಳಿಗೆ ಜೀವನ ನಡೆಸಲು ಸಾಧ್ಯವೇ..? ಏನೇ ಆಗಲಿ ಎಲ್ಲವೂ ಅವಳೊಂದಿಗೆ ಹೇಳೋಣಾ, ಅವಳಿಗೆ ಇಷ್ಟವಾದರೆ ನನ್ನೊಂದಿಗೆ ಜೀವನ ನಡೆಸುವಳು, ಇಲ್ಲವಾದರೆ ಅವಳ ದಾರಿ ಅವಳು ನೋಡಿಕೊಳ್ಳುವಳು . ನನ್ನಿಂದಾಗಿ ಅವಳ ಬಾಳು ನಾಶವಾಗದಿರಲಿ ಎನ್ನುತ್ತಾ ಅವಳನ್ನು ಸಮೀಪಿಸಿದರು .

ರಾಜಕುಮಾರ : *"ಪ್ರಿಯತಮೆ, ನಿನ್ನಲ್ಲಿ ಒಂದು ಮಾತು ಹೇಳಬೇಕಿತ್ತು , ನನ್ನನ್ನು ತಪ್ಪಾಗಿ ಅರ್ಥೈಸಬಾರದು , ಇದು ರಹಸ್ಯವಾದ ವಿಷಯವಾಗಿದೆ ದಯವಿಟ್ಟು ನೀನಿದನ್ನು ಯಾರಲ್ಲೂ ಬಹಿರಂಗಪಡಿಸಬಾರದು"* . ನಾಚುತ್ತಾ ಅವಳು ಹೇಳಿದಳು "ನಾನು ನಿಮಗೆ ಸೀಮಿತವಲ್ಲವೇ , ಇಂದಿನಿಂದ ನಾವಿಬ್ಬರೂ ಎರಡು ಶರೀರವಾದರೂ ಒಂದೇ ಮನಸ್ಸಲ್ಲವೇ ನಮ್ಮ ಮಧ್ಯೆ ಈ ರೀತಿ ಆಮುಖವೇಕೆ..?" ಎನ್ನುತ್ತಾ ತಲೆ ತಗ್ಗಿಸಿದಳು. 

ರಾಜಕುಮಾರ  ಪ್ರಾರಂಭಿಸಿದರು "ಪ್ರಿಯತಮೆ,  ನಾನು ವೈವಾಹಿಕ ಜೀವನ ಇಷ್ಟಪಡದ ಒಬ್ಬ ವ್ಯಕ್ತಿ. ನನ್ನ ತಂದೆಯ ಬಲವಂತದಿಂದಾಗಿ ನಿನ್ನನ್ನು ನಾನು ಮದುವೆ ಆಗಿರುವೆನು. ನಾನು ಇಬಾದತ್ ಹೆಚ್ಚಿಸಲು ಇಷ್ಟಪಡುತ್ತೇನೆ, ನಿನಗೆ ನನ್ನೊಂದಿಗೆ ಹೊಂದಿಕೊಂಡು ಮುನ್ನಡೆಯಲು ಸಾಧ್ಯವಾದರೆ ಮಾತ್ರ ನನ್ನೊಂದಿಗೆ ಜೀವನ ನಡೆಸಬಹುದು . ಇಲ್ಲವಾದರೆ ನಾನು ನಿನ್ನಿಂದ ಮುಕ್ತನಾಗುವೆನು , ನನ್ನಿಂದಾಗಿ ಯಾರೂ ತೊಂದರೆ ಅನುಭವಿಸುವುದು ನಾನು ಇಷ್ಟಪಡುವುದಿಲ್ಲ" .

*ವಿವಾಹ ವಿಚ್ಛೇದನೆ*🤲

ವಧುವಿನ ಪ್ರತಿಕ್ರಿಯೆ ಏನೆಂದು ತಿಳಿಯಲು ಅವಳ ಮುಖವನ್ನು ನೋಡಿದರು ಅವಳು "ಇಲ್ಲ ರಾಜಕುಮಾರ ಖಂಡಿತವಾಗಿಯೂ ನಾನು ನಿಮ್ಮನ್ನು ಬಿಟ್ಟಿರಲ್ಲ ..! ನಿಮ್ಮನ್ನು ಉಪೇಕ್ಷಿಸಲು ನನ್ನಿಂದ ಸಾಧ್ಯವಿಲ್ಲ. ಪ್ರಥಮ ನೋಟದಲ್ಲೇ ನನ್ನ ಹೃದಯವನ್ನು ನಿಮಗೆ ನಾನು ಸಮರ್ಪಿಸಿರುವೆನು . ನಿಮ್ಮನ್ನು ಬಿಟ್ಟು ನಾನೆಲ್ಲೂ ಹೋಗುವುದಿಲ್ಲ ..!" .
ಪ್ರಿಯತಮೆಯ ಮಾತುಗಳನ್ನು ಕೇಳಿ ಬಲ್ಯರಿಗೆ ಸಂತೋಷವಾಯಿತು. "ಹಾಗಾದರೆ ಈ ವಿಷಯ ಯಾರಲ್ಲೂ ಹೇಳಬಾರದು , ಒಂದು ವೇಳೆ ನೀನು ಬಹಿರಂಗಪಡಿಸಿದರೆ ಇರು ಲೋಕದಲ್ಲೂ ನಿನಗೆ ನಾಶವಾಗುವುದು , ರಹಸ್ಯ ನೀನು ರಹಸ್ಯವಾಗಿಡುವುದಾದರೆ ಖಂಡಿತವಾಗಿಯೂ ನಿನಗೆ ಎರಡು ಲೋಕದಲ್ಲೂ ಸಂತೃಪ್ತಿ ಲಭಿಸುವುದು" ಎಂದರು , ಅವಳು ಒಪ್ಪಿಗೆ ನೀಡಿದಳು. 

ಕಾಲ ಮುಂದೆ ಚಲಿಸುತ್ತಲೇ ಇತ್ತು , ಸುಖ ಸೌಖ್ಯಗಳೊಂದಿಗೆ ಆ ದಾಂಪತ್ಯ ಮುಂದೆ ಸಾಗಿತು . ಆದರೆ ಈ ದಾಂಪತ್ಯದಲ್ಲಿ ಮಕ್ಕಳಾಗದಿರುವುದು ರಾಜನಿಗೆ ಬೇಸರ ತಂದಿತು . ಜನತೆ ರಾಜಕುಮಾರನನ್ನು ನಪುಂಸಕನೆಂದು ಹೀಯಾಳಿಸತೊಡಗಿದರು . ವಿವರ ತಿಳಿದು ರಾಜನ ಬೇಸರ ದುಪ್ಪಟ್ಟಾಯಿತು . ಕೆಲವರಂತೂ ಪತ್ನಿಯನ್ನು ಆಕ್ಷೇಪಿಸಿದರು , ಅವಳಿಗೆ ಚಿಕಿತ್ಸೆ ಬೇಕಾಗಿದೆ ಎಂದು ಹೇಳಿದರು .

ಇದರ ಕಾರಣವೇನೆಂದು ತಿಳಿಯಲು ರಾಜ ಕುಮಾರನನ್ನು ಕರೆಸಿ ಕೇಳಿದರು "ಕುಮಾರ..! ನಿನ್ನನ್ನು ಮದುವೆ ಮಾಡಿಸಿರುವುದರ ಉದ್ದೇಶ ನಿನಗೆ ಚೆನ್ನಾಗಿ ಗೊತ್ತು, ನಿನಗೇನಾದರೂ ತೊಂದರೆ ಇದೆಯೇನೋ...? ಇದ್ದರೆ ಹೇಳು ವೈದ್ಯರಲ್ಲಿ ಪರಿಹಾರ ಕೇಳೋಣ , ಅದರಲ್ಲಿ ಸಂಕೋಚವೇನೂ ತೋರಬೇಡ" .

ರಾಜಕುಮಾರ ವಿನಯದಿಂದಲೇ "ಎಲ್ಲವನ್ನೂ ನೀಡುವವನು ಅಲ್ಲಾಹನು , ಅವನ ತೀರ್ಮಾನದಂತೆಯೇ ಎಲ್ಲವೂ ನಡೆಯುವುದು . ಮಕ್ಕಳನ್ನು ದಯಪಾಲಿಸುವವನು ಅವನೇ , ಸಿಗಲಿಲ್ಲವೆಂದು ಬೇಸರಪಟ್ಟು ಏನೂ ಲಾಭವಿಲ್ಲ . ಎಲ್ಲವನ್ನೂ ಅಲ್ಲಾಹನಿಗರ್ಪಿಸಿ ಕ್ಷಮಾಶೀಲರಾಗಬೇಕು" .

ಪ್ರತಿಕ್ರಿಯೆ ನೀಡಲಾಗದೆ ರಾಜನು ಮೌನ ಪಾಲಿಸಿದ. 

ರಾಜ ರಾಜಕುಮಾರಿಯನ್ನು ಕರೆದು ಅದೇ ಪ್ರಶ್ನೆಯನ್ನು ಕೇಳಿದ . ಅವಳೂ ತನ್ನ ಗಂಡ ಹೇಳದಂತೆಯೇ ಹೇಳಿದಳು . ಕಾಲ ಚಕ್ರ ಮುಂದೆ ಸಾಗಿತು, ರಾಜನಿಗೆ ಕ್ಷಮೆ ತಾಳಲಾರದೆ  ರಾಜಕುಮಾರನನ್ನು ಕರೆದು "ನೀನು ನಿನ್ನ ಮಡದಿಯನ್ನು ತೊರೆದು ಬೇರೆ ಒಬ್ಬಳನ್ನು ಮದುವೆಯಾಗಬೇಕು" ಎಂದು ಒತ್ತಾಯಿಸಿದರು . ಬಲ್ಯರಿಗೆ ಬೇರೆ ದಾರಿ ಇಲ್ಲದೆ ರಾಜನ ಒತ್ತಡಕ್ಕೆ ಮಣಿಯಲೇಬೇಕಾಯಿತು . ಆ ಮಧುರ ದಾಂಪತ್ಯ ಜೀವನದಿಂದ ಇಬ್ಬರೂ ಬೇರ್ಪಟ್ಟರು. ಎಲ್ಲವೂ ಸೃಷ್ಟಿಕರ್ತನಾದ ಅಲ್ಲಾಹನ ನಿಶ್ಚಯವೆಂದು ಕ್ಷಮಿಸಿದರು . ಈಮಾನಿನ ಮಧುರವನ್ನು ಸವಿದ ಆ ಮನಸ್ಸುಗಳು ಅಲ್ಲಾಹನ ಯಾವ ವಿಧಿಯನ್ನು ಸ್ವೀಕರಿಸಲು ತಯಾರಾಗಿದ್ದರು. ಪರಸ್ಪರ ದುಆ ವಸಿಯ್ಯತುಗಳೊಂದಿಗೆ ಅವರಿಬ್ಬರೂ ಬೇರ್ಪಟ್ಟರು. 

ನಂತರ ರಾಜಕುಮಾರನಿಗೆ ಮಕ್ಕಳಿರುವ ಒಂದು ವಿಧವೆಯನ್ನು ಆರಿಸಿಕೊಟ್ಟರು . 
ತಪ್ಪುಗಳು ಇನ್ನು ಪುನರಾವರ್ತಿಸಬಾರದು , ಇದಾಗಿತ್ತು ರಾಜನ ಉದ್ದೇಶ. ಆದರೆ ಬಲ್ಯರಿಗೆ ಕಾರಣವೇನೆಂದು ತಿಳಿದಿರಲಿಲ್ಲ .

ಅಷ್ಟೇನೂ ಅದ್ಧೂರಿಯಿಲ್ಲದ ಆ ಮದುವೆಯೂ ನಡೆಯಿತು .ಬಲ್ಯಾ ಮೊದಲ ಪತ್ನಿಯೊಂದಿಗೆ ಹೇಳಿದ ಎಲ್ಲಾ ವಿಷಯಗಳನ್ನು ಎರಡನೇ ಪತ್ನಿಯಲ್ಲಿಯೂ ಹೇಳಿದರು. ರಹಸ್ಯ ಬಹಿರಂಗಪಡಿಸಬಾರದು ಎಂಬ ಶರತ್ತನ್ನೂ ಇಟ್ಟರು , ಅವಳು ಅದಕ್ಕೆ ಒಪ್ಪಿಗೆಯನ್ನು ಸೂಚಿಸಿದಳು . ಆ ದಾಂಪತ್ಯ ಜೀವನ ಮುಂದೆ ಸಾಗಿತು .

ದಿನಕಳೆದರೂ ಮಕ್ಕಳಾಗದಿರುವುದನ್ನು ಕಂಡು ರಾಜನು ಕುಮಾರನ ಎರಡನೇ ಪತ್ನಿಯನ್ನು ಕರೆದು ವಿವರಣೆ ಕೇಳಿದರು. ಅವಳು ಪತಿಗೆ ನೀಡಿದ ಮಾತನ್ನು ಕಡೆಗಣಿಸುತ್ತಾ ಆ ರಹಸ್ಯ ಬಯಲು ಮಾಡಿದಳು . ವಿವರಣೆ ಕೇಳುತ್ತಿದ್ದಂತೆಯೇ ರಾಜನ ಕೋಪ ನೆತ್ತಿಗೇರಿತು . 

ತಂದೆಯ ಕೋಪವನ್ನು ತಿಳಿದ ರಾಜಕುಮಾರ ಯಾರೂ ತಿಯದಂತೆ ತಡರಾತ್ರಿ ಅರಮನೆಯಿಂದ ಹೊರಟರು . ಮೊದಲೇ ಕುಮಾರನಿಗೆ ಅರಮನೆ ಸುಖಗಳಲ್ಲಿ ಆಸಕ್ತಿ ಇರಲಿಲ್ಲ . ಬೆಳಗಾಗುತ್ತಿಂದ್ದಂತೆ ರಾಜಕುಮಾರ ಕಾಣದಿರೂವುದನ್ನು ತಿಳಿದ ರಾಜ ತನ್ನ ಸೈನ್ಯವನ್ನು ಕರೆದು ಮಗನನ್ನು ಹುಡುಕಿ ತರಲು, ಹುಡುಕಿ ತರುವವರಿಗೆ ಅತ್ಯುತ್ತಮ ಬಹುಮಾನ ನೀಡುವುದಾಗಿಯೂ ಹೇಳಿ ಕಳುಹಿಸಿದರು. 
*ವಂಚಕರಿಗೆ ತಕ್ಕ ಶಿಕ್ಷೆ*

ವಿಷಯ ತಿಳಿದ ರಾಜ್ಯದ ಪ್ರಜೆಗಳೆಲ್ಲರೂ ಕುಮಾರನನ್ನು ಅರಸುತ್ತಾ ಹೊರಟರು . ರಾಜ್ಯದ ಮೂಲೆ ಮೂಲೆಗಳೂ ಪರದಾಡಿ ನೋಡಿದರು ಆದರೆ ಎಲ್ಲೂ ಕುಮಾರನನ್ನು ಕಂಡು ಬರಲಿಲ್ಲ . ದೀರ್ಘ ಹುಡುಕಾಟದ ನಂತರ ಒಂದು ವಿಭಾಗ ನಿರ್ಜನ ಪ್ರದೇಶದ ಒಂದು ಗುಹೆಯೊಳಗೆ ಹೊಕ್ಕರು ಅಲ್ಲಿ ಅಲ್ಲಾಹನ ಧ್ಯಾನದಲ್ಲಿ ಮಗ್ನರಾಗಿರುವ ತಮ್ಮ ರಾಜಕುಮಾರನನ್ನು ಕಂಡು ಅವರಿಗೆ ಸಂತೋಷವಾಯಿತು . ಬಳಿಗೆ ಬಂದು ಅರಮನೆಗೆ ಬರುವಂತೆ ಕೇಳಿಕೊಂಡರು . ಕುಮಾರನು ಅವರೊಂದಿಗೆ ಹೇಳಿದ "ನಾನಿನ್ನು ಅರಮನೆಗಿಲ್ಲ , ಆ ಸುಖ ಸೌಕರ್ಯಗಳಲ್ಲಿ ನನಗೆ ಆಸಕ್ತಿಯೂ ಇಲ್ಲ , ನೀವು ನನ್ನನ್ನು ಕಂಡ ವಿಷಯ ಯಾರಲ್ಲೂ ಹೇಳಬಾರದು, ಖಂಡಿತವಾಗಿಯೂ ನಿಮಗೆ ಎರಡು ಲೋಕದಲ್ಲೂ ಜಯಗಳಿಸಬಹುದು , ನೀವು ಹೇಳುವುದಾದರೆ ಎರಡು ಲೋಕವೂ ನಿಮಗೆ ಕಠಿಣವಾಗಿರುತ್ತದೆ" . ಅವರು ನಾವು ಯಾರಲ್ಲೂ ಹೇಳುವುದಿಲ್ಲವೆಂದು ಭರವಸೆಯನ್ನು ಇತ್ತು ಮರಳಿದರು . 
ಅವರು ಅರಮನೆ ಕಡೆಗೆ ತೆರಳುತ್ತಿದ್ದಂತೆ ರಾಜಕುಮಾರ ಬಲ್ಯರು ಮತ್ತೊಂದು ದಿಕ್ಕಿನತ್ತ ಹೊರಟಿದ್ದರು .
ಆದರೆ ಅರಮನೆಯತ್ತ ಬಂದ ಸಂಘದಲ್ಲಿನ ಒಬ್ಬನನ್ನು ಬಿಟ್ಟು ಉಳಿದವರು ಬಹುಮಾನದ ಆಸೆಯಲ್ಲಿ ಅವರು ಕಂಡ ಸ್ಥಳವನ್ನು ರಾಜನಲ್ಲಿ ಹೇಳಿದರು. ರಾಜನು ನಾಲ್ಕೈದು ಸಂಘ ಸೈನಿಕರನ್ನು ಅಲ್ಲಿಗೆ ಕಳುಹಿಸಿದನು. ಅಲ್ಪ ಸಮಯದಲ್ಲೇ ಅವರು ಬರಿಗೈಯಲ್ಲಿ ಮರಳಿದರು . ಅಲ್ಲಿ ನಮಗೆ ಯಾರೂ ಕಂಡುಬರಲಿಲ್ಲವೆಂದು ಸೈನಿಕರು ರಾಜನಲ್ಲಿ ಹೇಳಿದಾಗ ರಾಜನಿಗೆ ಆ ಸ್ಥಳವನ್ನು ಸೂಚಿಸಿದ ಆ ಸಂಘದವರ ಮೇಲೆ ಎಲ್ಲಿಲ್ಲದ ಕೋಪ ಬಂದು ಅವರನ್ನು ಕೊಲ್ಲಲು ಆಜ್ಞೆ ಇತ್ತನು.  ಅವರು ಏನಾದರೂ ಹೇಳಬೇಕೆಂದು ಬಾಯಿ ತೆರೆಯುವ ಮುನ್ನವೇ ಶಿಕ್ಷೆಗೆ ಗುರಿಯಾದರು .


ತನ್ನ ನನ್ನ ಒಬ್ಬನೇ ಒಬ್ಬ ಮಗ ತನಗೆ ನಷ್ಟವಾಗಿರುತ್ತಾನೆ, ಇದರಿಂದ ಬೇಸರಗೊಂಡ ರಾಜನಿಗೆ ಪ್ರತಿ ವಿಷಯಕ್ಕೂ ಕೋಪ ಉಕ್ಕೇರತೊಡಗಿತು . ದಿನದಿಂದ ದಿನಕ್ಕೆ  ರಾಜನ ಸ್ವಭಾವದಲ್ಲಿ ಬದಲಾವಣೆ ಉಂಟಾಗ ತೊಡಗಿತು . ಇಷ್ಟೆಲ್ಲಾ ಅವಘಡಕ್ಕೆ ಕಾರಣವಾದ ತನ್ನ ಮಗನ ಎರಡನೇ ಪತ್ನಿಯನ್ನು ಕೊಲ್ಲಲು ಆಜ್ಞೆ ಇತ್ತನು . ರಾಜನ ಆಜ್ಞೆಯಂತೆ ಅವಳನ್ನು ಕೊಲ್ಲಲಾಯಿತು . ಪತಿಯ ರಹಸ್ಯವನ್ನು ಬಯಲು ಮಾಡಿದ ಎರಡನೇ ಪತ್ನಿಯ ಇಹಲೋಕ ನಶ್ಟವಾಯಿತು ಅದರಂತೆ ಮದುವೆಯ ದಿನದಂದು ಪ್ರತಿಯು ಹೇಳಿದ ಮಾತು ಅಕ್ಷರಶಃ ಸತ್ಯವಾಯಿತು . 

ಅರಮನೆಯಲ್ಲಿ ನಡೆದ ವಿಷಯವು ಕಾಡ್ಗಿಚ್ಚಿನಂತೆ ಹರಡಲು ಹೆಚ್ಚು ಸಮಯ ಬೇಕಾಗಲಿಲ್ಲ . ಮೊದಲ ಪತ್ನಿಗೂ ವಿಷಯ ತಿಳಿಯಿತು ಅದರಂತೆ ರಾಜಕುಮಾರನನ್ನು ಹುಡುಕಲು ಹೋಗಿ ರಹಸ್ಯ ಸಂರಕ್ಷಿಸಿದ ಮತ್ತೊಬ್ಬ ವ್ಯಕ್ತಿಗೂ ವಿಷಯ ತಿಳಿಯಿತು.  ತಾವು ತಪ್ಪು ಮಾಡಿಲ್ಲವಾದರೂ ರಾಜನ ರೋಶಕ್ಕೆ ತಪ್ಪು ಸರಿ ಎಂದೇನೂ ಇಲ್ಲ..!  , ತಮ್ಮನ್ನು ಕೊಲ್ಲವರೇನೋ ಎಂದು ಭಯಪಟ್ಟು ಮೊದಲ ಪತ್ನಿ ಊರು ಬಿಟ್ಟಳು . ಅದೇ ಸಮಯ ಮತ್ತೊಂದೆಡೆಯಲ್ಲಿ ರಹಸ್ಯ ಸಂರಕ್ಷಿಸಿದ ಆ ವ್ಯಕ್ತಿಯೂ ಊರು ಬಿಟ್ಟಿದ್ದನು . ಅಲ್ಲಾಹನ ವಿಧಿಯಂತೆ ಎಲ್ಲೆಂದರಲ್ಲಿ ಅಲೆದಾಡಿ ಯಾವುದೋ ಒಂದು ರಾಜ್ಯದಲ್ಲಿ ಇಬ್ಬರೂ ಸಂಧಿಸಿದರು . ಅವರಿಬ್ಬರ ಆ ಬೇಠಿ ಅವರಿಗೆ ಅನುಗ್ರಹವಾಯಿತು . ಎಲ್ಲವೂ ಅಲ್ಲಾಹ ವಿಧಿಯಂತೆ ನಡೆಯಿತು . ಒಳ್ಳೆಯವರಾದ ಅವರಿಬ್ಬರೂ ಪರಸ್ಪರ ಒಂದಾಗಿ , ಅವರು ವಿವಾಹವಾದರು ರಹಸ್ಯ ಸಂರಕ್ಷಿಸಿದ ಮಹಿಳೆಗೆ ರಹಸ್ಯ ಸಂರಕ್ಷಿಸಿದ ವ್ಯಕ್ತಿಯನ್ನೇ ಪತಿಯಾಗಿ ಲಭಿಸಿತು . ಆ ದಾಂಪತ್ಯ ಜೀವನದಲ್ಲಿ ಅವರಿಗೆ ಮೂರು ಮಕ್ಕಳುಂಟಾಯಿತು . ಕಾಲ ಕಳೆದಂತೆ ಪತಿ ಮರಣ ಹೊಂದಿದನು , ಅವಳು ವಿಧವೆಯಾದಳು . ಹೀಗಿರುವಾಗ ಆ ರಾಜ್ಯದ ಅಧಿಕಾರ ಒಬ್ಬ ಧರ್ಮ ವಿರೋಧಿಯಾದ ರಾಜನ ತೆಕ್ಕೆಗೆ ಸೇರಿತು. ಆತ ವಿಶ್ವಾಸಿಗಳನ್ನು ಹುಡುಕಾಡಿ ಕೊಲ್ಲಲು ಆಜ್ಞೆಗಳನ್ನು ಹೊರಡಿಸಿದನು . ಈ ಮಹಿಳೆ ಮತ್ತು ತನ್ನ ಮೂರು ಮಕ್ಕಳು ರಾಜನ ಅಧೀನದಲ್ಲಿ ಸೆರೆಯಾದರು . ಬಲವಂತದಿಂದ ಧರ್ಮವನ್ನು ತೊರೆಯಲು ಚಿತ್ರಹಿಂಸೆ ನೀಡಿದನು . ಆ ಮಹಿಳೆಯ ಈಮಾನಿನ ಶಕ್ತಿಯ ಮುಂದೆ ರಾಜನ ಪ್ರಯತ್ನ ಶೂನ್ಯವಾಯಿತು. ಎಲ್ಲರನ್ನೂ ಕೊಲ್ಲಲು ಆಜ್ಞಾಪಿಸಿದನು. ಒಂದು ದೊಡ್ಡ ಪಾತ್ರೆಯಲ್ಲಿ ನೀರು ಕಾಯಿಸಿ ಕುದಿಯುವ ಬಿಸಿ ನೀರಿಗೆ ಎಲ್ಲರನ್ನೂ ಎಸೆದು ಕೊಲ್ಲಲು ತೀರ್ಮಾನಿಸಿದನು . ಅವರನ್ನು ತಂದು ಕುದಿಯುತ್ತಿರುವ ನೀರಿನ ಮುಂದೆ ನಿಲ್ಲಿಸಿ "ಸತ್ಯ ವಿಶ್ವಾಸವನ್ನು ತೊರೆಯದಿದ್ದರೆ , ಈ ಮಕ್ಕಳನ್ನು ಕುದಿಯುವ ನೀರಿಗೆ ಹಾಕಲು ರಾಜನ ಆಜ್ಞೆ ಆಗಿದೆ" . ಆದರೆ ಆ ಮಹದಿಯ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ , ಅದು ಆ ಮಹದಿಯ ಈಮಾನಿನ ಶಕ್ತಿ ಆಗಿತ್ತು . ಸೈನಿಕರು ಮೂರು ಮಕ್ಕಳಲ್ಲಿ ಮೊದಲನೆಯವನನ್ನು ಎತ್ತಿ ಕುದಿಯುವ ನೀರಿಗೆಸೆದರು . ಆದರೂ ಮಹದಿಯಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ . ಎರಡನೇ ಮಗುವನ್ನು ಎತ್ತಿ ಎಸೆದರು. 

ಇನ್ನಿರುವುದು ಚಿಕ್ಕ ಮಗುವಾಗಿದೆ, ಈಗ ಆ ಮಹದಿ ಮಗುವಿನ ಮುಗ್ಧ ಮುಖವನ್ನು ಕಂಡು ಸ್ವಲ್ಪ ಹಿಂದೆ ಸರಿದಳೇನೋ..? ಆಗ ಆ ಮುಗ್ಧ ಮಗು ಮಾತನಾಡಿತು "ಅಮ್ಮಾ... ನನ್ನನ್ನೂ ಎಸೆಯಲಿ ನೀನು ಹಿಂಜರಿಯಬೇಡ , ನಾವು ಸ್ವರ್ಗ ಲೋಕದಲ್ಲಿ ಸಂದಿಸೋಣ..'' ಹಾಗೆ ಮಗುವನ್ನೂ ಎಸೆಯಲ್ಪಟ್ಟಿತು .

ಕೊನೆಗೆ ಅವರ ಸರದಿ ಬಂತು , ಅವರನ್ನು ಅದಕ್ಕೆ ಎಸೆಯುವ ಮುನ್ನ ಸೈನಿಕರು ಅವರ ಕೊನೇ ಆಗ್ರಹವೇನೆಂದು ಕೇಳಿದರು ಆಗ ಆ ಮಹದಿ ಹೇಳಿದರು "ನನ್ನನ್ನೂ ನನ್ನ ಮಕ್ಕಳನ್ನೂ ನನ್ನ ಪತಿಯ ಸಮೀಪದಲ್ಲೇ ಧಫನ ಮಾಡಬೇಕು" .

ಅವರ ಕೊನೇ ಆಗ್ರಹ ಪೂರ್ತಿಗೊಳಿಸಿದರು . ಅವರೆಲ್ಲರನ್ನೂ ಅದರ ಸಮೀಪದಲ್ಲೇ ಧಫನ ಮಾಡಲಾಯಿತು .

ಓ ಪ್ರವಾದಿಯವರೇ.... ಅವರುಗಳ ಖಬರಿನಿಂದ ಬರುವ ಪರಿಮಳವಾಗಿದೆ ನೀವು ಈಗ ಅನುಭವಿಸುತ್ತಿರುವ ಸುಗಂಧ . ಜಿಬ್ರೀಲ್ (ಅಸ) ಕಥೆ ಹೇಳಿ ಮುಗಿಸಿದರು .

*ಐನುಲ್ ಹಯಾತ್*

ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರಿಗೆ ಅಂತ್ಯ ದಿನದ ವರೆಗೆ ಆಯುಷ್ಯ ಲಭಿಸಲು ಕಾರಣವೇನೆಂದು ಉಲೆಮಾ ಶ್ರೇಷ್ಠರಿಗೆ ಹಲವು ಅಭಿಪ್ರಾಯಗಳಿವೆ. 
ಐನುಲ್ ಹಯಾತ್ ಎಂಬ ಒಂದು ಜಲಾಶಯದಿಂದ ಯಾರಾದರೂ ನೀರು ಕುಡಿದರೆ ಅವನಿಗೆ ಅಂತ್ಯ ದಿನದ ವರೆಗೂ ಆಯುಷ್ಯ ಲಭಿಸುವುದು ಎಂದಾಗಿದೆ ವಿಶ್ವಾಸ. 

ಅರಮನೆಯಿಂದ ಪಲಾಯನಗೈದ ನಂತರ ಈ ಜಲಾಶಯದಿಂದ ನೀರು ಕುಡಿದ ಕಾರಣದಿಂದಾಗಿದೆ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರಿಗೆ ಅಂತ್ಯ ದಿನದ ವರೆಗೆ ಆಯುಷ್ಯ ಲಭಿಸಲು ಕಾರಣವೆಂದು ಉಲಮಾ ಪಕ್ಷದ ಅಭಿಪ್ರಾಯ. 

ಮತ್ತೊಂದು ಅಭಿಪ್ರಾಯವೆಂದರೆ ದುಲ್-ಖರ್ನೈನ್ ಚಕ್ರವರ್ತಿಗೆ ಒಬ್ಬ ಗೆಳೆಯನಿದ್ದ . ಅದು ಮನುಷ್ಯನಾಗಿರಲಿಲ್ಲ ಅದು ಒಂದು ಮಲಕ್ ಆಗಿತ್ತು , ಹೆಸರು ಸನಾಖಿಲ್ .

 ಒಮ್ಮೆ ಚಕ್ರವರ್ತಿ ಸನಾಖಿಲ್ ನೊಂದಿಗೆ ಐನುಲ್ ಹಯಾತ್ ಇರುವ ಸ್ಥಳವನ್ನು ಕೇಳಿದರು. ಮಲಕ್ ಅದು ಇರುವ ಸ್ಥಳ ಹೇಳಿತು . ಚಕ್ರವರ್ತಿಯ ಮಂತ್ರಿಯಾಗಿದ್ದ ಹಿಲ್ರ್ ನೆಬಿಯ ನಾಯಕತ್ವದಲ್ಲಿ ಸೇನೆಯೊಂದಿಗೆ ಐನುಲ್ ಹಯಾತ್ ಜಲಾಶಯವನ್ನು ಅರಸುತ್ತಾ ಹೊರಟರು .

ದೀರ್ಘ ಪ್ರಯಾಣದ ನಂತರ ಭೂಮಿಯ ಇರುಳು ಕವಿದ ಒಂದು ಪ್ರದೇಶ ತಲುಪಿದರು. ಒಂದು ಪರ್ವತದ ಸಮೀಪ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರಿಗೆ ಆ ಜಲಾಶಯ ಕಂಡಿತು. ಅವರು ಅದರಿಂದ ನೀರನ್ನು ಕುಡಿದು ಅದರಲ್ಲಿ ಸ್ನಾನ ಮಾಡಿದರು . ಹಿಲ್ರ್ ನಬಿಯವರ ಹಿಂದೆ ಬಂದಂತಹ ಸೈನಿಕರಿಗಾಗಲೀ ಚಕ್ರವರ್ತಿಗಾಗಲೀ ಆ ಜಲಾಶಯ ಕಾಣಲು ಸಾಧ್ಯವಾಗಲಿಲ್ಲ .(ಇದು ಅಸಾಕಿರ್(ರಅ) ರವರ ಅಭಿಪ್ರಾಯ. 

ಪ್ರಯಾಣ ಮಧ್ಯೆ ಚಕ್ರವರ್ತಿ ಮತ್ತು ಮಲಕ್ ಒಂದು ಕೋಟೆಯೊಳಗೆ ಸಂಧಿಸಿದರು. ಮಲಕ್ ಚಕ್ರವರ್ತಿಗೆ ಒಂದು ಕಲ್ಲನ್ನು ನೀಡಿ ಮರಳಿತು . ಆ ಕಲ್ಲಿನ ಕುರಿತಾಗಲೀ ಚಕ್ರವರ್ತಿಗೆ ಏನೂ ಅರ್ಥವಾಗಲಿಲ್ಲ. 

ಮರಳಿ ಬಂದ ಚಕ್ರವರ್ತಿ ತನ್ನ ಸೈನ್ಯದಲ್ಲಿರುವ ಪಂಡಿತರೊಂದಿಗೆ ಆ ಕಲ್ಲಿನ ಬಗ್ಗೆ ಕೇಳಿದರು. ಅವರು ಅದನ್ನು ಪರೀಕ್ಷಿಸಿ ನೋಡಿದರು . ಅದರ ತೂಕವನ್ನಳೆಯಲು ಒಂದು ತಕಡಿಯಲ್ಲಿಟ್ಟರು . ಆಶ್ಚರ್ಯವೇನಂದರೆ ತಕಡಿಯ ಮತ್ತೊಂದು ಭಾಗದಲ್ಲಿ ಎಷ್ಟು ಕಲ್ಲುಗಳನ್ನಿಟ್ಟರೂ ಮಲಕ್ ನೀಡಿದ ಆ ಕಲ್ಲು ಸ್ವಲ್ಪವೂ ಅಲುಗಾಡಲಿಲ್ಲ . ಅವರಿಗೆ ಅದರ ರಹಸ್ಯವೇನೆಂದು ತಿಳಿಯಲಿಲ್ಲ . ಅವರು ತಮ್ಮ ಮಂತ್ರಿಗಳಾದ ಹಿಲ್ರ್ ನಬಿಯವರಲ್ಲಿ ಆ ಕಲ್ಲಿನ ರಹಸ್ಯ ಹೇಳಬೇಕೆಂದರು. 

ಸ್ವಲ್ಪ ಅಲೋಚಿಸಿದ ನಂತರ ಅವರು ತೂಕದ ಇನ್ನೊಂದು ತುದಿಯಲ್ಲಿ ಕಲ್ಲಿಟ್ಟು ಅದರ ಮೇಲೆ ಸ್ವಲ್ಪ ಮಣ್ಣನ್ನು ಸುರಿದರು . ಆಗ ತೂಕವು ಅಲುಗಾಡಿತು ತೂಕದ ಕಲ್ಲಿಟ್ಟ ಭಾಗವು ಮೇಲೆದ್ದಿತು . ಹಿಲ್ರ್ ನಬಿಯವರು ಹೇಳಿದರು ಇದು ಮನುಷ್ಯ ಉದಾಹರಣೆಯನ್ನು ಆ ಕಲ್ಲಿನ ಮೂಲಕವಾಗಿದೆ ಮಲಕ್ ನಮಗೆ ವ್ಯಕ್ತಪಡಿಸಿರುವುದು .

ಮಣ್ಣಿಟ್ಟು ಹೂಳುವ ತನಕ ಮನುಷ್ಯನ ಆಸೆ ಆಗ್ರಹಗಳು ಮನುಷ್ಯನನ್ನು ಶರಣಾಗಿಸುತ್ತಲೇ ಇರುತ್ತದೆ . ಮಣ್ಣಿನಡಿಗೆ ತಲುಪುವ ತನಕ ಅವನಿಗೆ ಯಾವುದೂ ಸಾಕಾಗುವುದಿಲ್ಲ .

ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರ ವಿವರಣೆಯನ್ನು ಕೇಳಿದ ಸೈನ್ಯ ಪ್ರಮುಖರು ಅವರ ಜ್ಞಾನವನ್ನು ಅಭಿನಂದಿಸಿ , ಅವರನ್ನು  ಗೌರವಿಸಿದರು .

*ಆದಂ ನಬಿಯವರ(ಅಸ) ವಸಿಯ್ಯತ್*

ಆದಿಮ ಮನುಷ್ಯರೂ ಪ್ರಥಮ ಪ್ರವಾದಿಯೂ ಆಗಿದ್ದ ಆದಂ ನಬಿ(ಅಸ) ರವರು ತಮ್ಮ ಮರಣ ಸಮೀಪಿಸಿದ ಸಂದರ್ಭದಲ್ಲಿ ತನ್ನ ಮಕ್ಕಳನ್ನು ಕರೆದು "ಮುಂಬರುವ ಕಾಲದಲ್ಲಿ ಒಂದು ದೊಡ್ಡ ಪ್ರಳಯ ಉಂಟಾಗಲಿದೆ ಆಗ ನನ್ನ ಶರೀರವನ್ನು ಹಡಗಿನಲ್ಲಿ ಹೊತ್ತೊಯ್ಯಬೇಕು ಮತ್ತು ನಾನು ಹೇಳುವ ಸ್ಥಳದಲ್ಲಿ ಧಫನ ನಡೆಸಬೇಕು" ಎಂದು ವಸಿಯ್ಯತ್ ಮಾಡಿದರು . ಆದಂ ನಬಿಯವರು ತಮ್ಮ ಮಕ್ಕಳಿಗೆ ಆ ಸ್ಥಳವನ್ನು ಸೂಚಿಸಿದರು . 

ಅವರು ಹೇಳಿದಂತೆ ಪ್ರಳಯ ನಡೆಯಿತು , ಅವರ ಶರೀರವನ್ನು ಹಡಗಿನಲ್ಲಿ ಇಟ್ಟರು .
ತಿಂಗಳುಗಳ ಕಾಲ ನೀರಿನಲ್ಲಿ ತೇಲಾಡಿದ ಹಡಗು ಕೊನೆಗೆ ಜೂದೀ ಪರ್ವತ ಸೇರಿತು . ಆದಂ ನಬಿಯವರ ವಸಿಯ್ಯತಿನಂತೆ ಅವರ ಶರೀರವನ್ನು ಧಫನ ಮಾಡಲು ಹಝ್ರತ್ ನೂಹ್ ನಬಿ (ಅಸ) ತಮ್ಮ ಮಕ್ಕಳಿಗೆ ಹೇಳಿದರು. 

ಮಕ್ಕಳು ಹೇಳಿದರು: "ಯಾರೂ ಇಲ್ಲದ ಈ ಏಕಾಂತತೆಯಲ್ಲಿ ಧಫನ ಮಾಡಲು ನಮ್ಮಿಂದ ಸಾಧ್ಯವಿಲ್ಲ" ಎಂದು ಹಿಂಜರಿದರು .

ನೂಹ್ ನಬಿ : "ಮಕ್ಕಳೇ.. ನಮ್ಮೆಲ್ಲರ ತಂದೆಯವರಾದ ಆದಂ ನಬಿ ಪ್ರಾರ್ಥಿಸಿದ್ದರು ತನ್ನನ್ನು ಧಫನ ಮಾಡುವವರಿಗೆ ದೀರ್ಘಾಯುಷ್ಯ ನೀಡಬೇಕೆಂದು. 
ಆದರೆ ಧಫನ ಮಾಡಲು ಯಾರಿಗೂ ಧೈರ್ಯ ಬರಲಿಲ್ಲ . ಆ ಶರೀರ ಮತ್ತೆ ಹಲವಾರು ವರ್ಷಗಳ ಕಾಲ ಹಡಗಿನಲ್ಲೇ ಉಳಿಯಿತು . ಪ್ರವಾದಿಗಳ ಶರೀರ ಭೂಮಿ ಭಕ್ಷಿಸುವುದಿಲ್ಲ.!!

ಅದೆಷ್ಟೋ ವರ್ಷಗಳ ನಂತರ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಆ ಶರೀರವನ್ನು ನಿಶ್ಚಯಿಸಲ್ಪಟ್ಟ ಸ್ಥಳದಲ್ಲಿ ಧಫನ ಮಾಡಿದರು .

ಆದ್ದರಿಂದಲೇ ಆದಂ ನಬಿಯವರ (ಅಸ) ಪ್ರಾರ್ಥನೆಯೂ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರಿಗೆ ಲಭಿಸಿತು. 

*ಗುಲಾಮರಾದ ಸಂದರ್ಭ*

ಹಿಲ್ರ್ ನಬಿ ಒಂದು ದಾರಿಯಲ್ಲಿ ನಡೆಯುತ್ತಿರುವಾಗ ಎಲ್ಲಿದಲೋ ಬಂದ ಒಬ್ಬ ಭಿಕ್ಷುಕ ಹತ್ತಿರ ಬಂದು ಹೇಳಿದ "ನಿಶ್ಚಯಿಸಲ್ಪಟ್ಟ ದಿವಸದೊಳಗೆ ದೊಡ್ಡ ಮೊತ್ತ ಒಟ್ಟುಗೂಡಿಸಬೇಕಿದೆ ಅದಕ್ಕಾಗಿ ನೀವೇನಾದರೂ ನೀಡಬೇಕು , ಅಲ್ಲಾಹನು ನಿಮ್ಮನ್ನು ಅನುಗ್ರಹಿಸಲಿ.  

ಹಿಲ್ರ್ ನಬಿ(ಅಸ) ಹೇಳಿದರು "ಅಲ್ಲಾಹನು ನಿಮ್ಮ ಕಾರ್ಯವನ್ನು ಸುಲಭಗೊಳಿಸಲಿ, ನಿಮಗೆ ನೀಡಲು ನನ್ನಲ್ಲಿ ಏನೂ ಇಲ್ಲ"

ಭಿಕ್ಷುಕ ಬಿಡುವಂತಿರಲಿಲ್ಲ "ಹಾಗೆ ಹೇಳಬಾರದು , ನೀವೊಬ್ಬರು ಒಳ್ಳೆಯ ವ್ಯಕ್ತಿಯಂತೆ ಕಾಣುತ್ತೀರಿ, ಆದ್ದರಿಂದಲೇ ನಾನು  ನಿಮ್ಮನ್ನು ಸಮೀಪಿಸಿರುವೆ ನನ್ನ ಬರಿಗೈಯಲ್ಲಿ ಮರಳಿಸಬೇಡಿ" .

ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಮೊದಲು ಹೇಳಿದಂತೆಯೇ ಪುನಃ ಹೇಳಿದರು.  ಆಗ ಆತ "ಅಲ್ಲಾಹನನ್ನು ಮುನ್ನಿಟ್ಟು ನಿಮ್ಮಲ್ಲಿ ಕೇಳುವೆನು ಏನಾದರೂ ನೀಡಲೇ ಬೇಕು"

ಈ ಬಾರಿ ಹಿಲ್ರ್ ನಬಿಯವರು ಸಿಕ್ಕಿಹಾಕಿಕೊಂಡರು , ಅಲ್ಲಾಹನನ್ನು ಮುಂದಿಟ್ಟು ಕೇಳಿರುತ್ತಾನೆ, ಏನಾದರೂ ಕೊಡಲೇ ಬೇಕು . ಕೊಡಲು ನನ್ನಲ್ಲಿ ಏನೂ ಇಲ್ಲ , ಕೊಡದೇ ಇರಲೂ ಸಾಧ್ಯವಿಲ್ಲ. ಏನು ಮಾಡಲಿ..?

ಕೊನೆಗೆ ಹಿಲ್ರ್ ನಬಿ ಅಲೈಹಿ ಸ್ಸಲಾಂ ಹೇಳಿದರು "ನೀನು ಅಲ್ಲಾಹನನ್ನು ಮುದಿಟ್ಟು ಕೇಳಿರುವೆ, ನಿನ್ನನ್ನು ಬರಿಗೈಯಲ್ಲಿ ಕಳುಹಿಸಲು ಸಾಧ್ಯವಿಲ್ಲ ಆದ್ದರಿಂದ ನೀನು ನನ್ನನ್ನು ಕೊಂಡುಹೋಗಿ ಸಂತೆಯಲ್ಲಿ ಮಾರಾಟಕ್ಕಿಡು" . ಆತ ಬಹಳ ಸಂತೋಷದಿಂದಲೇ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರೊಂದಿಗೆ ಸಂತೆಯ ಕಡೆಗೆ ನಡೆದ . 

ಸಂತೆ ತಲುಪಿದರು ಮನುಷ್ಯರನ್ನು ಮೃಗಗಳಂತೆ ಮಾರಾಟ ಮಾಡುವ ಕಾಲವದು.  ಹಿಲ್ರ್ ನಬಿಯವರನ್ನು ನಾನ್ನೂರ ಐವತ್ತು ಬೆಳ್ಳಿ ನಾಣ್ಯಕ್ಕೆ ಮಾರಿದನು. ಸಿಕ್ಕಿದ ಹಣದೊಂದಿಗೆ ಆತ ನಗುತ್ತಲೇ ಸಂತೋಷದಿಂದ ಹೊರಟ .

ಹಿಲ್ರ್ ನಬಿ ಅಲೈಹಿ ಸ್ಸಲಾಂ ತನ್ನನ್ನು ಖರೀದಿಸಿದ ಹೊಸ ಯಜಮಾನನೊಂದಿಗೆ ಹೊರಟರು . ಎಲ್ಲವೂ ಜಗದೊಡೆಯನ ವಿಧಿ ಎನ್ನುತ್ತಾ ಕ್ಷಮಿಸಿದರು. 

ಮನೆಗೆ ತಲುಪಿದ ಯಜಮಾನ ತನ್ನ ಗುಲಾಮರಾದ ಹಿಲ್ರ್ ನಬಿಯವರಿಗೆ ಯಾವುದೇ ಕೆಲಸವನ್ನು ನೀಡಲಿಲ್ಲ . ದಿನ ಕಳೆಯುತ್ತಲಿತ್ತು , ಯಾವುದೇ ಕೆಲಸಗಳಿಲ್ಲದೆ ಸುಮ್ಮನೆ ಕೂರುವುದೇ ದನಚರಿಯಂತಾಯಿತು .

ಒಮ್ಮೆ ಹಿಲ್ರ್ ನಬಿ ಅಲೈಹಿ ಸ್ಸಲಾಂ ಯಜಮಾನನಲ್ಲಿ ಕೇಳಿದರು "ನೀವು ನನ್ನನ್ನು ಹಣ ಕೊಟ್ಟು ಖರೀದಿಸಿರುವಿರಿ , ಮತ್ಯಾಕೆ ನನಗೆ ಯಾವುದೇ ಕೆಲಸ ನೀಡುತ್ತಿಲ್ಲ..?" .

ಯಜಮಾನ "ನೀವು ವೃದ್ಧರಲ್ಲವೇ...ಹಾಗಿರುವಾಗ ನಿಮಗೆ ತೊಂದರೆ ಕೊಡುವುದು ನನಗಿಷ್ಟವಿಲ್ಲ" ಎಂದಾಗ ,

ಹಿಲ್ರ್ ನಬಿ ಅಲೈಹಿ ಸ್ಸಲಾಂ ಹೇಳಿದರು "ನನಗೇನೂ ತೊಂದರೆ ಇಲ್ಲ ಯಾವ ಕೆಲಸ ಬೇಕಾದರೂ ನಾನು ಮಾಡಬಲ್ಲೆ" .

ಯಜಮಾನ "ಹಾಗಾದರೆ ಈ ಕಲ್ಲುಗಳನ್ನು ಮನೆಯ ಹಿಂದೆ ಕೊಂಡುಹೋಗಿ ಇಡು" .

ತಲೆದೂಗುತ್ತಾ ತನ್ನ ಕೆಲಸದತ್ತ ಹೊರಟ ಹಿಲ್ರ್ ನಬಿಯವರು ಶಕ್ತರಾದ ಆರು ಜನರು ದಿನ ಪೂರ್ತಿ ಮಾಡಬೇಕಾದ ಕೆಲಸ ಒಂದು ಗಂಟೆಯಲ್ಲಿ ಅಲ್ಲಾಹನ ಮಲಕಿನ ಸಹಾಯದೊಂದಿಗೆ ಪೂರ್ತಿಗೊಳಿಸಿ ಯಜಮಾನನನ್ನು ಸಮೀಪಿಸಿ "ನೀವು ಹೇಳಿದ ಕೆಲಸ ಪೂರ್ತಿ ಮಾಡಿ ಆಯಿತು" ಎಂದಾಗ ಯಜಮಾನನಿಗೆ ಆಶ್ಚರ್ಯವಾಯಿತು. 

ಈ ವ್ಯಕ್ತಿ ಸಾಮಾನ್ಯ ವ್ಯಕ್ತಿ ಆಗಿರಲಾರ....! ಮರುದಿನ ಯಜಮಾನನು ಹೇಳಿದನು "ನೀವು ವಿಶ್ವಾಸ ಯೋಗ್ಯರೆಂದು ಮನದಟ್ಟಾಗಿದೆ . ನಾಳೆ ನಾನು ಪ್ರಯಾಣ ಹೊರಡುತ್ತಿರುವೆನು , ನಾನು ಮರಳಿ ಬರುವ ತನಕ ಮನೆ ಮತ್ತು ಮನೆಯವರನ್ನು ಚೆನ್ನಾಗಿ ನೋಡಬೇಕು" .

ಹಿಲ್ರ್ ನಬಿ "ಅದರ ಒಟ್ಟಿಗೆ ಏನಾದರೂ ಕೆಲಸವೂ ನೀಡುತ್ತಿದ್ದರೆ ಒಳ್ಳೆಯದಾಗುತ್ತಿತ್ತು" . ಯಜಮಾನ "ಅದು ನಿಮಗೆ ತೊಂದರೆ ಅಲ್ಲವೇ..? ಒಳ್ಳೆಯವರಾದ ನಿಮಗೆ ತೊಂದರೆ ನೀಡಲು ನಾನು ಇಷ್ಟಪಡುವುದಿಲ್ಲ" ಎಂದಾಗ , ಹಿಲ್ರ್ ನಬಿ "ನನಗೇನೂ ತೊಂದರೆ ಇಲ್ಲ ಕೆಲಸವೇನೆಂದು ಹೇಳಿದರೆ ಸಾಕು" .

ಯಜಮಾನ "ಹಾಗಾದರೆ ಸ್ವಲ್ಪ ಇಟ್ಟಿಗೆಗಳನ್ನು ತಯಾರಿಸಿಡು , ನಾನು ಮರಳಿದ ನಂತರ ಒಂದು ಮನೆ ಕಟ್ಟುವ ಉದ್ದೇಶವಿದೆ" . ಯಜಮಾನನನ್ನು ಪ್ರೀತಿಯಿಂದಲೇ ಕಳುಹಿಸಿಕೊಟ್ಟಿದ್ದರು . 

ಹಲವು ದಿನಗಳ ಬಳಿಕ ಮರಳಿದ ಯಜಮಾನ ನಿಗೆ ತನ್ನ ಕಣ್ಣುಗಳನ್ನೇ ನಂಬಲಾರದಂತಾದರು . ತನ್ನ ಕಣ್ಣ ಮುಂದೆ ಕಂಗೊಳಿಸುತ್ತಿರುವ ಅತಿ ಸುಂದರವಾದ ಮನೆ ಅದೂ ಅಲ್ಪಾವದಿಯಲ್ಲಿ ನಿರ್ಮಿಸಲ್ಪಟ್ಟಿದೆ. ಇಟ್ಟಿಗೆಗಳನ್ನು ತಯಾರಿಸಿಡಲು ಹೇಳದಾಗ ತನ್ನ ಗುಲಾಮ ಇಟ್ಟಿಗೆ ತರಾರಿಸಿದ್ದಲ್ಲದೆ , ಮನೆಯನ್ನೂ ನಿರ್ಮಿಸಿಟ್ಟಿದ್ದಾನೆ . ಇದೇನಿದು..! ಮಹಾಶ್ಚರ್ಯ...! , ಅದೂ ಹತ್ತು ಹದಿನೈದು ಮಂದಿ ತಿಂಗಳು ಗಟ್ಟಲೆಯಲ್ಲಿ ಮಾಡಬೇಕಾದ ಕಾರ್ಯ , ಈತ ಒಬ್ಬನೇ ಒಂದೆರಡು ದಿನಗಳಲ್ಲಿ ಮಾಡಿ ಮುಗಿಸಿದ್ದಾನೆ, ಈತ ಸಾಮಾನ್ಯ ವ್ಯಕ್ತಿ ಆಗಿರಲು ಸಾಧ್ಯವೇ ಇಲ್ಲ, ಈ ವ್ಯಕ್ತಿ ಯಾರಾಗಿರಬಹುದು..?

*ಗುಲಾಮ ಮುಕ್ತಿ*

ತಾನು ನೆನೆಸಿರುವುದಕ್ಕಿಂತಲೂ ಅಂದವಾದ ಮನೆ , ಇಷ್ಟು ಕಡಿಮೆ ಸಮಯದಲ್ಲಿ ಇವರಿಂದ ಇದನ್ನು ನಿರ್ಮಿಸಲು ಹೇಗೆ ಸಾಧ್ಯವಾಯಿತು ಎಂದು ಯಜಮಾನನಿಗೆ ಆಶ್ಚರ್ಯವಾಯಿತು. 
ಮೊದಲೇ ಇವರಲ್ಲಿ ಸಂಶಯವಿದ್ದಿರೂವುದರಿಂದ ಇವರು ಸಾಮಾನ್ಯ ವ್ಯಕ್ತಿಯಲ್ಲವೆಂದು ಯಜಮಾನನಿಗೆ ಮನದಟ್ಟಾಯಿತು. 

ಇನ್ನು ಕಾಯೂವುದು ಬೇಡ ಅವರಲ್ಲೇ ಕೇಳೋಣವೆಂದು , ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರನ್ನು ಕರೆದು "ನೀವೂ ಸಾಮಾನ್ಯ ವ್ಯಕ್ತಿಯಲ್ಲವೆಂದು ನನಗೆ ಮೊದಲೇ ಸಂಶಯವಿತ್ತು ಈಗ ಅದು ದುಪ್ಪಟ್ಟಾಯಿತು. ನಿಜವಾಗಿ ನೀವು ಯಾರು..?" .

ಹಿಲ್ರ್ ನಬಿ "ಯಜಮಾನರೆ ನಿಮಗೆ ಸಂಶಯವೇಕೆ ನಾನು ನಿಮ್ಮ ಗುಲಾಮ" ಎಂದರು . ಯಜಮಾನ "ಅಲ್ಲಾಹನನ್ನು ಸಾಕ್ಷಿಯಾಗಿಸಿ ಕೇಳುತ್ತಿರುವೆ ಸತ್ಯ ಹೇಳು" . 

ಈಗ ಸತ್ಯವನ್ನು ಹೇಳಲೇ ಬೇಕಾದ ಅವಸ್ಥೆ ಅವರು ನಡೆದ ಘಟನೆಗಳನ್ನು ವಿವರಿಸಿದರು .
ವಿವರಣೆಯನ್ನು ಕೇಳಿದ ಯಜಮಾನ ಹಿಲ್ರ್ ನಬಿಯವರನ್ನು ಬಿಗಿಯಾಗಿ ಅಪ್ಪಿಕೊಂಡು ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿದರು . ಹಿಲ್ರ್ ನಬಿಯವರು ಯಜಮಾನನನ್ನು ಪಕ್ಕಕ್ಕೆ ಸೇರಿಸಿ ನೀವು ಕ್ಷಮೆ ಕೇಳುವ ಅಗತ್ಯವಿಲ್ಲ , ನನಗೆ ನಿಮ್ಮಿಂದ ಏನಾದರೂ ತೊಂದರೆ ಆಗಿದ್ದರೆ ತಾನೆ . ಇಷ್ಟು ದಿನ ನೀವು ನನಗೆ ಯಾವುದೇ ರೀತಿಯ ಕಿರುಕುಳವಾಗಲೀ , ಅಕ್ರಮಗಳಾಗಲೀ ಮಾಡಲಿಲ್ಲ ..!

ಯಜಮಾನ "ಹಳೆಯ ಘಟನೆಗಳನ್ನು ಮರೆತು ನೀವು ನನ್ನೊಂದಿಗೆ ಇಲ್ಲಿ ಕಳೆಯಿರಿ , ನನ್ನ ಸಂಪತ್ತನ್ನು ನಿಮಗೆ ನಾ ನೀಡುವೆ ನಿಮ್ಮಿಷ್ಟದಂತೆ ಉಪಯೋಗಿಸಬಹುದು ನಿಮ್ಮೊಂದಿಗೆ ಜೀವನ ನಡೆಸುವುದು ನನ್ನಂಥವರ ಭಾಗ್ಯವಾಗಿದೆ" ಎಂದು ಹೇಳಿದರು . ಇನ್ನು ತನ್ನ ಮುಂದಿನ ಜೀವನ ಇವರೊಂದಿಗೆ ಕಳಯಬಹುದೆಂದು ಭಾವಿಸಿ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರ ಪ್ರತಿಕ್ರಿಯೆಗಾಗಿ ಅವರ ಮುಖವನ್ನು ನೋಡಿದರು . ರಾಜ ಮನೆತನದಲ್ಲಿನ ಸುಖ ಸೌಕರ್ಯಗಳನ್ನೇ ತೊರೆದು ಅಲ್ಲಾಹನ ಆರಾಧನೆಗೆ ಜೀವನವನ್ನು ಸಮರ್ಪಿಸಿದ ಆ ಮಹಾ ಮನೀಷಿ ಮಂದಹಾಸ ಬೀರುತ್ತಾ ಹೇಳಿದರು "ನಶ್ವರವಾದ ಇಹಲೋಕದ ಯಾವುದೇ ಸಂಪತ್ತನ್ನು ನಾನು ಮೋಹಿಸಿಲ್ಲ..! , ಅಲ್ಲಾಹನ ಧ್ಯಾನದಲ್ಲಿ ನನ್ನ ಜೀವನ ಕಳೆಯುವುದನ್ನು ನಾನು ಇಷ್ಟಪಡುತ್ತೇನೆ. ಅದಕ್ಕೆ ಆನುಕೂಲ ಆಗುವಂತೆ ನನ್ನನ್ನು ಬಿಡುಗಡೆ ಗೊಳಿಸಿದರೆ ದೊಡ್ಡ ಉಪಕಾರವಾಗುತ್ತಿತ್ತು . ಎಂದು ಹೇಳಿದರು . ಅವರಿಂದ ಅಗಲುವುದು ಇಷ್ಟವಿಲ್ಲದಿದ್ದರೂ ಅವರ, ಸಂತೋಷಕ್ಕೆ ತನ್ನಿಂದ ಯಾವುದೇ ರೀತಿಯ ತೊಂದರೆ ಉಂಟಾಗಬಾರದೆಂದು ಭಾವಿಸಿ ಯಜಮಾನನು ಅವರನ್ನು ಅವರು ಹೇಳಿದಂತೆ ಸ್ವತಂತ್ರ ಗೊಳಿಸಿದನು . ತನ್ನನ್ನು ಮುಕ್ತಗೊಳಿಸಿದ ಯಜಮಾನನಿಗೆ ಕೃತಜ್ಞತೆ ಅರ್ಪಿಸುತ್ತಾ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಮುಂದೆ ಸಾಗಿದರು . 

*ಮೂಸಾ ನಬಿಯವರ ಗುರು* 

ಒಮ್ಮೆ ಹಝ್ರತ್ ಮೂಸಾ (ಅಸ) ರು ಬನೂ ಇಸ್ರಾಈಲ್ ಜನತೆಗೆ ಉಪದೇಶ ನೀಡುತ್ತಿದ್ದರು . ಮಧ್ಯೆ ಸಭಿಕರಲ್ಲಿ ಒಬ್ಬರು ಮೂಸಾ ನಬಿಯವರಲ್ಲಿ ಕೇಳಿದರು "ಓ ಪ್ರವಾದಿಯವರೇ ನಿಮಗಿಂತಲೂ ಹೆಚ್ಚು ತಿಳಿದವರು ಯಾರಾದರೂ ಇಂದು ಜೀವಿಸಿರುವರೇ...?" . ಮೂಸಾ ನೆಬಿಯವರು ನನಗೆ ತಿಳಿದಿಲ್ಲ ಅಲ್ಲಾಹನಿಗೇ ಗೊತ್ತು ಅನ್ನುವ ಬದಲು "ಇಲ್ಲ" ಎಂದು ಉತ್ತರಿಸಿದರು. ಆ ಸಂದರ್ಭದಲ್ಲಿ ಅಲ್ಲಾಹನು ಮೂಸಾ ನಬಿಯವರಿಗೆ ದಿವ್ಯ ಸಂದೇಶ ನೀಡುತ್ತಾ "ಮೂಸಾ... ನಿನಗಿಂತಲೂ ತಿಳಿದ ಒಬ್ಬ ದಾಸ ನನಗಿದ್ದಾನೆ, ಎರಡು ಸಮುದ್ರಗಳು ಸಂಗಮಿಸುವ ಜಾಗದಲ್ಲಿ ಅವರಿದ್ದಾರೆ" 

ಮೂಸಾ: "ಅವರನ್ನು ಸಮೀಪಿಸಲು ಏನಾದರೂ ಒಂದು ದಾರಿ ತೋರಿಸುವೆಯಾ..?"

ಅಲ್ಲಾಹನ ಆಜ್ಞೆ "ಮೂಸಾ ನೀನೊಂದು ಮೀನನ್ನು ಬೇಯಿಸಿ ಬುಟ್ಟಿಯಲ್ಲಿಟ್ಟು ಸಮುದ್ರ ತೀರದಲ್ಲಿ ನಡೆದುಕೊಂಡು ಹೋಗು , ನಿನ್ನ ಬುಟ್ಟಿಯಲ್ಲಿರುವ ಮೀನು ನಿನ್ನಿಂದ ಎಲ್ಲಿ ನಷ್ಟವಾಗುತ್ತದೆ ಅಲ್ಲಿ ನೀನು ಅವರನ್ನು ಸಂಧಿಸುವೆ" .

ಮೂಸಾ ನಬಿಯವರು ಅಲ್ಲಾಹನ ಆಜ್ಞೆಯಂತೆ  ಮೀನನ್ನು ಬೇಯಿಸಿ ಬುಟ್ಟಿಯಲ್ಲಿಟ್ಟುಕೊಂಡು ತನ್ನ ಶಿಷ್ಯ ಯೂಶಅ ಇಬ್ನು ನೂರಾನಿನೊಂದಿಗೆ ಸಮುದ್ರ ತೀರದಲ್ಲಿ ನಡೆಯುತ್ತಾ ಸಾಗಿದರು . ತುಂಬಾ ಹೊತ್ತು ನಡೆದ ನಂತರ ಮೀನಿರುವ ಬುಟ್ಟಿಯನ್ನು ತನ್ನ ಶಿಷ್ಯನಲ್ಲಿ ನೀಡಿ , ವಿಶ್ರಮಿಸಲು ಒಂದು ಬಂಡೆಯ ಸಮೀಪ ಹೋಗಿ ಮಲಗಿದರು . 

ಸ್ವಲ್ಪ ಹೊತ್ತಿನ ನಂತರ ಆ ಮೀನಿಗೆ ಜೀವ ಬಂತು, ಬುಟ್ಟಿಯಿಂದ ಜಿಗಿದು ಸಮುದ್ರಕ್ಕೆ ಹಾರಿ ಸಮುದ್ರದಲ್ಲಿ ಮರೆಯಾಯಿತು. ಅದು ಹೋದ ದಾರಿಯಲ್ಲಿ ಒಂದು ಗುಹೆ ಗೋಚರವಾಯ್ತು. ಇದೆಲ್ಲವನ್ನು ನೋಡುತ್ತಿದ್ದ ಮೂಸಾ ನಬಿಯವರ ಶಿಷ್ಯ ನಿದ್ದೆಯಲ್ಲಿರುವ ಗುರುವನ್ನು ಎಬ್ಬಿಸುವುದು ಸರಿಯಲ್ಲವೆಂದು ಭಾವಿಸಿ, ಅಚ್ಚರಿಯಿಂದ ಹೊರಬರಲಾಗದೆ ನಿಶ್ಚಲರಾದರು. ಗುರು ನಿದ್ದೆಯಿಂದ ಎದ್ದ ನಂತರ ಹೇಳೋಣವೆಂದು, ಗುರು ಏಳುವುದನ್ನು ಕಾದು ಕುಳಿತರು. 

ಆದರೆ ಮೂಸಾ ನಬಿಯವರು ಏಳುವಾಗ ಶಿಷ್ಯನಿಗೆ ಆ ಸಂಭವ ಹೇಳಲು ಮರೆತು ಹೋಯಿತು . ಮೂಸಾ(ಅಸ) ಎದ್ದ ಕೂಡಲೇ ಮುಂದೆ ನಡೆಯಲು ಶುರುಮಾಡಿದರು. 

ನಡೆದು ನಡೆದು ಸುಸ್ತಾದಾಗ ಶಿಷ್ಯನಲ್ಲಿ ಆಹಾರವನ್ನು ಕೇಳಿದರು ಆಗ ಶಿಷ್ಯನಿಗೆ ಮೀನಿನ ನೆನಪಾಯಿತು . ನಡೆದ ಘಟನೆಯನ್ನು ವಿವರಿಸಿದರು. ಎಲ್ಲವನ್ನೂ ಕೇಳಿಸಿಕೊಂಡು ಮೂಸಾ ನಬಿಯವರು ಬಂದ ದಾರಿಯಲ್ಲೇ ಹಿಂದೆ ನಡೆದರು. ಅವರು ಮೊದಲು ತಂಗಿದ ಜಾಗ ತಲುಪಿದಾಗ ಅಲ್ಲಿ  ವಯಸ್ಸಾದ  ಒಬ್ಬರು ಕುಳಿತಿರುವುದನ್ನು ಗಮನಿಸಿ ಅವರನ್ನು ಸಮೀಪಿಸಿ ಸಲಾಂ ಹೇಳಿದರು. ಅದು ಅವರು ಹುಡುಕುತ್ತಿರುವ ಹಿಲ್ರ್ ನಬಿ ಎಂದು ಅರಿವಾದಾಗ, ಮೂಸಾ ನಬಿಯವರು ತನ್ನ ಶಿಷ್ಯನನ್ನು ಕಳುಹಿಸಿ, ಹಿಲ್ರ್ ನಬಿಯವರ ಸಮೀಪ ಬಂದರು . ಯಾರು ಎಂಬಂತೆ ಮೂಸಾ ನಬಿಯನ್ನು ನೋಡಿದಾಗ , ಮೂಸಾ ನಬಿಯವರು "ನಾನು ಮೂಸಾ ನಬಿ" ಎಂದು ಹೇಳಿದಾಗ, ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಬನೂ ಇಸ್ರಾಈಲ್ ಜನತೆಗೆ ಗುರು ಮೂಸರೇನೋ...? , ಅವರು ಹೌದೆಂಬಂತೆ ತಲೆದೂಗಿದರು.  
ಹಿಲ್ರ್ ನಬಿ ಅಲೈಹಿ ಸ್ಸಲಾಂ ಬಂದಿರುವ ಕಾರಣವನ್ನು ಕೇಳಿದರು. ಮೂಸಾ (ಅಸ) ರು "ನಿಮ್ಮಿಂದ ಏನಾದರೂ ಕಲಿಯಬೇಕು , ಅದಕ್ಕಾಗಿ ನಾನು ಬಂದಿರುವೆ" . ಹಿಲ್ರ್ ನಬಿಯವರು "ನಿನಗೆ ನನ್ನೊಂದಿಗೆ ಕ್ಷಮೆಯಿಂದ ನಡೆಯಲು ಸಾಧ್ಯವೇ..?"
ಮೂಸಾ ನಬಿಯವರು "ಇನ್ಷಾಅಲ್ಲಾಹ್..! ನಾನು ಕ್ಷಮೆ ಉಳ್ಳವನಾಗುವೆ , ನಿಮಗೆ ವಿರುದ್ದವಾಗಿ ನಾನು ನಡೆದು ಕೊಳ್ಳವುದಿಲ್ಲ" . ಹಿಲ್ರ್ ನಬಿಯವರು "ಹಾಗಾದರೆ ಸರಿ.. ನಾನಾಗಿಯೇ ವಿವರಿಸುವ ವರೆಗೆ ನಾನು ಮಾಡುವ ಕೆಲಸಗಳ ಕುರಿತು ಯಾವುದೇ ಕಾರಣಕ್ಕೂ ನನ್ನಲ್ಲಿ ಕೇಳಬಾರದು" . ಮೂಸಾ ನೆಬಿಯವರು ಒಪ್ಪಿದರು. 

ಹಿಲ್ರ್ ನಬಿ ಅಲೈಹಿ ಸ್ಸಲಾಂ ಎದ್ದು ನಿಂತು ಸಮುದ್ರ ತೀರದಲ್ಲಿ ನಡೆಯ ಹೊರಟರು. ಅವರ ಹಿಂದೆ ಹಝ್ರತ್ ಮೂಸಾ (ಅಸ) ರು ಒಬ್ಬ ಶಿಷ್ಯನಂತೆ ಅವರನ್ನು ಹಿಂಬಾಲಿಸಿದರು. 

*ಹಡಗಿನಲ್ಲಿ ಪ್ರಯಾಣ* 

ನಡೆಯುತ್ತಾ ದೂರ ತಲುಪಿದಾಗ ಅಲ್ಲಿ ಒಂದು ಹಡಗು ನಿಂತಿತ್ತು. ತಮ್ಮನ್ನು ಕೂಡಾ ಹಡಗಿನಲ್ಲಿ ಹತ್ತಿಸಿಕೊಳ್ಳಿ ಎಂದು ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಹಡಗಿನಲ್ಲಿ ಇರುವವರಲ್ಲಿ ಕೇಳಿಕೊಂಡಾಗ ಹಿಲ್ರ್ ನಬಿಯವರನ್ನು ಪರಿಚಯವಿದ್ದ ಆ ನಾವಿಕರು ಯಾವುದೇ ಶುಲ್ಕವನ್ನು ಕೇಳದೆ ಹತ್ತಿಸಿಕೊಂಡರು. ಅವರನ್ನೊಳಗೊಂಡ ಹಡಗು ಇತರ ಪ್ರಯಾಣಿಕರೊಂದಿಗೆ ಮುಂದೆ ಸಾಗಿತು. 

ಸ್ವಲ್ಪ ದೂರ ತಲುಪಿರಬಹುದು ಹಿಲ್ರ್ ನಬಿ ಅಲೈಹಿ ಸ್ಸಲಾಂ ತಮ್ಮ ಕೈಯ್ಯಲ್ಲಿದ್ದ ಕೊಡಲಿಯಿಂದ ಹಡಗಿನ ಮಧ್ಯದ ಹಲಗೆಯನ್ನು ತುಂಡರಿಸಿದರು . ಇದನ್ನು ಕಂಡ ಮೂಸಾ ನಬಿಯವರು ಮೊದಲೇ ಮಾಡಿದ್ದ ಒಪ್ಪಂದವನ್ನು ಮರೆತು ಕೇಳಿದರು "ನಮ್ಮಿಂದ ಯಾವುದೇ ಹಣವನ್ನೂ ಪಡೆಯದೆ ಹತ್ತಿಸಿದರು , ಅಂತಿದ್ದೂ ನೀವು ಈಗ ಮಾಡಿರುವುದು ಅನ್ಯಾಯವಲ್ಲವೇ..? ನಮ್ಮೊಡನೆ ಈ ಹಡಗಿನಲ್ಲಿರುವ ಪ್ರಯಾಣಿಕರೂ ಸಾಯುವುದಿಲ್ಲವೇ...? ಎಂತಹ ಕೆಲಸ ಮಾಡಿದ್ದೀರಿ ನೀವು....!!?" . ಹಿಲ್ರ್ ನಬಿಯವರು ಶಾಂತರಾಗಿಯೇ ಪ್ರತಿಕ್ರಿಯೆ ನೀಡಿದರು "ನಾನು ಹೇಳಿರಲಿಲ್ಲವೇ..ನಿನ್ನಿಂದ ಕ್ಷಮಿಸಲು ಸಾಧ್ಯವಿಲ್ಲವೆಂದು" .

ಮೂಸಾ ನಬಿಯವರಿಗೆ ತಮ್ಮ ತಪ್ಪಿನ ಅರಿವಾಯಿತು ಅವರು "ನಾನದನ್ನು ಮರೆತುಹೋದೆನು , ಈ ಕಾರಣದಿಂದ ನನ್ನನ್ನು ಉಪೇಕ್ಕಿಸಬೇಡಿ..!" ಎಂದು ಬೇಡಿಕೊಂಡರು. 

ಹಡಗಿನ ಒಂದು ಹಲಗೆ ತುಂಡಾಗಿರುವುದನ್ನು ಕಂಡ ನಾವಿಕನು ಹಡಗನ್ನು ಹತ್ತಿರದ ತೀರಕ್ಕೆ ಸೇರಿಸಿದನು. ಈ ಸಂದರ್ಭದಲ್ಲಿ ಅವರಿಬ್ಬರೂ ಹಡಗಿನಿಂದ ಇಳಿದು ಮುಂದೆ ನಡೆದರು . 

ನಡೆಯುತ್ತಿದ್ದಂತೆ ಒಂದು ಹಕ್ಕಿ ಸಮುದ್ರದಿಂದ ನೀರನ್ನು ಅದರ ಬಾಯಿಗೆ ತುಂಬಿಸುತ್ತಿರುವ ದೃಶ್ಯವನ್ನು ಕಂಡರು. ಹಿಲ್ರ್ ನಬಿಯವರು "ಮೂಸಾ....ಅಲ್ಲಾಹನ ಜ್ಞಾನದೊಂದಿಗೆ ಹೋಲಿಸಿದರೆ ವಿಶಾಲವಾದ ಸಮುದ್ರದಿಂದ ಆ ಹಕ್ಕಿ ಪಡೆಯುತ್ತಿರುವಷ್ಟು ತೂಕದ ಜ್ಞಾನವೇ ನಾವಿಬ್ಬರಿಗೂ ಇರುವುದು" . ಮೂಸಾ ನಬಿಯವರಿಗೆ ವಿಶಯದ ಅರಿವಾಯಿತು .


*ಪುನಃ ಒಪ್ಪಂದಗಳ ಉಲ್ಲಂಘನೆ*

ಪಯಣ ಮುಂದುವರೆಯುತ್ತಾ ಸುಮಾರು ದೂರ ತಲುಪಿದಾಗ, ಚಿಕ್ಕ ಮಕ್ಕಳು ಆಟವಾಡೂವುದನ್ನು ಕಂಡರು. ಹಿಲ್ರ್ ನಬಿಯವರು ಅದರಲ್ಲಿದ್ದ ಒಂದು ಮಗುವನ್ನು ಕರೆದರು . ಬಳಿಗೆ ಬಂದ ಮಗುವಿನ ತಲೆಹಿಡಿದು ತನ್ನ ಕೈಯ್ಯಿದಲೇ ತಿರುಚಿ ರುಂಡವನ್ನು ತೆಗೆದು , ಯಾರಾದರೂ ನೋಡುವುದಕ್ಕೂ ಮುಂಚೆ ಅವರಿಬ್ಬರೂ ಅಲ್ಲಿಂದ ಕಾಲ್ಕಿತ್ತರು . ಇದನ್ನು ಕಂಡ ಮೂಸಾ ನಬಿಗೆ ಈ ಬಾರಿಯೂ ಸಹಿಸಲಾಗದೆ ಅವರಲ್ಲಿ  "ಯಾವುದೇ ತಪ್ಪನ್ನು ಮಾಡದ ಈ ಚಿಕ್ಕ ಮಗುನ್ನು ವಿನಾ ಕಾರಣ ನೀವು ಕೊಂದು ಹಾಕಿದಿರಲ್ಲವೋ...! ನೀವು ಮಾಡಿರುವುದು ಘೋರ ಅಪರಾಧವಲ್ಲವೇ...!?" ಎಂದು ಕೇಳಿಯೇ ಬಿಟ್ಟರು. ಈ ಸಲ ಹಿಲ್ರ್ ನಬಿಯವರು ಕೋಪದಿಂದಲೇ "ನಾನು ಮೊದಲೇ ನಿನ್ನಲ್ಲಿ ಹೇಳಲಿಲ್ಲವೇ...!? ನಿನಗೆ ನನ್ನೊಂದಿಗೆ ಕ್ಷಮಿಸಲು ಸಾಧ್ಯವಿಲ್ಲವೆಂದು" .
ಮೂಸಾ ನಬಿಯವರು ತಲೆತಗ್ಗಿಸಿ ಈ ಬಾರಿಯೂ ನನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡರು ,ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಮೌನವಾಗಿಯೇ ಮುಂದೆ ಸಾಗಿದರು .

ಅವರು ನಡೆಯುತ್ತಾ ಶಾಮಿನ ಅಂದಾಕ್ಯ ಎಂಬ ಪ್ರದೇಶ ತಲುಪಿದರು . ದೀರ್ಘ ಪ್ರಯಾಣದಿಂದ ಆಯಾಸಗೊಂಡು , ಹಸಿವು ಉಂಟಾಗತೊಡಗಿತು . ಅವರು ಆ ಊರಿನವರಲ್ಲಿ ಆಹಾರವನ್ನು ಕೇಳಿದರು , ಆದರೆ ಯಾರು ಕೂಡಾ ಆಹಾರ ನೀಡಲಿಲ್ಲ .

ಮೂಸಾ ನಬಿಯವರಿಗೆ ಕೋಪ ತಾಳಲಾರದೆ ಏನೋ ಹೇಳಬೇಕೆನ್ನುವಷ್ಟರಲ್ಲಿ , ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಪಕ್ಕದಲ್ಲೆ ಕುಸಿದು ಬಿದ್ದಿರುವ ಗೋಡೆಯೊಂದನ್ನು ಸರಿಪಡಿಸತೊಡಗಿದರು , ಸ್ವಲ್ಪ ಸಮಯದಲ್ಲೇ ಅದು ಪೂರ್ತಿಯಾಯಿತು . ಇದನ್ನು ಕಂಡ ಮೂಸಾ ನಬಿಯವರು ಮೊದಲೇ ಮಾಡಿದ್ದ ಒಪ್ಪಂದವನ್ನು ಮರೆತು ಪುನಃ ಹೇಳಿದರು "ನಮಗೆ ಆಹಾರ ನೀಡಲು ಹಿಂಜರಿದ ಇವರ ಗೋಡೆಯನ್ನು ಸರಿಪಡಿಸಿ ಕೊಡುತ್ತಿದ್ದೀರಲ್ಲವೇ...? ನಿಮಗೆ ಏನಾಗಿದೆ..?"

ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರಿಗೆ ಹೇಳಿದರು "ಮೂಸಾ.... ನಾವು ಪರಸ್ಪರ ಬಿಟ್ಟು ಹೋಗುವ ಸಮಯವಾಯಿತು , ಇನ್ನು ನಿನಗೆ ನಿನ್ನ ದಾರಿ , ನಾನು ನನ್ನ ದಾರಿಯತ್ತ . ನಿನಗೆ ನನ್ನನ್ನು ಕ್ಷಮಿಸಲು ಸಾಧ್ಯವಾಗದ ಆ ವಿಷಯಗಳನ್ನು ನಾನು ನಿನಗೆ ವಿವರಿಸುತ್ತೇನೆ. 

*ಹಿಲ್ರ್ ನಬಿಯವರ ವಿವರಣೆ*

ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ವಿವರಿಸಿದರು "ಮೊದಲು ನಾವು ಹತ್ತಿದ ಹಡಗು , ಅದು ಒಂದೆರಡು ಬಡ ಯುವಕರು ಸೇರಿದ ಹಡಗಾಗಿದೆ . ಅವರು ಹೋಗುತ್ತಿರುವ ದಾರಿಯಲ್ಲಿ ಒಬ್ಬ ಅಕ್ರಮಿಯಾದ ರಾಜನಿದ್ದಾನೆ . ಅವನಿಗೆ ಒಳ್ಳೆಯ ಹಡಗುಗಳನ್ನು ಕಂಡರೆ ಅವನು ಅದನ್ನು ಅವರಿಂದ ಕಿತ್ತುಕೊಳ್ಳುತ್ತಿದ್ದ , ಏನಾದರೂ ಲೋಪಗಳಿರುವ ಹಡಗಾದರೆ ಹಾಗೆಯೇ ಬಿಡುತ್ತಿದ್ದ . ನಾವು ಹತ್ತಿದ ಹಡಗು ಸುಂದರವಾದ ಹಡಗಾಗಿತ್ತು ಅದೇನಾದರೂ ಅವರ ಕಣ್ಣಿಗೆ ಕಂಡರೆ ಖಂಡಿತವಾಗಿಯೂ ಅವರು ಅದನ್ನು ವಶಪಡಿಸಿಕೊಳ್ಳುತ್ತಿದ್ದರು . ಅದಕ್ಕಾಗಿಯೇ ನಾನು ಅದರ ಹಲಗೆಯನ್ನು ಒಡೆದು ಹಾಕಿದೆನು. ಹಡಗಿನ ಮಧ್ಯೆ ಒಡೆದಿರುವುದನ್ನು ಖಂಡರೆ ಅವರು ಅದನ್ನು ಹಾಗೇಯೇ ಬಿಡುವರು. ಹಡಗಿನ ಯುವಕರಿಗೆ ಮುಂದೆ ಆದರೂ ಅದನ್ನು ಸರಿಪಡಿಸಬಹುದಲ್ಲವೇ" .

ಅವರು ತಮ್ಮ ವಿವರಣೆ ಮುಂದುವರಿಸುತ್ತಾ...

"ಮತ್ತೆ ನಾನೊಂದು ಮಗುವನ್ನು ಕೊಂದು ಹಾಕಿದೆ" 

"ಆ ಮಗುವಿನ ತಂದೆತಾಯಿ ಸತ್ಯ ವಿಶ್ವಾಸಿಗಳಾಗಿದ್ದಾರೆ . ಈ ಮಗು ಬೆಳೆದು ದೊಡ್ಡವನಾದರೆ ಆ ತಂದೆ ತಾಯಿ ಅವಿಶ್ವಾಸಿಗಳಾಗಲು ಸಾಧ್ಯತೆಯಿದೆ . ಇದು ಮೊದಲೇ ನನಗೆ ತಿಳಿದಿರುವುದರಿಂದಲೇ ನಾನು ಆ ಮಗುವನ್ನು ಕೊಂದು ಹಾಕಿದೆ . ಇದರಿಂದ ಆ ತಂದೆ ತಾಯಿ ವಿಶ್ವಾಸಿಗಳಾಗಿಯೇ ಉಳಿದರು ಮತ್ತು ಅವರು ನರಕ ಶಿಕ್ಷೆಯಿಂದಲೂ ಪಾರಾದರು. ಅದಲ್ಲದೆ ಆ ದಂಪತಿಗಳಿಗೆ ಈ ಮಗುವಿಗಿಂತಲೂ ಒಳ್ಳೆಯ ಒಂದು ಮಗುವನ್ನು ಅಲ್ಲಾಹನು ಕರುಣಿಸುವನು ಎಂದು ನನಗೆ ತಿಳಿದಿರುವುದರಿದ ನಾನು ಈ ಕೃತ್ಯವನ್ನು ಮಾಡಿರುವೆನು .

ಹಿಲ್ರ್ ನಬಿಯವರು ಹೇಳಿದಂತೆ ಅವರ ಮಾತನ್ನು ಸತ್ಯವಾಗಿಸುತ್ತಾ , ಆ ದಂಪತಿಗಳಿಗೆ ಒಂದು ಮಗು ಜನಿಸಿತು.  ಆ ಮಗುವಿನ ಸಂತಾನದಲ್ಲಿ ಸುಮಾರು 70 ರಷ್ಟು ಪ್ರವಾದಿಗಳು ಉಂಟಾದರೆಂದೂ ಹೇಳಲ್ಪಟ್ಟಿದೆ .

""ಇನ್ನೊಂದು , ಕುಸಿದ ಗೋಡೆ ಸರಿಪಡಿಸಿದ್ದು"" 

""ನಾನು ಸರಿಪಡಿಸಿದ ಆ ಗೋಡೆ ಇಬ್ಬರು ಅನಾತ ಮಕ್ಕಳ ಗೋಡೆಯಾಗಿದೆ . ಅಝ್ರಾಂ ಮತ್ತು ಝ್ವರೀಂ ಎಂಬ ಹೆಸರಿನ ಇಬ್ಬರು ಅನಾತರುಗಳಿಗೆ ಸೇರಬೇಕಾದ ಅವರ ಆಸ್ತಿ ಆ ಗೋಡೆಯ ಅಡಿಯಲ್ಲಿದೆ . ಆ ಮಕ್ಕಳ ತಂದೆ ಮಕ್ಕಳ ಭವಿಷ್ಯಕ್ಕೆ ಬೇಕಾಗಿ ಒಂದು ಪೆಟ್ಟಿಗೆಯಲ್ಲಿ ನಿಧಿಯನ್ನು ಇಟ್ಟು ಈ ಗೋಡೆಯ ತಳಭಾಗದಲ್ಲಿ ಅಡಗಿಸಿಟ್ಟಿದ್ದಾರೆ . ಈ ಗೋಡೆ ಕುಸಿದು ಬಿದ್ದರೆ ಆ ನಿಧಿಯು ಬೇರೆ ಯಾರದೋ ಪಾಲಾಗಬಹುದು . ಅದಕ್ಕಾಗಿ ನಾನು ಆ ಮಕ್ಕಳಿಗೆ ಸೇರಬೇಕಾಗಿರೋ ಅವರ ಸಂಪತ್ತು ಅವರಿಗೇ ಸೇರಲಿ ಎಂದು ಗೋಡೆಯನ್ನು ಸರಿಪಡಿಸಿದೆ" . 

""ಅನಾತರುಗಳ ಆಸ್ತಿಗಳು ಸಂರಕ್ಷಿಸುವುದು ನಮ್ಮ ಧರ್ಮವಲ್ಲವೇ...? ಅದನ್ನೇ ನಾನು ಮಾಡಿರುತ್ತೇನೆ . ನಾನು ಮಾಡಿರುವ ಈ ಕೆಲಸವೆಲ್ಲವೂ ನನಗಾಗಿ ಮಾಡಿರುವುದಲ್ಲ , ಇದೆಲ್ಲವೂ ಅಲ್ಲಾಹನ ಆಜ್ಞೆಯಂತೆ ನಾನು ಮಾಡಿರುವೆನು ಅಷ್ಟೇ...." .

ಹಿಲ್ರ್ ನಬಿಯವರ ವಿವರಣೆಯಿಂದ ಮೂಸಾ ನಬಿಯವರಿಗೆ ತನ್ನ ಪ್ರಶ್ನೆಗಳಿಗಿರುವ ಉತ್ತರಗಳು ಏನೆಂದು ತಿಳಿಯಿತು. ವಿಷಯದ ಗೌರವವೇನೆಂದು ತಿಳಿಯದೆ ದುಡುಕಿ ಅವರನ್ನು ಪ್ರಶ್ನಿಸಿರುವುದು ಮತ್ತು ಅವರನ್ನು ಬಿಟ್ಟು ಅಗಲುವುದು ಮೂಸಾ ನಬಿಯವರಿಗೆ ಬೇಸರ ತಂದಿತು. 

ಹಿಲ್ರ್ ನಬಿಯವರೊಂದಿಗಿನ ಯಾತ್ರೆಯಲ್ಲಿ ತಾನು ಪಡೆದ ಜ್ಞಾನವು , ಮಹಾಸಾಗರದಿಂದ 
ಪಡೆದ ಒಂದೆರಡು ಹನಿಗಳಷ್ಟೇ ಎಂದು ಹಝ್ರತ್ ಮೂಸಾ (ಅಸ) ರವರಿಗೆ ಮನವರಿಕೆಯಾಯಿತು . 


*ಪರ್ವತ ನುಂಗಲು ಎಷ್ಟು ಸುಲಭ*
▪•••┈┈•✿❁✿•┈┈•••▪

ಶೈಖ್ ಅಹಮದ್ (ರಅ) ಹೇಳುತ್ತಾರೆ ನಾನು ಖುರ್-ಆನ್ ಓದುತ್ತಿದ್ದೆ, ಸತ್ಯ ವಿಶ್ವಾಸಿಗಳು ಕೋಪವನ್ನು ನುಂಗುವವರೂ ಜನರೊಂದಿಗೆ ಸೌಮ್ಯತೆಯಿಂದ ವರ್ತಿಸುವವರೂ ಆಗಿರುತ್ತಾರೆ ಎನ್ನುವಂತಹ ಸೂಕ್ತ ತಲುಪಿದಾಗ ನನ್ನ ಚಿಂತೆ ಆ ಸೂಕ್ತದಲ್ಲೇ ತಲ್ಲೀನವಾಯಿತು . ಸ್ವಲ್ಪ ಸಮಯ ನಾನು ಓದುವುದನ್ನು ನಿಲ್ಲಿಸಿ ಅದೇ ಚಿಂತೆಯಲ್ಲಿ ಮಗ್ನನಾಗಿ ನನಗರಿವಿಲ್ಲದೆಯೇ ನಿದ್ದೆಗೆ ಶರಣಾದೆ. ನಿದ್ದೆಯಲ್ಲಿ ಸುಂದರ ವ್ಯಕ್ತಿಯೊಬ್ಬರು ನನ್ನನ್ನು ಸಮೀಪಿಸಿದರು. ಅವರು ನನ್ನ ಹೆಸರು ಕರೆದು ಹೇಳಿದರು "ಅಹಮದ್ ನೀನು ಮುಂದೆ ಸಾಗು ,ನಂತರ ನಿನ್ನ ಮುಂದೆ ಮೊದಲು ಕಾಣುವುದನ್ನು ನೀನು ನುಂಗಬೇಕು . ನಂತರ ಮುಂದೆ ಸಾಗಬೇಕು ಆಗ ನಿನ್ನ ಮುಂದೆ ಕಾಣುವುದನ್ನು ನೀನು ಹೂಳಬೇಕು." ಆ ನಿರ್ಧೇಶನದಂತೆ ನಾನು ಮುಂದೆ ಸಾಗಿದೆ ಆದರೆ ಪ್ರಥಮವಾಗಿ ನನ್ನ ಮುಂದೆ ಗೋಚರಿಸಿದ್ದು ಒಂದು ಪರ್ವತವಾಗಿತ್ತು . ಇದನ್ನಲ್ಲವೇ ನುಂಗಲು ಹೇಳಿರುವುದು , ಪರ್ವತ ಬಿಟ್ಟು ಅದರಲ್ಲಿರುವ ಒಂದು ಕಲ್ಲು ಕೂಡಾ ನುಂಗಲು ಸಾಧ್ಯವಿಲ್ಲ. ಏನು ಮಾಡಲಿ...!? ಸ್ವಲ್ಪ ಹೊತ್ತು ಚಿಂತಿತನಾದೆ . ನಂತರ ಏನೇ ಆಗಲಿ ಆಜ್ಞೆಯನ್ನು ಪಾಲಿಸಬೇಕಲ್ಲವೇ..? ನಾನು ಪರ್ವರಕ್ಕೆ ಮುಖಮಾಡಿಕೊಂಡು ನನ್ನ ಬಾಯಿಯನ್ನು ತೆರೆದು ಹಿಡಿದೆ , ಆಶ್ಚರ್ಯ.....! ಇದ್ದಕ್ಕಿದ್ದಂತೆ ಪರ್ವತ ಚಿಕ್ಕದಾಗತೊಡಗಿತು, ಕೊನೆಗದು ಒಂದು ಖರ್ಜೂರದ ಗಾತ್ರದಷ್ಟಾದಾಗ ನಾನು ಅದನ್ನು ನುಂಗಿದೆ. ನನಗರಿವಿಲ್ಲದೆಯೇ ನಾನು ಹೇಳಿದೆ ಎಷ್ಟೊಂದು ಸಿಹಿಯಾಗಿದೆ...! .

ಆ ಅಧ್ಬುತವನ್ನು ಅನುಭವಿಸಿ ನಾನು ಮುಂದೆ ಸಾಗಿದೆ, ಆಗ ನನ್ನ ಮುಂದೆ ಕಂಡು ಬಂದದ್ದು ಒಂದು ಚಿನ್ನದ ಪಾತ್ರೆಯಾಗಿತ್ತು . ಅವರು ಹೇಳಿದಂತೆ ನಾನು ಅದನ್ನು ಗುಂಡಿ ತೆಗೆದು ಹೂಳಲು ನೋಡಿದೆ, ಎಷ್ಟು ಶ್ರಮಿಸಿದರೂ ನನ್ನಿಂದ ಅದನ್ನು ಹೂಳಲು ಸಾಧ್ಯವಾಗಲಿಲ್ಲ . ಅದನ್ನು ಎಷ್ಟು ಸಲ ಹೂಳಲು ಶ್ರಮಿಸಿದರೂ ಅದು ಹೊರಗೆ ಬರುತ್ತಲೇ ಇತ್ತು . ತುಂಬಾ ಹೊತ್ತಿನ ನಂತರ ಆ ವ್ಯಕ್ತಿ ನನ್ನನ್ನು ಸಮೀಪಿಸಿದರು. ನಾನು ಅವರಲ್ಲಿ ಹೇಳಿದೆ "ನೀವು ಹೇಳಿದಂತೆ ನಾನು ಇದನ್ನು ಹೂಳಲು ಎಷ್ಟು ಶ್ರಮಿಸಿದರೂ ಆಗುತ್ತಿಲ್ಲ" . ಆಗ ಅವರು "ನೀವೆಂದಲ್ಲಾ ಯಾರೇ ಶ್ರಮಿಸಿದರೂ ಅದನ್ನು ಹೂಳಲು ಸಾಧ್ಯವಿಲ್ಲ, ಕಾರಣ ಇದು ಮನುಷ್ಯನ ಒಳಿತುಗಳ ಸಂಕೇತವಾಗಿದೆ . ಒಬ್ಬರು ಮಾಡಿದ ಒಳಿತು ಅವನಾಗಲೀ ಅವನ ಶತ್ರುವಾಗಲೀ ಮರೆಮಾಚಲು ನೋಡಿದರೆ ಅದು ಹೊರಗೆ ಬರುತ್ತಲೇ ಇರುತ್ತದೆ" .

ನಾನು ಕೇಳಿದೆ: "?ಹಾಗಾದರೆ ಮೊದಲು ಕಂಡ ಪರ್ವತ..?"
ಅವರು ಹೇಳಿದರು "ನೀವು ನುಂಗಿದ ಆ ಪರ್ವತ ಕೋಪದ ಪ್ರತಿರೂಪವಾಗಿದೆ. ಕೋಪ ಬಂದರೆ ನಿಯಂತ್ರಿಸಲು ಬಹಳ ಕಂಷ್ಟವೆಂದು ಭಾವಿಸುತ್ತೇವೆ. ಆದರೆ ನಾವು ಅದನ್ನು ನಿಯಂತ್ರಿಸಲು ಶ್ರಮಿಸಿದರೆ ಅದು ಒಂದು ಖರ್ಜೂರ ನುಂಗಿದಷ್ಟೇ ಸುಲಭ , ಮತ್ತು ತುಂಬಾ ಮಧುರವೂ ಕೂಡಾ" .

ಅವರು ಮುಂದುವರಿಸುತ್ತಾ "ಕೋಪವನ್ನು ನಿಯಂತ್ರಿಸುವ ಕುರಿತಲ್ಲವೇ ನೀವು ಖುರ್-ಆನ್ ಓದಿ ಚಿಂತಿತರಾಗಿರುವುದು ... ಈಗ ತಿಳಿಯಿತಲ್ಲವೇ..!?" . 

ನಾನು "ಹೌದು" ಎಂದು ಹೋಗಲು ಮುಂದಾದ ಅವರಲ್ಲಿ "ನೀವು ಯಾರೂಂತ ಹೇಳಲಿಲ್ಲ..!" 

ಅವರು ಹೇಳಿದರು : "ನಾನು ಹಿಲ್ರ್ ನಬಿ ಅಲೈಹಿ ಸ್ಸಲಾಂ , ಈ ವಿಷಯವನ್ನು ನಿಮಗೆ ತಿಳಿಸುವ ಸಲುವಾಗಿ ಬಂದಿರುವೆನು" .

ನಾನು ಸಂತೋಷ ತಾಳಲಾರದೆ ಅವರನ್ನು ಬಿಗಿಯಾಗಿ ಅಪ್ಪಿಕೊಂಡೆ.  ಆಗಲೆ ನಾನು ನನ್ನ ನಿದ್ದೆಯಿಂದ ಬೆಚ್ಚಿಬಿದ್ದು ಸುತ್ತಲೂ ನೋಡಿದೆ ಆದರೇ ಯರದೇ ಸುಳಿವೂ ಇಲ್ಲ .....

ನಿದ್ದೆಯಲ್ಲಿ ಅವರು ಕಲಿಸಿದ ಪಾಠ ನಾನು ಹಲವರಿಗೂ ಕಲಿಸಿಕೊಟ್ಟೆ... .

*ಹುತಾತ್ಮರ ನೇತಾರ*

(ಇದು👇 ಇನ್ನು ನಡೆಯಲಿಕ್ಕಿರುವ ಘಟನೆಯಾಗಿದೆ)

ಅಂತ್ಯ ದಿನ ಸಮೀಪಿಸುವಾಗ ದಜ್ಜಾಲ್ ಹೊರಬರುವನು, ಅವನನ್ನು ಹಿಲ್ರ್ ನಬಿ ಅಲೈಹಿಸ್ಸಲಾಂ ಕಾಣಲು ಹೊರಡುತ್ತಾರೆ ದಜ್ಜಾಲನನ್ನು ಸಮೀಪಿಸುವಾಗ ಅವನ ಸೈನಿಕರು ಅವರನ್ನು ತಡೆದು ಎಲ್ಲಿಗೆ ಎಂದು ಕೇಳುವಾಗ ಹಿಲ್ರ್ ನಬಿ ಅಲೈಹಿ ಸ್ಸಲಾಂ "ಅಲ್ಲಾಹನೆಂದು ಹೇಳಿ ನಡೆಯುತ್ತಿರುವ ಒಬ್ಬನಿಲ್ಲವೇ..? ಅವನ ಬಳಿಗೆ" , ಆಗ ಆ ಸೈನಿಕರು "ನಿನಗೆ ನಮ್ಮ ದೇವನಲ್ಲಿ ವಿಶ್ವಾಸವಿದೆಯೇ...?" ಹಿಲ್ರ್ ನಬಿಯವರು "ಇಲ್ಲ" ಎನ್ನುವಾಗ ,ಅವರು ಕೊಲ್ಲಲು ಮುಂದಾಗುತ್ತಾರೆ . ತಮ್ಮ ದೇವನ ಅನುಮತಿ ಇಲ್ಲದೆ ಕೊಲ್ಲಬಾರದೆಂದು , ಹಿಲ್ರ್ ನಬಿಯವರನ್ನು ಅವನ ಬಳಿಗೆ ಕೊಂಡು ಹೋಗುತ್ತಾರೆ. 

ದಜ್ಜಾಲನನ್ನು ಕಾಣುತ್ತಿಂದತೆಯೇ ಹಿಲ್ರ್ ನಬಿ ಜೋರಾಗಿ "ಓ ಜನರೇ... ಖಂಡಿತವಾಗಿಯೂ ಇವನು ಪ್ರವಾದಿಯವರು ಹೇಳಿದ ದಜ್ಜಾಲನಾಗಿದ್ದಾನೆ" ಎನ್ನುತ್ತಾರೆ .

ದಜ್ಜಾಲನು ಅವರನ್ನು ಬಂಧಿಸಿ ಕ್ರೂರವಾಗಿ ಶಿಕ್ಷಿಸುವನು , ಬಳಿಕ ತನ್ನ ಸೈನಿಕರಲ್ಲೂ ಅವರನ್ನು ಕಟುವಾಗಿ ಶಿಕ್ಷಿಸಲು ಆಜ್ಞಾಪಿಸುವನು . ನಂತರ ಅವರಲ್ಲಿ ಕೇಳುತ್ತಾನೆ "ನೀನು ನನ್ನನ್ನು ದೇವನಾಗಿ ಅಂಗೀಕರಿಸುವೆಯಾ..?" ಆಗ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು "ಇಲ್ಲ" ಎಂದು ಕಠಿಣವಾಗಿಯೇ ಹೇಳುತ್ತಾರೆ .

ಇಷ್ಟು ಕಠಿಣವಾಗಿ ಶಿಕ್ಷೆ ನೀಡಿಯೂ ತನ್ನನ್ನು ದೇವನಾಗಿ ಅಂಗೀಕರಿಸದ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರ ಶರೀರವನ್ನು ತುಂಡರಿಸಲು ತನ್ನ ಸೈನಿಕರಲ್ಲಿ ಖಡ್ಗವನ್ನು ತರುವಂತೆ ಹೇಳುವನು .
ಆ ಖಡ್ಗದಿಂದ ಮಹಾನರ ದೇಹವನ್ನು  ಎರಡು ಭಾಗಗಳಾಗಿ ತುಂಡರಿಸುವನು . ಇಬ್ಬಾಗವಾಗಿ ಬಿದ್ದಿರುವ ಶರೀರದ ಮಧ್ಯೆ ನಡೆದುಕೊಂಡು ಅವನು ಹೇಳುವನು "ಎದ್ದೇಳು" , ಏನೂ ಸಂಭವಿಸದಂತೆ ಹಿಲ್ರ್ ನಬಿಯವರು ಎದ್ದೇಳುವರು. 

ಪುನಃ ಕೇಳುವನು "ನೀನು ನನ್ನಲ್ಲಿ ವಿಶ್ವಾಸವಿರಿಸುತ್ತಿಯಾ..?" ಆಗ ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಹೇಳುವರು "ನೀನು ದಜ್ಜಾಲನೆಂದು ಈಗ ನನಗೆ ಮನದಟ್ಟಾಯಿತು" . ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರು ಜನರನ್ನು ನೋಡಿ ಹೇಳುವರು "ಜನರೇ ಇನ್ನು ಇವನಿಂದ ಯಾವುದೇ ಆಕ್ರಮಣ ಮಾಡಲು ಸಾಧ್ಯವಿಲ್ಲ" . ಇದನ್ನು ಕೇಳಿದ ದಜ್ಜಾಲನ ಕೋಪದಿಂದ ಕುದಿಯತೊಡಗುತ್ತಾನೆ . ಹಿಲ್ರ್ ನಬಿಯವರನ್ನು ಹಿಡಿದು ಅವರ ಶರೀರವನ್ನು ಕೊಯ್ಯಲು ನೋಡುವಾಗ ಅವನಿಂದ ಅದು ಸಾಧ್ಯವಾಗುವುದಿಲ್ಲ .

ನಂತರ ಹಿಲ್ರ್ ನಬಿ ಅಲೈಹಿ ಸ್ಸಲಾಂ ರನ್ನು ಏನೂ ಮಾಡಲು ಸಾಧ್ಯವಾಗದೆ ,ದಜ್ಜಾಲನು ಅವರ ಕೈ ಕಾಲುಗಳನ್ನು ಬಿಗಿದು ಅವನ ನರಕಕ್ಕೆ ಎಸೆಯುತ್ತಾನೆ . ಜನರು ಭಾವಿಸುವರು ಹಿಲ್ರ್ ನಬಿ ನರಕಕ್ಕೆ ಬಿದ್ದಿರಬೇಕೆಂದು , ಆದರೆ ಅವರು ಸ್ವರ್ಗ ಪ್ರವೇಶಿಸಿರುತ್ತಾರೆ ಕಾರಣ ಅವನ ನರಕವು ಮುಸಲ್ಮಾನರಿಗೆ ಸ್ವರ್ಗವಾಗಿರುತ್ತದೆ .

ಈ ಹದೀಸ್ ವ್ಯಾಖ್ಯಾನ ಮಾಡಿದ ನಂತರ ಪ್ರವಾದಿ ﷺ ರು ಹೇಳಿದರು "ಇವರಾಗಿರುವರು ಅಂತ್ಯದಿನದಲ್ಲಿ ಅಲ್ಲಾಹನ ಸಮೀಪ ಉನ್ನತ ಸ್ಥಾನ ಪಡೆಯುವ ಶಹೀದ್" .

ಮುಗಿಯಿತು /.🙏🤲

*ಹಿಲ್ರ್ ನಬಿ ಅಲೈಹಿ ಸ್ಸಲಾಂ ರವರ ಸಾಮೀಪ್ಯ ಬಯಸುವವರು ಇದನ್ನು 👇 ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಿ....*


1.7 ಸಲ ಫಾತಿಹ .

2.7 ಸಲ ಆಯತುಲ್ ಕುರ್ಸಿ. 

3.7 ಸಲ ಸೂರ ಕಾಫಿರೂನ್ .

4.7 ಸಲ ಸೂರ ಇಖ್ಲಾಸ್ .

5.7 ಸಲ ಸೂರ ಅಲ್ ಫಲಖ್ .

6.7 ಸಲ ಸೂರ ಅನ್ನಾಸ್ . 

7.7 ಸಲ سُبْحَانَ اللهِ وَالْحَمْدُ لِلهِ وَلاَ اِلَهَ اِلَّا اللهُ اَللهُ اَكْبَرْ وَلَا حَوْلَ وَلَا قُوَّةَ اِلَّا بِاللهِ الْعَلِيمِ 

8.7 ಸಲ اَللَّهُمَّ صَلِّ عَلَى سَيِّدِنَا مُحَمَّدٍ نَبِيِّ الْاُمِّيِّ وَعَلَى آلِهِ وَصَحَبِهِ وَسَلَّمَ

9.7 ಸಲ اَللَّهُمَّ اِغْفِرْلِي وَلِوَالِدَيَّ وَلِلْمُؤْمِنِينَ وَالْمُؤْمِنَاتِ وَالْمُسْلِمِينَ وَالْمُسْلِمَاتِ اَلْاَحْيَاءِ مِنْهُمْ وَالْاَمْوَاتِ

10.7 ಸಲ اَللَّهُمَّ اِفْعَلْ بِي وَبِهِمْ عَاجِلاً وَآجِلاً فِي الدِّينِ وَالدُّنْيَا وَالْآخِرَةِ مَا أنْتَ لَهُ أَهْلٌ وَلاَ تَفْعَلُ بِناَ يَا مَوْلاَنَا مَا نَحْنُ لَهُ أَهْلٌ إِنَّكَ غَفُورٌ حَلِيمٌ جَوَادٌ كَرِيمٌ رَءُوفٌ رَحِيمٌ

🍃ಇನ್ಷಾಅಲ್ಲಾಹ್...! ಕರುಣಾಮಯನೂ ಕಾರುಣ್ಯದ ಅಧಿಪತಿಯೂ ಆದ ಅಲ್ಲಾಹನ ದಯೆಯಿಂದ ಜೀವನದಲ್ಲಿ ಒಮ್ಮೆಯಾದರೂ ಆ ಮಹಾನರನ್ನು ಕಾಣುವ ಭಾಗ್ಯ ಉಂಟಾಗಲಿ🍃
ಆಮೀನ್ ಯಾ ರಬ್ಬಲ್ ಆಲಮೀನ್ 🤲

*ನಿಮ್ಮ ಪ್ರಾರ್ಥನೆಯಲ್ಲಿ ನನ್ನ ಒಳಿತನ್ನೂ ಬಯಸುವಿರಿ ಎಂಬ ವಿಶ್ವಾಸದಲ್ಲಿ ನನ್ನೊಂದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತಾ ನನ್ನ ಬರಹಕ್ಕೆ ವಿರಾಮವಿಡುತ್ತಿದ್ದೇನೆ*

صلّوا على النبي ﷺ  
اللهم صل على سيدنا محمد وعلى اله وصحبه وسلم 

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰